ಧನುಷ್ ಮಾಡಿದ್ದ ''ಇಡ್ಲಿ''ಯನ್ನು ಗುಳುಂ ಮಾಡಿದ 'ಕಾಂತಾರ', ದೈವದ ಅಬ್ಬರಕ್ಕೆ ರಜನಿ ಮಾಜಿ ಅಳಿಯನ ಚಿತ್ರ ತತ್ತರ

ಹಿಂದೆ ಒಂದು ಕಾಲ ಇತ್ತು. ಕನ್ನಡ ಚಿತ್ರರಂಗ ಅಂದರೆ ಅಸಡ್ಡೆಯಿಂದ ನೋಡುತ್ತಿದ್ದ ಕಾಲ ಅದು. ಯಾಕೆಂದರೆ.. ನಮ್ಮಲ್ಲಿ ಅನೇಕರು ರಿಮೇಕ್ ಸಂಪ್ರದಾಯಕ್ಕೆ ಆಗ ಶರಣಾಗಿದ್ದರು. ಪ್ರೇಕ್ಷಕರು ಕೂಡ ಏಕತಾನತೆಯಿಂದ ಬೇಸತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಹತ್ತು ಹಲವು ಪ್ರಯೋಗಗಳಾಗುತ್ತಿವೆ. ಮೊದಲೆಲ್ಲಾ ಕನ್ನಡ ಚಿತ್ರರಂಗ ಅಂದರೆ...

ಅಯ್ಯೋ ಎಂದು.. ಕೇವಲವಾಗಿ ನೋಡುತ್ತಿದ್ದವರ ಕಣ್ಣುಗಳಲ್ಲಿಯೇ ಈಗ ಬೆರಗೊಂದು ಪ್ರಜ್ವಲಿಸಲು ಆರಂಭಿಸಿದೆ. ಗಡಿ ಸೀಮೆಯನ್ನೆಲ್ಲ ದಾಟಿಕೊಂಡು ಕನ್ನಡದ ಚಿತ್ರಗಳು ಸದ್ದು ಮಾಡುತ್ತಿವೆ. ಇದಕ್ಕೆ ಸದ್ಯದ ಉದಾಹರಣೆ ''ಕಾಂತಾರ- ಅಧ್ಯಾಯ 1''.

MYTHOLOGICAL ROAR Kantara Chapter 1 Swallows Idli Kadai Box Office Shatters Records

ಹೌದು, ಸದ್ಯ ... ಭಾರತದೆಲ್ಲೆಡೆ ಕನ್ನಡದ ಮಣ್ಣಿನ ಕಾಂತಾರದ ಅಲೆ ಎದ್ದಿದೆ. ಯಾರನ್ನೇ ಕೇಳಿ ಈ ಚಿತ್ರದ ಕುರಿತೇ ಎಲ್ಲರೂ ಮಾತನಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ ಪರಭಾಷೆಯ ಚಿತ್ರರಂಗದಲ್ಲಿ ಮತ್ತು ಅಲ್ಲಿನ ಸಾರ್ವತ್ರಿಕ ವಲಯದಲ್ಲಿ ಕೂಡ ''ಕಾಂತಾರ- ಚಾಪ್ಟರ್ 1'' ಕುರಿತು ಚರ್ಚೆ ನಡೆಯುತ್ತಿವೆ.

ಇನ್ನು ಬಾಕ್ಸಾಫೀಸ್ ಕಥೆ ಎಲ್ಲರಿಗೆ ಗೊತ್ತು. ಅಕ್ಷರಶಃ ಚಿನ್ನದ ಬೆಳೆಯನ್ನು ಈ ಚಿತ್ರ ಬೆಳೆಯುತ್ತಿದೆ. ಹತ್ತು ಹಲವು ದಾಖಲೆಗಳನ್ನು ಮುರಿಯುತ್ತಿದೆ. ಮುನ್ನುಗ್ಗುತ್ತಿದೆ. ಇಷ್ಟೇ ಅಲ್ಲ ದಸರಾ ಹಬ್ಬದ ಪ್ರಯುಕ್ತ ಬಿಡುಗಡೆಯಾದ ಬೇರೆ ಬೇರೆ ಚಿತ್ರಗಳನ್ನು ಕೂಡ ಈ ಚಿತ್ರ ಬಲಿ ಪಡೆದಿದೆ. ಆ ಪೈಕಿ ''ಇಡ್ಲಿ ಕಡೇ'' ಕೂಡ ಒಂದು.

