Kothalavadi Day 4 Boxoffice: ಕುಸಿದ ಶೋಗಳ ಸಂಖ್ಯೆ; 'ಕೊತ್ತಲವಾಡಿ' ಭವಿಷ್ಯ ಏನು?

ಒಳ್ಳೆ ಸಿನಿಮಾ ಮಾಡುವುದು ಮಾತ್ರವಲ್ಲ. ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡುವುದು ಅನಿವಾರ್ಯ. ಕೆಲವೊಮ್ಮೆ ಯಾವುದೂ ನಮ್ಮ ಕೈಯಲ್ಲಿ ಇರಲ್ಲ. ಕಷ್ಟವೋ ಸುಖವೋ ಅಂದುಕೊಂಡ ಸಮಯಕ್ಕೆ ಸಿನಿಮಾ ತೆರೆಗೆ ಬರುವಂತಾಗುತ್ತದೆ. ಸದ್ಯ ಯಶ್ ತಾಯಿ ಪುಷ್ಪಾ ನಿರ್ಮಾಣದ 'ಕೊತ್ತಲವಾಡಿ' ಚಿತ್ರದ ಕಥೆಯೂ ಹೀಗೆ ಆಗಿದೆ.

ದೊಡ್ಡ ಸಿನಿಮಾಗಳ ನಡುವೆ 'ಕೊತ್ತಲವಾಡಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕುಂಟುವಂತಾಗಿದೆ. ಪರಭಾಷೆಯ ಸಿನಿಮಾಗಳ ನಡುವೆ ಪೈಪೋಟಿ ಎದುರಿಸಬಹುದು. ಆದರೆ ಕನ್ನಡದ 'ಸು ಫ್ರಂ ಸೋ' ಇದೀಗ 'ಕೊತ್ತಲವಾಡಿ' ಚಿತ್ರದ ಆರ್ಭಟಕ್ಕೆ ಬ್ರೇಕ್ ಹಾಕಿದಂತೆ ಕಾಣುತ್ತಿದೆ. ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಂ ಸೋ' ಈ ಪಾಟಿ ಸದ್ದು ಮಾಡುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಜೊತೆಗೆ ಆನಿಮೇಷನ್ 'ಮಹಾವತಾರ್ ನರಸಿಂಹ' ಸಿನಿಮಾ ಅಭೂತಪೂರ್ವ ಯಶಸ್ಸು ಬೇರೆ ಸಿನಿಮಾಗಳಿಗೆ ಕಂಟಕವಾಗಿದೆ.

Kothalavadi Struggles at Box Office Amidst Su From So and Mahavathar Narasimha Wave

ಶ್ರೀರಾಜ್ ನಿರ್ದೇಶನದಲ್ಲಿ ಪೃಥ್ವಿ ಅಂಬರ್ ಹಾಗೂ ಕಾವ್ಯಾ ಶೈವ ನಟನೆಯ 'ಕೊತ್ತಲವಾಡಿ' ಸಿನಿಮಾ ಕಳೆದ ಶುಕ್ರವಾರ ತೆರೆಗೆ ಬಂದಿತ್ತು. ಅದಾಗಲೇ 'ಸು ಫ್ರಂ ಸೋ' ಹಾಗೂ 'ಮಹಾವತಾರ್ ನರಸಿಂಹ' ಸಿನಿಮಾಗಳು ಬಾಕ್ಸಾಫೀಸ್ ಶೇಕ್ ಮಾಡುತ್ತಿತ್ತು. ಇಂತಹ ಸಮಯದಲ್ಲಿ 'ಕೊತ್ತಲವಾಡಿ' ಚಿತ್ರಕ್ಕೆ ಹಿನ್ನಡೆ ಆಗಬಹುದು ಎಂದೇ ಕೆಲವರು ಭಾವಿಸಿದ್ದರು. ಆದರೆ ಆಗಸ್ಟ್ 1ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಬಹಳ ಹಿಂದೆಯೇ ಘೋಷಿಸಿದ್ದರು. ಅದಕ್ಕೆ ತಕ್ಕಂತೆ ಪ್ರಚಾರ, ಮಾರ್ಕೆಟಿಂಗ್ ಎಲ್ಲವೂ ಆಗಿತ್ತು. ಹಾಗಾಗಿ ಬೇರೆ ಮಾರ್ಗ ಇಲ್ಲದೇ ಸಿನಿಮಾ ಅಂದುಕೊಂಡ ಸಮಯದಲ್ಲಿ ಬಿಡುಗಡೆಯಾಯಿತು.

ಹಳ್ಳಿ ಸೊಗಡಿನ ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದಾರೆ. ಆದರೆ ಪ್ರೇಕ್ಷಕರನ್ನು ಚಿತ್ರ ಸೆಳೆಯುವಲ್ಲಿ ವಿಫಲವಾಗಿದೆ. ಬಹಳ ಭರವಸೆಯಿಂದ ಚಿತ್ರತಂಡ ಅದರಲ್ಲೂ ಮುಖ್ಯವಾಗಿ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಪ್ರಚಾರ ಮಾಡಿದ್ದರು. ಇವತ್ತಿಗೂ ಅವರು ಬಹಳ ಭರವಸೆಯಿಂದಲೇ ಮಾತನಾಡುತ್ತಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ ಅಭಿನಯಕ್ಕೂ ಒಳ್ಳೆ ಅಂಕ ಸಿಕ್ಕಿದೆ.

