Mark Box Office Day 9 ; ಬಾಕ್ಸಾಫೀಸ್‌ನಲ್ಲಿ 'ಮಾರ್ಕ್' ಮ್ಯಾಜಿಕ್, ಸುದೀಪ್ ಅಬ್ಬರ - 9ನೇ ದಿನ ಗಳಿಸಿದ್ದೆಷ್ಟು ?
ಸುದೀಪ್ .. ಕನ್ನಡ ಚಿತ್ರರಂಗದ ಕೆಚ್ಚೆದೆಯ ಕಿಚ್ಚ. ಅಭಿಮಾನಿಗಳ ಪಾಲಿನ ಪ್ರೀತಿಯ ಅಭಿನಯ ಚಕ್ರವರ್ತಿ. ನಾನು ನ್ಯಾಷನಲ್ ಸ್ಟಾರ್ ಎಂದು ಈಗ ಕಾಲರ್ ಎತ್ತಿಕೊಂಡು ಓಡಾಡುವರ ನಡುವೆ ಆ ಕಾಲದಲ್ಲಿಯೇ ಕನ್ನಡ, ತೆಲುಗು, ತಮಿಳು, ಹಿಂದಿ ಈ ಐದೂ ಭಾಷೆಗಳಲ್ಲಿ ಮಿಂಚಿದವರು ಸುದೀಪ್. ಇಂಥಾ ಸುದೀಪ್ 2024ರ ವರ್ಷಾಂತ್ಯದಲ್ಲಿ ''ಮ್ಯಾಕ್ಸ್'' ಮೂಲಕ ಬೆಳ್ಳಿತೆರೆಯಲ್ಲಿ ಅಬ್ಬರಿಸಿದ್ದರು. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಸಿದ್ದರು. ಈಗ ''ಮಾರ್ಕ್'' ಸರದಿ.
ಹೌದು.. ''ಮಾರ್ಕ್'', ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕಳೆದ ವರ್ಷಾಂತ್ಯದಲ್ಲಿ ತೆರೆಗೆ ಬಂದ ಸಿನಿಮಾ. ಪಕ್ಕದ ಮನೆಯ ನಿರ್ದೇಶಕ ವಿಜಯ್ ಕಾರ್ತಿಕೆಯನ್ ಜೊತೆ ಸೇರಿ ಸುದೀಪ್ ಮಾಡಿರುವ ಎರಡನೇ ಮಹಾಯಜ್ಞ. ಸದ್ಯ ಬಾಕ್ಸಾಫೀಸ್‌ನಲ್ಲಿ 09 ದಿನವನ್ನು ಚಿತ್ರ ಪೂರೈಸಿದೆ. ಬಾಕ್ಸಾಫೀಸ್ ಮೇಲೆ ಹದ್ದಿನ ಕಣ್ಣಿಡುವ ''ಸ್ಯಾಕ್ನಿಲ್'' ಪ್ರಕಾರ ₹ 23.75 ಕೋಟಿಯನ್ನು ಈ 09 ದಿನದಲ್ಲಿ ''ಮಾರ್ಕ್'' ಗಳಿಸಿದೆ.

