ಭಾರತದಲ್ಲಿ ನೂರು ಕೋಟಿ ದೋಚಿದ ದೃಶ್ಯಂ 3 ; ಕಲ್ಯಾಣಿಯ 'ಲೋಕ'ಕ್ಕೆ ಸೆಡ್ಡು ಹೊಡೆಯುತ್ತಾರಾ ಮೋಹನ್ ಲಾಲ್ ?

ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಚಿತ್ರ ''ದೃಶ್ಯಂ''. ಕ್ರೈಂ ಥ್ರಿಲ್ಲರ್ ಜಾನರಿನ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಭಾರೀ ಹಣವನ್ನು ಗಳಿಸುವುದಲ್ಲದೇ ಮೋಹನ್ ಲಾಲ್ ಜನಪ್ರಿಯತೆಯನ್ನು ಇನ್ನೂ ಹೆಚ್ಚಿಸಿತ್ತು. ಮಲಯಾಳಂನಲ್ಲಿ ತೆರೆಗೆ ಬಂದು ಆ ನಂತರ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಿಗೆ ಕೂಡ ರಿಮೇಕ್ ಆದ ಈ ಚಿತ್ರದ ಕನ್ನಡದ ಅವತರಣಿಕೆಯಲ್ಲಿ ಕನ್ನಡ ಚಿತ್ರರಂಗದ ಕನಸುಗಾರ ಡಾ.ವಿ.ರವಿಚಂದ್ರನ್ ಅತ್ಯದ್ಭುತವಾಗಿ ಅಭಿನಯಿಸಿದ್ದರು.

ತಮಿಳಿನಲ್ಲಿ ಕಮಲ್ ಹಾಸನ್, ತೆಲುಗಿನಲ್ಲಿ ವೆಂಕಟೇಶ್ ಮತ್ತು ಹಿಂದಿಯಲ್ಲಿ ಅಜಯ್ ದೇವಗನ್, ಮೋಹನ್ ಲಾಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಜೀವ ತುಂಬಿದ್ದರು. ಅದಾದ ನಂತರ ''ದೃಶ್ಯಂ 2'' ಕೂಡ ತೆರೆ ಕಂಡಿತ್ತು. ಮೊದಲ ಭಾಗದಂತೆಯೇ ಎಲ್ಲ ಭಾಷೆಯಲ್ಲಿ ಈ ಚಿತ್ರ ಕೂಡ ರಿಮೇಕ್ ಆಗಿತ್ತು. ಈಗ ಮೂರನೇ ಭಾಗದ ಸರದಿ.

Mohanlal s Drishyam 3 Storms Into India s 100 Crore Club On Day 13

ಹೌದು, ''ದೃಶ್ಯಂ 3''.. ''ದೃಶ್ಯಂ'' ಸರಣಿಯ ಮೂರನೇ ಭಾಗ. ನಿಜ, ಮೊದಲ ಎರಡು ಭಾಗಗಳಿಗೆ ಹೋಲಿಸಿದರೆ ಮೂರನೇ ಭಾಗ ಹಲವರನ್ನು ನಿರಾಸೆಗೊಳಿಸಿದೆ. ಪ್ರೇಕ್ಷಕರಿಂದ ಮಾತ್ರವಲ್ಲದೇ ವಿಮರ್ಷಕರಿಂದ ಕೂಡ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೂ ಬಾಕ್ಸಾಫೀಸ್‌ನಲ್ಲಿ ಹಣದ ಮಳೆ ಬಿದ್ದಿದೆ. ಕೇವಲ ಭಾರತದಲ್ಲಿಯೇ 13 ದಿನದಲ್ಲಿ ನೂರು ಕೋಟಿಯನ್ನು ಚಿತ್ರ ಕೊಳ್ಳೆ ಹೊಡೆದಿದೆ.

