Mark Box Office Day 5 ; ಬಾಕ್ಸ್ ಆಫೀಸ್‌ನಲ್ಲಿ 'ಮಾರ್ಕ್' ಅಬ್ಬರ, ಸೋಮವಾರದ ಅಗ್ನಿ ಪರೀಕ್ಷೆಯಲ್ಲಿ ಗೆದ್ದ ಸುದೀಪ್
ಡಿಸೆಂಬರ್ ಕನ್ನಡ ಚಿತ್ರರಂಗಕ್ಕೆ ''ಲಕ್ಕಿ'' ಎನ್ನುವುದು ಹಲವರ ನಂಬಿಕೆ. ಹಾಗೇ ನೋಡಿದರೆ ಈ ಮಾತು ನಿಜಾ ಕೂಡ ಹೌದು. ಯಾಕೆಂದರೆ.. ಡಿಸೆಂಬರ್‌ನಲ್ಲಿ ತೆರೆಗೆ ಬಂದ ಹಲವಾರು ಕನ್ನಡದ ಚಿತ್ರಗಳು ಚಿನ್ನದ ಬೆಳೆ ಬೆಳೆದಿವೆ. ''ಮುಂಗಾರು ಮಳೆ''ಯಿಂದ ಹಿಡಿದು ''ಕಿರಿಕ್ ಪಾರ್ಟಿ''ಯವರೆಗೆ.. ''ಕಾಟೇರ''ದಿಂದ ಹಿಡಿದು ''ಮ್ಯಾಕ್ಸ್''ವರೆಗೆ.. ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಹಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ.
ಈ ಹಿನ್ನೆಲೆ.. ಡಿಸೆಂಬರ್ ಬಂದರೆ ಸಾಕು, ಕನ್ನಡ ಚಿತ್ರದಲ್ಲಿ ನೂಕು ನುಗ್ಗಲಿನ ವಾತಾವರಣ ಸೃಷ್ಟಿಯಾಗುತ್ತೆ. ಅದರಲ್ಲಿಯೂ ಕಳೆದ ಕೆಲ ವರ್ಷಗಳಿಂದಂತೂ ಡಿಸೆಂಬರ್‌ಗೆ ಭಾರೀ ಡಿಮ್ಯಾಂಡ್ ಇದೆ. ದೊಡ್ಡ ದೊಡ್ಡ ಸ್ಟಾರ್‌ಗಳೆಲ್ಲಾ ತಮ್ಮ ಚಿತ್ರ ಡಿಸೆಂಬರ್‌ನಲ್ಲಿಯೇ ಬಿಡುಗಡೆಯಾಗಬೇಕು ಎಂಬ ಹಂಬಲ ವ್ಯಕ್ತಪಡಿಸುತ್ತಾರೆ.

ಈ ವರ್ಷ ಕೂಡ ಪರಿಸ್ಥಿತಿ ಭಿನ್ನವೇನು ಇಲ್ಲ. ಕೇವಲ ಎರಡೇ ವಾರದಲ್ಲಿ ಮೂರು ದೊಡ್ಡ ಚಿತ್ರಗಳು ಈ ವರ್ಷದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿವೆ. ಆ ಪೈಕಿ ಕಿಚ್ಚ ಸುದೀಪ್ ಅಭಿನಯದ ''ಮಾರ್ಕ್'' ಕೂಡ ಒಂದು. ಸದ್ಯ ''ಮಾರ್ಕ್'' ಬೆಳ್ಳಿತೆರೆಯಲ್ಲಿ ಅಬ್ಬರಿಸುತ್ತಿದ್ದು ವಾರದ ದಿನದಲ್ಲಿ ಕೂಡ ಕೋಟಿ ಕಲೆಕ್ಷನ್ ಮಾಡಿದೆ.
