Raja Saab Box Office Day 4 ; ಕೇವಲ ನಾಲ್ಕೇ ದಿನ ರಾಜಾ ಸಾಬ್ ಢಮಾರ್- ಹಿಂದಿಯಲ್ಲಿ ಕೇಳೋರು ದಿಕ್ಕಿಲ್ಲ

ಚಿತ್ರರಂಗದಲ್ಲಿ ಹಲವರಿಗೆ ಪ್ಯಾನ್ ಇಂಡಿಯಾ ಎಂಬ ಅಮಲೇರಿದೆ. ಆ ಭಾಷೆ.. ಈ ಭಾಷೆ ಅಂತಲ್ಲ. ದಕ್ಷಿಣ ಭಾರತದಲ್ಲಿ ಹಲವರು ಈ ಪ್ಯಾನ್ ಇಂಡಿಯಾ ಎಂಬ ಭ್ರಮೆಯ ಬೆನ್ನ ಹಿಂದೆ ಬಿದ್ದಿದ್ದಾರೆ. ಆದರೆ, ವಾಸ್ತವದಲ್ಲಿ ಈ ಪ್ಯಾನ್ ಇಂಡಿಯಾ ಎಂಬ ಪದ ತುಂಬಾನೇ ಭಾರ. ಹೊರುವುದು ಅಂದುಕೊಂಡಷ್ಟು ಸುಲಭ ಅಲ್ಲ. ಮಲಗಲು ಹೂವಿನ ಹಾಸಿಗೆಯೂ ಅಲ್ಲ. ಅದೊಂದು ಮುಳ್ಳಿನ ಗುಲಾಬಿ.

ಈ ಮುಳ್ಳು ತಾಗಿದಾಗ ತುಂಬಾ ನೋವಾಗುತ್ತೆ. ಇದಕ್ಕೆ ಪ್ರಭಾಸ್ ಅವರ ವೃತ್ತಿ ಬದುಕೇ ಅತ್ಯುತ್ತಮ ಉದಾಹರಣೆ. ಹೌದು, ಪ್ಯಾನ್ ಇಂಡಿಯಾ ಎಂಬ ಹುಚ್ಚು ಹತ್ತಿಸಿಕೊಂಡವರಲ್ಲಿ ಪ್ರಭಾಸ್ ಮೊದಲಿಗರು. ''ಬಾಹುಬಲಿ''ಯ ಅಪಾರವಾದ ಯಶಸ್ಸು.. ಆ ಚಿತ್ರದಿಂದ ಸಿಕ್ಕ ಜನಪ್ರಿಯತೆಯಿಂದ.. ಭಾರತದೆಲ್ಲೆಡೆ ದಂಡೆತ್ತಿ ಹೋಗಲು ಅಣಿಯಾದ ಪ್ರಭಾಸ್‌ಗೆ ಸಿಕ್ಕಿದ್ದು ಕೇವಲ ಸೋಲು ಮತ್ತು ನಿರಾಸೆ ಮಾತ್ರ.

Monday Meltdown The Raja Saab Crashes 71 Drop Prabhas Struggles to Survive Despite 114Cr Total

ನಿಜಾ .. ಒಂದಾದ ಮೇಲೊಂದರಂತೆ ಇವರ ಆರು ಚಿತ್ರಗಳು ಮೊದಲ ದಿನ 100 ಕೋಟಿಯನ್ನು ಕೊಳ್ಳೆ ಹೊಡೆದಿವೆ. ಸಿನಿಮಾ ಹೇಗೆ ಇರಲಿ ಮೊದಲ ದಿನ 100 ಕೋಟಿ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಈ ಮೂಲಕ ಅಪರೂಪದ ದಾಖಲೆಯನ್ನು ಕೂಡ ಪ್ರಭಾಸ್ ಬರೆದಿದ್ದಾರೆ.

ಆದರೆ .. ಈ ಸಾಧನೆ ಕೇವಲ ಒಂದು ದಿನಕ್ಕೆ.. ಮೂರು ದಿನಕ್ಕೆ ಮಾತ್ರ ಸೀಮಿತವಾಗಿದೆ. ಸೋಮವಾರ ಅಕ್ಷರಶಃ ಪ್ರಭಾಸ್ ''ಅಗ್ನಿ ಪರೀಕ್ಷೆ''. ಈ ಪರೀಕ್ಷೆಯಲ್ಲಿ ಪ್ರಭಾಸ್ ನಿರಂತರವಾಗಿ ಫೇಲ್ ಆಗುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ''ಕಲ್ಕಿ 2898 AD'' ಹೊರತು ಪಡಿಸಿದರೆ ''ಸಾಹೋ''.. ''ರಾಧೆ ಶ್ಯಾಮ್''.. ''ಆದಿಪುರುಷ್''.. ''ಸಲಾರ್''.. ಚಿತ್ರಗಳು ಮೊದಲ ದಿನ ಧಾಂ ಧೂಂ ಓಪನಿಂಗ್ ಪಡೆದಿವೆ. ಆ ನಂತರ ದೊಪ್ಪನೆ ನೆಲಕ್ಕೆ ಬಿದ್ದಿವೆ. ಈ ಸಾಲಿಗೆ ಈಗ ''ದಿ ರಾಜಾ ಸಾಬ್'' ಕೂಡ ಸೇರಿಕೊಂಡಿದೆ.