ಸ್ಯಾಕ್ನಿಲ್ ಪ್ರಕಾರ ''ದೃಶ್ಯಂ 3'' ಚಿತ್ರದ 13 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ದಿನ ಭಾರತ ನೆಟ್ ಗಳಿಕೆ
ಮೊದಲನೇ ದಿನ (ಗುರುವಾರ) ₹15.85 ಕೋಟಿ
ಎರಡನೇ ದಿನ (ಶುಕ್ರವಾರ) ₹11.05 ಕೋಟಿ
ಮೂರನೇ ದಿನ (ಶನಿವಾರ) ₹13.70 ಕೋಟಿ
ನಾಲ್ಕನೇ ದಿನ (ಭಾನುವಾರ) ₹13.85 ಕೋಟಿ
ಐದನೇ ದಿನ (ಸೋಮವಾರ) ₹7.70 ಕೋಟಿ
ಆರನೇ ದಿನ (ಮಂಗಳವಾರ) ₹6.50 ಕೋಟಿ
ಏಳನೇ ದಿನ (ಬುಧವಾರ) ₹6.65 ಕೋಟಿ
ಎಂಟನೇ ದಿನ (ಗುರುವಾರ) ₹6.65 ಕೋಟಿ
ಮೊದಲ ವಾರದ ಒಟ್ಟು ಗಳಿಕೆ ₹81.95 ಕೋಟಿ
ಒಂಬತ್ತನೇ ದಿನ (ಶುಕ್ರವಾರ) ₹4.30 ಕೋಟಿ
ಹತ್ತನೇ ದಿನ (ಶನಿವಾರ) ₹5.10 ಕೋಟಿ
ಹನ್ನೊಂದನೇ ದಿನ (ಭಾನುವಾರ) ₹5.35 ಕೋಟಿ
ಹನ್ನೆರಡನೇ ದಿನ (ಸೋಮವಾರ) ₹2.20 ಕೋಟಿ
ಹದಿಮೂರನೇ ದಿನ (ಮಂಗಳವಾರ) ₹0.41 ಕೋಟಿ (ಲೈವ್)
ಒಟ್ಟಾರೆ ಭಾರತ ನೆಟ್ ಕಲೆಕ್ಷನ್ ₹99.31 ಕೋಟಿ

ಲೋಕ ದಾಖಲೆ ಮುರಿಯುತ್ತಾ ದೃಶ್ಯಂ 3

ಅಂದ್ಹಾಗೇ ಮಲಯಾಳಂನಲ್ಲಿ ಇಲ್ಲಿಯವರೆಗೆ ಹಲವಾರು ಅತ್ಯದ್ಭುತ ಸಿನಿಮಾಗಳು ಬಂದಿರಬಹುದು. ಆದರೆ, ನೆನಪಿರಲಿ ಯಾವ ಚಿತ್ರ ಕೂಡ ಇಲ್ಲಿಯವರೆಗೆ ಭಾರತದ ಬಾಕ್ಸಾಫೀಸ್‌ನಲ್ಲಿ 200 ಕೋಟಿಯ ಗಡಿಯನ್ನು ದಾಟಿಲ್ಲ. ಪ್ರಿಯದರ್ಶನ್ ಮಗಳು ಕಲ್ಯಾಣಿ ಅಭಿನಯದ ''ಲೋಕ : ಚಾಪ್ಟರ್ 1'' ಮಾತ್ರ ಭಾರತದಲ್ಲಿ ₹157.01 ಕೋಟಿ ದೋಚಿದೆ.

ಮಿಕ್ಕ ಎಲ್ಲ ಚಿತ್ರಗಳು ಕೂಡ ಈ ಚಿತ್ರದ ನಂತರದ ಸಾಲಿನಲ್ಲಿಯೇ ಇವೆ. ಹೀಗಾಗಿ ''ದೃಶ್ಯಂ 3'' ಕಲ್ಯಾಣಿಯ ''ಲೋಕ''ವನ್ನು ಹಿಂದಿಕ್ಕಿ ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುತ್ತಾ..? ಎನ್ನುವ ಕುತೂಹಲ ಸದ್ಯ ಹಲವರಲ್ಲಿದೆ.

Mohanlal s Drishyam 3 Storms Into India s 100 Crore Club On Day 13

ಆದರೆ.. ಈ ಸಾಧನೆಯ ಶಿಖರಕ್ಕೇರುವುದು ಅನುಮಾನ. ಯಾಕೆಂದರೆ ''ದೃಶ್ಯಂ 3'' ಗಳಿಕೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇದೇ ಜೂನ್ 18ರಂದು ''ದೃಶ್ಯಂ 3'' ಓಟಿಟಿಯಲ್ಲಿ ಪ್ರಸಾರವಾಗಲಿದೆ ಎಂಬ ಸುದ್ದಿ ಹಬ್ಬಿದೆ. ಹೀಗಾಗಿ ಚಿತ್ರ ನೋಡಬೇಕೆಂದುಕೊಂಡವರು ಕೂಡ ಯೋಚನೆ ಮಾಡುತ್ತಿದ್ಧಾರೆ.

ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 10 ಮಲಯಾಳಂ ಸಿನಿಮಾಗಳ ಪಟ್ಟಿ ಈ ಕೆಳಗಿನಂತೆ ಇದೆ.

