ಬಾಲಿವುಡ್‌ನಲ್ಲಿ ಹೊಸ ದಾಖಲೆ ಬರೆದ ಧನುಷ್,ರಜಿನಿ ಮಾಜಿ ಅಳಿಯನ ಅಬ್ಬರ-ಬಾಕ್ಸಾಫೀಸ್‌ನಲ್ಲಿ ಹಣದ ಮಳೆ
ಶಾರುಖ್ ಖಾನ್ .. ಸಲ್ಮಾನ್ ಖಾನ್ .. ಆಮಿರ್ ಖಾನ್ .. ಅಜಯ್ ದೇವಗನ್ .. ಅಕ್ಷಯ್ ಕುಮಾರ್ .. ಹೀಗೆ ಬಾಲಿವುಡ್‌ನಲ್ಲಿ ಹಲವಾರು ಸೂಪರ್ ಸ್ಟಾರ್‌ಗಳಿದ್ದಾರೆ. ಕಾರ್ತಿಕ್ ಆರ್ಯನ್.. ವಿಕ್ಕಿ ಕೌಶಲ್.. ವರುಣ್ ಧವನ್.. ರಣ್ವೀರ್ ಸಿಂಗ್.. ರಣ್‌ಬೀರ್ ಕಪೂರ್.. ಅವರಂತಹ ಹೊಸ ಯುಗದ ತಾರೆಯರಿದ್ದಾರೆ. ಆದರೂ ಕೂಡ.. ಬಾಲಿವುಡ್‌ಗೆ ಬರ್ಕತ್ ಆಗ್ತಿಲ್ಲ.
ವರ್ಷದಿಂದ ವರ್ಷಕ್ಕೆ ಲಾಭದ ಲೆಕ್ಕ ಹೆಚ್ತಿಲ್ಲ. ಬದಲಿಗೆ ವರ್ಷ ಉರುಳಿದಂತೆ ಬಾಲಿವುಡ್ ಅಧಪತನದತ್ತ ಸಾಗುತ್ತಿದೆ. ದಕ್ಷಿಣದ ಸ್ಟಾರ್‌ಗಳ ಅಬ್ಬರದ ಎದುರು ಮಂಕಾಗುತ್ತಿದೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಇದು ಪ್ಯಾನ್ ಇಂಡಿಯಾ ಕಾಲ. ಈ ಕಾಲದಲ್ಲಿಉತ್ತರ ಭಾರತದ ಚಿತ್ರ ರಸಿಕರು ಸೌತ್ ಸೂಪರ್ ಸ್ಟಾರ್‌ಗಳ ಅಭಿನಯಕ್ಕೆ ಮನ ಸೋಲುತ್ತಿದ್ದಾರೆ. ಅಭಿಮಾನಿಗಳಾಗುತ್ತಿದ್ದಾರೆ. ಹಿಂದಿ ಚಿತ್ರಗಳಿಗಿಂತ ಹೆಚ್ಚೆಚ್ಚು ಸೌತ್ ಚಿತ್ರಗಳನ್ನು ನೋಡುವುದನ್ನು ರೂಢಿ ಮಾಡಿಕೊಳ್ಳುತ್ತಿದ್ದಾರೆ.

ಒಂದರ್ಥದಲ್ಲಿ ಬದಲಾದ ಈ ಕಾಲದಲ್ಲಿ ಬಾಲಿವುಡ್‌ನ ಸ್ಟಾರ್‌ಗಳು ಆಯ್ಕೆ ಮಾಡಿಕೊಳ್ಳುವ ಕಥೆಯ ಮೇಲೆ ಇವರಿಗೆ ನಂಬಿಕೆ ಕಡಿಮೆಯಾಗುತ್ತಿದೆ. ದಕ್ಷಿಣದ ತಾರೆಯರು ಆಯ್ಕೆ ಮಾಡಿಕೊಳ್ಳುವ ಕಥೆಯ ಮೇಲೆ ಒಲವು ಹೆಚ್ಚಾಗುತ್ತಿದೆ. ಇದಕ್ಕೆ ಧನುಷ್ ಅಭಿನಯದ ''ತೇರೆ ಇಷ್ಕ್ ಮೇ'' ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಮತ್ತು ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಇಲ್ಲಿಯವರೆಗೆ ಮಾಡಿದ ಗಳಿಕೆಯೇ ಸದ್ಯದ ಉದಾಹರಣೆ.
