ರಶ್ಮಿಕಾ ಸಖ ದೇವರಕೊಂಡನ ನಂಬಿ ₹83 ಕೋಟಿಯನ್ನು ಕಳೆದುಕೊಂಡ ನಿರ್ಮಾಪಕ..!

ಲಕ್ ಅಂದ್ರೆ ಇದೇ ಇರಬೇಕು. ಅಭಿನಯಿಸಿದ ಚಿತ್ರವೊಂದು ಗೆದ್ದರೆ ಸಾಕು ಅವಕಾಶಗಳು ಬೇಡವೆಂದರೂ ಬರುತ್ತಲೇ ಇರುತ್ತವೆ. ಇದಕ್ಕೆ ವರ್ಷಗಳ ಹಿಂದೆ ಜ್ವಲಂತ ಉದಾಹರಣೆ ಅಂತೆ ಇದ್ದವರು ವಿಜಯ್ ದೇವರಕೊಂಡ. ಅರ್ಜುನ್ ರೆಡ್ಡಿ ಚಿತ್ರದ ಮಹಾ ಗೆಲುವು ಇವರ ಮನೆಯ ಮುಂದೆ ನಿರ್ಮಾಪಕರ ಬಹುದೊಡ್ಡ ದಂಡನ್ನೇ ಕರೆತಂದು ನಿಲ್ಲಿಸಿತ್ತು. ಆದರೆ.. ಇದು ಬಣ್ಣದ ಲೋಕ.

ಇಲ್ಲಿ ಇವತ್ತು ಸ್ಟಾರ್ ಆದವರು ನಾಳೆ ಟಾರ್ ರೋಡ್‌ನಲ್ಲಿದ್ದರೆ .. ಟಾರ್ ರೋಡ್‌ನಲ್ಲಿದ್ದವರು ಏಕಾಏಕಿ ಇಲ್ಲಿ ಸ್ಟಾರ್ ಆಗುತ್ತಾರೆ. ಎಲ್ಲವೂ ಇಲ್ಲಿ ಕಾಲದ ಮಹಿಮೆ ಅಷ್ಟೇ. ವಿಜಯ್ ದೇವರಕೊಂಡ ವಿಚಾರದಲ್ಲಿ ಕೂಡ ಇದೇ ಆಯ್ತು. ಸೋಲು ಮಗ್ಗಲ ಮುಳ್ಳಾಯ್ತು. 2018ರಿಂದ ಸುತ್ತಿಕೊಂಡ ಈ ಸೋಲಿನ ಸರಪಳಿಯನ್ನು ಕಳಚಲು ದೇವರಕೊಂಡ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ.

Kingdom Fails to Reign Vijay Deverakonda s Film Dips Barely Recovers 35 of Budget in First Week

ಆದರೆ.. ಸಾಧ್ಯವಾಗುತ್ತಲೇ ಇಲ್ಲ. ಬದಲಿಗೆ ಸೋಲು ಗಾಢವಾಗಿ ಆವರಿಸಿಕೊಳ್ಳುತ್ತಿದೆ. ಇದಕ್ಕೆ ಪುರಾವೆ ಎನ್ನುವಂತೆ ''ಕಿಂಗ್‌ಡಮ್‌'' ಬಾಕ್ಸಾಫೀಸ್‌ನಲ್ಲಿ ಬೋರಲು ಬಿದ್ದಿದೆ. ನಿರ್ಮಾಪಕರ ಕೈ ಕಚ್ಚಿದೆ. ಹೌದು, ''ಕಿಂಗ್‌ಡಮ್‌'' ಮೇಲೆ ವಿಜಯ್ ದೇವರಕೊಂಡ ಅಪಾರವಾದ ನಿರೀಕ್ಷೆಗಳಿದ್ದವು. ಇದಕ್ಕೆ ಪೂರಕವಾಗಿ ಚಿತ್ರ ಆರಂಭದಿಂದಲೂ ಸದ್ದು ಮಾಡುತ್ತಲೇ ಬಂದಿತ್ತು ಕೂಡ.

ಇನ್ನು ವಿಜಯ್ ದೇವರಕೊಂಡ ''ಸ್ಟಾರ್‌ಡಮ್‌'' ಮೇಲಿನ ನಂಬಿಕೆಯಿಂದ ನಿರ್ಮಾಪಕರಾದ ನಾಗವಂಶಿ ಮತ್ತು ಸಾಯಿ ಸೌಜನ್ಯ ಚಿತ್ರಕ್ಕೆ ಯಥೇಚ್ಚವಾಗಿ ಹಣ ಹೂಡಿದ್ದರು. ತೆಲುಗು ಮಾಧ್ಯಮಗಳು ವರದಿ ಮಾಡಿರುವಂತೆ ''ಕಿಂಗ್‌ಡಮ್'' ಚಿತ್ರದ ವಿಕ್ಕಿಪೀಡಿಯಾದಲ್ಲಿಯೇ ಉಲ್ಲೇಖವಾದಂತೆ ಈ ಚಿತ್ರಕ್ಕೆ 130 ಕೋಟಿ ಹಣವನ್ನು ನಿರ್ಮಾಪಕರು ಸುರಿದಿದ್ದರು.

