Kingdom Box Office Day 3 ; ದೇವರಕೊಂಡನ ಆ ದೇವರೇ ಕಾಪಾಡಬೇಕು,3ನೇ ದಿನ ಕಿಂಗ್‌ಡಮ್ ಗಳಿಸಿದ್ದೆಷ್ಟು ?
ಚಿತ್ರರಂಗ ಮಾತ್ರ ಅಲ್ಲ ಯಾವುದೇ ಕ್ಷೇತ್ರವಾದರು ಕೂಡ ಅಲ್ಲಿ ಗೆಲುವು ಮತ್ತು ಸೋಲು ಮಾಮೂಲು. ಆದರೆ .. ಚಿತ್ರರಂಗದಲ್ಲಿ ಗೆದ್ದ ನಂತರ ಹಲವರು ಮೈಮರೆಯುತ್ತಾರೆ. ಎಚ್ಚರಿಕೆಯ ಹೆಜ್ಜೆಯನ್ನು ಇಡುವ ಬದಲು ಭ್ರಮಾ ಲೋಕದಲ್ಲಿ ತೇಲುತ್ತಾರೆ. ವಿಪರೀತವಾದ ಪ್ರಚಾರವನ್ನು ಕೂಡ ಪಡೆಯುತ್ತಾರೆ. ಕಣ್ತೆರೆದಾಗ ಪಾತಾಳಕ್ಕೆ ಕುಸಿದು ಬಿದ್ದಿರುವ ಅರಿವು ಇವರಿಗಾಗುತ್ತೆ. ಸೋಲಿನ ತೀವೃತೆ ಅಧಿಕವಾಗಿರುತ್ತೆ. ಮತ್ತೆ ಮೇಲಕ್ಕೇಳುವ..
ಪ್ರಯತ್ನವನ್ನು ಎಷ್ಟೇ ಮಾಡಿದರೂ ಕೂಡ ಗೆಲುವು ಎನ್ನುವುದು ಸಿಗದೇ ಮತ್ತೆ ಸತಾಯಿಸುತ್ತೆ. ಇಂಥಹದ್ದೊಂದು ಸೋಲಿನ ಕಮರಿಗೆ ಬಿದ್ದು ಒದ್ದಾಡುತ್ತಿರುವ ವಿಜಯ್ ದೇವರಕೊಂಡ ಸದ್ಯ ''ಕಿಂಗ್‌ಡಮ್'' ಚಿತ್ರದ ಮೂಲಕ ಕಳೆದು ಹೋದ ತಮ್ಮ ''ಸ್ಟಾರ್‌ಡಮ್''ನ ಮರಳಿ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಆದರೆ .. ಈ ಬಾರಿ ಕೂಡ ತಮ್ಮ ಈ ಪ್ರಯತ್ನದಲ್ಲಿ ವಿಜಯ್ ದೇವರಕೊಂಡ ಯಶಸ್ವಿಯಾಗುವುದು ಬಹುತೇಕ ಅನುಮಾನ. ''ಕಿಂಗ್‌ಡಮ್'' ಚಿತ್ರದ ಗಳಿಕೆಯೇ ಈ ಸುಳಿವನ್ನು ನೀಡುತ್ತಿದೆ. ಹೌದು, ಬಾಕ್ಸಾಫೀಸ್‌ನ ಅಂಕಿ-ಅಂಶವನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಚಿತ್ರದ ಗಳಿಕೆಯಲ್ಲಿ ಎರಡನೇ ದಿನ [ ಆಗಸ್ಟ್ 1] ಶೇಕಡಾ 58.33% ಕುಸಿತ ಕಂಡು ಬಂದಿದೆ. ಮೊದಲ ದಿನ [ ಜುಲೈ 31 ] ₹ 18 ಕೋಟಿಯನ್ನು ಗಳಿಸಿದ್ದ ''ಕಿಂಗ್ಡಮ್'' ಎರಡನೇ ದಿನ ಕೇವಲ ₹ 7.5 ಕೋಟಿಯನ್ನಷ್ಟೇ ಗಳಿಸಿದೆ.