ಹೌದು, ಸಾಮಾನ್ಯವಾಗಿ ಸ್ಟಾರ್ ಯಾರೇ ಇರಲಿ.. ಆ ಚಿತ್ರ ಯಾವುದೇ ಇರಲಿ.. ಸೋಮವಾರದ ಗಳಿಕೆಯಲ್ಲಿ ಕುಸಿತ ಕಂಡು ಬಂದೇ ಬರುತ್ತೆ. ಯಾಕೆಂದರೆ ರಜೆಯ ಮಜಾ ಮುಗಿದ ಹಿನ್ನೆಲೆ ಎಲ್ಲರೂ ತಮ್ಮ ತಮ್ಮ ಕೆಲಸದತ್ತ ಮುಖ ಮಾಡಿರುತ್ತಾರೆ. ಆದರೆ..''ಮಾರ್ಕ್'' ವಿಚಾರದಲ್ಲಿ ಪ್ರೇಕ್ಷಕರಲ್ಲಿ ಸೋಮವಾರ ಕೂಡ ಚಿತ್ರ ನೋಡುವ ಆಸಕ್ತಿ ಕಂಡು ಬಂದಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಸೋಮವಾರದಂದು ( ಡಿಸೆಂಬರ್ 29 ) ''ಮಾರ್ಕ್'' ₹ 1.15 ಕೋಟಿ ಕೊಳ್ಳೆ ಹೊಡೆದಿದೆ ಎಂದು ವರದಿ ಮಾಡಿದೆ.

ಸ್ಯಾಕ್ನಿಲ್ ಪ್ರಕಾರ ಮಾರ್ಕ್ ಚಿತ್ರದ ಮೊದಲ 5 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ [ಗುರುವಾರ] - ₹ 8.6 ಕೋಟಿ
ಎರಡನೇ ದಿನ [ಶುಕ್ರವಾರ] - ₹3.2 ಕೋಟಿ
ಮೂರನೇ ದಿನ [ಶನಿವಾರ] - ₹3.2 ಕೋಟಿ
ನಾಲ್ಕನೇ ದಿನ [ಭಾನುವಾರ]- ₹3.4 ಕೋಟಿ
ಐದನೇ ದಿನ [ಸೋಮವಾರ ]-₹ 1.15 ಕೋಟಿ *ಅಂದಾಜು
ಒಟ್ಟು ಗಳಿಕೆ - ₹ 19.55 ಕೋಟಿ
ಹೀಗೆ ಹತ್ ಹತ್ರ ಮೊದಲ 5 ದಿನದಲ್ಲಿ ₹20 ಕೋಟಿಯನ್ನು ''ಮಾರ್ಕ್'' ಕೊಳ್ಳೆ ಹೊಡೆದಿದ್ದು ಇಂದು ಕೂಡ ಚಿತ್ರ ಉತ್ತಮವಾದ ಪ್ರದರ್ಶನ ಕಾಣುವ ವಿಶ್ವಾಸ ಗಾಂಧಿನಗರದ ಪಂಡಿತರಿಗಿದೆ.ಇನ್ನೂ ಚಿತ್ರತಂಡವೇ ಹೇಳಿಕೊಂಡಂತೆ ಸುದೀಪ್ ಪರೋಕ್ಷವಾಗಿ ಮೊನ್ನೆಯ ದಿನ ಒಪ್ಪಿಕೊಂಡಂತೆ ''ಸ್ಯಾಕ್ನಿಲ್'' ವರದಿ ಮಾಡಿರುವುದಕ್ಕಿಂತ ಹೆಚ್ಚಿನ ಹಣವನ್ನು ''ಮಾರ್ಕ್'' ಬಾಕ್ಸಾಫೀಸ್‌ನಲ್ಲಿ ಗಳಿಸಿದೆ. ಆ ಪೈಕಿ ಮೊದಲ ದಿನವೇ 15 ಕೋಟಿಗೂ ಅಧಿಕ ಹಣವನ್ನು ''ಮಾರ್ಕ್'' ಗಳಿಸಿದ್ದು ಚಿತ್ರದ ಐದು ದಿನದ ಒಟ್ಟಾರೆ ಗಳಿಕೆ ₹37 ಕೋಟಿ ಆಗಿದೆ.
ಒಟ್ನಲ್ಲಿ ಸದ್ಯ ''ಮಾರ್ಕ್'' ಸೋಮವಾರದ ಅಗ್ನಿ ಪರೀಕ್ಷೆಯಲ್ಲಿ ಪಾಸಾಗಿದ್ದು ಈ ವಾರಾಂತ್ಯದವರೆಗೆ ಎಷ್ಟು ಹಣವನ್ನು ಚಿತ್ರ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ಚಿತ್ರತಂಡ ಅಧಿಕೃತ ಅಂಕಿ ಅಂಶಗಳನ್ನು ಕೂಡ ಹಂಚಿಕೊಳ್ಳುವ ನಿರೀಕ್ಷೆ ಇದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