ಶ್ರೇಯಾಂಕ ಚಿತ್ರದ ಹೆಸರು ಭಾರತ ನೆಟ್ ಗಳಿಕೆ ವರ್ಷ ಮುಖ್ಯ ತಾರಾಗಣ
1 ಲೋಕಃ ಚಾಪ್ಟರ್ 1: ಚಂದ್ರ ₹152.40 ಕೋಟಿ 2025 ಮೋಹನ್‌ಲಾಲ್
2 ಮಂಜುಮ್ಮೆಲ್ ಬಾಯ್ಸ್ ₹142.10 ಕೋಟಿ 2024 ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ
3 ವಾಝಾ II: ಬಯೋಪಿಕ್ ಆಫ್ ಎ ಬಿಲಿಯನ್ ಬ್ರೋಸ್ ₹124.20 ಕೋಟಿ 2026 ಜೋಮನ್ ಜ್ಯೋತಿರ್, ಹಶೀರಿ
4 ತುಡರುಮ್ ₹121.50 ಕೋಟಿ 2025 ಮಮ್ಮುಟ್ಟಿ
5 L2: ಎಂಪುರಾನ್ ₹104.80 ಕೋಟಿ 2025 ಮೋಹನ್‌ಲಾಲ್, ಪೃಥ್ವಿರಾಜ್ ಸುಕುಮಾರನ್
6 ದೃಶ್ಯಂ 3* ₹99.31 ಕೋಟಿ (ಪ್ರದರ್ಶನ ಕಾಣುತ್ತಿದೆ) 2026 ಮೋಹನ್‌ಲಾಲ್, ಮೀನಾ
7 2018: ಎವ್ರಿವನ್ ಈಸ್ ಎ ಹೀರೊ ₹89.40 ಕೋಟಿ 2023 ಟೊವಿನೋ ಥಾಮಸ್, ಆಸಿಫ್ ಅಲಿ
8 ಪುಲಿಮುರುಗನ್ ₹86.20 ಕೋಟಿ 2016 ಮೋಹನ್‌ಲಾಲ್, ಜಗಪತಿ ಬಾಬು
9 ಆವೇಶಂ ₹85.15 ಕೋಟಿ 2024 ಫಹಾದ್ ಫಾಸಿಲ್
10 ದಿ ಗೋಟ್ ಲೈಫ್ (ಆಡುಜೀವಿತಂ) ₹84.90 ಕೋಟಿ 2024 ಪೃಥ್ವಿರಾಜ್ ಸುಕುಮಾರನ್

ಟಾಪ್ 10 ಪಟ್ಟಿಯಲ್ಲಿ ಇಲ್ಲವೇಕೆ ದೃಶ್ಯಂ ಮತ್ತು ದೃಶ್ಯಂ 2 ?

''ದೃಶ್ಯಂ'' ಚಿತ್ರದ ಮೊದಲ ಅಧ್ಯಾಯ 13 ವರ್ಷದ ಹಿಂದೆ ಅನಾವರಣವಾಗಿತ್ತು. ಇನ್ನು ಟಿಕೆಟ್ ದರ ಕೂಡ ಈಗಿನಂತೆ ಗಗನಕ್ಕೇರಿರಲಿಲ್ಲ. ಉದ್ಯಮದ ಲೆಕ್ಕಾಚಾರದ ಪ್ರಕಾರ ಆ ಸಮಯದಲ್ಲಿ ಕಡಿಮೆ ಬಂಡವಾಳದಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ₹35-40 ಕೋಟಿ ದೋಚಿತ್ತು. ಈ ಮೂಲಕ ಮಲಯಾಳಂನಲ್ಲಿ ಹೊಸ ಇತಿಹಾಸ ಬರೆದಿತ್ತು. ಇನ್ನು ''ದೃಶ್ಯಂ 2'' ಬಂದಿದ್ದು 2021ರಲ್ಲಿ. ಆ ಸಮಯದಲ್ಲಿ ಕೊರೊನಾ ವಕ್ಕರಿಸಿಕೊಂಡಿತ್ತು. ಚಿತ್ರಮಂದಿರಕ್ಕೆ ಜನ ಬರಲು ಹೆದರುತ್ತಿದ್ದ ಕಾಲ ಅದು. ಹೀಗಾಗಿ ಚಿತ್ರವನ್ನು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು.

ಒಟ್ನಲ್ಲಿ ಸದ್ಯ ''ದೃಶ್ಯಂ 3'' ಭಾರತದಲ್ಲಿ ₹99.31 ಕೋಟಿ ಗಳಿಸಿದೆ. ಗ್ರಾಸ್ ಲೆಕ್ಕಾಚಾರದ ವಿಚಾರಕ್ಕೆ ಬಂದರೆ ಚಿತ್ರದ ಗಳಿಕೆ ಈಗಾಗಲೇ 100 ಕೋಟಿ ದಾಟಿದ್ದು 13 ದಿನದಲ್ಲಿ ಚಿತ್ರದ ಗ್ರಾಸ್ ಗಳಿಕೆ ₹115.24 ಕೋಟಿ ಆಗಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. ನೆಟ್ ಗಳಿಕೆಯಲ್ಲಿ ''ದೃಶ್ಯಂ 3'' ''ಲೋಕ'' ಚಿತ್ರವನ್ನು ಬಾಕ್ಸಾಫೀಸ್‌ನಲ್ಲಿ ಹಿಂದಿಕ್ಕುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Unstoppable Georgekutty! Mohanlal's Drishyam 3 has officially stormed into India's ₹100 Crore Club on Day 13. Check out the detailed box office report here!
Read more about: mohan lal mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X