Maa Inti Bangaaram Box Office Day 4 ; ಸೋಮವಾರದ ಅಗ್ನಿಪರೀಕ್ಷೆಯಲ್ಲಿ ಗೆದ್ದ ಸಮಂತಾ, 'ಬಂಗಾರಂ'ಗೆ ಕರ್ನಾಟಕದ ಕೊಡುಗೆ ಎಷ್ಟು?

ನಾಗಚೈತನ್ಯ ಅವರಿಂದ ಸಮಂತಾ ದೂರವಾಗಿ ಐದು ವರ್ಷಗಳಾಗಿವೆ. ಆದರೆ ಈ ಐದು ವರ್ಷದಲ್ಲಿ ಸಮಂತಾ ಆಂಧ್ರದ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದು ಕೇವಲ ನಾಲ್ಕು ಬಾರಿ ಮಾತ್ರ. ಈ ನಾಲ್ಕರಲ್ಲಿ ಮೂರು ಸಿನಿಮಾಗಳು ಹೇಳ ಹೆಸರಿಲ್ಲದಂತೆ ಚಿತ್ರಮಂದಿರಗಳಿಂದ ಕಾಣೆಯಾಗಿದ್ದವು. ಈ ಹಿನ್ನೆಲೆ ಇವರ ಅಭಿಮಾನಿಗಳು ಬೇಸರಗೊಂಡಿದ್ದರು.

ಚಿತ್ರಗಳ ಆಯ್ಕೆ ವಿಚಾರದಲ್ಲಿ ಸಮಂತಾ ತುಂಬಾನೇ ಚ್ಯೂಸಿಯಾಗಿದ್ದಾರೆ ಎಂದೇ ಅಂದುಕೊಂಡಿದ್ದರು. ಸಮಂತಾ ವಿರುದ್ದ ತಮ್ಮ ಬೇಸರ ಮತ್ತು ಅಸಮಾಧಾನವನ್ನು ಕೂಡ ಆಗಾಗ ಹೊರ ಹಾಕುತ್ತಿದ್ದರು. ಅಭಿಮಾನಿಗಳ ಈ ಅಸಮಾಧಾನ ದೂರ ಮಾಡುವ ಪ್ರಯತ್ನವನ್ನು ಸಮಂತಾ ಮಾಡುತ್ತಾ ಬಂದಿದ್ದರು. ಆದರೆ ಕಾಲ ಕೂಡಿ ಬಂದಿರಲಿಲ್ಲ. ಆದರೆ ಈಗ ಕೂಡಿ ಬಂದಿದೆ. ''ಮಾ ಇಂಟಿ ಬಂಗಾರಂ'' ಅಬ್ಬರ ಬಾಕ್ಸಾಫೀಸ್‌ನಲ್ಲಿ ಮುಂದುವರೆದಿದೆ.

Maa Inti Bangaaram Day 4 Samantha s Actioner Aces Monday Test With 4 10 Cr Net

ಹೌದು, ''ಮಾ ಇಂಟಿ ಬಂಗಾರಂ''.. ಸಮಂತಾ ಸ್ಟಾರ್ ಪವರ್ ಗೆ ಕೈಗನ್ನಡಿ ಹಿಡಿದಂತಿರುವ ಸಿನಿಮಾ. ಕಳೆದ ಶುಕ್ರವಾರ (ಜೂನ್ 19) ತೆರೆಗೆ ಬಂದ ಈ ಚಿತ್ರ ನಿನ್ನೆ (ಜೂನ್ 22) ಅಂದರೆ ನಾಲ್ಕನೇ ದಿನ ₹4.10 ಕೋಟಿಯನ್ನು ಗಳಿಸಿದೆ. ಈ ಮೂಲಕ ₹27.20 ಕೋಟಿಯನ್ನು ನಾಲ್ಕು ದಿನದಲ್ಲಿ ''ಮಾ ಇಂಟಿ ಬಂಗಾರಂ'' ದೋಚಿದೆ.


ಸ್ನಾಕ್ನಿಲ್ ಪ್ರಕಾರ ''ಮಾ ಇಂಟಿ ಬಂಗಾರಂ'' ಚಿತ್ರದ 4 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ದಿನ ಭಾರತದ ಒಟ್ಟು ನಿವ್ವಳ ಗಳಿಕೆ (India Net)
ಮೊದಲನೇ ದಿನ (ಶುಕ್ರವಾರ) ₹5.35 ಕೋಟಿ
ಎರಡನೇ ದಿನ (ಶನಿವಾರ) ₹7.65 ಕೋಟಿ
ಮೂರನೇ ದಿನ (ಭಾನುವಾರ) ₹10.10 ಕೋಟಿ
ನಾಲ್ಕನೇ ದಿನ (ಸೋಮವಾರ) ₹4.10 ಕೋಟಿ
ಒಟ್ಟು ಮೊತ್ತದ ಕಲೆಕ್ಷನ್ ₹27.20 ಕೋಟಿ

