Sitaare Zameen Par Box Office ; ಬಾಕ್ಸಾಫೀಸ್‌ನಲ್ಲಿ ಆಮಿರ್ ಖಾನ್ ಅಬ್ಬರ, 2ನೇ ದಿನದ ಗಳಿಕೆಯಲ್ಲಿ ಭಾರೀ ಜಿಗಿತ !

ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಪ್ರಪಂಚದಲ್ಲಿ ಬಾಲಿವುಡ್ ಕೆಲ ವರ್ಷಗಳಿಂದ ಕಳೆಗುಂದಿತ್ತು. ದಕ್ಷಿಣ ಭಾರತೀಯ ಚಿತ್ರರಂಗದ ಮುಂದೆ ಮಂಡಿಯೂರಿತ್ತು. ಆದರೆ.. 2023ರಲ್ಲಿ ಬಾಲಿವುಡ್ ಮೈಕೊಡವಿ ಎದ್ದು ನಿಂತಿತ್ತು. ಜವಾನ್, ಪಠಾಣ್, ಸೇರಿ ಹಲವು ಚಿತ್ರಗಳು ಗೆದ್ದ ಹಿನ್ನೆಲೆ ಹತ್ ಹತ್ರ ₹13,000 ಕೋಟಿ ಹಿಂದಿ ಚಿತ್ರರಂಗದ ಖಜಾನೆ ಸೇರಿತ್ತು. ಈ ಮೂಲಕ ಹೊಸದೊಂದು ಮೈಲಿಗಲ್ಲನ್ನು ಬಾಲಿವುಡ್ ತಲುಪಿತ್ತು.

ಆದರೆ 2024ರಲ್ಲಿ ಬಾಲಿವುಡ್‌ನಲ್ಲಿ ಹಣದ ಹೊಳೆ ಹರಿಯಲಿಲ್ಲ . ಸ್ತ್ರೀ 2.. ಮುಂಜ್ಯಾ.. ಭೂಲ್ ಭೂಲಯ್ಯ 3, ಸಿಂಗಂ ಅಗೇನ್, ಸೇರಿ ಅಲ್ಲೊಂದು ಇಲ್ಲೊಂದು ಚಿತ್ರಗಳು ಗೆದ್ದಿದ್ದು ಬಿಟ್ಟರೆ ಬೇರೆ ಯಾವ ಚಿತ್ರ ಕೂಡ ಹೇಳಿಕೊಳ್ಳುವಂತಹ ಸಾಧನೆ ಮಾಡಲಿಲ್ಲ. ಈ ವರ್ಷ ಕೂಡ ಕಳೆದ ವರ್ಷದಂತೆಯೇ ವಾತಾವರಣ ಇದೆ.

Massive Jump Sitaare Zameen Par Box Office Collection Day 2 Aamir Khan Film Hits Over 32 Crore

ಛಾವಾ, ರೇಡ್ 2, ಹೌಸ್‌ಫುಲ್ 5 ಚಿತ್ರಗಳನ್ನು ಹೊರತು ಪಡಿಸಿದರೆ ಬೇರೆ ಯಾವ ಚಿತ್ರ ಕೂಡ ಬಾಲಿವುಡ್‌ನಲ್ಲಿ ಈ ವರ್ಷ ಹೇಳಿಕೊಳ್ಳುವಂತಹ ಸದ್ದು ಮಾಡಿಲ್ಲ. ಪ್ರೇಕ್ಷಕರನ್ನು ಸೆಳೆದಿಲ್ಲ.

ಹೀಗಿರುವಾಗ ಕಳೆದ ಶುಕ್ರವಾರ ತೆರೆಗೆ ಬಂದ ಆಮಿರ್ ಖಾನ್ ಅಭಿನಯದ ಸಿತಾರೆ ಜಮೀನ್ ಪರ್ ಸದ್ಯ ಹಿಂದಿ ಉದ್ಯಮದವರ ಪಾಲಿಗೆ ಭರವಸೆಯ ಬೆಳಕಿನಂತೆ ಕಾಣುತ್ತಿದೆ.

ಯಾಕೆಂದರೆ.. ಮೊದಲ ದಿನಕ್ಕೆ ಹೋಲಿಸಿದರೆ ಚಿತ್ರದ ಎರಡನೇ ದಿನದ ಗಳಿಕೆ ದುಪ್ಪಟ್ಟಾಗಿದೆ. ಕೇವಲ 48 ಗಂಟೆಗಳಲ್ಲಿ ಚಿತ್ರ ಪ್ರೇಕ್ಷಕರನ್ನು ಆವರಿಸಿಕೊಂಡಿದೆ.

ಹೌದು, ಶುಕ್ರವಾರ { ಜೂನ್ 20 } ₹ 10.7 ಕೋಟಿ ಹಣವನ್ನು ಬಾಕ್ಸಾಫೀಸ್‌ನಲ್ಲಿ ದೋಚಿದ್ದ ಸಿತಾರೆ ಜಮೀನ್ ಪರ್ ಚಿತ್ರ ನಿನ್ನೆ { ಜೂನ್ 21 } ₹ 21.50 ಕೋಟಿ ಕೊಳ್ಳೆ ಹೊಡೆದಿದೆ. ಈ ಮೂಲಕ ಕೇವಲ ಎರಡು ದಿನದಲ್ಲಿ ಚಿತ್ರ ₹32.20 ಕೋಟಿಯನ್ನು ಗಳಿಸಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ವರದಿಯನ್ನು ಮಾಡಿದೆ.