ಆದರೆ ಈಗ 130 ಕೋಟಿಯಲ್ಲಿ ಕೇವಲ ಶೇಕಡಾ 35% ಹಣ ಮಾತ್ರ ಮರಳಿ ಬಂದಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿಯ ಪ್ರಕಾರ ಈ 8 ದಿನದಲ್ಲಿ ''ಕಿಂಗ್‌ಡಮ್'' ಭಾರತದಲ್ಲಿ ಕೇವಲ ₹ 46.68 ಕೋಟಿಯನ್ನು ಮಾತ್ರ ಗಳಿಸಿದೆ.

ಹೀಗಾಗಿ ಬಾಕಿ ಹಣ ಅಂದರೆ ಶೇಕಡಾ 75% ಹಣ ನೀರಲ್ಲಿ ಹೋಮ ಮಾಡಿದಂತೆ ಕೊಚ್ಚಿಕೊಂಡು ಹೋಗಿದೆ ಎಂದು koimoi.com ವರದಿಯನ್ನು ಮಾಡಿದೆ.

Kingdom Fails to Reign Vijay Deverakonda s Film Dips Barely Recovers 35 of Budget in First Week

ಇನ್ನು ಪವಾಡ ಆಗದ ಹೊರತು ಬೋರಲು ಬಿದ್ದ ಈ ''ಕಿಂಗ್‌ಡಮ್‌'' ಮತ್ತೆ ಮೇಲೆ ಎದ್ದೇಳಲು ಸಾಧ್ಯ ಇಲ್ಲ. ಯಾಕೆಂದರೆ.. ಮುಂದಿನ ವಾರ ಹೃತಿಕ್ ರೋಷನ್ ಮತ್ತು ಜ್ಯೂನಿಯರ್ ಎನ್‌ಟಿಆರ್ ಅಭಿನಯದ ''ವಾರ್ 2'' ತೆರೆಗೆ ಬರುತ್ತಿದೆ. ಇದರ ಜೊತೆಯಲ್ಲಿಯೇ ಸೂಪರ್ ಸ್ಟಾರ್ ರಜಿನಿಕಾಂತ್ ತಮ್ಮ ''ಕೂಲಿ'' ಜೊತೆ ದಾಂಗುಡಿ ಇಡಲಿದ್ದಾರೆ. ಇನ್ನು ಓಟಿಟಿಯಲ್ಲಿ ಕೂಡ ''ಕಿಂಗ್‌ಡಮ್‌'' ಭಾರೀ ಮೊತ್ತಕ್ಕೆ ಬಿಕರಿಯಾಗುವುದು ಅನುಮಾನ.

ಹೀಗಾಗಿ ಹೇಗೆ ಲೆಕ್ಕ ಹಾಕಿದರು ಕೂಡ ಹಾಕಿದ ಬಂಡವಾಳ ಮರಳಿ ಬರುವುದು ಅಸಾಧ್ಯ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.

ಸ್ಯಾಕ್ನಿಲ್ ಪ್ರಕಾರ ''ಕಿಂಗ್‌ಡಮ್‌'' ಚಿತ್ರದ 8 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ [ಗುರುವಾರ] ₹ 18 ಕೋಟಿ
ಎರಡನೇ ದಿನ [ಶುಕ್ರವಾರ ] ₹ 7.5 ಕೋಟಿ
ಮೂರನೇ ದಿನ [ಶನಿವಾರ] ₹ 8.00 ಕೋಟಿ
ನಾಲ್ಕನೇ ದಿನ [ಭಾನುವಾರ] ₹ 7.4 ಕೋಟಿ
ಐದನೇ ದಿನ [ಸೋಮವಾರ] ₹ 2 ಕೋಟಿ
ಆರನೇ ದಿನ [ಮಂಗಳವಾರ] ₹ 1.75 ಕೋಟಿ
ಏಳನೇ ದಿನ [ಬುಧವಾರ ] ₹ 1.5 ಕೋಟಿ
ಎಂಟನೇ ದಿನ [ಗುರುವಾರ ] ₹ 0.53 ಲಕ್ಷ * ಅಂದಾಜು

ಒಟ್ಟು ಗಳಿಕೆ ₹ 46.68 ಕೋಟಿ

ಹೀಗೆ ''ಕಿಂಗ್‌ಡಮ್'' ಸದ್ಯ 46.68 ಕೋಟಿಯನ್ನು ಮಾತ್ರ ಗಳಿಸಿದೆ. ಈ ಮೂಲಕ ನಷ್ಟದ ಕೂಪಕ್ಕೆ ನಿರ್ಮಾಪಕರನ್ನು ನೂಕಿದೆ. ಬಾಕಿ ಉಳಿದ ಒಂದು ವಾರದಲ್ಲಿ ಚಿತ್ರ ಎಷ್ಟು ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Vijay Deverakonda's 'Kingdom' had a record-breaking opening but couldn't sustain its momentum. Get the latest box office collection, analyze its theatrical run, and see if the film is a hit or a flop.
Read more about: vijay deverakonda tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X