Mardaani 3 Box Office Day 10 ; ತಮ್ಮದೇ ದಾಖಲೆ ಮುರಿದ್ರಾ ರಾಣಿ ಮುಖರ್ಜಿ? 10ದಿನದಲ್ಲಿ ಮರ್ದಾನಿ 3 ಗಳಿಸಿದ್ದೆಷ್ಟು ?

ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ತುಂಬಾನೇ ಕಡಿಮೆ. ಇಲ್ಲಿ ನಾಯಕಿಯರಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಕೂಡ ಅನಾದಿಕಾಲದಿಂದ ಹೀರೋಯಿಂಸ ವಿಜೃಂಭಿಸುತ್ತಲೇ ಬಂದಿದೆ. ನಾಯಕನ ನಂತರವಷ್ಟೇ ನಾಯಕಿ ಎನ್ನುವ ಮನೋಭಾವ ಹಲವರಲ್ಲಿದೆ. ಇದು ಮಾತ್ರವಲ್ಲದೇ ನಾಯಕಿಯರು ಅಂದರೆ ಕೇವಲ ಮರ ಸುತ್ತಲು, ಚಿತ್ರದ ಗ್ಲ್ಯಾಮರ್ ಹೆಚ್ಚಿಸಲು ಅಷ್ಟೇ ಲಾಯಕ್ಕು ಮನಃಸ್ಥಿತಿ ಕೂಡ ಚಿತ್ರರಂಗದಲ್ಲಿ ಹಲವರಲ್ಲಿದೆ.

ಆದರೆ .. ಈ ಧೋರಣೆಯನ್ನು ಬದಲಿಸುವ ಪ್ರಯತ್ನವನ್ನು ಆಗಾಗ ಹಲವರು ನಾಯಕಿಯರು ಮಾಡುತ್ತಾರೆ. ಪುರುಷ ಪಾರುಪಥ್ಯದ ಕುರಿತು ಕಿಡಿ ಕಾರುತ್ತಾರೆ. ಮತ್ತೂ ಕೆಲ ಒಮ್ಮೆ ಅವಕಾಶ ಸಿಕ್ಕಾಗ ಒಳ್ಳೆಯ ಕಥೆ ಮತ್ತು ತಂಡ ಇದ್ದರೆ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಬಾಕ್ಸಾಫೀಸ್‌ನಲ್ಲಿ ಪವಾಡವನ್ನು ಮಾಡುವ ಪ್ರಯತ್ನ ಮಾಡುತ್ತಾರೆ. ಉದಾಹರಣೆಗೆ ರಾಣಿ ಮುಖರ್ಜಿ.

Mardaani 3 Weekend Surge Rani Mukerji s Thriller Defies Trends to Smash Past 35 Crore Mark

ಹೌದು, ರಾಣಿ ಮುಖರ್ಜಿ ಅಭಿನಯದ ''ಮರ್ದಾನಿ 3'' ಬಿಡುಗಡೆಯಾಗಿ ಇಂದಿಗೆ (ಫೆಬ್ರವರಿ 8 ) 10 ದಿನಗಳಾಗಿವೆ. ಈ 10 ದಿನಗಳಲ್ಲಿ ಗಳಿಕೆಯಲ್ಲಿ ಏರಿಳಿತ ಕಂಡು ಬಂದಿದ್ದು ಇಂದು (ಫೆಬ್ರವರಿ 10) ಎರಡನೇ ಭಾನುವಾರ ಚಿತ್ರ ₹3.57 ಕೋಟಿ ಗಳಿಸಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿ ಮಾಡಿದೆ. ವಿಶೇಷ ಅಂದರೆ ''ಸ್ಯಾಕ್ನಿಲ್'' ವರದಿಯ ಪ್ರಕಾರ ಶುಕ್ರವಾರಕ್ಕೆ ಹೋಲಿಸಿದರೆ ಚಿತ್ರದ ಗಳಿಕೆಯಲ್ಲಿ ಶೇಕಡಾ 90% ಏರಿಕೆ ಇಂದು ಕಂಡು ಬಂದಿದೆ.

ಸ್ಯಾಕ್ನಿಲ್ ಪ್ರಕಾರ ಮರ್ದಾನಿ 3 ಚಿತ್ರದ 10 ದಿನದ ಗಳಿಕೆ ಈ ಕೆಳಗಿನಂತೆ ಇದೆ.


