Mark Box Office Day 12 ; ಬಾಕ್ಸಾಫೀಸ್‌ನಲ್ಲಿ ಮಹತ್ವದ ಮೈಲಿಗಲ್ಲು ದಾಟಿದ ಮಾರ್ಕ್, 12ನೇ ದಿನ ಗಳಿಸಿದ್ದೆಷ್ಟು ?

ಸಾಮಾನ್ಯವಾಗಿ ಹಬ್ಬ ಹರಿದಿನಗಳಂದು .. ರಜಾದಿನಗಳಂದು .. ಬಿಡುಗಡೆಯಾದ ಚಿತ್ರಕ್ಕೆ ಭಾರೀ ಡಿಮ್ಯಾಂಡ್ ಇರುತ್ತೆ. ಅದರಲ್ಲಿಯೂ ಆ ಚಿತ್ರದಲ್ಲಿ ಸೂಪರ್ ಸ್ಟಾರ್‌ಗಳಿದ್ದರೆ ಮುಗೀತು. ಚಿತ್ರಮಂದಿರದ ಎದುರು ಜನಜಂಗುಳಿ ಕಂಡು ಬರುತ್ತದೆ. ಚಿತ್ರ ಚೆನ್ನಾಗಿದೆಯಾ.. ಚೆನ್ನಾಗಿಲ್ವಾ ? ಯಾವುದನ್ನೂ ಲೆಕ್ಕಿಸದೇ ಮಜಾ ಮಾಡುವ ಉದ್ದೇಶದಿಂದ ರಜಾದಿನದಂದು ಬಂದ ಚಿತ್ರವನ್ನು ಅನೇಕರು ನೋಡುತ್ತಾರೆ. ಆದರೆ ಅಸಲಿ ಪರೀಕ್ಷೆ ಶುರುವಾಗುವುದೇ ಆ ನಂತರ.

ಹಬ್ಬ ಮುಗಿದ ನಂತರ..ರಜೆಯ ಮಜವೆಲ್ಲ ಮುಕ್ತಾಯವಾದ ನಂತರ.. ಆ ಚಿತ್ರ ನಿಜಕ್ಕೂ ಪ್ರೇಕ್ಷಕರಿಗೆ ಇಷ್ಟವಾಗಿದ್ದರೆ ಮಾತ್ರ ಚಿತ್ರಮಂದಿರದಲ್ಲಿ ಉಳಿಯುತ್ತೆ. ಗೆಲ್ಲುತ್ತೆ. ಅದರಲ್ಲಿಯೂ ಪೈರಸಿಯ ಈ ಕಾಲದಲ್ಲಿ .. ಪ್ಯಾನ್‌ ಇಂಡಿಯಾದ ಗುಂಗಿನಲ್ಲಿ .. ಚಿತ್ರವೊಂದು ಚಿತ್ರಮಂದಿರದಲ್ಲಿ ಒಂದೆರಡು ವಾರ ಪ್ರದರ್ಶನ ಕಾಣುವುದೇ ಕಷ್ಟ ಎನ್ನುವಾಗ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುವುದಲ್ಲದೇ ಬಾಕ್ಸಾಫೀಸ್‌ನಲ್ಲಿ ಕೂಡ ಕೋಟಿ ಕೋಟಿ ಹಣ ದೋಚುತ್ತಿದೆ ಅಂದರೆ ಆ ಚಿತ್ರ ನಿಜಕ್ಕೂ ಗೆದ್ದಂತೆಯೇ. ಉದಾಹರಣೆಗೆ ''ಮಾರ್ಕ್‌''.

Kichcha Sudeep s Mark Strikes Gold Crosses the Milestone 25 Crore Mark

ಹೌದು.. ''ಮಾರ್ಕ್‌'', ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕಳೆದ ವರ್ಷಾಂತ್ಯದಲ್ಲಿ ತೆರೆಗೆ ಬಂದ ಸಿನಿಮಾ. ಪಕ್ಕದ ಮನೆಯ ನಿರ್ದೇಶಕ ವಿಜಯ್ ಕಾರ್ತಿಕೆಯನ್ ಜೊತೆ ಸೇರಿ ಸುದೀಪ್ ಮಾಡಿರುವ ಎರಡನೇ ಮಹಾಯಜ್ಞ. ಸದ್ಯ ಚಿತ್ರಮಂದಿರದಲ್ಲಿ ''ಮಾರ್ಕ್‌'' ಹನ್ನೆರಡು ದಿನವನ್ನು ಪೂರೈಸಿದೆ. ಈ ಹನ್ನೆರಡು ದಿನದಲ್ಲಿ ₹25 ಕೋಟಿಯ ಗಡಿಯನ್ನು ಕೂಡ ಪಾರು ಮಾಡಿದೆ.

