Mark Box Office Day 10 ; ವೀಕೆಂಡ್‌ನಲ್ಲಿ ‘ಮಾರ್ಕ್’ ಹವಾ, ಸುದೀಪ್ ಮೋಡಿ - 10ನೇ ದಿನ ಹೆಚ್ಚಾಯ್ತು ಕಲೆಕ್ಷನ್
ಮೊದಲೆಲ್ಲಾ ತಮ್ಮ ನೆಚ್ಚಿನ ನಾಯಕನ ಚಿತ್ರ ಬರುತ್ತಿದೆ ಅಂದರೆ ಅಭಿಮಾನಿಗಳಲ್ಲಿ ಒಂದು ರೀತಿಯ ಉತ್ಸಾಹ ಕಾಣುತ್ತಿತ್ತು. ಕಾತುರದಿಂದ ಕಾಯುತ್ತಾ ಕುಳಿತುಕೊಳ್ಳುತ್ತಿದ್ದರು. ಇನ್ನು ಆಗ ಸೋಶಿಯಲ್ ಮೀಡಿಯಾ ಕೂಡ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಓಟಿಟಿಯ ಅಲೆ ಕೂಡ ಎದ್ದಿರಲಿಲ್ಲ. ಹೀಗಾಗಿ ಚಿತ್ರಮಂದಿರಗಳಲ್ಲಿಯೇ ಚಿತ್ರವನ್ನು ಅಭಿಮಾನಿಗಳು ನೋಡಬೇಕಿತ್ತು. ಆದರೆ ಈಗ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರದ ಮೊದಲ ಪ್ರದರ್ಶನ ಮುಕ್ತಾಯವಾಗುತ್ತಿದ್ದಂತೆಯೇ...
ಚಿತ್ರದ ಹಣೆ ಬರಹ ಗೊತ್ತಾಗಿ ಬಿಡುತ್ತೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಪ್ರಮುಖವಾದ ಸನ್ನಿವೇಶಗಳು ಹರಿದಾಡುತ್ತವೆ. ಇಡೀ ಚಿತ್ರ ಕ್ಷಣಾರ್ಧದಲ್ಲಿಯೇ ಆನ್ ಲೈನ್‌ನಲ್ಲಿ ಸೋರಿಕೆಯಾಗುತ್ತೆ. ಇಂತಹ ವಾತಾವರಣದಲ್ಲಿ ಸದ್ಯ ''ಮಾರ್ಕ್'' ಹತ್ತು ದಿನಗಳ ಯಶಸ್ವೀ ಪ್ರದರ್ಶನ ಕಂಡಿದೆ. ಬಾಕ್ಸಾಫೀಸ್‌ನಲ್ಲಿ ಮಹತ್ವದ ಲ್ಯಾಂಡ್‌ಮಾರ್ಕ್‌ನತ್ತ ದಾಪುಗಾಲು ಹಾಕುತ್ತಿದೆ.

ಹೌದು, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಮಾರ್ಕ್'' ಈ ಹತ್ತು ದಿನದಲ್ಲಿ ₹24.51 ಕೋಟಿಯನ್ನು ದೋಚಿದೆ. ಇಂದು ಬಾಕ್ಸಾಫೀಸ್‌ನಲ್ಲಿ ₹25 ಕೋಟಿಯ ಲ್ಯಾಂಡ್ ''ಮಾರ್ಕ್''ನ್ನೂ ಈ ಚಿತ್ರ ಪಾರು ಮಾಡಲಿದೆ. ವಿಶೇಷ ಅಂದರೆ ವೀಕೆಂಡ್‌ನಲ್ಲಿ ಬಾಕ್ಸಾಫೀಸ್‌ನಲ್ಲಿ ''ಮಾರ್ಕ್'' ಮ್ಯಾಜಿಕ್ ಮಾಡಿದೆ. ಸುದೀಪ್ ಹವಾ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆದಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ನಿನ್ನೆ (ಜನವರಿ 3) ಅಂದರೆ ಶನಿವಾರ ''ಮಾರ್ಕ್'' ಗಳಿಕೆಯಲ್ಲಿ 26.67% ಏರಿಕೆಯಾಗಿದ್ದು ಕನ್ನಡದಲ್ಲಿ ₹76 ಲಕ್ಷವನ್ನು ಈ ಚಿತ್ರ ಗಳಿಸಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.
