Drishyam- 3 Boxoffice: ಸೋಮವಾರ 'ಲೋಕ' ಹಿಂದಿಕ್ಕಿ ಹೊಸ ದಾಖಲೆ ಬರೆದ 'ದೃಶ್ಯಂ -3'

ಮೋಹನ್ ಲಾಲ್ ನಟನೆಯ 'ದೃಶ್ಯಂ -3' ಸಿನಿಮಾ ಗೆಲುವಿನ ಓಟ ಮುಂದುವರೆಸಿದೆ. ಫಸ್ಟ್ ವೀಕೆಂಡ್‌ನಲ್ಲೇ ಸಿನಿಮಾ 150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಸೂಪರ್ ಹಿಟ್ ಸರಣಿಯ ಹೊಸ ಸಿನಿಮಾವನ್ನು ಚಿತ್ರಮಂದಿರಗಳಲ್ಲೇ ನೋಡಲು ಸಿನಿರಸಿಕರು ಮುಗಿಬಿದ್ದಿದ್ದಾರೆ. ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬಂದಿದೆ.

ಮಲಯಾಳಂ ಚಿತ್ರರಂಗದ ಹಲವು ಬಾಕ್ಸಾಫೀಸ್ ದಾಖಲೆಗಳನ್ನು 'ದೃಶ್ಯಂ -3' ಮುರಿದು ಮುನ್ನುಗ್ಗುತ್ತಿದೆ. 4 ದಿನಗಳ ಲಾಂಗ್ ವೀಕೆಂಡ್ ಬಳಿಕ ಸೋಮವಾರ ಕೂಡ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಭಾನುವಾರಕ್ಕೆ ಹೋಲಿಸಿದರೆ ಕಡಿಮೆ ಎನಿಸಬಹುದು. ಆದರೆ ಸೋಮವಾರದ ಪರೀಕ್ಷೆಯನ್ನು ಫಸ್ಟ್ ಕ್ಲಾಸ್‌ನಲ್ಲಿ ಜಾರ್ಜ್‌ಕುಟ್ಟಿ ಪಾಸ್ ಆಗಿದ್ದಾನೆ. ಬುಕ್‌ಮೈ ಶೋನಲ್ಲಿ ಲಕ್ಷ ಲಕ್ಷ ಟಿಕೆಟ್ ಬುಕ್ಕಿಂಗ್ ಆಗ್ತಿದೆ. ನಿಧಾನವಾಗಿ ಫ್ಯಾಮಿಲಿ ಆಡಿಯನ್ಸ್ ಸಿನಿಮಾ ನೋಡಲು ಮುಂದಾಗಿದ್ದಾರೆ.

Mohanlal s Drishyam 3 Creates History With Mollywood s Biggest Monday Ever

ಸರಣಿಯ ಹಿಂದಿನ 2 ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾ ಕೊಂಚ ನಿರಾಸೆ ಮೂಡಿಸುತ್ತದೆ. ಫಸ್ಟ್‌ ಹಾಫ್ ತಾಳ್ಮೆ ಪರೀಕ್ಷಿಸುವಂತಿದೆ. ಆದರೆ ಕೊನೆಯ ಅರ್ಧ ಗಂಟೆ ಸಿನಿಮಾ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುತ್ತದೆ. ಸಿನಿಮಾ ತೆರೆಕಂಡು ಕೇವಲ 58 ಗಂಟೆಗಳಲ್ಲಿ 100 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡವೇ ಘೋಷಿಸಿತ್ತು. ಆ ಬಳಿಕ ಕೂಡ ಜಾರ್ಜ್‌ಕುಟ್ಟಿ ಆರ್ಭಟ ನಿಲ್ಲಲಿಲ್ಲ. 'ದೃಶ್ಯಂ- 3' ಸಿನಿಮಾ ಕೊಂಚ ಬೇಸರ ಮೂಡಿಸಿದರೂ ಮೋಹನ್ ಲಾಲ್ ತಮ್ಮ ಸಹಜ ನಟನೆಯಿಂದ ಎಲ್ಲವನ್ನು ಮರೆಸಿಬಿಡುತ್ತಾರೆ.

