Mastiii 4 Box Office Day 2 ; ಬಾಲಿವುಡ್‌ಗೆ ಗಾಯದ ಮೇಲೆ ಮತ್ತೊಂದು ಬರೆ, ಎರಡೇ ದಿನ-ಮಕಾಡೆ ಮಲಗಿದ 'ಮಸ್ತಿ-4'

ಒಂದು ಚಿತ್ರ ಗೆಲ್ಲಬೇಕು ಅಂದರೆ ಅದರಲ್ಲಿ ಹತ್ತಾರು ಅಂಶಗಳಿರಬೇಕು. ಚೆಂದದ ಕಥೆ ಅದಕ್ಕೆ ಪೂರಕವಾದ ಚಿತ್ರಕಥೆ, ಸಂಭಾಷಣೆ, ಸಂಗೀತ, ತಂತ್ರಜ್ಞರ ಕೈ ಚಳಕ ಎಲ್ಲವೂ ಒಂದಕ್ಕೊಂದು ಕೂಡಿ ಬರಬೇಕು. ಅದಿಲ್ಲದೇ ಕೇವಲ ಸ್ಟಾರ್ ವ್ಯಾಲ್ಯೂ ಮಾತ್ರ ಸಾಕು ಚಿತ್ರ ಗೆಲ್ಲುತ್ತೆ ಎನ್ನುವ ಭ್ರಮೆಯಲ್ಲಿ ಇರುವ ಬರುವ ಸೂಪರ್ ಸ್ಟಾರ್‌ಗಳನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ಆ ಚಿತ್ರವನ್ನು..

ಪ್ರೇಕ್ಷಕರು ಕಣ್ಣೆತ್ತಿ ಕೂಡ ನೋಡಲಾರರು. ಇದಕ್ಕೆ ''ಮಸ್ತಿ 4'' ಸದ್ಯದ ಉದಾಹರಣೆ. ಹೌದು, ''ಮಸ್ತಿ 4''.. ಬಸವಳಿದ ಬಾಲಿವುಡ್‌ಗೆ ಹೊಸ ಚೈತನ್ಯ ತುಂಬಬೇಕಿದ್ದ ಸಿನಿಮಾ. ಆದರೆ.. ಅತಿಯಾದ ನಂಬಿಕೆ.. ಹಳಸಲು ಹಾಸ್ಯ.. ಪ್ರೇಕ್ಷಕರು ಎಂತಹ ಸಿನಿಮಾ ಮಾಡಿದರು ನೋಡುತ್ತಾರೆ ಎನ್ನುವ ಉಡಾಫೆ.. ''ಮಸ್ತಿ 4'' ಚಿತ್ರವನ್ನು ಸದ್ಯ ಪ್ರಪಾತಕ್ಕೆ ನೂಕಿದೆ. ಈ ಮೂಲಕ ಸತತ ಸೋಲುಗಳಿಂದ ಕಂಗಾಲಾದ ಬಾಲಿವುಡ್‌ ಮತ್ತೊಂದು ಆಘಾತವಾಗಿದೆ.

NO GROWTH NO LAUGHS Mastiii 4 Box Office Plummets to Dismal 5 Cr in 2 Days

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಮೊದಲ ದಿನ ಕೇವಲ ₹ 2.75 ಕೋಟಿಯನ್ನು ಗಳಿಸಿದ್ದ ಈ ಚಿತ್ರದ ಎರಡನೇ ದಿನದ ಗಳಿಕೆಯಲ್ಲಿ ಏರಿಕೆಯೂ ಆಗಿಲ್ಲ. ಗಳಿಕೆಯಲ್ಲಿ ಕುಸಿತ ಕೂಡ ಕಂಡು ಬಂದಿಲ್ಲ. ಬದಲಿಗೆ ಎರಡನೇ ದಿನವೂ ಕೂಡ ₹ 2.75 ಕೋಟಿಯನ್ನಷ್ಟೇ ಚಿತ್ರ ಗಳಿಸಿದೆ. ಎರಡು ದಿನದಲ್ಲಿ ಚಿತ್ರದ ಗಳಿಕೆಯ ಲೆಕ್ಕ ₹5.5 ಕೋಟಿಯಾಗಿದೆ

