'ಹನುಮಾನ್', 'ಸ್ಪೈಡರ್‌ಮ್ಯಾನ್' ದಾಖಲೆ ಮುರಿದ 'ನರಸಿಂಹ'; ಬಾಕ್ಸಾಫೀಸ್‌ನಲ್ಲಿ ನಿಲ್ಲದ ಆರ್ಭಟ

ಭಾರತೀಯ ಪ್ರೇಕ್ಷಕರಿಗೆ ಆನಿಮೇಷನ್ ಸಿನಿಮಾಗಳ ಬಗ್ಗೆ ಅಷ್ಟೇನು ಆಸಕ್ತಿ ಇಲ್ಲ. ಸ್ಟಾರ್ ನಟರ ಸಿನಿಮಾಗಳು ಅಂದ್ರೆ ಅಚ್ಚುಮೆಚ್ಚು. ಸ್ಟಾರ್ ನಟರ ಸಿನಿಮಾಗಳೇ ಗೆಲ್ಲಲ್ಲ ಇನ್ನು ಆನಿಮೇಷನ್ ಸಿನಿಮಾ ಯಾರು ನೋಡ್ತಾರಾ? ಎನ್ನುವ ಭಾವನೆ ಇನ್ನು ಕೆಲವರಲ್ಲಿದೆ. 'ಮಹಾವತಾರ್ ನರಸಿಂಹ' ಸಿನಿಮಾ ಆ ಮಾತನ್ನು ಸುಳ್ಳಾಗಿಸಿದೆ.

ಬಾಕ್ಸಾಫೀಸ್‌ನಲ್ಲಿ 3ನೇ ವಾರವೂ 'ಮಹಾವತಾರ್ ನರಸಿಂಹ' ಆರ್ಭಟ ಮುಂದುವರೆದಿದೆ. ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಮಕ್ಕಳನ್ನು ಚಿತ್ರಮಂದಿರಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಅಶ್ವಿನ್ ಕುಮಾರ್ ಮತ್ತವರ ತಂಡದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರತಂಡದ ಬೆನ್ನಿಗೆ ನಿಂತಿದ್ದು ವರವಾಗಿದೆ.

Mahavatar Narasimha Breaks Records Becomes India s Highest-Grossing Animated Film

ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ಮಹಾವತಾರ್ ನರಸಿಂಹ' ಸಿನಿಮಾ ಸದ್ದು ಮಾಡ್ತಿದೆ. ಈಗಾಗಲೇ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗುತ್ತಿದೆ. ಚಿತ್ರತಂಡವೇ ಕಲೆಕ್ಷನ್ ಬಗ್ಗೆ ಮಾಹಿತಿ ನೀಡುತ್ತಿದೆ. 15ನೇ ದಿನವೂ ಗಂಟೆಗೆ 13 ಸಾವಿರ ಟಿಕೆಟ್ ಆನ್ಲೈನ್‌ನಲ್ಲಿ ಬುಕ್ಕಿಂಗ್ ಆಗುತ್ತಿದೆ. ಸಿನಿಮಾ ಕ್ರೇಜ್ ಹೇಗಿದೆ ಎನ್ನುವುದು ಇದರಲ್ಲೇ ಗೊತ್ತಾಗುತ್ತಿದೆ. ಚಿತ್ರದ ಕ್ಲೈಮ್ಯಾಕ್ಸ್ ಅಂತೂ ನೋಡುಗರಿಗೆ ಅದ್ಭುತ ಅನುಭವ ನೀಡುತ್ತಿದೆ.

ಈಗಾಗಲೇ ಲಕ್ಷ ಲಕ್ಷ ಜನ ಸಿನಿಮಾ ನೋಡಿ ಭಕ್ತಿಪರವಶರಾಗಿದ್ದಾರೆ. ಆನಿಮೇಷನ್ ಅಂದರೆ ಇವತ್ತಿಗೂ ಕಾರ್ಟೂನ್ ಸಿನಿಮಾ ಎಂದೇ ಬಹುತೇಕರು ಭಾವಿಸಿದ್ದಾರೆ. ಆ ಮಾತನ್ನು 'ಮಹಾವತಾರ್ ನರಸಿಂಹ' ಸಿನಿಮಾ ಸುಳ್ಳಾಗಿದೆ. ಭಾರತದಲ್ಲಿ ಮತ್ತಷ್ಟು ಆನಿಮೇಷನ್ ಸಿನಿಮಾಗಳ ನಿರ್ಮಾಣಕ್ಕೆ ನಾಂದಿ ಹಾಡಿದೆ. ನಮ್ಮಲ್ಲಿ ಆನಿಮೇಷನ್ ಸಿನಿಮಾಗಳ ಸಂಖ್ಯೆ ತೀರ ವಿರಳ. ಮುಂದೆ ಹೆಚ್ಚಾಗುವ ಸಾಧ್ಯತೆಯಿದೆ.

