Mardaani 3 Box Office Day 3 ; ಮರ್ದಾನಿ 3 ಅಬ್ಬರ-ಆಮಿರ್ ಖಾನ್‌ಗೆ ಸೆಡ್ಡು ಹೊಡೆಯುತ್ತಾರಾ ರಾಣಿ ಮುಖರ್ಜಿ?

ಕನ್ನಡ ಚಿತ್ರರಂಗವನ್ನು ಹೊರತು ಪಡಿಸಿದರೆ ಅಕ್ಕ-ಪಕ್ಕದ ರಾಜ್ಯಗಳಲ್ಲಿನ ಚಿತ್ರರಂಗದವರಿಗೆ ಸದ್ಯ ಸಿಕ್ವೆಲ್ ಜ್ವರ ಹಿಡಿದಿದೆ. ನಿಜಾ.. ನಮ್ಮಲ್ಲಿ ಕೂಡ ಈ ಟ್ರೆಂಡ್ ಇದೆ. ಆದರೆ.. ಅನ್ಯ ಭಾಷೆಯವರಿಗೆ ಹೋಲಿಸಿದರೆ ಪ್ರಯತ್ನಗಳು ನಡೆಯುತ್ತಿರುವುದು ಕಡಿಮೆ. ಬೇರೆ ಭಾಷೆಗಳಲ್ಲಿ ಹಳೆಯ ಗೆಲುವನ್ನೇ ಟ್ರಂಪ್ ಕಾರ್ಡ್‌ ಆಗಿ ಉಪಯೋಗಿಸಿಕೊಂಡು ಹಲವರು ಇಲ್ಲಿ ದುಡ್ಡು ಬಾಚಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಆದರೆ ಈ ಪ್ರಯತ್ನದಲ್ಲಿ ಇಲ್ಲಿ ಎಲ್ಲರಿಗೂ ಗೆಲುವು ಸಿಗುವುದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಕಳೆದ ವರ್ಷ ಬಾಲಿವುಡ್‌ನಲ್ಲಿ ಬಂದ ''ವಾರ್ 2''.. ''ಮಸ್ತಿ 4''..''ದೇ ದೇ ಪ್ಯಾರ್ ದೇ 2''.. ''ಕೇಸರಿ 2''.. ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿವೆ. ಈ ಸಾಲಿಗೆ ರಾಣಿ ಮುಖರ್ಜಿ ಅಭಿನಯದ ''ಮರ್ದಾನಿ 3'' ಚಿತ್ರ ಕೂಡ ಸೇರಿಕೊಳ್ಳುತ್ತಾ..? ಅಥವಾ ಗೆಲುವಿನ ದಡವನ್ನು ತಲುಪುತ್ತಾ..? ಎನ್ನುವುದು ಮುಂಬರುವ ದಿನಗಳಲ್ಲಿ ಸ್ಪಷ್ಟವಾಗಿ ಗೊತ್ತಾಗಲಿದೆಯಾದರೂ ಸದ್ಯ ''ಮರ್ದಾನಿ 3''ಯ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ.

Mardaani 3 Day 3 Rani Mukerji Just 10 Crores Away From Entering Her India Box Office Top 10

ಹೌದು, ''ಮರ್ದಾನಿ 3'' ಕಳೆದ ಶುಕ್ರವಾರ ತೆರೆಗೆ ಬಂದ ಮಹಿಳಾ ಪ್ರಧಾನ ಸಿನಿಮಾ. ಭಿಕ್ಷಾಟನೆ ಮಾಫಿಯಾ ಸುತ್ತ ಸುತ್ತುವ ಈ ಸಿನಿಮಾ ಮೊದಲ ದಿನ ₹4 ಕೋಟಿಯನ್ನಷ್ಟೇ ಗಳಿಸಿತ್ತು. ಆದರೆ ಎರಡನೇ ದಿನದ ಗಳಿಕೆಯಲ್ಲಿ 56.25% ಏರಿಕೆ ಕಂಡು ಬಂತು. ₹ 6.25 ಕೋಟಿಯನ್ನು ಚಿತ್ರ ಗಳಿಸಿತು. ಈ ಮೂಲಕ ಎರಡು ದಿನದಲ್ಲಿ ₹10 ಕೋಟಿಯ ಗಡಿಯನ್ನು ದಾಟಿದ ''ಮರ್ದಾನಿ 3'' ಭಾನುವಾರ (ಜನವರಿ 31) ₹ 7.25 ಕೋಟಿ ಹಣವನ್ನು ಗಳಿಸಿದೆ. ಈ ಮೂಲಕ ಮೂರು ದಿನದಲ್ಲಿ ₹ 17.5 ಕೋಟಿಯನ್ನು ಭಾರತದಲ್ಲಿ ಈ ಚಿತ್ರ ಕೊಳ್ಳೆ ಹೊಡೆದಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಲ್ಳುವ ''ಸ್ಯಾಕ್ನಿಲ್'' ವರದಿ ಮಾಡಿದೆ.

