Kingdom Box Office Day 2; ವಿಜಯ್ ದೇವರಕೊಂಡ ಗೆದ್ರಾ? ಮುಗ್ಗರಿಸಿ ಬಿದ್ರಾ? ಕಿಂಗ್‌ಡಮ್ 2ನೇ ದಿನ ಗಳಿಸಿದ್ದೆಷ್ಟು?
ತಮ್ಮ ಚಿತ್ರಕ್ಕಿಂತ ರಶ್ಮಿಕಾ ಮಂದಣ್ಣ ಅವರ ವಿಚಾರದಿಂದಲೇ ಹೆಚ್ಚು ಹೆಚ್ಚು ಸುದ್ದಿಯಾಗುತ್ತಾ ಬಂದವರು ವಿಜಯ್ ದೇವರಕೊಂಡ. ಕಳೆದ 14 ವರ್ಷಗಳಿಂದ ಹಲವು ಚಿತ್ರಗಳನ್ನು ಮಾಡಿದ್ದರು.. ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸಿದ್ದರು.. ''ಅರ್ಜುನ್ ರೆಡ್ಡಿ'' ಮತ್ತು ''ಗೀತ ಗೋವಿಂದಂ'' ಹೊರತು ಪಡಿಸಿದರೆ ಬೇರೆ ಯಾವ ಚಿತ್ರ ಕೂಡ ವಿಜಯ್ ದೇವರಕೊಂಡ ಅವರ ಕೈ ಹಿಡಿಯಲಿಲ್ಲ.
ಇನ್ನು .. ''ಲೈಗರ್'' ವಿಜಯ್ ದೇವರಕೊಂಡ ವೃತ್ತಿ ಬದುಕಿನ ಬಹುದೊಡ್ಡ ಶಾಪ. ಈ ಚಿತ್ರದ ಮೂಲಕ ದೊಪ್ಪನೆ ಕೆಳಗೆ ಬಿದ್ದ ವಿಜಯ್ ದೇವರಕೊಂಡ ಮೇಲೆ ಎದ್ದೇಳಲು ಇನ್ನೂ ಹರಸಾಹಸ ಪಡುತ್ತಿದ್ದಾರೆ. ದೇವರಕೊಂಡ ಅವರ ಈ ಸರ್ಕಸ್ ಕಂಡು ಹಲವರು ರಶ್ಮಿಕಾ ಗೆಳೆಯನ ಕಥೆ ಮುಗಿಯಿತು ಎಂದೇ ಅಂದುಕೊಂಡಿದ್ದಾರೆ. ಹೀಗಿರುವಾಗ ಇದೀಗ ''ಕಿಂಗ್‌ಡಮ್'' ತೆರೆಗೆ ಬಂದಿದೆ. ಮೊದಲ ದಿನ ಒಳ್ಳೆಯ ಗಳಿಕೆಯನ್ನು ಮಾಡಿದೆ. ಆದರೆ.. ಎರಡನೇ ದಿನ ''ಕಿಂಗ್ಡಮ್''ನಲ್ಲಿ ಕಂಪನದ ಸದ್ದು ಕೇಳಿ ಬಂದಿದೆ.

ಹೌದು, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಕಿಂಗ್ಡಮ್'' ಮೊನ್ನೆ [ಜುಲೈ 31] ಭರ್ಜರಿ ಬೆಳೆಯನ್ನು ಬೆಳೆದಿತ್ತು.₹ 18 ಕೋಟಿಯನ್ನು ಗಳಿಸಿತ್ತು. ಈ ಮೂಲಕ ಹಲವರ ಹುಬ್ಬೇರಿಸಿತ್ತು. ಯಾಕೆಂದರೆ ''ಲೈಗರ್'' ಚಿತ್ರವೇ ಕೊನೆ. ಆ ನಂತರ ವಿಜಯ್ ದೇವರಕೊಂಡ ಅಭಿನಯದ ಯಾವ ಚಿತ್ರ ಕೂಡ ಮೊದಲ ದಿನ 15 ಕೋಟಿಯ ಗಡಿಯನ್ನು ದಾಟಿರಲಿಲ್ಲ. ''ಸ್ಯಾಕ್ನಿಲ್'' ಉಲ್ಲೇಖಿಸಿರುವಂತೆ ''ಲೈಗರ್'' ಮೊದಲ ದಿನ ₹15.95 ಕೋಟಿ ಗಳಿಸಿತ್ತು.