ಸ್ಯಾಕ್ನಿಲ್ ಪ್ರಕಾರ ''ಮಾರ್ಕ್'' ಚಿತ್ರದ 10 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ [ಗುರುವಾರ] - ₹ 8.6 ಕೋಟಿ
ಎರಡನೇ ದಿನ [ಶುಕ್ರವಾರ] - ₹3.2 ಕೋಟಿ
ಮೂರನೇ ದಿನ [ಶನಿವಾರ] - ₹3.2 ಕೋಟಿ
ನಾಲ್ಕನೇ ದಿನ [ಭಾನುವಾರ]- ₹3.4 ಕೋಟಿ
ಐದನೇ ದಿನ [ಸೋಮವಾರ ]-₹ 1.15 ಕೋಟಿ
ಆರನೇ ದಿನ [ಮಂಗಳವಾರ]- ₹90 ಲಕ್ಷ
ಏಳನೇ ದಿನ [ಬುಧವಾರ] - ₹80 ಲಕ್ಷ
ಎಂಟನೇ ದಿನ [ಗುರುವಾರ]- ₹1.9 ಕೋಟಿ
ಮೊದಲ ವಾರದ ಗಳಿಕೆ- ₹ 23.15 ಕೋಟಿ
ಒಂಬತ್ತನೇ ದಿನ [ಶುಕ್ರವಾರ]- ₹60 ಲಕ್ಷ *ಅಂದಾಜು
ಹತ್ತನೇ ದಿನ [ಶನಿವಾರ]- ₹76 ಲಕ್ಷ *ಅಂದಾಜು
ಒಟ್ಟು ಗಳಿಕೆ - ₹ 24.51 ಕೋಟಿ

ಅಂದ್ಹಾಗೇ ಚಿತ್ರ ಬಿಡುಗಡೆಯಾದ ನಂತರ ಖುದ್ದು ಚಿತ್ರತಂಡವೇ ಚಿತ್ರದ ಮೊದಲ ದಿನದ ಗಳಿಕೆಯ ಮಾಹಿತಿಯನ್ನು ಹಂಚಿಕೊಂಡಿತ್ತು. ಮೊದಲ ದಿನ ₹15.9 ಕೋಟಿ ಹಣ ಚಿತ್ರ ಗಳಿಸಿದೆ ಎಂದು ಹೇಳಿತ್ತು. ಆ ಪ್ರಕಾರ 10 ದಿನದಲ್ಲಿ ''ಸ್ಯಾಕ್ನಿಲ್'' ಉಲ್ಲೇಖ ಮಾಡಿರುವ ಗಳಿಕೆಗಿಂತ ''ಮಾರ್ಕ್'' ಇನ್ನೂ ಹೆಚ್ಚಿನ ಹಣ ಗಳಿಸಿರುವ ಸಾಧ್ಯತೆ ಇದೆ. ಚಿತ್ರತಂಡ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಬೇಕಷ್ಟೇ.
ಒಟ್ನಲ್ಲಿ ''ಸ್ಯಾಕ್ನಿಲ್'' ಪ್ರಕಾರ ''ಮಾರ್ಕ್'' 10 ದಿನದಲ್ಲಿ ₹24.51 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಇಂದು (ಜನವರಿ 4) ಭಾನುವಾರವಾದ ಹಿನ್ನೆಲೆ ಚಿತ್ರದ ಗಳಿಕೆ ಇವತ್ತು ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ ವಾರಾಂತ್ಯದವರೆಗೆ ''ಮಾರ್ಕ್'' ಇನ್ನೂ ಎಷ್ಟು ಕೋಟಿಯನ್ನು ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