ಇನ್ನು ನಿನ್ನೆ [ ಆಗಸ್ಟ್ 2 ] ಶನಿವಾರದ ಹಿನ್ನೆಲೆ ಚಿತ್ರದ ಗಳಿಕೆ ಹೆಚ್ಚಾಗುವ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಕೂಡ ಹುಸಿಯಾಗಿದ್ದು ಮೂರನೇ ದಿನ ಚಿತ್ರ ಕೇವಲ ₹8 ಕೋಟಿಯನ್ನು ಮಾತ್ರ ಗಳಿಸಿದೆ ಎಂದು ''ಸ್ಯಾಕ್ನಿಲ್'' ವರದಿಯನ್ನು ಮಾಡಿದೆ.
ಸ್ಯಾಕ್ನಿಲ್ ಪ್ರಕಾರ ''ಕಿಂಗ್‌ಡಮ್'' ಚಿತ್ರದ 3 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ [ಗುರುವಾರ] ₹ 18 ಕೋಟಿ
ಎರಡನೇ ದಿನ[ಶುಕ್ರವಾರ ] ₹ 7.5 ಕೋಟಿ
ಮೂರನೇ ದಿನ[ಶನಿವಾರ] ₹ 8.00 ಕೋಟಿ * ಅಂದಾಜು
ಒಟ್ಟು ಗಳಿಕೆ ₹ 33.50 ಕೋಟಿ

ಹೀಗೆ ಮೂರು ದಿನದಲ್ಲಿ ₹ 33.50 ಕೋಟಿಯನ್ನು ''ಕಿಂಗ್‌ಡಮ್'' ಗಳಿಸಿದ್ದು ಇಂದು ವಿಜಯ್ ದೇವರಕೊಂಡ ಮತ್ತು ಇಡೀ ತಂಡಕ್ಕೆ ಮಹತ್ವದ ದಿನವಾಗಿದೆ. ಇಂದು ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡು ಬರದಿದ್ದರೆ, ''ಕಿಂಗ್ಡಮ್'' ಕಥೆ ಬಹುತೇಕ ಖತಂ ಆದಂತೆಯೇ. ಯಾಕೆಂದರೆ.. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಜೆ ಇದ್ದಾಗ ಮಜಾ ಮಾಡಲು ಬಾರದ ಪ್ರೇಕ್ಷಕರು ತಮ್ಮ ಕೆಲಸವನ್ನು ಬಿಟ್ಟು ವಾರದ ದಿನಗಳಲ್ಲಿ ಅಂತೂ ಬರಲಾರರು.
ಇನ್ನು ಇಂದೊಂದೇ ವಾರ ಬಾಕಿ. ಆ ನಂತರ ''ವಾರ್'' ಮತ್ತು ''ಕೂಲಿ'' ಚಿತ್ರಗಳ ಅಬ್ಬರ ಶುರುವಾಗಲಿದೆ. ಹೀಗಾಗಿ ದೇವರಕೊಂಡನ ಈಗ ದೇವರೇ ಕಾಪಾಡಬೇಕು ಎನ್ನುವ ಮಾತು ಸದ್ಯ ಆಂಧ್ರದಲ್ಲಿ ಕೇಳಿ ಬರುತ್ತಿದೆ.
ಒಟ್ನಲ್ಲಿ ಸದ್ಯ ''ಕಿಂಗ್‌ಡಮ್'' 33.50 ಕೋಟಿಯನ್ನು ಗಳಿಸಿದೆ ಎಂದು ''ಸ್ಯಾಕ್ನಿಲ್'' ವರದಿಯನ್ನು ಮಾಡಿದ್ದು, ಚಿತ್ರದ ಒಟ್ಟಾರೆ ಬಜೆಟ್ 130 ಕೋಟಿ ಎಂದು ತೆಲುಗು ಮಾಧ್ಯಮಗಳು ವರದಿಯನ್ನು ಮಾಡಿವೆ. ಹಾಕಿದ ಬಂಡವಾಳದ ಮೇಲೆ ಲಾಭ ಮಾಡುವುದು ಸದ್ಯ ಕಷ್ಟವಾದರು, ಎಷ್ಟು ಹಣವನ್ನು ಚಿತ್ರ ಮರಳಿ ಪಡೆಯುತ್ತೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