ಸೋಮವಾರ ಕಲೆಕ್ಷನ್

ಭಾರತದಲ್ಲಿ ಸೋಮವಾರ 4,684 ಶೋಗಳಲ್ಲಿ 'ದೃಶ್ಯಂ- 3' ಸಿನಿಮಾ ಪ್ರದರ್ಶನ ಕಂಡಿತ್ತು. 8.92 ಕೋಟಿ ರೂ. ಗ್ರಾಸ್ ಜೊತೆಗೆ 7.70 ಕೋಟಿ ರೂ. ನೆಟ್ ಕಲೆಕ್ಷನ್ ಆಗಿದ್ದಾಗಿ sacnilk ವೆಬ್‌ಸೈಟ್ ವರದಿ ಮಾಡಿದೆ. ವಿಶ್ವದಾದ್ಯಂತ ಗ್ರಾಸ್ ಕಲೆಕ್ಷನ್ 15.30 ಕೋಟಿ ರೂ. ಬಾಚಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಫಸ್ಟ್ ವೀಕೆಂಡ್ ಮುಗಿಸಿ ಮೊದಲ ಸೋಮವಾರ(ರಜೆ ಇಲ್ಲದ) ಅತಿಹೆಚ್ಚು ಕಲೆಕ್ಷನ್ ಮಾಡಿದ ಮಲಯಾಳಂ ಸಿನಿಮಾ ಎನ್ನುವ ದಾಖಲೆ ಈ ಸಿನಿಮಾ ಪಾಲಾಗಿದೆ. ಇದಕ್ಕೂ ಮುನ್ನ 'ಲೋಕಾ' ಸಿನಿಮಾ 14.50 ಕೋಟಿ ರೂ. ದೋಚಿದ್ದು ಈವರೆಗಿನ ದಾಖಲೆ ಆಗಿತ್ತು. ಬರೀ ಬುಕ್‌ಮೈ ಶೋನದಲ್ಲಿ ಸೋಮವಾರ 2 ಲಕ್ಷದ 31 ಸಾವಿರ ಟಿಕೆಟ್ ಬುಕ್ ಆಗಿತ್ತು.

Mohanlal s Drishyam 3 Creates History With Mollywood s Biggest Monday Ever

ಕೇರಳದಲ್ಲಿ 50 ಕೋಟಿ ರೂ. ಗಳಿಕೆ

13 ವರ್ಷಗಳ ಹಿಂದೆ ಬಂದಿದ್ದ 'ದೃಶ್ಯಂ' ಸಿನಿಮಾ ಒಟ್ಟಾರೆ 50 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅಲ್ಲಿಯವರೆಗಿನ ಎಲ್ಲಾ ಮಲಯಾಳಂ ಸಿನಿಮಾಗಳ ದಾಖಲೆಯನ್ನು ಅಳಿಸಿ ಹಾಕಿತ್ತು. ಆದರೆ ಈಗ ಪಾರ್ಟ್‌- 3 ಕೇರಳದಲ್ಲಿ ಮಾತ್ರ 5 ದಿನಕ್ಕೆ 50 ಕೋಟಿ ರೂ. ಕ್ಲಬ್ ಸೇರಿದೆ. ಸೋಮವಾರ ಮಾತ್ರವಲ್ಲ ಮಂಗಳವಾರ ಕೂಡ ಸಿನಿಮಾ ಒಳ್ಳೆ ಗಳಿಕೆ ಕಂಡಿರುವ ಮಾಹಿತಿ ಲಭ್ಯವಾಗುತ್ತಿದೆ. ಅನಾಯಾಸವಾಗಿ ಸಿನಿಮಾ 250 ಕೋಟಿ ರೂ. ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ.

'ದೃಶ್ಯಂ- 3' ಓಟಿಟಿ

ಅಮೇಜಾನ್ ಪ್ರೈಂ ವೀಡಿಯೋ 'ದೃಶ್ಯಂ- 3' ಚಿತ್ರದ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ. 45 ದಿನಗಳ ಬಳಿಕ ಸ್ಟ್ರೀಮಿಂಗ್ ಆರಂಭಿಸುವ ಸಾಧ್ಯತೆಯಿದೆ. ಸಾಕಷ್ಟು ಮಂದಿ ದೊಡ್ಡ ಪರದೆಯಲ್ಲೇ ಸಿನಿಮಾ ನೋಡಲು ಮುಂದಾಗಿದ್ದಾರೆ. ಐಪಿಎಲ್ ಟೂರ್ನಿ ಮುಗಿದ ಬಳಿಕ ಜಾರ್ಜ್‌ಕುಟ್ಟಿ ಕ್ರೇಜ್ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.

Read more about: mohanlal mollywood record
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X