Maa Inti Bangaaram Box Office Day 5 ; ಸಮಂತಾ ಅಬ್ಬರಕ್ಕೆ ಬಾಕ್ಸಾಫೀಸ್ ತತ್ತರ, ಭಾರತದಲ್ಲೇ 30 ಕೋಟಿ ದೋಚಿದ ಬಂಗಾರಂ

ಯಾವುದೇ ಚಿತ್ರವಾದರು ಕೂಡ ಬಿಡುಗಡೆಯಾದ ನಂತರ ಚಿತ್ರಮಂದಿರ ತುಂಬಬೇಕು, ಚಿತ್ರ ಗೆಲ್ಲಬೇಕೆಂದರೆ ಯುವ ಸಮೂಹ ಚಿತ್ರಮಂದಿರಕ್ಕೆ ಬರಬೇಕು. ಮನೆ ಮಂದಿಯೆಲ್ಲ ಜೊತೆಯಾಗಿ ಬಂದು ಚಿತ್ರವನ್ನು ನೋಡಬೇಕು. ಆಗಲೇ ಆ ಚಿತ್ರ ಗೆಲ್ಲಲು ಸಾಧ್ಯ. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಯಲು ಸಾಧ್ಯ. ಆದರೆ ಈಗೀಗ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ.

ಅಂಗೈಯಲ್ಲಿಯೇ ಮನರಂಜನೆ ಇರುವಾಗ ಚಿತ್ರಮಂದಿರಕ್ಕೆ ಯಾಕೆ ಹೋಗಬೇಕೆನ್ನುವುದು ಅನೇಕರ ವಾದ. ಹಾಗಂಥ.. ಎಲ್ಲ ಚಿತ್ರವನ್ನು ಎಲ್ಲರೂ ಓಟಿಟಿಯಲ್ಲಿ ನೋಡುವುದಿಲ್ಲ. ಅಲ್ಲೊಂದು.. ಇಲ್ಲೊಂದು.. ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತವೆ. ಬಾಕ್ಸಾಫೀಸ್‌ನಲ್ಲಿ ಹಣವನ್ನು ಕೂಡ ಗಳಿಸುತ್ತವೆ. ಉದಾಹರಣೆಗೆ ''ಮಾ ಇಂಟಿ ಬಂಗಾರಂ".

Maa Inti Bangaaram Smashes Past 30Cr India Net Crosses 50Cr Globally on Day 5

ಹೌದು, ''ಮಾ ಇಂಟಿ ಬಂಗಾರಂ''.. ಮಹಿಳಾ ಪ್ರಧಾನ ಚಿತ್ರಗಳನ್ನು ಪ್ರೇಕ್ಷಕರು ಕಣ್ಣೆತ್ತಿಯೂ ನೋಡುವುದಿಲ್ಲ ಎನ್ನುವ ವಾದವನ್ನು ಬುಡಮೇಲಾಗಿಸಿದ ಸಿನಿಮಾ. ಸಮಂತಾ ಸ್ಟಾರ್ ಪವರ್ ಗೆ ಕೈಗನ್ನಡಿ ಹಿಡಿದಂತೆ ಇರುವ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಅಕ್ಷರಶಃ ಬಿರುಗಾಳಿಯನ್ನೇ ಎಬ್ಬಿಸಿದೆ. ಐದನೇ ದಿನ (ಮಂಗಳವಾರ-ಜೂನ್ 23) ₹3.50 ಕೋಟಿಯನ್ನು ದೋಚಿದೆ. ವಾರದ ದಿನದಲ್ಲಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿರುವ ಈ ಚಿತ್ರ ಕೇವಲ ಐದು ದಿನದಲ್ಲಿ ಭಾರತದಲ್ಲಿ 30 ಕೋಟಿಯನ್ನು ಕೊಳ್ಳೆ ಹೊಡೆಯುವ ಮೂಲಕ ಟ್ರೇಡ್ ಪಂಡಿತರನ್ನು ನಿಬ್ಬೇರಗಾಗಿಸಿದೆ.

ಸ್ಯಾಕ್ನಿಲ್ ಪ್ರಕಾರ ''ಮಾ ಇಂಟಿ ಬಂಗಾರಂ'' ಚಿತ್ರದ 5 ದಿನದ ಗಳಿಕೆ ಈ ಕೆಳಗಿನಂತಿದೆ

ದಿನ ಭಾರತದ ಒಟ್ಟು ನಿವ್ವಳ ಗಳಿಕೆ (India Net)
ಮೊದಲನೇ ದಿನ (ಶುಕ್ರವಾರ) ₹5.35 ಕೋಟಿ
ಎರಡನೇ ದಿನ (ಶನಿವಾರ) ₹7.65 ಕೋಟಿ
ಮೂರನೇ ದಿನ (ಭಾನುವಾರ) ₹10.10 ಕೋಟಿ
ನಾಲ್ಕನೇ ದಿನ (ಸೋಮವಾರ) ₹4.10 ಕೋಟಿ
ಐದನೇ ದಿನ (ಮಂಗಳವಾರ) ₹3.50 ಕೋಟಿ
ಒಟ್ಟು ಮೊತ್ತದ ಕಲೆಕ್ಷನ್ ₹30.70 ಕೋಟಿ