'ಸ್ಪೈಡರ್‌ಮ್ಯಾನ್' ದಾಖಲೆ ಉಡೀಸ್

ಮೊದಲೇ ಹೇಳಿದಂತೆ ಆನಿಮೇಷನ್ ಸಿನಿಮಾಗಳು ಭಾರತದಲ್ಲಿ ಕಮ್ಮಿ. ಆದರೆ ಹಾಲಿವುಡ್ ಆನಿಮೇಷನ್ ಸಿನಿಮಾಗಳು ಭಾರತದ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿರುವುದು ಇದೆ. 2 ವರ್ಷಗಳ ಹಿಂದೆ ಬಂದಿದ್ದ 'ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್' ಭಾರತದಲ್ಲಿ 56 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ವಿಕಿಪಿಡಿಯಾದಲ್ಲಿ ದಾಖಲಾಗಿದೆ. ಒಂದೇ ವಾರದಲ್ಲಿ ಈ ದಾಖಲೆ ಮುರಿದು 'ಮಹಾವತಾರ್ ನರಸಿಂಹ' ಮನ್ನುಗ್ಗುತ್ತಿದೆ.

Mahavatar Narasimha Breaks Records Becomes India s Highest-Grossing Animated Film

'ಕೊಚಡಿಯಾನ್' ಹಿಂದಿಕ್ಕಿದ ನರಸಿಂಹ

ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ಕಟ್ಟಿಕೊಟ್ಟಿದ್ದ 'ಕೊಚಡಿಯಾನ್' ಚಿತ್ರ 30 ಕೋಟಿ ರೂ. ಕಲೆಕ್ಷನ್ ಮಾಡಿ ಮುಗ್ಗರಿಸಿತ್ತು. ಆ ಚಿತ್ರದ ದಾಖಲೆಯನ್ನು 'ಮಹಾವತಾರ್ ನರಸಿಂಹ' ಚಿತ್ರ ಹಿಂದಿಕ್ಕಿದೆ. ಇದು ಮೋಷನ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿ ನಿರ್ಮಿಸಿದ್ದ ಸಿನಿಮಾ. ಇನ್ನು 20 ವರ್ಷಗಳ ಹಿಂದೆ 'ಹನುಮಾನ್' ಆನಿಮೇಷನ್ ಸಿನಿಮಾ ಕೊಂಚ ಸದ್ದು ಮಾಡಿತ್ತು. ಇದೇ ಭಾರತದಲ್ಲಿ ಹೆಚ್ಚು ಗಳಿಕೆ ಕಂಡ ಆನಿಮೇಷನ್ ಸಿನಿಮಾ ಎನಿಸಿಕೊಂಡಿದೆ. ಅವತ್ತಿನ ಕಾಲಕ್ಕೆ 11 ಕೋಟಿ ರೂ. ಕಲೆಹಾಕಿತ್ತು.

ಟಾಪ್ 10 ಸಿನಿಮಾಗಳ ಪಟ್ಟಿ

ಭಾರತದಲ್ಲಿ ಅತಿಹೆಚ್ಚು ಗಳಿಕೆ ಕಂಡ ಆನಿಮೇಷನ್ ಸಿನಿಮಾಗಳ ಪಟ್ಟಿಯಲ್ಲಿ 'ಮಹಾವತಾರ್ ನರಸಿಂಹ' ಈಗ ಮೊದಲ ಸ್ಥಾನಕ್ಕೇರಿದೆ. 2ನೇ ಸ್ಥಾನದಲ್ಲಿ 'ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್' ಚಿತ್ರ ಇದೆ. ಕ್ರಮವಾಗಿ 3ನೇ ಸ್ಥಾನದಲ್ಲಿ 'ಇನ್‌ಕ್ರೆಡಿಬಲ್ಸ್ - 2', 4ನೇ ಸ್ಥಾನದಲ್ಲಿ 'ಫ್ರೋಜನ್- 2', 5ನೇ ಸ್ಥಾನದಲ್ಲಿ 'ಕುಂಗ್ ಫೂ ಪಾಂಡ- 4' ಸಿನಿಮಾಗಳಿವೆ.

6ನೇ ಸ್ಥಾನದಲ್ಲಿ 'ಕುಂಗ್ ಫೂ ಪಾಂಡ- 3', 7ನೇ ಸ್ಥಾನದಲ್ಲಿ 'ಕೊಚಡಿಯಾನ್', 8ನೇ ಸ್ಥಾನದಲ್ಲಿ 'ಕುಂಗ್ ಫೂ ಪಾಂಡ- 2' ಅದೇ ರೀತಿ 9ನೇ ಸ್ಥಾನದಲ್ಲಿ 'ದಿ ಅಡ್ವೆಂಚರ್ಸ್ ಆಫ್‌ ಟಿನ್‌ಟಿನ್' ಹಾಗೂ 10ನೇ ಸ್ಥಾನದಲ್ಲಿ 'ದಿ ಆಂಗ್ರಿ ಬರ್ಡ್ಸ್ ಮೂವಿ' ಜಾಗ ಮಾಡಿಕೊಂಡಿದೆ.

More from Filmibeat

English summary
‘Mahavatar Narasimha’ become highest-grossing animated film in India
Read more about: rajinikanth kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X