ಶೋಗಳ ಸಂಖ್ಯೆ ಇಳಿಕೆ

100ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಕೊತ್ತಲವಾಡಿ' ಸಿನಿಮಾ ಬಿಡುಗಡೆ ಆಗಿತ್ತು. ಆದರೆ ನಿಧಾನವಾಗಿ ಶೋಗಳ ಸಂಖ್ಯೆ ಕಮ್ಮಿ ಆಗುತ್ತಿದೆ. 5ನೇ ದಿನ ಅಂದರೆ ಮಂಗಳವಾರ ಬೆಂಗಳೂರಿನಲ್ಲಿ ಕೇವಲ 11 ಶೋಗಳಲ್ಲಿ ಮಾತ್ರ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಮೈಸೂರಿನಲ್ಲಿ 6 ಶೋಗಳು ಸಿಕ್ಕಿದೆ.

Kothalavadi Struggles at Box Office Amidst Su From So and Mahavathar Narasimha Wave

4 ದಿನದ ಕಲೆಕ್ಷನ್

ಅಧಿಕೃತವಾಗಿ ಸಿನಿಮಾ ಕಲೆಕ್ಷನ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಿಲ್ಲ. ಆದರೆ ಮೊದಲ 4 ದಿನಕ್ಕೆ ಅಂದಾಜು 15 ರಿಂದ 20 ಲಕ್ಷ ರೂ. ಕಲೆಕ್ಷನ್ ಮಾಡಿರುವ ಸಾಧ್ಯತೆಯಿದೆ. sacnilk.com ವೆಬ್‌ಸೈಟ್ ಕೂಡ ಇದೇ ಲೆಕ್ಕ ಕೊಟ್ಟಿದೆ. ನಿಧಾನವಾಗಿ ಸಿನಿಮಾ ಚೇತರಿಸಿಕೊಳ್ಳುವ ಸಾಧ್ಯತೆ ಇದ್ಯಾ ಕಾದು ನೋಡಬೇಕಿದೆ.

ಲಾಭದಲ್ಲೇ ಇದ್ಯಾ ಸಿನಿಮಾ?

ಬಾಕ್ಸಾಫೀಸ್ ಗಳಿಕೆ ವಿಚಾರವನ್ನು ಪಕ್ಕಕ್ಕಿಟ್ಟರೆ 'ಕೊತ್ತಲವಾಡಿ' ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಒಳ್ಳೆ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗ್ತಿದೆ. ಅಂದಾಜು 3ರಿಂದ 4 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ ಎನ್ನುವ ಮಾತುಗಳು ಕೇಳಿಬರ್ತಿವೆ. ನಾನ್ ಥ್ರಿಯೇಟ್ರಿಕಲ್ ರೈಟ್ಸ್‌ನಿಂದ ನಿರ್ಮಾಪಕರು ಸೇಫ್ ಆಗಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.

ಚಿತ್ರದ ಭವಿಷ್ಯ?

'ಸು ಫ್ರಂ ಸೋ' ಹಾಗೂ 'ಮಹಾವತಾರ್ ನರಸಿಂಹ' ಚಿತ್ರಗಳ ಆರ್ಭಟಕ್ಕೆ ಬ್ರೇಕ್ ಹಾಕುವವರು ಇಲ್ಲ. ಈ ಎರಡೂ ಸಿನಿಮಾಗಳನ್ನು ನೋಡಿದವರು ಮತ್ತೊಂದು ಸಿನಿಮಾ ಅಂದ್ರೆ 'ಕೊತ್ತಲವಾಡಿ' ನೋಡಲು ಮೀನಾಮೇಷ ಎಣಿಸುತ್ತಿದ್ದಾರೆ. ಒಂದೇ ವಾರದ ಅಂತರದಲ್ಲಿ ಎರಡ್ಮೂರು ಸಿನಿಮಾ ನೋಡುವುದು ಪ್ರೇಕ್ಷಕರು ಜೇಬಿಗೂ ಹೊರೆಯಾಗುತ್ತದೆ. ಅದು ಕೂಡ 'ಕೊತ್ತಲವಾಡಿ' ಚಿತ್ರಕ್ಕೆ ಹಿನ್ನಡೆಯಾಗಿದೆ. ಈ ವಾರಾಂತ್ಯಕ್ಕೆ ಪ್ರೇಕ್ಷಕರು ಈ ಹಳ್ಳಿಸೊಗಡಿನ ಸಿನಿಮಾ ನೋಡಲು ಮುಂದಾದರೆ ಶೋಗಳ ಸಂಖ್ಯೆ ಹೆಚ್ಚಬಹುದು.

More from Filmibeat

English summary
Kothalavadi film day 4 box office report
Read more about: yash sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X