Mardaani 3 Box Office Day 2; ರಾಣಿ ಮುಖರ್ಜಿ ಅಬ್ಬರ, ಬಾಕ್ಸಾಫೀಸ್‌ನಲ್ಲಿ ಮರ್ದಾನಿ ಮ್ಯಾಜಿಕ್-2ನೇ ದಿನ ದಾಖಲೆ ಗಳಿಕೆ

ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ತುಂಬಾನೇ ಕಡಿಮೆ. ಇಲ್ಲಿ ನಾಯಕಿಯರಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಕೂಡ ಅನಾದಿಕಾಲದಿಂದ ಹೀರೋಯಿಂಸ ವಿಜೃಂಭಿಸುತ್ತಲೇ ಬಂದಿದೆ. ನಾಯಕನ ನಂತರವಷ್ಟೇ ನಾಯಕಿ ಎನ್ನುವ ಮನೋಭಾವ ಹಲವರಲ್ಲಿದೆ. ಇದು ಮಾತ್ರವಲ್ಲದೇ ನಾಯಕಿಯರು ಅಂದರೆ ಕೇವಲ ಮರ ಸುತ್ತಲು, ಚಿತ್ರದ ಗ್ಲ್ಯಾಮರ್ ಹೆಚ್ಚಿಸಲು ಅಷ್ಟೇ ಲಾಯಕ್ಕು ಮನಃಸ್ಥಿತಿ ಕೂಡ ಚಿತ್ರರಂಗದಲ್ಲಿ ಹಲವರಲ್ಲಿದೆ.

ಆದರೆ .. ಈ ಧೋರಣೆಯನ್ನು ಬದಲಿಸುವ ಪ್ರಯತ್ನವನ್ನು ಆಗಾಗ ಹಲವರು ನಾಯಕಿಯರು ಮಾಡುತ್ತಾರೆ. ಪುರುಷ ಪಾರುಪಥ್ಯದ ಕುರಿತು ಕಿಡಿ ಕಾರುತ್ತಾರೆ. ಮತ್ತೂ ಕೆಲ ಒಮ್ಮೆ ಅವಕಾಶ ಸಿಕ್ಕಾಗ ಒಳ್ಳೆಯ ಕಥೆ ಮತ್ತು ತಂಡ ಇದ್ದರೆ ಮಹಿಳಾ ಪ್ರಧಾನ ಚಿತ್ರಗಳು ಕೂಡ ಬಾಕ್ಸಾಫೀಸ್‌ನಲ್ಲಿ ವಂಡರ್ ಸೃಷ್ಟಿಸಬಹುದು ಎನ್ನುವುದನ್ನು ಸಾಬೀತು ಮಾಡುತ್ತಾರೆ. ಉದಾಹರಣೆಗೆ ರಾಣಿ ಮುಖರ್ಜಿ.

Mardaani 3 Roars Rani Mukerji Defies the Border 2 Storm to Smash Past 10 Crore

ಹೌದು, ರಾಣಿ ಮುಖರ್ಜಿ ಅಭಿನಯದ ''ಮರ್ದಾನಿ 3'' ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ''ಬಾರ್ಡರ್ 2'' ಅಲೆಯ ನಡುವೆಯೂ ಕೂಡ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಮೊದಲ ದಿನ (ಜನವರಿ 30 ) ₹ 4 ಕೋಟಿಯನ್ನು ದೋಚಿದ್ದ ಚಿತ್ರ ಎರಡನೇ ದಿನ (ಜನವರಿ 31) ₹ 6.25 ಕೋಟಿಯನ್ನು ಗಳಿಸಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿ ಮಾಡಿದೆ.

''ಸ್ಯಾಕ್ನಿಲ್'' ಪ್ರಕಾರ ''ಮರ್ದಾನಿ 3'' ಚಿತ್ರದ ಮೊದಲ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ

ಮೊದಲ ದಿನ [ಶುಕ್ರವಾರ] ₹ 4 ಕೋಟಿ
ಎರಡನೇ ದಿನ [ಶನಿವಾರ] ₹ 6.25 ಕೋಟಿ

ಒಟ್ಟು ಗಳಿಕೆ ₹ 10.25 ಕೋಟಿ

Mardaani 3 Roars Rani Mukerji Defies the Border 2 Storm to Smash Past 10 Crore

ಮರ್ದಾನಿ VS ಮರ್ದಾನಿ 2 VS ಮರ್ದಾನಿ 3

2014ರಲ್ಲಿ ಬಂದಿದ್ದ ''ಮರ್ದಾನಿ'' ಚಿತ್ರದ ಮೊದಲ ಭಾಗ ಬಾಕ್ಸಾಫೀಸ್‌ನಲ್ಲಿ ₹3.40 ಕೋಟಿಯನ್ನು ಗಳಿಸಿತ್ತು. ಆ ನಂತರ 2019ರಲ್ಲಿ ''ಮರ್ದಾನಿ 2'' ತೆರೆಗೆ ಬಂದಿತ್ತು. ಮೊದಲ ದಿನ ಭಾರತದ ಗಲ್ಲಾಪೆಟ್ಟಿಗೆಯಲ್ಲಿ ₹3.80 ಕೋಟಿಯನ್ನು ದೋಚಿತ್ತು. ಈಗ ಆರು ವರ್ಷಗಳ ನಂತರ ''ಮರ್ದಾನಿ 3'' ತೆರೆಗೆ ಬಂದಿದ್ದು ಮೊದಲ ದಿನ ಹಿಂದಿನ ಎರಡು ಭಾಗಗಳಿಗಿಂತ ಹೆಚ್ಚಿನ ಹಣ ಗಳಿಸಿದೆ. ಹೆಚ್ಚೆಚ್ಚು ಪ್ರೇಕ್ಷಕರನ್ನು ತಲುಪಿದೆ. ಈ ಮೂಲಕ ''ಮರ್ದಾನಿ'' ಫ್ರಾಂಚೈಸಿಯಲ್ಲಿ ಹೊಸ ದಾಖಲೆಯನ್ನು ಬರೆದಿದೆ.ಮಹಿಳಾ ಪ್ರಧಾನ ಚಿತ್ರವೊಂದು ಬಿಗ್ ಬಜೆಟ್ ಚಿತ್ರಗಳ ಅಬ್ಬರದ ನಡುವೆಯೂ ಈ ಮಟ್ಟದ ಹಣ ಗಳಿಸುವುದು ಸಾಮಾನ್ಯ ಮಾತಲ್ಲ.

ಸದ್ಯ ಮರ್ದಾನಿ 3 ಚಿತ್ರಕ್ಕೆ ಪ್ರೇಕ್ಷಕರಿಂದ ಮತ್ತು ವಿಮರ್ಷಕರಿಂದ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಈ ಹಿನ್ನೆಲೆ ಇಂದು (ಫೆಬ್ರವರಿ 1 ) ಚಿತ್ರದ ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಬಾಲಿವುಡ್ ಪಂಡಿತರ ಲೆಕ್ಕಾಚಾರದ ಪ್ರಕಾರ ಇಂದು (ಫೆಬ್ರವರಿ 1) ಕೂಡ ₹ 6 ರಿಂದ ₹ 7 ಕೋಟಿ ಹಣ ನಿರ್ಮಾಪಕ ಆದಿತ್ಯ ಚೋಪ್ರಾ ಖಜಾನೆಗೆ ಸೇರುವ ನಿರೀಕ್ಷೆ ಇದೆ.

ಇನ್ನೂ ಮೊದಲಿಂದ ರಾಣಿ ಮುಖರ್ಜಿ ಮಹಿಳಾ ಪ್ರಧಾನ ಚಿತ್ರಕ್ಕೆ ಮಣೆ ಹಾಕುತ್ತಾ ಬಂದಿದ್ದಾರೆ. ''ಲಾಗಾ ಚುನರಿ ಮೇ ದಾಗ್''.. ''ನೋ ಓನ್ ಕಿಲ್ಲಡ್ ಜೆಸ್ಸಿಕಾ''.. ''ಮರ್ದಾನಿ''.. ''ಹಿಚ್ಕೀ.''. ''ಮರ್ದಾನಿ 2''.. ''Mrs. ಚಟರ್ಜಿ vs ನೋರ್‌ವೇ''.. ಹೀಗೆ ಅಭಿನಯಕ್ಕೆ ಪ್ರಾಮುಖ್ಯತೆ ಇರುವ ಚಿತ್ರಗಳನ್ನು ಮಾಡುತ್ತಾ ಬಂದಿರುವ ರಾಣಿ ಮುಖರ್ಜಿ ಅವರ ವೃತ್ತಿ ಬದುಕಿನಲ್ಲಿ ಇಲ್ಲಿಯವರೆಗೆ ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರ ಅಂದರೆ ಅದು ''ಮರ್ದಾನಿ 2'' ಚಿತ್ರ. ''ಸ್ಯಾಕ್ನಿಲ್'' ವರದಿಯ ಪ್ರಕಾರ 2019ರಲ್ಲಿ ಬಂದ ''ಮರ್ದಾನಿ 2'' ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮೊದಲು ಭಾರತದಲ್ಲಿ ₹ 47.35 ಕೋಟಿಯನ್ನು ಗಳಿಸಿತ್ತು. ''ಮರ್ದಾನಿ 3'' ಈ ದಾಖಲೆಯನ್ನು ಮುರಿಯುತ್ತಾ ಎನ್ನುವುದನ್ನು ನೋಡಬೇಕಿದೆ.

Disclaimer ; ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Mardaani 3 Box Office Day 2: A solid 56% jump helps Rani Mukerji’s cop drama cross ₹10.25 Cr. Despite a clash with Border 2, the franchise proves its grit. Check out the detailed occupancy, circuit-wise collections, and Sunday predictions.
Read more about: rani mukherjee bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X