ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಕಂಡ ಟಾಪ್- 5 ಮಲಯಾಳಂ ಚಿತ್ರಗಳ ಪಟ್ಟಿ; 'ದೃಶ್ಯಂ- 3'ಗೆ ಯಾವ ಸ್ಥಾನ?

ಪರಭಾಷಾ ಸಿನಿಮಾಗಳು ಕರ್ನಾಟಕದಲ್ಲಿ ಭರ್ಜರಿ ಸದ್ದು ಮಾಡ್ತಿದೆ. 'ಪೆದ್ದಿ', 'ಕರುಪ್ಪು' ಸಿನಿಮಾಗಳು 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿವೆ. 'ದೃಶ್ಯಂ- 3' ಸಿನಿಮಾ ಕೂಡ ಗೆಲುವಿನ ಓಟ ಮುಂದುವರೆಸಿದೆ. 20 ದಿನಗಳಲ್ಲಿ 14 ಕೋಟಿ ರೂ.ಗೂ ಹೆಚ್ಚು ಕೊಳ್ಳೆ ಹೊಡೆದು ಮೋಹನ್ ಲಾಲ್ ಸಿನಿಮಾ ಸದ್ದು ಮಾಡ್ತಿದೆ.

'ದೃಶ್ಯಂ- 3' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಅದು ಬಾಕ್ಸಾಫೀಸ್ ಗಳಿಕೆ ಮೇಲೆ ಪರಿಣಾಮ ಬೀರುತ್ತಿರುವುದು ಸುಳ್ಳಲ್ಲ. ಆದರೂ ಜಾರ್ಜ್ ಕುಟ್ಟಿ ಆರ್ಭಟ ಕಮ್ಮಿ ಆಗಿದೆ. 20ನೇ ದಿನವೂ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ. 'ಪೆದ್ದಿ' ಆರ್ಭಟದ ನಡುವೆಯೂ ಜಾರ್ಜ್‌ಕುಟ್ಟಿ ಅಬ್ಬರ ಕಮ್ಮಿ ಆಗಿಲ್ಲ ಎನ್ನುವುದು ವಿಶೇಷ. ಕರ್ನಾಟಕದಲ್ಲಿ ಈವರೆಗೆ ಅತಿಹೆಚ್ಚು ಗಳಿಕೆ ಕಂಡ ಮಲಯಾಳಂ ಸಿನಿಮಾಗಳ ಪಟ್ಟಿಯಲ್ಲಿ 'ದೃಶ್ಯಂ- 3' ಸಿನಿಮಾ 3ನೇ ಸ್ಥಾನದಲ್ಲಿದೆ. 'ಲೋಕ' ದಾಖಲೆ ಮುರಿಯುವುದು ಅನುಮಾನ ಎನ್ನುವಂತಾಗಿದೆ.

Manjummel Boys to Drishyam-3 Mollywood s Top 5 Highest-Grossing Films in Karnataka

ಕರ್ನಾಟಕದಲ್ಲಿ ಮಲಯಾಳಂ ಸಿನಿಮಾಗಳಿಗೆ ಅಷ್ಟೇನು ರೆಸ್ಪಾನ್ಸ್ ಸಿಗುತ್ತಿರಲಿಲ್ಲ. ಸ್ಯಾಂಡಲ್‌ವುಡ್ ಬಿಟ್ಟರೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ಸಿನಿಮಾಗಳ ಆರ್ಭಟವೇ ಹೆಚ್ಚು ಎನ್ನುವ ಕಾಲ ಇತ್ತು. ಆದರೆ ಇತ್ತೀಚೆಗೆ ಆ ಮಾತು ಸುಳ್ಳಾಗಿದೆ. ಓಟಿಟಿ ಟ್ರೆಂಡ್ ಶುರುವಾದ ಬಳಿಕ ಕರ್ನಾಟಕದವರು ಹೆಚ್ಚು ಮಲಯಾಳಂ ಸಿನಿಮಾ ನೋಡಲು ಆರಂಭಿಸಿದ್ದಾರೆ. ಕನ್ನಡಕ್ಕೆ ಸಿನಿಮಾಗಳು ಡಬ್ ಆಗುತ್ತಿರುವುದರಿಂದ ಮತ್ತಷ್ಟು ಜನರನ್ನು ತಲುಪುತ್ತಿವೆ. ರಾಜ್ಯದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಟಾಪ್ 5 ಮಲಯಾಳಂ ಸಿನಿಮಾಗಳ ಲಿಸ್ಟ್ ಮುಂದೆ ಇದೆ ಓದಿ.

1. ಮಂಜುಮ್ಮೇಲ್ ಬಾಯ್ಸ್

ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾಗಿ ಬಾಕ್ಸಾಫೀಸ್ ಕೊಳ್ಳೆ ಹೊಡೆದ 'ಮಂಜುಮ್ಮೇಲ್ ಬಾಯ್ಸ್' ಸಿನಿಮಾ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. ಎರಡು ವರ್ಷಗಳ ಹಿಂದೆ ಈ ಸರ್ವೈವಲ್ ಥ್ರಿಲ್ಲರ್ ಸಿನಿಮಾ ವಿಶ್ವದಾದ್ಯಂತ 240 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಅದರಲ್ಲಿ ಕರ್ನಾಟಕದ ಪಾಲು 15.8 ಕೋಟಿ ರೂ. ಆಗಿತ್ತು. ರಾಜ್ಯದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಮಾಲಿವುಡ್ ಚಿತ್ರಗಳಲ್ಲಿ ಇದೇ ಸಿನಿಮಾ ಮೊದಲ ಸ್ಥಾನದಲ್ಲಿದೆ.