ದಿನ ಭಾರತದ ಒಟ್ಟು ಗಳಿಕೆ (Net Collection)

ಮೊದಲನೇ ದಿನ [ಶುಕ್ರವಾರ] - ₹ 4 ಕೋಟಿ
ಎರಡನೇ ದಿನ [ಶನಿವಾರ] - ₹ 6.25 ಕೋಟಿ
ಮೂರನೇ ದಿನ [ಭಾನುವಾರ] - ₹ 7.25 ಕೋಟಿ
ನಾಲ್ಕನೇ ದಿನ [ಸೋಮವಾರ] - ₹ 2.25 ಕೋಟಿ
ಐದನೇ ದಿನ [ಮಂಗಳವಾರ] - ₹ 2.6 ಕೋಟಿ
ಆರನೇ ದಿನ [ಬುಧವಾರ] - ₹ 2.1 ಕೋಟಿ
ಏಳನೇ ದಿನ [ಗುರುವಾರ] - ₹ 1.85 ಕೋಟಿ


ಮೊದಲ ವಾರದ ಒಟ್ಟು ಗಳಿಕೆ - ₹ 26.3 ಕೋಟಿ

ಎಂಟನೇ ದಿನ [ಶುಕ್ರವಾರ] - ₹ 1.85 ಕೋಟಿ
ಒಂಬತ್ತನೇ ದಿನ [ಶನಿವಾರ] - ₹ 3.5 ಕೋಟಿ
ಹತ್ತನೇ ದಿನ [ಭಾನುವಾರ] - ₹ 3.57 ಕೋಟಿ


ಒಟ್ಟು ಮೊತ್ತ (Total) - ₹ 35.22 ಕೋಟಿ

ಅಂದ್ಹಾಗೇ 2014ರಲ್ಲಿ ಬಂದಿದ್ದ ''ಮರ್ದಾನಿ'' ಚಿತ್ರಮಂದಿರದಲ್ಲಿ 7 ವಾರ ಪ್ರದರ್ಶನ ಕಂಡಿತ್ತು. ಕೇವಲ ಭಾರತದಲ್ಲಿ ₹ 35.65 ಕೋಟಿಯನ್ನು ಗಳಿಸಿತ್ತು. ''ಸ್ಯಾಕ್ನಿಲ್'' ವರದಿಯಲ್ಲಿ ಉಲ್ಲೇಖವಾದಂತೆ ಆಗ ಈ ಚಿತ್ರಕ್ಕೆ ಕೇವಲ ₹20 ಕೋಟಿ ಖರ್ಚಾಗಿತ್ತು. ಈ ಹಿನ್ನೆಲೆ ಚಿತ್ರವನ್ನು ಹಿಟ್ ಎಂದು ಘೋಷಿಸಲಾಗಿತ್ತು.

Mardaani 3 Weekend Surge Rani Mukerji s Thriller Defies Trends to Smash Past 35 Crore Mark

ಆ ನಂತರ 2019ರಲ್ಲಿ ''ಮರ್ದಾನಿ 2'' ತೆರೆಗೆ ಬಂದಿತ್ತು. ನಾಲ್ಕೇ ವಾರದಲ್ಲಿ ₹ 47.35 ಕೋಟಿಯನ್ನು ಕೊಳ್ಳೆ ಹೊಡೆದಿತ್ತು. ಈ ಚಿತ್ರಕ್ಕೂ ಕೂಡ ಖರ್ಚಾಗಿದ್ದು ₹30 ಕೋಟಿ ಮಾತ್ರ. ಹೀಗಾಗಿ ಈ ಚಿತ್ರವನ್ನು ಹಿಟ್ ಎಂದು ಪರಿಗಣಿಸಲಾಗಿತ್ತು. ಈಗ ''ಮರ್ದಾನಿ 3'' ಬಂದಿದೆ. 2014ರಲ್ಲಿ ಬಂದಿದ್ದ ''ಮರ್ದಾನಿ'' ಚಿತ್ರದ ಗಳಿಕೆಯನ್ನು ಕೂಡ ಇನ್ನೆರಡು ದಿನದಲ್ಲಿ ಹಿಂದಿಕ್ಕಲಿದೆ.

ಆದರೆ ''ಮರ್ದಾನಿ 2'' ದಾಖಲೆಯನ್ನು ''ಮರ್ದಾನಿ 3'' ಮುರಿಯುವುದು ಬಹುತೇಕ ಅನುಮಾನ. ಇನ್ನು ''koimoi'' ಪ್ರಕಾರ ಈ ಬಾರಿ ಬಜೆಟ್ ಕೂಡ ಕೈಮೀರಿದೆ. ₹60 ಕೋಟಿ ಹಣವನ್ನು ಹೂಡಲಾಗಿದೆ. ಓಟಿಟಿ ಮತ್ತು ಉಳಿದ ಹಕ್ಕುಗಳಿಂದ ಒಂದಿಷ್ಟು ಹಣ ಬರಬಹುದಾದರೂ ''ಮರ್ದಾನಿ 3'' ಬಾಕ್ಸಾಫೀಸ್‌ನ ಕದನದಲ್ಲಿ ಬಹುತೇಕ ಸೋಲುವುದು ಖಚಿತ ಎನ್ನುವ ಅಭಿಪ್ರಾಯ ಸದ್ಯ ಬಾಲಿವುಡ್‌ನಲ್ಲಿ ವ್ಯಕ್ತವಾಗುತ್ತಿದೆ. ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮೊದಲು ''ಮರ್ದಾನಿ 3'' ಒಟ್ಟಾರೆ ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer ; ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Mardaani 3 Box Office Collection Day 10: Rani Mukerji’s cop drama shows incredible weekend momentum, crossing ₹35 Cr India net. See the latest domestic earnings and trends.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X