ಹೀಗಾಗಿ ಅನೇಕರು ''ಕಿಂಗ್‌ಡಮ್'' ಚಿತ್ರದ ಮೊದಲ ದಿನದ ಗಳಿಕೆಯನ್ನು ಕಂಡು ವಿಜಯ್ ದೇವರಕೊಂಡ ಮತ್ತೆ ಲಯಕ್ಕೆ ಮರಳಿದ್ದಾರೆ ಎಂದೇ ಅಂದುಕೊಂಡಿದ್ದಾರೆ. ಆದರೆ, ವಿಜಯ್ ದೇವರಕೊಂಡ ಎದುರಿರುವ ಅಗ್ನಿ ಪರೀಕ್ಷೆ ಇನ್ನು ಮುಗಿದಿಲ್ಲ. ಯಾಕೆಂದರೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನಕ್ಕಿಂತ ಎರಡನೇ ದಿನ ಪ್ರೇಕ್ಷಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಎರಡನೇ ದಿನ ''ಕಿಂಗ್‌ಡಮ್'' ₹ 7.50 ಕೋಟಿಯನ್ನು ಮಾತ್ರ ಗಳಿಸಿದೆ ಎಂದು ''ಸ್ಯಾಕ್ನಿಲ್'' ನಮೂದಿಸಿದೆ. ಎರಡು ದಿನದ ಒಟ್ಟಾರೆ ಗಳಿಕೆ ₹ 25.50 ಕೋಟಿಯಾಗಿದೆ ಎಂದು ಹೇಳಿದೆ.
''ಕಿಂಗ್‌ಡಮ್'' ಚಿತ್ರದ ಗಳಿಕೆಯಲ್ಲಿ ಕಂಡು ಬಂದ ಈ ಕುಸಿತದಿಂದ ಇಂದು[ ಆಗಸ್ಟ್ 2] ಮತ್ತು ನಾಳೆಯ [ಆಗಸ್ಟ್ 3] ಮೇಲೆ ಎಲ್ಲರ ಕಣ್ಣಿದೆ. ಈ ಎರಡು ದಿನದಲ್ಲಿ ಈ ಚಿತ್ರ ಚೇತರಿಸಿಕೊಳ್ಳದಿದ್ದರೆ ಸೋಮವಾರ ''ಕಿಂಗ್ಡಮ್'' ಕಥೆ ಬಹುತೇಕ ಖತಂ ಆದಂತೆಯೇ ಎನ್ನುವ ಮಾತು ಕೂಡ ಸದ್ಯ ಕೇಳಿ ಬರುತ್ತಿದೆ. ಪ್ರೇಕ್ಷಕರಿಂದ ವ್ಯಕ್ತವಾದ ಮಿಶ್ರ ಪ್ರತಿಕ್ರಿಯೆಯೇ ''ಕಿಂಗಡಮ್'' ಚಿತ್ರದ ಹಿನ್ನೆಡೆಗೆ ಕಾರಣವಾಯ್ತು ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ''ಲೈಗರ್'' ಮೂಲಕ ವಿಜಯ್ ದೇವರಕೊಂಡ ಅವರನ್ನು ಸುತ್ತಿಕೊಂಡಿದ್ದ ಸೋಲಿನ ಪರ್ವ ಈಗ ಮತ್ತಷ್ಟು ಬಿಗಿಯಾಗಿ ಅಪ್ಪಿಕೊಂಡಿದೆ ಎನ್ನುವ ಚರ್ಚೆ ಕೂಡ ಶುರುವಾಗಿದೆ.
ಒಟ್ನಲ್ಲಿ ಸದ್ಯ ''ಕಿಂಗ್‌ಡಮ್'' 25 ಕೋಟಿಯನ್ನು ಗಳಿಸಿದೆ ಎಂದು ''ಸ್ಯಾಕ್ನಿಲ್'' ವರದಿಯನ್ನು ಮಾಡಿದೆ. ಈ ವಾರಾಂತ್ಯದೊಳಗೆ ಚಿತ್ರ ಎಷ್ಟು ಗಳಿಸುತ್ತೆ.? ಎನ್ನುವುದನ್ನು ಕಾದು ನೋಡಬೇಕಿದೆ. ಈ ಎರಡು ದಿನದ ಗಳಿಕೆಯ ಮೇಲೆ ''ಕಿಂಗ್ಡಮ್'' ಮುಂದಿನ ಭವಿಷ್ಯ ನಿಂತಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