Monday Meltdown The Raja Saab Crashes 71 Drop Prabhas Struggles to Survive Despite 114Cr Total

ಹೌದು, ''ದಿ ರಾಜಾ ಸಾಬ್''.. ಸಂಕ್ರಾಂತಿ ಸಂಭ್ರಮವನ್ನೂ ಹೆಚ್ಚಿಸಲು ಬಂದ ಸಿನಿಮಾ. ಮೊದಲ ದಿನ ಕೇವಲ ಭಾರತದಲ್ಲಿಯೇ ₹ 53.75 ಕೋಟಿಯನ್ನು ಈ ಚಿತ್ರ ಗಳಿಸಿತ್ತು. ಇನ್ನು ವಿಶ್ವದಾದ್ಯಂತದ ಗಳಿಕೆ ಲೆಕ್ಕ ಹಾಕಿದರೆ ಗಳಿಕೆ ₹112 ಕೋಟಿಯಾಗುತ್ತೆ. ಖುದ್ದು ಚಿತ್ರತಂಡವೇ ಈ ಅಂಕಿಯನ್ನು ಹಂಚಿಕೊಂಡಿದೆ. ನಾಲ್ಕೇ ದಿನದಲ್ಲಿ ವರ್ಲ್ಡ್ ವೈಡ್ ಚಿತ್ರ ₹201 ಕೋಟಿಯನ್ನು ಗಳಿಸಿದೆ ಎಂದು ಕೂಡ ಹೇಳಿದೆ.

ಆದರೆ .. ಬಾಕ್ಸಾಫೀಸ್‌ನ ಲೆಕ್ಕ ಹಂಚಿಕೊಳ್ಳುವ ''ಸ್ಯಾಕ್ನಿಲ್'' ಹೇಳುವ ಕಥೆಯೇ ಬೇರೆ. ಆ ಪ್ರಕಾರ ನೋಡುವುದಾದರೆ ಭಾರತದಲ್ಲಿ ''ದಿ ರಾಜಾ ಸಾಬ್'' ಸ್ಥಿತಿ ತುಂಬಾನೇ ದಯನೀಯವಾಗಿದೆ. ಮೊದಲ ದಿನಕ್ಕೆ ಹೋಲಿಸಿದರೆ ನಾಲ್ಕನೇ ದಿನ ಚಿತ್ರದ ಗಳಿಕೆ ಶೇಕಡಾ 71% ಕುಸಿದಿದೆ. ಮೊದಲ ದಿನ ₹ 53.75 ಕೋಟಿ ಕೊಳ್ಳೆ ಹೊಡೆದಿದ್ದ ''ದಿ ರಾಜಾ ಸಾಬ್'' ನಾಲ್ಕನೇ ದಿನ ಅಂದರೆ ನಿನ್ನೆ (ಜನವರಿ 12) ಕೇವಲ ₹6.6 ಕೋಟಿಯನ್ನಷ್ಟೇ ದೋಚಿದೆ. ಈ ಮೂಲಕ ನಾಲ್ಕು ದಿನದಲ್ಲಿ ಭಾರತದಲ್ಲಿ ₹ 114.6 ಕೋಟಿಯನ್ನು ಗಳಿಸಿದೆ.

ಇನ್ನೂ ಪ್ರಭಾಸ್ ಅಂದರೆ ಮೊದಲು ಹಿಂದಿ ಪ್ರದೇಶದಲ್ಲೊಂದು ಕ್ರೇಜ್ ಇತ್ತು. ಆ ಕ್ರೇಜ್ ಈಗ ಸಂಪೂರ್ಣ ಕಣ್ಮರೆಯಾಗಿದೆ. ಉತ್ತರ ಭಾರತದಲ್ಲಿ ''ದಿ ರಾಜಾ ಸಾಬ್‌''ಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ''ಸ್ಯಾಕ್ನಿಲ್'' ಪ್ರಕಾರ ಹಿಂದಿಯಲ್ಲಿ ನಾಲ್ಕು ದಿನವಾದರೂ ಈ ಚಿತ್ರ ದೋಚಿದ್ದು ಕೇವಲ ₹17.5 ಕೋಟಿ ಮಾತ್ರ.

ಒಟ್ನಲ್ಲಿ ಸದ್ಯ ''ದಿ ರಾಜಾ ಸಾಬ್'' ಬಾಕ್ಸಾಫೀಸ್‌ನಲ್ಲಿ ತೆವಳುತ್ತಿದೆ. ಭಾರತದಲ್ಲಿ ₹150 ಕೋಟಿಯ ಗಡಿಯನ್ನು ಕೂಡ ತಲುಪುವುದು ಕಷ್ಟ ಎನ್ನುವ ಮಾತು ಕೂಡ ಸದ್ಯ ಕೇಳಿ ಬರುತ್ತಿವೆ. ದಿನದಿಂದ ದಿನಕ್ಕೆ ಗಳಿಕೆ ಕುಸಿಯುತ್ತಿದೆ. ಅಂದ್ಹಾಗೇ ಈ ಚಿತ್ರಕ್ಕೆ ಖರ್ಚಾಗಿದ್ದು ₹400 ಕೋಟಿ ಎನ್ನುವ ಮಾತು ಇದೆ. ಪ್ರಭಾಸ್ ನಂಬಿದ ನಿರ್ಮಾಪಕರಿಗೆ ಎಷ್ಟು ಕೋಟಿ ನಷ್ಟ ಆಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Monday Meltdown! Despite adding new scenes to boost footfalls, The Raja Saab struggles to stay afloat as collections plummet to single digits on Day 4. Is Prabhas’ latest heading for a box office disaster? See the shocking numbers inside.
Read more about: prabhas tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X