Manjummel Boys to Drishyam-3 Mollywood s Top 5 Highest-Grossing Films in Karnataka

2. ಲೋಕಾ

ಮಹಿಳಾ ಪ್ರಧಾನ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂ. ಕಲೆಕ್ಷನ್ ಮಾಡುವುದು ಕಷ್ಟ ಎನ್ನುವ ಮಾತಿದೆ. ಬಾಲಿವುಡ್‌ನಲ್ಲಿ ಮಾತ್ರ ಇದು ಸಾಧ್ಯ ಎನ್ನುವ ಕಾಲವೊಂದಿತ್ತು. ಇತ್ತೀಚೆಗೆ ಕೆಲ ಸಿನಿಮಾಗಳು ಆ ಮಾತನ್ನು ಸುಳ್ಳಾಗಿಸಿವೆ. ಕಲ್ಯಾಣಿ ಪ್ರಿಯದರ್ಶನ್ ನಟನೆಯ ಸೂಪರ್ ಹೀರೋ ಫ್ಯಾಂಟಸಿ ಸಿನಿಮಾ 'ಲೋಕಾ ಚಾಪ್ಟರ್-1: ಚಂದ್ರ' ಎಲ್ಲರ ಹುಬ್ಬೇರಿಸಿ 300 ಕೋಟಿ ಕ್ಲಬ್ ಸೇರಿತ್ತು. 30 ಕೋಟಿ ರೂ. ಬಜೆಟ್ ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಕರ್ನಾಟಕದಲ್ಲಿ ಈ ಸಿನಿಮಾ ಗಳಿಸಿದ್ದು 15.15 ಕೋಟಿ ರೂ.

3. ದೃಶ್ಯಂ- 3

ಮೋಹನ್ ಲಾಲ್ ನಟನೆಯ 'ದೃಶ್ಯಂ'-3 ಸಿನಿಮಾ ಸದ್ಯ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. 20 ದಿನಕ್ಕೆ ಸಿನಿಮಾ ಕರ್ನಾಟಕದಲ್ಲಿ 14.10 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಅಂದಾಜಿಸಲಾಗ್ತಿದೆ. ಕನ್ನಡ ವರ್ಷನ್‌ಗೂ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ತಮ್ಮದೇ 'ಎಂಪುರಾನ್' ಸಿನಿಮಾ ದಾಖಲೆಯನ್ನು ಜಾರ್ಜ್‌ಕುಟ್ಟಿಯಾಗಿ ಮೋಹನ್ ಲಾಲ್ ಮುರಿದಿದ್ದಾರೆ.

4. ಎಂಪುರಾನ್

ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿ ನಟಿಸಿದ್ದ ಆಕ್ಷನ್ ಥ್ರಿಲ್ಲರ್ 'ಎಂಪುರಾನ್' ಕಳೆದ ವರ್ಷ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಆರಂಭದಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ ಬಹಳ ಬೇಗ ಡಲ್ ಆಗಿತ್ತು. ಆದರೂ ಕರ್ನಾಟದಲ್ಲಿ ಸಿನಿಮಾ 12.65 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಅಂದಾಜಿಸಲಾಗುತ್ತದೆ.

5. ಆವೇಶಂ

ಫಹಾದ್ ಫಾಸಿಲ್ ನಟನೆಯ ಆಕ್ಷನ್ ಕಾಮಿಡಿ ಸಿನಿಮಾ 'ಆವೇಶಂ' ಎರಡು ವರ್ಷಗಳ ಹಿಂದೆ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 30 ಕೋಟಿ ರೂ. ಬಜೆಟ್ ಸಿನಿಮಾ 150 ಕೋಟಿ ರೂ. ಕೊಳ್ಳೆ ಹೊಡೆದಿತ್ತು. ಕರ್ನಾಟದಲ್ಲಿ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಬೆಂಗಳೂರು ಹಿನ್ನೆಲೆ ಕಥೆ, ಚಿತ್ರದಲ್ಲಿ ಬಳಸಿಕೊಂಡಿದ್ದ ಕನ್ನಡ ಡೈಲಾಗ್ಸ್ ಚಿತ್ರಕ್ಕೆ ರಾಜ್ಯದಲ್ಲಿ ಕ್ರೇಜ್ ಹೆಚ್ಚುವಂತೆ ಮಾಡಿತ್ತು. ಒಟ್ಟಾರೆ ಸಿನಿಮಾ ಕರ್ನಾಟಕದಲ್ಲಿ 10.60 ಕೋಟಿ ರೂ. ಗಳಿಕೆ ಕಂಡಿತ್ತು.

Read more about: malayalam mohanlal mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X