ವಾರದ ದಿನದಲ್ಲೂ ಕಡಿಮೆಯಾಗದ ಹವಾ

ಸಾಮಾನ್ಯವಾಗಿ ಬಿಡುಗಡೆಯ ಮೊದಲ ಮೂರು ದಿನದ ನಂತರ ಚಿತ್ರಗಳ ಗಳಿಕೆಯಲ್ಲಿ ಕುಸಿತ ಕಂಡು ಬರುತ್ತೆ. ''ಮಾ ಇಂಟಿ ಬಂಗಾರಂ'' ಗಳಿಕೆ ಕೂಡ ಕುಸಿದಿದೆ. ಆದರೆ. ಸಂಪೂರ್ಣವಾಗಿ ಗಳಿಕೆ ಪಾತಾಳಕ್ಕೆ ಕುಸಿದಿಲ್ಲ. ಬದಲಿಗೆ ''ಸ್ಲೋ ಅಂಡ್‌ ಸ್ಟಡಿ'' ಪಾಲಿಸಿಯೊಂದಿಗೆ ಮುನ್ನುಗ್ಗುತ್ತಿದೆ. ಇನ್ನು ಚಿತ್ರ ಪ್ರೇಕ್ಷಕರ ಹೃದಯ ಗೆದ್ದಿದೆ. ವಿಮರ್ಶಕರಿಂದ ಒಳ್ಳೆಯ ಅಂಕ ಪಡೆದಿದೆ. ಮೌತ್ ಪಬ್ಲಿಸಿಟಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆ ತರುತ್ತಿದೆ.

ಕರ್ನಾಟಕದಲ್ಲಿ 5ನೇ ದಿನ ಗಳಿಸಿದ್ದೆಷ್ಟು ..?

ಇನ್ನು ''ಮಾ ಇಂಟಿ ಬಂಗಾರಂ'' ಚಿತ್ರಕ್ಕೆ ಕರ್ನಾಟಕದಲ್ಲಿಯೂ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಭಾನುವಾರ (ಜೂನ್ 21) ಕರ್ನಾಟಕದಲ್ಲಿ ₹1.85 ಕೋಟಿ ಕೊಳ್ಳೆ ಹೊಡೆದಿದ್ದ ಚಿತ್ರ ಸೋಮವಾರ (ಜೂನ್ 22 ) 60 ಲಕ್ಷವನ್ನು ಗಳಿಸಿತ್ತು. ವಿಶೇಷ ಅಂದರೆ ''ಸ್ಯಾಕ್ನಿಲ್'' ವರದಿಯ ಪ್ರಕಾರ ನಿನ್ನೆಯೂ (ಜೂನ್ 23) ಕೂಡ ಚಿತ್ರ 60 ಲಕ್ಷವನ್ನು ಕರ್ನಾಟಕದಲ್ಲಿ ಗಳಿಸಿದೆ. ಬೆಂಗಳೂರಿನಲ್ಲಿ ನಿನ್ನೆ (ಜೂನ್ 23) 368 ಪ್ರದರ್ಶನಗಳನ್ನು ಚಿತ್ರ ಕಂಡಿದ್ದು ಚಿತ್ರಮಂದಿರದ ಆವರಣದಲ್ಲಿ ಸರಾಸರಿ 23.5% ಜನಸಂದಣಿ ಕಂಡು ಬಂದಿದೆ.

Maa Inti Bangaaram Smashes Past 30Cr India Net Crosses 50Cr Globally on Day 5

ಜಾಗತಿಕ ಮಟ್ಟದಲ್ಲಿ 50 ಕೋಟಿ

''ಮಾ ಇಂಟಿ ಬಂಗಾರಂ'' ಚಿತ್ರಕ್ಕೆ ಕೇವಲ ಭಾರತದಲ್ಲಿ ಮಾತ್ರ ಅಲ್ಲ. ಸಪ್ತಸಾಗರದಾಚೆಯೂ ಕೂಡ ಸಖತ್ ಬೇಡಿಕೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಜಾಗತಿಕ ಮಾರುಕಟ್ಟೆಯಲ್ಲಿಯೇ ಈ ಚಿತ್ರ 20 ಕೋಟಿಯನ್ನು ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 50 ಕೋಟಿಯಾಗಿದೆ. ನಿರ್ಮಾಪಕಿಯೂ ಆಗಿರುವ ಸಮಂತಾ ಖುದ್ದು ಈ ವಿಚಾರವನ್ನು ತಮ್ಮ ನಿರ್ಮಾಣ ಸಂಸ್ಥೆಯ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

ಒಟ್ನಲ್ಲಿ ವಾರದ ದಿನಗಳಲ್ಲಿಯೂ ''ಮಾ ಇಂಟಿ ಬಂಗಾರಂ'' ಅಬ್ಬರ ಮುಂದುವರೆದಿದೆ. ಸದ್ಯ ಬಾಕ್ಸಾಫೀಸ್‌ನಲ್ಲಿ ಬೇರೆ ಯಾವ ದೊಡ್ಡ ಚಿತ್ರಗಳು ಕೂಡ ಇಲ್ಲ. ಇದು ಚಿತ್ರಕ್ಕೆ ವರದಾನವಾಗಿದ್ದು ವರ್ಲ್ಡ್ ವೈಡ್ ಕಲೆಕ್ಷನ್ ಲೆಕ್ಕ 75 ಕೋಟಿಯ ಗಡಿ ತಲುಪುವ ಸಾಧ್ಯತೆ ಇದೆ. ಈ ವಾರಾಂತ್ಯದಲ್ಲಿ ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡು ಬರುವ ಸಾಧ್ಯತೆಯೂ ಇದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

Read more about: samantha tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X