Mark Box Office Day 6 ;ಬಾಕ್ಸಾಫೀಸ್‌ನಲ್ಲಿ ಮಹತ್ವದ ಲ್ಯಾಂಡ್ 'ಮಾರ್ಕ್' ದಾಟಿದ ಸುದೀಪ್-6ನೇ ದಿನ ಗಳಿಸಿದ್ದೆಷ್ಟು ?

''ಬಿಗ್ ಬಾಸ್'' ಕಾರ್ಯಕ್ರಮದಲ್ಲಿ ಪ್ರತಿ ವರ್ಷ ತಪ್ಪದೇ ತಲ್ಲೀನವಾಗುವ ಸುದೀಪ್, ಸಿನಿಮಾದಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ ಎನ್ನುವ ಮಾತು ಕಳೆದ ಕೆಲ ವರ್ಷಗಳಿಂದ ಅಭಿಮಾನಿ ವಲಯದಲ್ಲಿಯೇ ಕೇಳಿ ಬರುತ್ತಿತ್ತು. ಇದಕ್ಕೆ ಪೂರಕವಾಗಿ ಕನ್ನಡದಲ್ಲಿ 2018ರಿಂದ ಸುದೀಪ್ ವರ್ಷಕ್ಕೆ ಒಂದು ಚಿತ್ರವನ್ನಷ್ಟೇ ಮಾಡುತ್ತಾ ಬಂದಿದ್ದರು. ಆದರೆ .. ''ಮ್ಯಾಕ್ಸ್'' ನಂತರ ಸುದೀಪ್ ಸ್ಪೀಡಾದಂತೆ ಕಾಣ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ....''ಮಾರ್ಕ್'' ..

ಚಿತ್ರವನ್ನು ಸುದೀಪ್ ಕೇವಲ ಆರೇ ತಿಂಗಳಿನಲ್ಲಿ ಮುಗಿಸಿದ್ದಾರೆ. ಮುಂದಿನ ವರಮಹಾಲಕ್ಷ್ಮೀ ಹಬ್ಬಕ್ಕೆ ಮತ್ತೊಂದು ಚಿತ್ರವನ್ನು ಬಿಡುಗಡೆ ಮಾಡುವ ಮಾತುಗಳನ್ನಾಡಿದ್ದಾರೆ. ಸುದೀಪ್ ಅವರ ಈ ನಡೆ ಸದ್ಯ ಇವರ ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದ್ದು ಸದ್ಯ ಈ ಸಂಭ್ರಮವನ್ನು ''ಮಾರ್ಕ್‌'' ಇನ್ನೂ ಹೆಚ್ಚಿಸಿದೆ.

Mark Day 6 Box Office Kichcha Sudeep s Actioner EXPLODES Past 20 Crore The Baadshah Reigns Supreme

ಹೌದು, ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತೆರೆಗೆ ಬಂದ ''ಮಾರ್ಕ್'' ಸದ್ಯ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ನಿನ್ನೆ ( ಡಿಸೆಂಬರ್ 30) ಅಂದರೆ 6ನೇ ದಿನ ₹90 ಲಕ್ಷವನ್ನು ಗಳಿಸಿದೆ. ಈ ಮೂಲಕ ಬಾಕ್ಸಾಫೀಸ್‌ನಲ್ಲಿ ₹20 ಕೋಟಿಯ ಲ್ಯಾಂಡ್ ''ಮಾರ್ಕ್‌''ನ್ನು ಚಿತ್ರ ದಾಟಿದೆ.

ಇನ್ನು ಸಾಮಾನ್ಯವಾಗಿ ಸ್ಟಾರ್ ಯಾರೇ ಇರಲಿ.. ಆ ಚಿತ್ರ ಯಾವುದೇ ಇರಲಿ.. ಸೋಮವಾರದ ಗಳಿಕೆಯಲ್ಲಿ ಕುಸಿತ ಕಂಡು ಬಂದೇ ಬರುತ್ತೆ.''ಮಾರ್ಕ್'' ವಿಚಾರದಲ್ಲಿ ಕೂಡ ಇದೇ ಆಗಿದೆ. ಸೋಮವಾರಕ್ಕೆ ಹೋಲಿಸಿದರೆ ಕುಸಿತದ ಪ್ರಮಾಣ ಕಡಿಮೆ ಇದೆ. ವಾರದ ದಿನಗಳಲ್ಲಿಯೂ ₹90 ಲಕ್ಷವನ್ನು ಚಿತ್ರ ಗಳಿಸಿದೆ ಅಂದರೆ ಅದು ಸಾಮಾನ್ಯ ಮಾತೇನು ಅಲ್ಲ.