ಇನ್ನು ಇಂದು ಭಾನುವಾರ. ಸಾಮಾನ್ಯವಾಗಿ ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡು ಬರುತ್ತೆ. ಆದರೆ.. ''ಮಸ್ತಿ 4'' ವಿಚಾರದಲ್ಲಿ ಪ್ರೇಕ್ಷಕರಲ್ಲಿ ಉತ್ಸಾಹವೇ ಕಂಡು ಬರುತ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಅಲ್ಲೊಂದು.. ಇಲ್ಲೊಂದು.. ಪ್ರದರ್ಶನಗಳನ್ನು ಹೊರತು ಪಡಿಸಿದರೆ ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳು ಪ್ರೇಕ್ಷಕರಿಲ್ಲದೆ ಬಣಗುಡುತ್ತಿವೆ. ಕೇವಲ ಬೆಂಗಳೂರು ಮಾತ್ರ ಅಲ್ಲ ಮುಂಬೈ.. ಹೈದರಾಬಾದ್.. ಚೆನ್ನೈ.. ಜೈಪುರ್.. ದೆಹಲಿ.. ಕೋಲ್ಕತ್ತಾ... ಹೀಗೆ ದೇಶದ ಅನೇಕ ಕಡೆ ''ಮಸ್ತಿ 4'' ಚಿತ್ರಕ್ಕೆ ಯಾರು ಕ್ಯಾರೆ ಎನ್ನುತ್ತಿಲ್ಲ.

NO GROWTH NO LAUGHS Mastiii 4 Box Office Plummets to Dismal 5 Cr in 2 Days

ಅಂದ್ಹಾಗೇ 2004ರಲ್ಲಿ ''ಮಸ್ತಿ'' ಶುರುವಾಗಿತ್ತು. ಆ ನಂತರ 2013ರಲ್ಲಿ ಈ ಚಿತ್ರ ಎರಡನೇ ಭಾಗ ''ಗ್ರ್ಯಾಂಡ್ ಮಸ್ತಿ'' ತೆರೆಗೆ ಬಂದಿತ್ತು. ಮೂರನೇ ಭಾಗ ''ದಿ ಗ್ರೇಟ್ ಗ್ರ್ಯಾಂಡ್ ಮಸ್ತಿ'' 2016ರಲ್ಲಿ ಬಿಡುಗಡೆಯಾಗಿತ್ತು. ಇದೀಗ ಮತ್ತೆ ''ಮಸ್ತಿ 4'' ಬಂದಿದೆ. ಒಂಬತ್ತು ವರ್ಷದ ನಂತರ ನಾಲ್ಕನೇ ಭಾಗ ಬಂದ ಹಿನ್ನೆಲೆ ಚಿತ್ರದ ಮೇಲೆ ನಿರೀಕ್ಷೆಗಳಿದ್ದವು. ಆದರೆ ಎಲ್ಲಾ ನಿರೀಕ್ಷೆ ಸದ್ಯ ಹುಸಿಯಾಗಿದೆ. ಹಿಂದಿನ ಮೂರು ''ಮಸ್ತಿ''ಯ ಗಳಿಕೆಯನ್ನು ಕೂಡ ಈ ''ಮಸ್ತಿ'' ಹಿಂದಿಕ್ಕುವುದು ಅನುಮಾನ ಎಂಬತಹ ವಾತಾವರಣ ಇದೆ.

ಭಾರತದಲ್ಲಿ ''ಮಸ್ತಿ'' ಫ್ರಾಂಚೈಸಿಯ ಹಿಂದಿನ ಚಿತ್ರಗಳ ಗಳಿಕೆ ಈ ಕೆಳಗಿನಂತೆ ಇದೆ.

ಮಸ್ತಿ - 2004 - ₹ 20.26 ಕೋಟಿ
ಗ್ರ್ಯಾಂಡ್ ಮಸ್ತಿ - 2013- ₹ 102.21 ಕೋಟಿ
ದಿ ಗ್ರೇಟ್ ಗ್ರ್ಯಾಂಡ್ ಮಸ್ತಿ-2016- ₹ 13.72 ಕೋಟಿ
ಮಸ್ತಿ 4 * - 2025 - ₹5.5 ಕೋಟಿ ( ಎರಡು ದಿನದ ಗಳಿಕೆ )

ಒಟ್ನಲ್ಲಿ ಸದ್ಯ ''ಮಸ್ತಿ 4'' ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದೆ. ನಾಳೆ ವಾರದ ದಿನ ಶುರುವಾಗುವ ಹಿನ್ನೆಲೆ ಚಿತ್ರದ ಗಳಿಕೆಯಲ್ಲಿ ಭಾರೀ ಕುಸಿತ ಕಂಡು ಬರುವ ಸಾಧ್ಯತೆ ಇದೆ. ಡಿಸೆಂಬರ್‌ ಮೊದಲ ವಾರದಿಂದ ದೊಡ್ಡ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಹಿನ್ನೆಲೆ ಉಳಿದ ದಿನಗಳಲ್ಲಿ ''ಮಸ್ತಿ 4'' ಎಷ್ಟು ಹಣ ಗಳಿಸುತ್ತೆ..? ನಿರ್ಮಾಪಕರಿಗೆ ಎಷ್ಟು ನಷ್ಟವಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
A shocking failure. Mastiii 4 collections stall completely on Day 2, confirming a poor opening weekend. Full box office analysis here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X