Kesari 2 Box Office Day 2 ; ₹30 ಕೋಟಿಯ ಗುರಿ ಮುಟ್ಟುತ್ತಾರಾ ಅಕ್ಷಯ್ ಕುಮಾರ್ ? 2ನೇ ದಿನ ಕೇಸರಿ 2 ಗಳಿಕೆ ಎಷ್ಟು?

ಐಪಿಎಲ್ ಅಂದರೆ ಸಾಕು ಸಂಭ್ರಮ ಸಡಗರದ ವಾತಾವರಣ ಅನೇಕ ಕಡೆ ನಿರ್ಮಾಣವಾಗುತ್ತೆ. ಆರು ವರ್ಷದ ಹುಡುಗರಿಂದ ಹಿಡಿದು ಅರವತ್ತು ವರ್ಷದ ವೃದ್ಧರವರೆಗೆ ಐಪಿಎಲ್ ಕಿಕ್ ಕೊಡುತ್ತೆ. ನಮ್ಮ ತಂಡ ನಿಮ್ಮ ತಂಡ, ಗೆಲುವು, ಸೋಲು ಅಂತಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನದ ಮೆರವಣಿಗೆ ಶುರುವಾಗುತ್ತೆ. ಇನ್ನು ಐಪಿಎಲ್ ಬಂದರೆ ಸಾಕು ಸಿನಿಮಾಗಳನ್ನು ಬಿಡುಗಡೆ ಮಾಡಲು ಅನೇಕರು ಹಿಂದೇಟು ಹಾಕುತ್ತಾರೆ.

ಕೇವಲ ಕನ್ನಡದಲ್ಲಿ ಮಾತ್ರವಲ್ಲ ಬೇರೆ ಭಾಷೆಯಲ್ಲಿ ಕೂಡ ಬಿಡುಗಡೆ ವಿಚಾರದಲ್ಲಿ ಕವಡೆ ಹಾಕುವರ ಸಂಖ್ಯೆಯೇ ಹೆಚ್ಚಿದೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು ಮಾತ್ರ ಐಪಿಎಲ್ ಸಮಯದಲ್ಲಿ ಕೂಡ ತಮ್ಮ ಚಿತ್ರವನ್ನು ರಿಲೀಸ್ ಮಾಡುವ ಭಂಡ ಧೈರ್ಯ ಮಾಡುತ್ತಾರೆ.

Kesari Roars at the Box Office Will Akshay Kumar s Film Cross 30 Crore by the Weekend

ವಿಶೇಷ ಅಂದರೆ ಹೀಗೆ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಿದಾಗ ಚಿತ್ರ ಚೆನ್ನಾಗಿದ್ದಾಗ ಪ್ರೇಕ್ಷಕರು ಆ ಚಿತ್ರದ ಕೈ ಬಿಟ್ಟಿಲ್ಲ. ಐಪಿಎಲ್ ಜ್ವರ ನೆತ್ತಿಗೇರಿದ್ದರೂ ಕೂಡ ಚಿತ್ರಮಂದಿರಕ್ಕೆ ಹೋಗಿ ಚಿತ್ರವನ್ನು ನೋಡಿದ್ದಾರೆ. ಉದಾಹರಣೆಗೆ ಕೇಸರಿ 2.

ಹೌದು, ಕಳೆದ ಶುಕ್ರವಾರ ತೆರೆಗೆ ಬಂದ ಕೇಸರಿ 2 ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಚಿತ್ರದ ಗಳಿಕೆಯಲ್ಲಿ ಶುಕ್ರವಾರಕ್ಕೆ ಹೋಲಿಸಿದರೆ ನಿನ್ನೆ ಏರಿಕೆಯಾಗಿದೆ. ಸ್ಯಾಕ್ನಿಲ್ಕ್ ವೆಬ್ ಸೈಟ್ ಪ್ರಕಾರ ಮೊದಲ ದಿನ ಭಾರತದಲ್ಲಿ ₹ 7.75 ಕೋಟಿ ಗಳಿಸಿದ್ದ ಚಿತ್ರ ನಿನ್ನೆ ₹ 9.50 ಕೋಟಿಯನ್ನು ಗಳಿಸಿದೆ. ಈ ಮೂಲಕ ಎರಡು ದಿನದಲ್ಲಿ ₹ 17.25 ಕೋಟಿ ಹಣವನ್ನು ಕೇಸರಿ 2 ಚಿತ್ರ ಗಳಿಸಿದೆ.