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ನಿನ್ನೆ ಅಂದರೆ ಎರಡನೇ ಸೋಮವಾರ (ಜನವರಿ 5 ) ₹27 ಲಕ್ಷವನ್ನು ''ಮಾರ್ಕ್'' ಗಳಿಸಿದೆ. ಈ ಮೂಲಕ ಹನ್ನೆರಡು ದಿನದಲ್ಲಿ ₹ 26.22 ಕೋಟಿಯನ್ನು ಕೊಳ್ಳೆ ಹೊಡೆದಿದೆ.

ಸ್ಯಾಕ್ನಿಲ್ ಪ್ರಕಾರ ''ಮಾರ್ಕ್'' ಚಿತ್ರದ 10 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ [ಗುರುವಾರ] - ₹ 8.6 ಕೋಟಿ
ಎರಡನೇ ದಿನ [ಶುಕ್ರವಾರ] - ₹3.2 ಕೋಟಿ
ಮೂರನೇ ದಿನ [ಶನಿವಾರ] - ₹3.2 ಕೋಟಿ
ನಾಲ್ಕನೇ ದಿನ [ಭಾನುವಾರ]- ₹3.4 ಕೋಟಿ
ಐದನೇ ದಿನ [ಸೋಮವಾರ ]-₹ 1.15 ಕೋಟಿ
ಆರನೇ ದಿನ [ಮಂಗಳವಾರ]- ₹90 ಲಕ್ಷ
ಏಳನೇ ದಿನ [ಬುಧವಾರ] - ₹80 ಲಕ್ಷ
ಎಂಟನೇ ದಿನ [ಗುರುವಾರ]- ₹1.9 ಕೋಟಿ

ಮೊದಲ ವಾರದ ಗಳಿಕೆ- ₹ 23.15 ಕೋಟಿ

ಒಂಬತ್ತನೇ ದಿನ [ಶುಕ್ರವಾರ]- ₹75 ಲಕ್ಷ
ಹತ್ತನೇ ದಿನ [ಶನಿವಾರ]- ₹90 ಲಕ್ಷ
ಹನ್ನೊಂದನೇ ದಿನ [ಭಾನುವಾರ]-₹ 1.15 ಕೋಟಿ
ಹನ್ನೆರಡಬೇ ದಿನ [ಸೋಮವಾರ]-₹27 ಲಕ್ಷ *ಅಂದಾಜು

ಒಟ್ಟು ಗಳಿಕೆ - ₹26.22ಕೋಟಿ

kichcha-sudeep-s-mark-strikes-gold-crosses-the-milestone-25-crore-mark

ಹೀಗೆ ''ಮಾರ್ಕ್‌'' ಸದ್ಯ ₹26.22 ಕೋಟಿಯನ್ನು ಈ ಹನ್ನೆರಡು ದಿನದಲ್ಲಿ ಗಳಿಸಿದೆ. ಚಿತ್ರತಂಡದವರ ಪ್ರಕಾರ ಗಳಿಕೆ ಇನ್ನೂ ಹೆಚ್ಚಿರಬಹುದು. ಯಾಕೆಂದರೆ ಬಿಡುಗಡೆಯಾದ ನಂತರ ಖುದ್ದು ಚಿತ್ರತಂಡವೇ ಚಿತ್ರದ ಮೊದಲ ದಿನದ ಗಳಿಕೆಯ ಮಾಹಿತಿಯನ್ನು ಹಂಚಿಕೊಂಡಿತ್ತು. ಮೊದಲ ದಿನ ₹15.9 ಕೋಟಿ ಹಣ ಚಿತ್ರ ಗಳಿಸಿದೆ ಎಂದು ಹೇಳಿತ್ತು.

ಆ ಪ್ರಕಾರ 12 ದಿನದಲ್ಲಿ ''ಸ್ಯಾಕ್ನಿಲ್'' ಉಲ್ಲೇಖ ಮಾಡಿರುವ ಗಳಿಕೆಗಿಂತ ''ಮಾರ್ಕ್'' ಇನ್ನೂ ಹೆಚ್ಚಿನ ಹಣ ಗಳಿಸಿರುವ ಸಾಧ್ಯತೆ ಇದೆ. ಇನ್ನು ಈ ಗಳಿಕೆ ಕೇವಲ ಭಾರತದ್ದು. ಹೊರ ದೇಶದ ಗಳಿಕೆಯನ್ನು ಕೂಡ ಪರಿಗಣಿಸಿದರೆ ಅಂಕಿ-ಸಂಖ್ಯೆ ಹೆಚ್ಚಾಗುತ್ತೆ. ಚಿತ್ರತಂಡ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಬೇಕಷ್ಟೇ. ಸದ್ಯ ''ಮಾರ್ಕ್'' ಯಶಸ್ವಿ ಪ್ರದರ್ಶನ ಕಾಣ್ತಿದ್ದು ಈ ವಾರಾಂತ್ಯದಲ್ಲಿ ಚಿತ್ರ ಎಷ್ಟು ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Kichcha Sudeep dominates again! 'Mark' smashes the ₹25 Cr barrier with massive collections. Click for the full box office breakdown of Sudeep’s latest blockbuster hit.
Read more about: kichcha sudeep sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X