MYTHOLOGICAL ROAR Kantara Chapter 1 Swallows Idli Kadai Box Office Shatters Records

ಹೌದು, ರಿಷಬ್ ಶೆಟ್ಟಿಯ ''ಕಾಂತಾರ-1'' ಎದುರು ಧನುಷ್ ರಣಕಹಳೆ ಊದಿದ್ದರು. ತಮ್ಮ ''ಇಡ್ಲಿ ಕಡೇ'' ಚಿತ್ರವನ್ನು ಒಂದು ದಿನದ ಮೊದಲು ಬಿಡುಗಡೆ ಮಾಡಿದ್ದರು. ಮೊದಲ ದಿನ ಎರಡಂಕಿಯ ಗಳಿಕೆಯನ್ನು ಕೂಡ ಈ ಚಿತ್ರ ಕಂಡಿತ್ತು. ''ಸ್ಯಾಕ್ನಿಲ್'' ಪ್ರಕಾರ 11 ಕೋಟಿ ಹಣವನ್ನು ಬಿಡುಗಡೆಯಾದ ದಿನ ''ಇಡ್ಲಿ ಕಡೇ'' ದೋಚಿತ್ತು. ಆದರೆ.. ಎರಡನೇ ದಿನ ಅಂದರೆ ''ಕಾಂತಾರ'' ಅಬ್ಬರ ಶುರು ಆದ ನಂತರ ಈ ಇಡ್ಲಿ ಕಡೇ ಗಳಿಕೆಯಲ್ಲಿ ಕುಸಿತ ಕಂಡು ಬಂದಿದೆ. ಸ್ಯಾಕ್ನಿಲ್ ವರದಿಯ ಪ್ರಕಾರ ಎರಡನೇ ದಿನ ಶೇಕಡಾ 11.36% ಗಳಿಕೆ ಕೆಳ ಬಿದ್ದರೆ ಮೂರನೇ ದಿನ ಗಳಿಕೆಯಲ್ಲಿ ಶೇಕಡಾ 43.59% ಕುಸಿತ ಕಂಡು ಬಂದಿದೆ.

ಸ್ಯಾಕ್ನಿಲ್ ಪ್ರಕಾರ ''ಇಡ್ಲಿ ಕಡೇ'' ಚಿತ್ರದ ನಾಲ್ಕು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ [ಬುಧವಾರ] ₹ 11 ಕೋಟಿ
ಎರಡನೇ ದಿನ [ಗುರುವಾರ] ₹ 9.75ಕೋಟಿ
ಮೂರನೇ ದಿನ[ಶುಕ್ರವಾರ] ₹ 5.5 ಕೋಟಿ
ನಾಲ್ಕನೇ ದಿನ [ಶನಿವಾರ ] ₹ 0.17 ಲಕ್ಷ ** ಅಂದಾಜು


ಒಟ್ಟು ಗಳಿಕೆ ₹ 26.42 ಕೋಟಿ

ಇನ್ನೂ ಧನುಷ್ ಕಾಲಿವುಡ್‌ನ ಮುಂಚೂಣಿಯಲ್ಲಿರುವ ಸೂಪರ್ ಸ್ಟಾರ್. ರಜಿನಿಕಾಂತ್ ಅವರ ಮಾಜಿ ಅಳಿಯ. ಇವರಿಗೆ ಇವರದ್ದೇ ಆದ ಅಭಿಮಾನಿಗಳಿದ್ದಾರೆ. ಆದರೂ ಕೂಡ ''ಇಡ್ಲಿ ಕಡೇ'' ಮೂರನೇ ದಿನ ಅಂದರೆ ಶುಕ್ರವಾರ ಸ್ಯಾಕ್ನಿಲ್ ವರದಿಯ ಪ್ರಕಾರ ₹ 5.5 ಕೋಟಿ ಹಣ ದೋಚಿದೆ. ಆ ಪೈಕಿ ತಮಿಳು ಅವತರಣಿಕೆ ಪಾಲು ₹ 5.1 ಕೋಟಿ ಇದೆ. ವಿಶೇಷ ಅಂದರೆ ''ಕಾಂತಾರ- ಚಾಪ್ಟರ್ 1'' ಚಿತ್ರದ ತಮಿಳು ಅವತರಣಿಕೆ ನಿನ್ನೆ (ಶುಕ್ರವಾರ- ಅಕ್ಟೋಬರ್ 3) ₹ 5.25 ಗಳಿಸಿದೆ. ಈ ಮೂಲಕ ತಮುಳುನಾಡಿನಲ್ಲಿಯೇ ''ಇಡ್ಲಿ ಕಡೇ'' ಚಿತ್ರವನ್ನು ''ಕಾಂತಾರ'' ಹಿಂದಿಕ್ಕಿದೆ.

ಸದ್ಯ ₹ 26.42 ಕೋಟಿ ಹಣವನ್ನು ''ಇಡ್ಲಿ ಕಡೇ'' ಗಳಿಸಿದೆ. ಇನ್ನು ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಈ ಹಿನ್ನೆಲೆ ಕಾಂತಾರದ ಅಬ್ಬರದ ನಡುವೆ ''ಇಡ್ಲಿ ಕಡೇ'' ಎಷ್ಟು ಗಳಿಸುತ್ತೆ, ₹50 ಕೋಟಿ ಗಡಿಯನ್ನಾದರು ಈ ಚಿತ್ರ ಪಾರು ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
The Rishab Shetty vs. Dhanush box office clash is over, and the winner is clear. Find out how 'Kantara: Chapter 1' delivered an opening nearly 8 times larger than 'Idli Kadai' and dominated the weekend.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X