ಬಾಕ್ಸಾಫೀಸ್‌ನಲ್ಲಿ' ನರಸಿಂಹ'ನ ಘರ್ಜನೆ, ಆ್ಯನಿಮೇಷನ್ ಚಿತ್ರದ ಅಬ್ಬರ ಮುಂದೆ ಕಾಂತಾರ, ಕೆಜಿಎಫ್ ದಾಖಲೆ ಧೂಳಿಪಟ
ಭಾರತೀಯ ಚಿತ್ರರಂಗದಲ್ಲಿ ಹಿಂದೊಮ್ಮೆ ಪೌರಾಣಿಕ ಚಿತ್ರಗಳದ್ದೇ ಹವಾ ಇತ್ತು. ಫಾಲ್ಕೆ ಅವರ ''ಹರಿಶ್ಚಂದ್ರ'' ಚಿತ್ರವನ್ನು ನೋಡಿ ಹಲವಾರು ಜನ ಪ್ರೇರಣೆಗೊಂಡಿದ್ದರು. ಇನ್ನು..ಡಾ.ರಾಜ್ ಕುಮಾರ್.. ಎನ್.ಟಿ.ಆರ್.. ಅಕ್ಕಿನೇನಿ ನಾಗೇಶ್ವರ ರಾವ್.. ಎಸ್.ವಿ.ರಂಗರಾವ.. ಹೀಗೆ ಹಲವರು ಪೌರಾಣಿಕ ಪಾತ್ರಧಾರಿಗಳಾಗಿ ಮಿಂಚಿದರು. ಜನಪ್ರಿಯರಾದರು. ಪ್ರೇಕ್ಷಕರ ಹೃದಯದಲ್ಲಿ ಶಾಶ್ವತವಾದ ಸ್ಥಾನ ಕೂಡ ಪಡೆದರು. ಆದರೆ .. ಈಗ ಪೌರಾಣಿಕ ಚಿತ್ರಕ್ಕೆ ಚಿತ್ರರಂಗದಲ್ಲಿ ಮೊದಲಿದ್ದ ಬೆಲೆ ಇಲ್ಲ.
ಹಾಗಂಥ, ಪ್ರಯತ್ನಗಳಾಗಿಯೇ ಇಲ್ಲ ಅಂತಲ್ಲ. ಅಲ್ಲೊಂದು.. ಇಲ್ಲೊಂದು ಚಿತ್ರಗಳನ್ನು ಅಲ್ಲೊಬ್ಬರು.. ಇಲ್ಲೊಬ್ಬರು ಮಾಡುತ್ತಾರೆ ಆದರೂ ಹೊಡಿ ಬಡಿ ಚಿತ್ರಗಳಿಂದ ಪ್ರೇಕ್ಷಕರನ್ನು ಚಿತ್ರರಂಗ ಕಮರ್ಷಿಯಲ್ ಜಾಲದಲ್ಲಿ ಸಿಲುಕಿಸಿದೆ.

ಹೀಗಿರುವಾಗ ತೆರೆಗೆ ಬಂದಿರುವ ಕನ್ನಡದ ''ಹೊಂಬಾಳೆ'' ಸಂಸ್ಥೆಯ ''ಮಹಾವತಾರ್ ನರಸಿಂಹ'' ಚಿತ್ರ ನೋಡಲು ಕೇವಲ ಕನ್ನಡದಲ್ಲಿ ಮಾತ್ರ ಅಖಂಡ ಭಾರತದಲ್ಲಿಯೇ ನೂಕು ನುಗ್ಗಲಿನ ವಾತಾವರಣ ಕಂಡು ಬರುತ್ತಿದೆ. 'ನರಸಿಂಹ'ನ ಘರ್ಜನೆಗೆ ''ಕಾಂತಾರ'' ಮತ್ತು ''ಕೆಜಿಎಫ್''ನ ದಾಖಲೆ ಕೂಡ ಧೂಳಿಪಟವಾಗಿದೆ.
ಹೌದು, ''ಮಹಾವತಾರ್ ನರಸಿಂಹ'', ಕೇವಲ ಕನ್ನಡ ಚಿತ್ರ ಮಾತ್ರವಲ್ಲ. ಹೊಂಬಾಳೆ ಸಂಸ್ಥೆ ಈ ಚಿತ್ರವನ್ನು ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ನಡಿ ಬಿಡುಗಡೆ ಮಾಡಿದೆ. ಹೊಂಬಾಳೆಯ ಈ ತಂತ್ರ ಮತ್ತೊಮ್ಮೆ ಕೈ ಹಿಡಿದಿದ್ದು ಬಾಲಿವುಡ್ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಈ ಚಿತ್ರ 7 ದಿನದಲ್ಲಿ ₹ 44.9 ಕೋಟಿ ಹಣವನ್ನು ದೋಚಿದೆ.