ನಿಜಾ, ನಾಲ್ಕನೇ ದಿನದ ಗಳಿಕೆ ಮೊದಲ ಮೂರು ದಿನದ ಗಳಿಕೆಗಿಂತ ಕಡಿಮೆ ಇದೆ. ಆದರೆ. ₹4.10 ಕೋಟಿಯ ಗಳಿಕೆ ಸಾಮಾನ್ಯವಾದದ್ದಲ್ಲ ಎನ್ನುವುದು ಟ್ರೇಡ್ ವಿಶ್ಲೇಷಕರ ಅಭಿಪ್ರಾಯ. ಯಾಕೆಂದರೆ.. ಸ್ಟಾರ್ ಯಾರೇ ಇರಲಿ, ಚಿತ್ರ ಎಷ್ಟೇ ಅದ್ಧೂರಿಯಾಗಿ ನಿರ್ಮಾಣವಾಗಿರಲಿ, ಸೋಮವಾರದ ಗಳಿಕೆಯಲ್ಲಿ ಕುಸಿತ ಕಂಡು ಬಂದೇ ಬರುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ''ಮಾ ಇಂಟಿ ಬಂಗಾರಂ'' ಮಹಿಳಾ ಪ್ರಧಾನ ಸಿನಿಮಾ. ಹೀಗಿರುವಾಗ ಕಮರ್ಷಿಯಲ್ ಹೀರೋ ಕೂಡ ಗಳಿಸಲು ಸಾಧ್ಯವಾಗದ ಹಣ ಸಮಂತಾ ಸೋಮವಾರ ದುಡಿದಿದ್ದಾರೆ. ಹೀಗಾಗಿ ಈ ಗಳಿಕೆ ಅತ್ಯುತ್ತಮವಾದ ಗಳಿಕೆ ಎನ್ನುವ ವಾದವನ್ನು ಟ್ರೇಡ್ ಪಂಡಿತರು ಮಾಡುತ್ತಿದ್ದಾರೆ.

ಕರ್ನಾಟಕದ ಕೊಡುಗೆ ಎಷ್ಟು ?

ಇನ್ನು ''ಮಾ ಇಂಟಿ ಬಂಗಾರಂ'' ಚಿತ್ರಕ್ಕೆ ಕರ್ನಾಟಕದಲ್ಲಿಯೂ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಭಾನುವಾರ (ಜೂನ್ 21) ಕರ್ನಾಟಕದಲ್ಲಿ ₹1.85 ಕೋಟಿ ಕೊಳ್ಳೆ ಹೊಡೆದಿದ್ದ ಚಿತ್ರ ನಿನ್ನೆ (ಜೂನ್ 22 ) 60 ಲಕ್ಷವನ್ನು ಗಳಿಸಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. ಬೆಂಗಳೂರಿನಲ್ಲಿ ನಿನ್ನೆ (ಜೂನ್ 23) 348 ಪ್ರದರ್ಶನಗಳನ್ನು ಚಿತ್ರ ಕಂಡಿದ್ದು ಚಿತ್ರಮಂದಿರದ ಆವರಣದಲ್ಲಿ ಸರಾಸರಿ 20% ಜನ ಕಂಡು ಬಂದಿದ್ದಾರೆ.

maa-inti-bangaaram-day-4-samantha-s-actioner-aces-monday-test-with-4-10-cr-net

ಅಂದ್ಹಾಗೇ ''ಮಾ ಇಂಟಿ ಬಂಗಾರಂ'' ಚಿತ್ರವನ್ನು ಕೇವಲ ತೆಲುಗಿನಲ್ಲಿ ಮಾತ್ರ ಬಿಡುಗಡೆ ಮಾಡಿಲ್ಲ. ಬದಲಿಗೆ ತಮಿಳಿನಲ್ಲಿ ಕೂಡ ಡಬ್ ಮಾಡಲಾಗಿದೆ. ಆದರೆ, ತೆಲುಗು ನಾಡಿನಲ್ಲಿ ಕಂಡು ಬರುತ್ತಿರುವ ನೂಕು ನುಗ್ಗಲು ತಮಿಳುನಾಡಿನಲ್ಲಿ ಇಲ್ಲ. ಇದಕ್ಕೆ ಪುರಾವೆ ಎಂಬಂತೆ ತಮಿಳು ವರ್ಷನ್ ಇಲ್ಲಿಯವರೆಗೆ ₹1.15 ಕೋಟಿಯನ್ನುಮಾತ್ರ ಗಳಿಸಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

ಒಟ್ನಲ್ಲಿ ಸೋಮವಾರದ ಪರೀಕ್ಷೆಯಲ್ಲಿ ಸಮಂತಾ ಸದ್ಯ ಗೆದ್ದಿದ್ದಾರೆ.''ಮಾ ಇಂಟಿ ಬಂಗಾರಂ'' ಹೆಸರಿಗೆ ತಕ್ಕಂತೆಯೇ ಬಾಕ್ಸ್ ಆಫೀಸ್‌ನಲ್ಲಿ ಚಿನ್ನದ ಬೆಳೆ ಬೆಳೆಯುತ್ತಿದೆ. ಈಗಾಗಲೇ ಲಾಭದ ಹಾದಿಯಲ್ಲಿರುವ ''ಮಾ ಇಂಟಿ ಬಂಗಾರಂ'' ಈ ವಾರಾಂತ್ಯಕ್ಕೆ ಎಷ್ಟು ದೋಚುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Looking for Maa Inti Bangaaram box office collection Day 4? Samantha's latest movie earned ₹4.10 Cr on Monday. Get the detailed breakdown of the drop here!
Read more about: samantha tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X