Massive Jump Sitaare Zameen Par Box Office Collection Day 2 Aamir Khan Film Hits Over 32 Crore

ಇನ್ನು ವಿಶೇಷ ಅಂದರೆ ಎರಡನೇ ದಿನ ಸಿತಾರೆ ಜಮೀನ್ ಪರ್ ಚಿತ್ರಕ್ಕೆ ಬೆಂಗಳೂರು ಮತ್ತು ಚೆನ್ನೈನಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂದಿದೆ. ಸ್ಯಾಕ್ನಿಲ್ ವೆಬ್ ಸೈಟ್ ಉಲ್ಲೇಖಿಸಿರುವಂತೆ ಬೆಂಗಳೂರಿನಲ್ಲಿ ಎರಡನೇ ದಿನ ಬೆಂಗಳೂರಿನಲ್ಲಿ ಶೇಕಡಾ 50.25% ಆಕ್ಯುಪೆನ್ಸಿ ಇದ್ದರೆ ಚೆನ್ನೈನಲ್ಲಿ 53.50% ಆಕ್ಯುಪೆನ್ಸಿ ಕಂಡು ಬಂದಿದೆ.

ಲಾಲ್ ಸಿಂಗ್ ಚಡ್ಡಾ ವರ್ಸಸ್ ಸಿತಾರೆ ಜಮೀನ್ ಪರ್

2022ರಲ್ಲಿ ತೆರೆಗೆ ಬಂದ ಲಾಲ್ ಸಿಂಗ್ ಚಡ್ಡಾ ಚಿತ್ರದ ಮೊದಲ ದಿನದ ಗಳಿಕೆ { ₹11.70 ಕೋಟಿ }ಯನ್ನು ಹಿಂದಿಕ್ಕುವಲ್ಲಿ ಸಿತಾರೆ ಜಮೀನ್ ಪರ ವಿಫಲವಾಗಿತ್ತು. ಮೊದಲ ದಿನ ಚಿತ್ರ ₹11.50 ಕೋಟಿಯನ್ನು ಗಳಿಸಿತ್ತು. ಆದರೆ ಲಾಲ್ ಸಿಂಗ್ ಚಡ್ಡಾ ಪ್ರೇಕ್ಷಕರ ಮತ್ತು ವಿಮರ್ಷಕರ ಪ್ರೀತಿ ಸಿಕ್ಕಿರಲಿಲ್ಲ.

ಹೀಗಾಗಿ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಚಿತ್ರದ ಎರಡನೇ ದಿನದ ಗಳಿಕೆಯಲ್ಲಿ ಶೇಕಡಾ -37.95% ಕುಸಿತ ಕಂಡು ಬಂದಿತ್ತು. ಲಾಲ್ ಸಿಂಗ್ ಚಡ್ಡಾ ಎರಡನೇ ದಿನ ಕೇವಲ 7.26 ಕೋಟಿಯನ್ನು ಮಾತ್ರ ಗಳಿಸಿತ್ತು. ಆದರೆ ಸಿತಾರೆ ಜಮೀನ್‌ ಪರ್‌ ಚಿತ್ರವನ್ನು ಪ್ರೇಕ್ಷಕರು ಮತ್ತು ವಿಮರ್ಷಕರು ಮೆಚ್ಚಿಕೊಂಡಿದ್ದಾರೆ. ಇದಕ್ಕೆ ಎರಡನೇ ದಿನದ ಚಿತ್ರದ ಗಳಿಕೆಯಲ್ಲಿ {21.50 ಕೋಟಿ} ಕಂಡು ಬಂದ ಭಾರೀ ಜಿಗಿತವೇ ಸಾಕ್ಷಿ.

Massive Jump Sitaare Zameen Par Box Office Collection Day 2 Aamir Khan Film Hits Over 32 Crore

ಒಟ್ನಲ್ಲಿ ಸದ್ಯ ಸಿತಾರೆ ಜಮೀನ್ ಪರ್ ಚಿತ್ರ ಎರಡು ದಿನಗಳಲ್ಲಿ ₹ 32.20 ಕೋಟಿಯನ್ನು ಗಳಿಸಿದೆ. ಇಂದು ಕೂಡ ಚಿತ್ರದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಸೋಮವಾರದ ಪರೀಕ್ಷೆಯಲ್ಲಿ ಸಿತಾರೆ ಜಮೀನ್ ಪರ್ ಪಾಸಾಗುತ್ತಾ ? ಎನ್ನುವುದನ್ನು ಈಗ ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Aamir Khan's Sitaare Zameen Par explodes at the box office! Discover how the film doubled its opening day earnings. Get the latest collection updates
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X