ಇನ್ನು ಕೇಸರಿ 2 ಚಿತ್ರವನ್ನು ಪ್ರೇಕ್ಷಕರು ಮತ್ತು ವಿಮರ್ಷಕರು ಮೆಚ್ಚಿಕೊಂಡಿದ್ದಾರೆ. ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಈ ವರ್ಡ್ ಆಫ್ ಮೌತ್ ಕೇಸರಿ 2 ಚಿತ್ರಕ್ಕೆ ಸಹಕಾರಿಯಾಗಿದೆ. ನಿನ್ನೆ ಗಳಿಕೆಯಲ್ಲಿ ಏರಿಕೆ ಕೂಡ ಕಂಡು ಬಂದಿದೆ. ಈ ಹಿನ್ನೆಲೆ ಇವತ್ತು ಕೂಡ ಚಿತ್ರದ ಗಳಿಕೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ₹ 17.25 ಕೋಟಿ ಕೇಸರಿ 2 ಇಂದು ರಾತ್ರಿ ಕಳೆಯುವಷ್ಟರಲ್ಲಿ ₹30 ಕೋಟಿ ಗಡಿಯನ್ನು ತಲುಪುವ ವಿಶ್ವಾಸ ಕೂಡ ಬಾಲಿವುಡ್ ಪಂಡಿತರಿಗೆ. ಈ ವಿಶ್ವಾಸವನ್ನು ಅಕ್ಷಯ್ ಕುಮಾರ್ ಉಳಿಸಿಕೊಳ್ಳುತ್ತಾರಾ ಇಲ್ಲವಾ ಎನ್ನುವುದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.

ಅಂದ್ಹಾಗೇ ಈ ವರ್ಷದ ಆರಂಭದಲ್ಲಿ ತೆರೆಗೆ ಬಂದ ಸ್ಯಾಕ್ನಿಲ್ಕ್ ವೆಬ್ ಸೈಟ್ ವರದಿಯ ಪ್ರಕಾರ ಸ್ಕೈ ಫೋರ್ಸ್ ಮೊದಲ ದಿನ ₹ 11.25 ಕೋಟಿಯನ್ನು ಗಳಿಸಿತ್ತು. ಎರಡನೇ ದಿನ ₹22 ಕೋಟಿಯನ್ನು ಗಳಿಸಿತ್ತು. ಸ್ಕೈ ಫೋರ್ಸ್ ಚಿತ್ರದ ಈ ಗಳಿಕೆಗೆ ಹೋಲಿಕೆ ಮಾಡಿದರೆ ಕೇಸರಿ 2 ಗಳಿಕೆ ಕಡಿಮೆ ಇದೆ. ಮೊದಲ ದಿನ ₹ 7.50 ಕೋಟಿಯನ್ನು ಗಳಿಸಿದ ಕೇಸರಿ 2 ಎರಡನೇ ದಿನ ₹9.50 ಕೋಟಿಯನ್ನು ಗಳಿಸಿದೆ. ಆದರೆ, ಸ್ಕೈ ಫೋರ್ಸ್ ಚಿತ್ರಕ್ಕೂ ಹಿಂದೆ ಬಂದ ಚಿತ್ರಗಳಿಗಿಂತ ಕೇಸರಿ 2 ಚಿತ್ರದ ಗಳಿಕೆ ಚೆನ್ನಾಗಿದೆ. ಹೀಗಾಗಿ ಕೇಸರಿ 2 ಚಿತ್ರದ ಈ ಗಳಿಕೆಯಿಂದ ಅಕ್ಷಯ್ ಕುಮಾರ್ ನಿರಾಳರಾಗಿದ್ದರು ಆಗಿರಬಹುದು.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Akshay Kumar’s Kesari Chapter 2 saw a remarkable surge in box office collections on Day 2, heightening expectations for a solid weekend run. Backed by largely positive buzz on social media, the film is likely to maintain its momentum in the coming days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X