ಇನ್ನು ಹೊಸ ವರ್ಷದ ಪ್ರಯುಕ್ತ (ಡಿಸೆಂಬರ್ 31) ''ಮಾರ್ಕ್'' ಗಳಿಕೆಯಲ್ಲಿ 137.50% ಏರಿಕೆಯಾಗಿತ್ತು. ಕೇವಲ ಗುರುವಾರ ಒಂದೇ ದಿನ ಈ ಚಿತ್ರ ₹ 1.9 ಕೋಟಿಯನ್ನು ದೋಚಿತ್ತು. ನಿನ್ನೆ (ಜನವರಿ 2) 9ನೇ ದಿನ ''ಮಾರ್ಕ್'' ₹60 ಲಕ್ಷವನ್ನು ಗಳಿಸಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಸ್ಯಾಕ್ನಿಲ್ ಪ್ರಕಾರ ''ಮಾರ್ಕ್'' ಚಿತ್ರದ 9 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ [ಗುರುವಾರ] - ₹ 8.6 ಕೋಟಿ
ಎರಡನೇ ದಿನ [ಶುಕ್ರವಾರ] - ₹3.2 ಕೋಟಿ
ಮೂರನೇ ದಿನ [ಶನಿವಾರ] - ₹3.2 ಕೋಟಿ
ನಾಲ್ಕನೇ ದಿನ [ಭಾನುವಾರ]- ₹3.4 ಕೋಟಿ
ಐದನೇ ದಿನ [ಸೋಮವಾರ ]-₹ 1.15 ಕೋಟಿ
ಆರನೇ ದಿನ [ಮಂಗಳವಾರ]- ₹90 ಲಕ್ಷ
ಏಳನೇ ದಿನ [ಬುಧವಾರ] - ₹80 ಲಕ್ಷ
ಎಂಟನೇ ದಿನ [ಗುರುವಾರ]- ₹1.9 ಕೋಟಿ
ಒಂಬತ್ತನೇ ದಿನ [ಶುಕ್ರವಾರ]- ₹60 ಲಕ್ಷ *ಅಂದಾಜು
ಒಟ್ಟು ಗಳಿಕೆ - ₹ 23.75 ಕೋಟಿ

ಇನ್ನು ಆಕ್ಯುಪೆನ್ಸಿ ವಿಚಾರಕ್ಕೆ ಬಂದರೆ ನಿನ್ನೆ (ಜನವರಿ 2) ಬೆಂಗಳೂರಿನಲ್ಲಿ 15.50% ಆಕ್ಯುಪೆನ್ಸಿ ಕಂಡು ಬಂದಿದ್ದು, ಹುಬ್ಬಳ್ಳಿಯಲ್ಲಿ 14% ಮೈಸೂರಿನಲ್ಲಿ 22.50% ರಾಯಚೂರಿನಲ್ಲಿ 14.50% ತುಮಕೂರಿನಲ್ಲಿ 23.25% ಶಿವಮೊಗ್ಗದಲ್ಲಿ 27.25% ಕಂಡು ಬಂದಿದೆ. ಬಹುತೇಕ ಕಡೆ ಬೆಳಗ್ಗೆ ಮತ್ತು ಮಧ್ಯಾಹ್ನದ ಪ್ರದರ್ಶನಕ್ಕಿಂತ ರಾತ್ರಿಯ ಪ್ರದರ್ಶನದ ಸಮಯದಲ್ಲಿ ಜನಸಂದಣಿ ಹೆಚ್ಚು ಕಂಡು ಬಂದಿದ್ದು ವಿಶೇಷ.
ಅಂದ್ಹಾಗೇ ಚಿತ್ರ ಬಿಡುಗಡೆಯಾದ ನಂತರ ಖುದ್ದು ಚಿತ್ರತಂಡವೇ ಚಿತ್ರದ ಮೊದಲ ದಿನದ ಗಳಿಕೆಯ ಮಾಹಿತಿಯನ್ನು ಹಂಚಿಕೊಂಡಿತ್ತು. ಮೊದಲ ದಿನ ₹15.9 ಕೋಟಿ ಹಣ ಚಿತ್ರ ಗಳಿಸಿದೆ ಎಂದು ಹೇಳಿತ್ತು. ಆ ಪ್ರಕಾರ 9 ದಿನದಲ್ಲಿ ''ಸ್ಯಾಕ್ನಿಲ್'' ಉಲ್ಲೇಖ ಮಾಡಿರುವ ಗಳಿಕೆಗಿಂತ ''ಮಾರ್ಕ್'' ಇನ್ನೂ ಹೆಚ್ಚಿನ ಹಣ ಗಳಿಸಿರುವ ಸಾಧ್ಯತೆ ಇದೆ. ಚಿತ್ರತಂಡ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಬೇಕಷ್ಟೇ.
ಒಟ್ನಲ್ಲಿ ''ಸ್ಯಾಕ್ನಿಲ್'' ಪ್ರಕಾರ ''ಮಾರ್ಕ್'' 9 ದಿನದಲ್ಲಿ ₹23.75 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಇಂದು ಮತ್ತು ನಾಳೆ ವಾರಾಂತ್ಯವಾದ ಹಿನ್ನೆಲೆ ಚಿತ್ರದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಎರಡು ದಿನದಲ್ಲಿ ₹25 ಕೋಟಿಯ ಗಡಿಯನ್ನು ''ಮಾರ್ಕ್'' ದಾಟುವ ಸಾಧ್ಯತೆ ಇದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