ನಿಜಾ.. ''ತೇರೆ ಇಷ್ಕ್ ಮೇ'' ಚಿತ್ರದ ಹಿಂದೆ ಇರುವ ತಂತ್ರಜ್ಞರೆಲ್ಲರು ಹಿಂದಿಯವರೇ. ಆದರೆ.. ಕಥೆ ಮತ್ತು ಎ ಆರ್ ರೆಹಮಾನ್ ಸಂಗೀತ ಹೊರತು ಪಡಿಸಿದರೆ ಈ ಚಿತ್ರದ ಆಕರ್ಷಣೆಯೇ ಧನುಷ್. ಖುದ್ದು ಹಿಂದಿ ಚಿತ್ರಪ್ರೇಮಿಗಳೇ ಈ ಮಾತನ್ನು ಹೇಳಿದ್ದಾರೆ. ಧನುಷ್ ಅಭಿನಯಕ್ಕೆ ಮನ ಸೋತಿದ್ದಾರೆ. ಇಲ್ಲದಿದ್ದರೆ ''ತೇರೆ ಇಷ್ಕ್ ಮೇ'' ಚಿತ್ರದ ಮೂಲಕ ಬಾಲಿವುಡ್ ನೆಲದಲ್ಲಿ ಧನುಷ್ ಹೊಸದೊಂದು ಸಾಧನೆ ಮಾಡಲು ಖಂಡಿತ ಸಾಧ್ಯವಾಗುತ್ತಿರಲಿಲ್ಲ.
ಹೌದು, ಕಳೆದ ನವೆಂಬರ್ 28ರಂದು ತೆರೆಗೆ ಬಂದ ''ತೇರೆ ಇಷ್ಕ್ ಮೇ'' ಚಿತ್ರ ಈ 09 ದಿನದಲ್ಲಿ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ಪ್ರಕಾರ ₹ 90.79 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಈ ಮೂಲಕ ಧನುಷ್ ಅಭಿನಯದ್ದೇ ಹಿಂದಿನ ಚಿತ್ರ ''ರಾಂಝಾನ'' ಚಿತ್ರದ ದಾಖಲೆಯನ್ನು ಮುರಿದಿದೆ. ನಿಮಗೆ ಗೊತ್ತಿರಲಿ ಹನ್ನೆರಡು ವರ್ಷಗಳ ಹಿಂದೆ ಅಂದರೆ 2013ರಲ್ಲಿ ''ರಾಂಝಾನ'' ತೆರೆಗೆ ಬಂದಿತ್ತು. ಸದ್ಯ ''ತೇರೆ ಇಷ್ಕ್ ಮೇ'' ಚಿತ್ರವನ್ನು ನಿರ್ದೇಶನ ಮಾಡಿರುವ ಆನಂದ್ ಎಲ್ ರೈ ಅವರೇ ಈ ಚಿತ್ರವನ್ನು ಕೂಡ ನಿರ್ದೇಶನ ಮಾಡಿದ್ದರು. ಧನುಷ್‌ಗೆ ನಾಯಕಿಯಾಗಿ ಸೋನಂ ಕಪೂರ್ ಅಭಿನಯಿಸಿದ್ದರು.

ಅಂದು ಎಲ್ಲರನ್ನೂ ತನ್ನತ್ತ ಆಯಸ್ಕಾಂತದಂತೆ ಸೆಳೆದಿದ್ದ ಈ ಚಿತ್ರ ಹೆಚ್ಚು ಕಡಿಮೆ 08 ವಾರ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ''ಸ್ಯಾಕ್ನಿಲ್'' ವರದಿಯ ಪ್ರಕಾರ ಕೇವಲ ಭಾರತದಲ್ಲಿಯೇ ₹ 81.30 ಕೋಟಿಯನ್ನು ಗಳಿಸಿತ್ತು. ಈ ಗಳಿಕೆಯನ್ನು ಕೇವಲ 09 ದಿನದಲ್ಲಿ ''ತೇರೆ ಇಷ್ಕ್ ಮೇ'' ಚಿತ್ರ ಹಿಂದಿಕ್ಕಿದೆ. 09 ದಿನದಲ್ಲಿ ₹ 90.79 ಕೋಟಿಯನ್ನು ಗಳಿಸಿದೆ. ಈ ಮೂಲಕ ಹಿಂದಿಯಲ್ಲಿ ಧನುಷ್ ಅಭಿನಯದ ಅತೀ ಹೆಚ್ಚು ಹಣ ಗಳಿಸಿದ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಧನುಷ್ ಹೆಸರಿನಲ್ಲಿ ಹೊಸದೊಂದು ದಾಖಲೆ ಕೂಡ ಬಾಲಿವುಡ್‌ನಲ್ಲಿ ಸದ್ಯ ನಿರ್ಮಾಣವಾಗಿದೆ.
ಸದ್ಯ ''ತೇರೆ ಇಷ್ಕ್ ಮೇ'' ಚಿತ್ರಕ್ಕೆ ಬಾಕ್ಸಾಫೀಸ್‌ನಲ್ಲಿ ರಣ್ವೀರ್ ಸಿಂಗ್ ಅಭಿನಯದ ''ಧುರಂಧರ್'' ಅಡ್ಡಗಾಲು ಹಾಕ್ತಿದೆ. ಈ ಪೈಪೋಟಿಯ ನಡುವೆ ''ತೇರೆ ಇಷ್ಕ್ ಮೇ'' ನೂರು ಕೋಟಿಯ ಗಡಿಯನ್ನು ದಾಟುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











