Lenin Day 4 Boxoffice: ಸೋಮವಾರ ಪರೀಕ್ಷೆ ಪಾಸಾದ್ನಾ 'ಲೆನಿನ್'; ಒಟ್ಟು ಕಲೆಕ್ಷನ್ ಎಷ್ಟು?

ನಾಗಾರ್ಜುನ ಕಿರಿಮಗ ಅಖಿಲ್ ಅಕ್ಕಿನೇನಿ ನಟನೆಯ 'ಲೆನಿನ್' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆದಿದೆ. 'ಮಾ ಇಂಟಿ ಬಂಗಾರಂ' ಸಕ್ಸಸ್ ಬೆನ್ನಲ್ಲೇ ತೆಲುಗು ಚಿತ್ರರಂಗಕ್ಕೆ ಮತ್ತೊಂದು ಗೆಲುವು ಸಿಕ್ಕಿದಂತಾಗಿದೆ. ಮುರಳಿ ಕಿಶೋರ್ ಅಬ್ಬಾರು ನಿರ್ದೇಶನದ ರೊಮ್ಯಾಂಟಿಕ್ ಆಕ್ಷನ್ ಸಿನಿಮಾ ಶುಕ್ರವಾರ ತೆರೆಗೆ ಬಂದಿತ್ತು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಅಖಿಲ್ ಕೊನೆಗೂ ಗೆಲುವಿನ ಬಗೆ ಬೀರಿದ್ದಾರೆ.

30ರಿಂದ 50 ಕೋಟಿ ರೂ. ಬಜೆಟ್‌ನಲ್ಲಿ 'ಲೆನಿನ್' ಸಿನಿಮಾ ನಿರ್ಮಾಣವಾಗಿದೆ. ಸ್ವತಃ ಅನ್ನಪೂರ್ಣ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಾಗಾರ್ಜುನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಭಾಗ್ಯಶ್ರೀ ಬ್ರೋಸ್ ನಾಯಕಿಯಾಗಿ ಮಿಂಚಿದ್ದಾರೆ. ತಮನ್ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿದೆ. ಕನ್ನಡ ನಟ ಪ್ರಮೋದ್, ನಟಿ ಈಶ್ವರಿ ರಾವ್, ಶಿವಾಜಿ, ಬ್ರಹ್ಮಾಜಿ, ಸುನಿಲ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

Lenin Day 4 Boxoffice Akhil Akkineni s film maintains momentum despite Monday dip

ಚಿತ್ತೂರಿನ ಶ್ರೀರಾಮಪುರ ಎಂಬ ಗ್ರಾಮದಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಅನಾಥ ಹುಡುಗ ಲೆನಿನ್(ಅಖಿಲ್) ಹಾಗೂ ಆತನ ಸಾಕು ತಾಯಿಯ ಮಗ ವಸಂತ್(ಪ್ರಮೋದ್). ಅವರಿಬ್ಬರ ಜೀವನದಲ್ಲಿ ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು ಸಿನಿಮಾ ಕಥೆ. ಅದ್ಭುತ ಅಭಿನಯದ ಮೂಲಕ ತೆಲುಗು ಚಿತ್ರದಲ್ಲಿ ಕನ್ನಡ ನಟ ಪ್ರಮೋದ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ಚಿತ್ರದ ಸಕ್ಸಸ್ ಕಾರ್ಯಕ್ರಮದಲ್ಲಿ ಪ್ರಮೋದ್ ಬಗ್ಗೆ ನಾಗಾರ್ಜುನ ಹೇಳಿಕೆ ವೈರಲ್ ಆಗ್ತಿದೆ.

4 ದಿನಗಳ ಕಲೆಕ್ಷನ್

'ಲೆನಿನ್' ಚಿತ್ರದ 4 ದಿನಗಳ ಕಲೆಕ್ಷನ್ ಬಗ್ಗೆ ಸ್ವತಃ ಅನ್ನಪೂರ್ಣ ಸ್ಟುಡಿಯೋಸ್ ಸಂಸ್ಥೆ ಮಾಹಿತಿ ನೀಡಿದೆ. ಒಟ್ಟು 67.2 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಪೋಸ್ಟ್ ಮಾಡಿದ್ದಾರೆ. 3 ದಿನಕ್ಕೆ 62 ಕೋಟಿ ರೂ. ಗಳಿಕೆ ಕಂಡಿರುವ ಬಗ್ಗೆ ನಿನ್ನೆ(ಜುಲೈ 13) ಮಾಹಿತಿ ನೀಡಿದ್ದರು. ಸೋಮವಾರ 6 ಕೋಟಿ ಸೇರಿ ಚಿತ್ರ 67 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಬಗ್ಗೆ ಅಪ್‌ಡೇಟ್ ಸಿಕ್ಕಿದೆ. ಮೊದಲ 3 ದಿನಕ್ಕೆ ಹೋಲಿಸಿದರೆ ಸೋಮವಾರ ಕಲೆಕ್ಷನ್ ಡ್ರಾಪ್ ಆಗಿದೆ. ಮುಂದೆ ಸಿನಿಮಾ ಚೇತರಿಸಿಕೊಳ್ಳುತ್ತಾ ಕಾದು ನೋಡಬೇಕಿದೆ.