ಇನ್ನು, ''ಮಹಾವತಾರ್ ನರಸಿಂಹ'' ಮೂಲತಃ ಕನ್ನಡ ಚಿತ್ರ. ಆಗಲೇ ಹೇಳಿದಂತೆ ಕನ್ನಡದ ನಿರ್ಮಾಣ ಸಂಸ್ಥೆ ''ಹೊಂಬಾಳೆ'' ನಿರ್ಮಾಣದ ಚಿತ್ರ. ಆದರೆ.. ಈ ಚಿತ್ರವನ್ನು ಕನ್ನಡಿಗರಿಗಿಂತ ಉತ್ತರ ಭಾರತದ ಜನ ಮುಗಿ ಬಿದ್ದು ನೋಡುತ್ತಿದ್ದಾರೆ. ಭಾವಪರವಶರಾಗುತ್ತಿದ್ದಾರೆ.
ಇದಕ್ಕೆ ಕೈಗನ್ನಡಿ ಎಂಬಂತೆ ಈ ಚಿತ್ರ ಕೇವಲ ಹಿಂದಿಯಲ್ಲಿಯೇ ಈ ಒಂದು ವಾರದಲ್ಲಿ ₹25.31 ಕೋಟಿ ಹಣವನ್ನು ದೋಚಿದೆ ಎಂದು ಬಾಲಿವುಡ್‌ನ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಹೇಳಿದ್ದಾರೆ. ಒಂದು ವಾರದ ಲೆಕ್ಕವನ್ನು ಕೂಡ ಹಂಚಿಕೊಂಡಿದ್ದಾರೆ.

ತರಣ್ ಆದರ್ಶ್ ಪ್ರಕಾರ ಹಿಂದಿಯಲ್ಲಿ ಮಹಾವತಾರ್ ನರಸಿಂಹ ಚಿತ್ರದ 6 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ [ಶುಕ್ರವಾರ] - ₹1.38 ಕೋಟಿ
ಎರಡನೇ ದಿನ [ಶನಿವಾರ] ₹3.40 ಕೋಟಿ
ಮೂರನೇ ದಿನ [ಭಾನುವಾರ] ₹6.77 ಕೋಟಿ
ನಾಲ್ಕನೇ ದಿನ [ಸೋಮವಾರ] ₹3.70 ಕೋಟಿ
ಐದನೇ ದಿನ [ಮಂಗಳವಾರ] ₹5.01ಕೋಟಿ
ಆರನೇ ದಿನ [ಬುಧವಾರ] ₹5.5 ಕೋಟಿ
ಒಟ್ಟು ಗಳಿಕೆ ₹25.31 ಕೋಟಿ
ಹೀಗೆ ಆರು ದಿನದಲ್ಲಿ ₹25.31 ಕೋಟಿಯನ್ನು ಗಳಿಸಿರುವ ''ಮಹಾವತಾರ್ ನರಸಿಂಹ'' ಚಿತ್ರ ಹಿಂದಿ ಮಾರುಕಟ್ಟೆಯಲ್ಲಿ ಮೊದಲ ವಾರದ ರೇಸ್‌ನಲ್ಲಿ ಇದೇ ಹೊಂಬಾಳೆ ಸಂಸ್ಥೆ ನಿರ್ಮಾಣದ ''ಕಾಂತಾರ'' ಮತ್ತು ''ಕೆಜಿಎಫ್'' ಚಿತ್ರದ ಗಳಿಕೆಯನ್ನು ಕೂಡ ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಹೊಸದೊಂದು ಇತಿಹಾಸವನ್ನು ಚಿತ್ರ ಬರೆದಿದೆ.
ಈ ಮಾಹಿತಿಯನ್ನು ಕೂಡ ತರಣ್ ಆದರ್ಶ್ ಹಂಚಿಕೊಂಡಿದ್ದು ''ಕಾಂತಾರ'' ಮೊದಲ ವಾರ ಹಿಂದಿಯಲ್ಲಿ ₹15 ಕೋಟಿ ಗಳಿಸಿತ್ತು. ''ಕೆಜಿಎಫ್'' ಚಿತ್ರ ₹21.45ಕೋಟಿ ಹಣವನ್ನು ದೋಚಿತ್ತು. ''ಮಹಾವತಾರ್ ನರಸಿಂಹ'' ಕೇವಲ ಒಂದು ವಾರದಲ್ಲಿ ಈ ಎರಡು ಚಿತ್ರಗಳಿಗೆ ಸೆಡ್ಡು ಹೊಡೆದಿದೆ ಎಂದು ಹೇಳಿದ್ದಾರೆ. ನಂಬಲಾಗದ ಸಾಧನೆ ಇದು ಎಂದು ಕೂಡ ಹೇಳಿದ್ದಾರೆ.
ಒಟ್ನಲ್ಲಿ ಸದ್ಯ ''ಮಹಾವತಾರ್ ನರಸಿಂಹ'' ಚಿತ್ರ ಅಬ್ಬರಿಸುತ್ತಿದೆ. ಇಂದು [ಆಗಸ್ಟ್ 1] ಎಲ್ಲ ಭಾಷೆಗಳಲ್ಲಿ ಕೂಡ ಹೊಸ ಹೊಸ ಚಿತ್ರಗಳು ಬಿಡುಗಡೆಯಾಗಿವೆ. ಈ ವಾರ ಈ ಪೈಪೋಟಿಯ ನಡುವೆ ಈ ಚಿತ್ರ ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