ಇನ್ನು ''ಮರ್ದಾನಿ 3'' ಚಿತ್ರಕ್ಕೆ ಬಂಡವಾಳ ಹೂಡಿರುವುದು ಬೇರೆ ಯಾರು ಅಲ್ಲ. ಬದಲಿಗೆ ರಾಣಿ ಮುಖರ್ಜಿ ಅವರ ಪತಿ ಆದಿತ್ಯ ಚೋಪ್ರಾ. ಹಾಗಂಥ ತಮ್ಮ ಇತರೆ ಚಿತ್ರಗಳಂತೆ ಅದ್ಧೂರಿಯಾಗಿ ಆದಿತ್ಯ ಚೋಪ್ರಾ ಬಿಡುಗಡೆ ಮಾಡಿಲ್ಲ. ಬದಲಿಗೆ ಅಳೆದು ತೂಗಿ ಕೇವಲ 1000-1200 ಸ್ಕ್ರೀನ್‌ಗಳಲ್ಲಿ ಮಾತ್ರ ಬಿಡುಗಡೆ ಮಾಡಿದ್ದಾರೆ. ಇನ್ನು ಸದ್ಯ ''ಬಾರ್ಡರ್ 2'' ಅಲೆಯೂ ಇದೆ. ''ಧುರಂಧರ್'' ಹವಾ ಕೂಡ ಇದೆ. ಹೀಗಿದ್ದರೂ ''ಮರ್ದಾನಿ 3'' ಚಿತ್ರ ₹ 17.5 ಕೋಟಿ ಗಳಿಸಿದೆ ಅಂದರೆ ಅದು ಕೇವಲ ರಾಣಿ ಮುಖರ್ಜಿ ಹೆಸರಿಗೆ ಇರುವ ಶಕ್ತಿ ಎನ್ನುವ ಅಭಿಪ್ರಾಯ ಸದ್ಯ ಬಾಲಿವುಡ್ ಟ್ರೇಡ್ ಪಂಡಿತರ ವಲಯದಲ್ಲಿ ವ್ಯಕ್ತವಾಗುತ್ತಿದೆ.

Mardaani 3 Day 3 Rani Mukerji Just 10 Crores Away From Entering Her India Box Office Top 10

ಇನ್ನೂ ಹತ್ತು ಕೋಟಿ, ಆಮಿರ್ ಖಾನ್‌ಗೆ ಸೆಡ್ಡು

2005 ರಲ್ಲಿ ಆಮಿರ್ ಖಾನ್ ವೃತ್ತಿ ಬದುಕಿನಲ್ಲಿ ಅತ್ಯಂತ ಕಳಪೆ ಪ್ರದರ್ಶನ ಕಂಡ ಚಿತ್ರಗಳ ಪೈಕಿ ಒಂದಾದ ''ಮಂಗಲ್ ಪಾಂಡೆ'' ವಿಶೇಷ ಅಂದರೆ ಈ ಚಿತ್ರದಲ್ಲಿ ರಾಣಿ ಮುಖರ್ಜಿ ಅವರೇ ನಾಯಕಿ ಪಾತ್ರ ನಿರ್ವಹಿಸಿದ್ದರು. ಆ ಕಾಲದಲ್ಲಿ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಕೇವಲ 27 ಕೋಟಿಯನ್ನು ಮಾತ್ರ ಗಳಿಸಿತ್ತು. ಆಮಿರ್ ಖಾನ್‌ಗೆ ಹಿನ್ನಡೆಯಾದರು ಕೂಡ ರಾಣಿ ಮುಖರ್ಜಿ ವೃತ್ತಿ ಬದುಕಿನಲ್ಲಿ ಅತೀ ಹೆಚ್ಚು ಹಣ ಗಳಿಸಿದ 10ನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ''ಮಂಗಲ್ ಪಾಂಡೆ'' ಪಾತ್ರವಾಗಿತ್ತು. ಸದ್ಯ ಈ ಸ್ಥಾನ ''ಮರ್ದಾನಿ 3''ಯ ಪಾಲಾಗುವ ಎಲ್ಲ ಲಕ್ಷಣಗಳಿವೆ. ''ಮರ್ದಾನಿ 3'' ಇನ್ನೂ ಹತ್ತು ಕೋಟಿ ಗಳಿಸಿದರೆ ರಾಣಿ ಮುಖರ್ಜಿ ಅವರ ಟಾಪ್ 10 ಚಿತ್ರಗಳಲ್ಲಿ ''ಮಂಗಲ್ ಪಾಂಡೆ'' ಜಾಗದಲ್ಲಿ ''ಮರ್ದಾನಿ 3'' ಸೇರಲಿದೆ.

ರಾಣಿ ಮುಖರ್ಜಿ ಅಭಿನಯದ ಅತೀ ಹೆಚ್ಚು ಹಣ ಗಳಿಸಿದ ಟಾಪ್ 5 ಚಿತ್ರಗಳು ಈ ಕೆಳಗಿನಂತಿವೆ

ಚಿತ್ರದ ಹೆಸರು ಬಿಡುಗಡೆ ವರ್ಷ ಗಳಿಕೆ (India Net)

1 ತಲಾಶ್ 2012 ₹91.24 ಕೋಟಿ
2 ಮರ್ದಾನಿ 2 2019 ₹46.33 ಕೋಟಿ
3 ಕುಚ್ ಕುಚ್ ಹೋತಾ ಹೈ 1998 ₹46.87 ಕೋಟಿ
4 ಹಿಚ್ಕೀ 2018 ₹46.19 ಕೋಟಿ
5 ಕಭಿ ಅಲ್ವಿದಾ ನಾ ಕೆಹೆನಾ 2006 ₹44.41 ಕೋಟಿ
6 ವೀರ್ ಜಾರಾ 2004 ₹41.86 ಕೋಟಿ
7 ತಾ ರಾ ರಂ ಪಂ 2007 ₹38.45 ಕೋಟಿ
8 ಬಂಟಿ ಔರ್ ಬಬ್ಲಿ 2005 ₹36.25 ಕೋಟಿ
9 ಮರ್ದಾನಿ 2014 ₹35.83 ಕೋಟಿ
10 ಮಂಗಲ್ ಪಾಂಡೆ: 2005 ₹27.86 ಕೋಟಿ

Disclaimer ; ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Rani Mukerji on a Roll! Mardaani 3 dominates the Day 3 worldwide box office. Only ₹17 Crores left to join Rani’s elite Top 10 career hits. Read the latest figures and growth trends inside!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X