ಕರ್ನಾಟಕ ಕಲೆಕ್ಷನ್

ರಾಜ್ಯದಲ್ಲಿ ಕೂಡ 'ಲೆನಿನ್' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಡಾಲಿ ಧನಂಜಯ್ ನಿರ್ಮಿಸಿ ನಟಿಸಿರುವ 'ಮದರ್ ಪ್ರಾಮಿಸ್' ಹಾಗೂ ವಿಜಯ್ ರಾಜ್‌ಕುಮಾರ್ ಅಭಿನಯದ 'ಗ್ರಾಮಾಯಣ' ಚಿತ್ರಗಳ ನಡುವೆಯೂ ಅಖಿಲ್ ಸಿನಿಮಾ ಸದ್ದು ಮಾಡ್ತಿದೆ. ಮೊದಲ 3 ದಿನಕ್ಕೆ ಕರ್ನಾಟಕದಲ್ಲಿ ಸಿನಿಮಾ 2.70 ಕೋಟಿ ರೂ. ಗಳಿಕೆ ಕಂಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಸ್ಟಾರ್ ನಟ ಅಲ್ಲದೇ ಇದ್ದರೂ ಅಖಿಲ್ ಚಿತ್ರಕ್ಕೆ ಸಿಕ್ಕಿರುವ ರೆಸ್ಪಾನ್ಸ್ ಅಚ್ಚರಿ ಮೂಡಿಸಿದೆ.

ಎಲ್ಲೆಲ್ಲಿ ಹೇಗಿದೆ ಕಲೆಕ್ಷನ್

ಸೋಮವಾರ ಆಂಧ್ರ ಹಾಗೂ ತೆಲಂಗಾಣದಲ್ಲಿ 'ಲೆನಿನ್' ಸಿನಿಮಾ 3.7 ಕೋಟಿ ರೂ. ಮಾತ್ರ ಕಲೆಕ್ಷನ್ ಮಾಡಿದೆ. ಸಾಮಾನ್ಯವಾಗಿ ಪ್ರೇಕ್ಷಕರ ಮನಗೆದ್ದ ಸಿನಿಮಾಗಳು ಫಸ್ಟ್ ವೀಕೆಂಡ್ ಒಳ್ಳೆ ಕಲೆಕ್ಷನ್ ಮಾಡುತ್ತವೆ. ವೀಕೆಂಡ್ ರಜೆ ಕಳೆದು ವಾರದ ದಿನ ಸೋಮವಾರ ಬರುತ್ತಿದ್ದಂತೆ ಚಿತ್ರದ ಭವಿಷ್ಯ ಗೊತ್ತಾಗುತ್ತದೆ. ಮೊದಲ 3 ದಿನಕ್ಕೆ ಹೋಲಿಸಿದ್ರೆ 6 ಕೋಟಿ ರೂ. ಕಮ್ಮಿ ಎನಿಸಬಹುದು. ಆದರೆ ಅಖಿಲ್ ನಟನೆಯ ಚಿತ್ರಕ್ಕೆ ಇದು ಹೆಚ್ಚು ಎನ್ನಲಾಗ್ತಿದೆ.

'ಲೆನಿನ್' ಮುಂದೇನು?

45 ಕೋಟಿ ರೂ. ಶೇರ್ ತಂದುಕೊಟ್ಟರೆ ವಿತರಕರು, ನಿರ್ಮಾಪಕರು ಗೆಲುವಿನ ದಡ ಸೇರುತ್ತಾರೆ. ಬೇರೆ ಯಾವುದೇ ದೊಡ್ಡ ಸಿನಿಮಾ ಈ ವಾರ ಬಿಡುಗಡೆ ಆಗುವುದಿಲ್ಲ. 'ಮಾ ಇಂಟಿ ಬಂಗಾರಂ' ಸಿನಿಮಾ ಕೂಡ ಓಟಿಟಿಗೆ ಬರ್ತಿದೆ. ಹಾಗಾಗಿ 'ಲೆನಿನ್' ಗೆಲುವಿನ ದಡ ಸೇರಬಹುದು ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಲೆಕ್ಕಾಚಾರ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X