mark-day-6-box-office-kichcha-sudeep-s-actioner-explodes-past-20-crore-the-baadshah-reigns-supreme

ಇನ್ನು ಚಿತ್ರ ನೋಡುವ ಉತ್ಸಾಹ ಕೂಡ ನಿನ್ನೆ (ಡಿಸೆಂಬರ್ 30) ಪ್ರೇಕ್ಷಕರ ವಲಯದಲ್ಲಿ ಕಂಡು ಬಂದಿದೆ. ಬೆಂಗಳೂರು ಹೊರತು ಪಡಿಸಿದರೆ ತುಮಕೂರು.. ಶಿವಮೊಗ್ಗ..ಮಣಿಪಾಲ್.. ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಚಿತ್ರಮಂದಿರಗಳ ಆವರಣದಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂದಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಸ್ಯಾಕ್ನಿಲ್ ಪ್ರಕಾರ ಮಾರ್ಕ್ ಚಿತ್ರದ 6 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ [ಗುರುವಾರ] - ₹ 8.6 ಕೋಟಿ
ಎರಡನೇ ದಿನ [ಶುಕ್ರವಾರ] - ₹3.2 ಕೋಟಿ
ಮೂರನೇ ದಿನ [ಶನಿವಾರ] - ₹3.2 ಕೋಟಿ
ನಾಲ್ಕನೇ ದಿನ [ಭಾನುವಾರ]- ₹3.4 ಕೋಟಿ
ಐದನೇ ದಿನ [ಸೋಮವಾರ ]-₹ 1.15 ಕೋಟಿ *ಅಂದಾಜು
ಆರನೇ ದಿನ [ಮಂಗಳವಾರ]- ₹90 ಲಕ್ಷ *ಅಂದಾಜು

ಒಟ್ಟು ಗಳಿಕೆ - ₹ 20.45 ಕೋಟಿ

ಇನ್ನು ಇಂದು (ಡಿಸೆಂಬರ್ 31) ಮೈಸೂರು ಮತ್ತು ಬೆಂಗಳೂರಿನಲ್ಲಿ ಸುದೀಪ್ ತಮ್ಮ ಅಭಿಮಾನಿಗಳ ಜೊತೆ ಚಿತ್ರಮಂದಿರದಲ್ಲಿ ಚಿತ್ರ ನೋಡಲಿದ್ದಾರೆ. ಈ ಹಿನ್ನೆಲೆ ಗಳಿಕೆಯಲ್ಲಿ ಇಂದು ಏರಿಕೆ ಕಾಣುವ ಸಾಧ್ಯತೆ ಇದೆ. ನಾಳೆಯಿಂದ (ಜನವರಿ 1 ) ''ಮಾರ್ಕ್'' ತೆಲುಗು ಮತ್ತು ತಮಿಳಿನಲ್ಲಿ ಕೂಡ ಬಿಡುಗಡೆಯಾಗಲಿದೆ. ಅಲ್ಲಿಯೂ ಕೂಡ ಉತ್ತಮವಾದ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಇದೆ.

ಒಟ್ನಲ್ಲಿ ಸದ್ಯ ಆರು ದಿನದಲ್ಲಿ ''ಮಾರ್ಕ್‌'' ₹ 20.45 ಕೋಟಿ ಹಣವನ್ನು ಗಳಿಸಿದೆ ಎಂದು ''ಸ್ಯಾಕ್ನಿಲ್'' ವರದಿ ಮಾಡಿದ್ದು ಈ ವಾರಾಂತ್ಯದಲ್ಲಿ ಚಿತ್ರ ಎಷ್ಟು ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
The Baadshah reigns! Sudeep’s ‘Mark’ smashes through ₹20 Cr in just 6 days. Can the actioner become 2025’s biggest hit? Get the full box office report here!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X