O Romeo Box Office Day 5 ; ಮಿಶ್ರ ಪ್ರತಿಕ್ರಿಯೆ ಸಿಕ್ಕರೂ, ರೋಮಿಯೋ ಜಾದೂ - ರಾಣಿ ಮುಖರ್ಜಿಗೆ ತಲೆ ನೋವಾದ ಶಾಹಿದ್ ಕಪೂರ್
ಹಿಂದಿ ಚಿತ್ರರಂಗದಲ್ಲಿರುವ ಕೆಲವೇ ಕೆಲ ಪ್ರತಿಭಾವಂತರಲ್ಲಿ ಶಾಹಿದ್ ಕಪೂರ್ ಕೂಡ ಒಬ್ಬರು. ಅದರಲ್ಲಿ ಯಾವ ದೂಸ್ರಾ ಮಾತಿಲ್ಲ. ಕಾಲ, ಕಾಲಕ್ಕೆ ಶಾಹಿದ್ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ತಮ್ಮ ಅಭಿನಯದಿಂದ ಹಲವರನ್ನು ಅವಕ್ಕಾಗಿಸಿದ್ದಾರೆ. ಆದರೆ, ಅದ್ಯಾಕೋ ಶಾಹಿದ್ ಕಪೂರ್ ಗೆ ಅದೃಷ್ಟದ ಬೆಂಬಲ ಸಿಕ್ತಿಲ್ಲ.
ಇದಕ್ಕೆ ಕೈಗನ್ನಡಿ ಎಂಬಂತೆ ಕೊರೊನಾ ಎಂಬ ಪೀಡೆ ವಕ್ಕರಿಸಿಕೊಳ್ಳುವ ಮುನ್ನ ಬಂದ ''ಕಬೀರ್ ಸಿಂಗ್'' ಚಿತ್ರವೇ ಕೊನೆ. ಆ ನಂತರ ಬಂದ ಇವರ ಯಾವ ಚಿತ್ರ ಕೂಡ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ 2019ರಲ್ಲಿ ತೆರೆಗೆ ಬಂದ ''ಕಬೀರ್ ಸಿಂಗ್'' ಭಾರತದಲ್ಲಿ ₹278.80 ಕೋಟಿಯನ್ನು ದೋಚಿದ್ದರೆ, 2024ರಲ್ಲಿ ಬಂದ ''ತೇರಿ ಬಾತೋ ಮೇ ಉಲ್ಜಾ ಜಿಯಾ'' ಚಿತ್ರ ₹85.16 ಕೋಟಿಯನ್ನು ಗಳಿಸಿತ್ತು.

ಇನ್ನೂ ಇವರಡು ಚಿತ್ರಗಳನ್ನು ಹೊರತು ಪಡಿಸಿದರೆ ''ಜೆರ್ಸಿ'' ಮತ್ತು ''ದೇವಾ'' ಕಥೆ ಬಾಕ್ಸಾಫೀಸ್‌ನಲ್ಲಿ ಶೋಚನಿಯವಾಗಿತ್ತು. 2022ರಲ್ಲಿ ಬಂದ ''ಜೆರ್ಸಿ'' ಕೇವಲ ₹20.85 ಕೋಟಿಯನ್ನು ಮಾತ್ರ ಗಳಿಸಿದ್ದರೆ, ಕಳೆದ ವರ್ಷ ಬಂದ ''ದೇವಾ'' ಗಳಿಸಿದ್ದು ಕೇವಲ ₹32.07 ಕೋಟಿ ಮಾತ್ರ.
ಈ ಹಿನ್ನೆಲೆ ''ಓ ರೋಮಿಯೋ'' ಚಿತ್ರದ ಮೇಲೆ ಹಲವರ ಕಣ್ಣಿತ್ತು. ವಿಶಾಲ್ ಭಾರದ್ವಾಜ್ ಮತ್ತು ಶಾಹಿದ್ ಕಪೂರ್ ಮಾಡಿರುವ ನಾಲ್ಕನೇ ಚಿತ್ರ ಇದಾದ ಹಿನ್ನೆಲೆ ನಿರೀಕ್ಷೆ ಕೂಡ ಇತ್ತು. ಆದರೆ, ಈ ನಿರೀಕ್ಷೆಯ ಮಟ್ಟವನ್ನು ಈ ಜೋಡಿ ತಲುಪುವಲ್ಲಿ ವಿಫಲವಾಯ್ತು. ಕೆಲವರಿಗೆ ಚಿತ್ರ ಇಷ್ಟವಾದರೆ, ಇನ್ನೂ ಹಲವರು ಚಿತ್ರ ಅಷ್ಟಕಷ್ಟೇ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಆದರೂ ಕೂಡ ಬಾಕ್ಸಾಫೀಸ್‌ನಲ್ಲಿ ''ಓ ರೋಮಿಯೋ'' ಸದ್ದು ಮಾಡುತ್ತಿದೆ. ವಾರದ ದಿನಗಳಲ್ಲಿ ಕೂಡ ಉತ್ತಮವಾದ ಗಳಿಕೆಯನ್ನು ಮಾಡುತ್ತಿದೆ. ಇದು, ಹಲವರ ಪಾಲಿಗೆ ಅಚ್ಚರಿ. ಇನ್ನೂ ಕೆಲವರ ಪಾಲಿಗೆ ವಿಶೇಷ.
ಹೌದು, ಬಾಕ್ಸಾಫೀಸ್‌ನ ಲೆಕ್ಕಾಚಾರ ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಓ ರೋಮಿಯೋ ನಿನ್ನೆ (ಫೆಬ್ರವರಿ 17 ) ಕೇವಲ ಭಾರತದಲ್ಲಿ ₹5.35 ಕೋಟಿಯನ್ನು ಗಳಿಸಿದೆ. ವಿಶೇಷ ಅಂದರೆ ಸೋಮವಾರ ಅಂದರೆ ನಾಲ್ಕನೇ ದಿನ ( ಫೆಬ್ರವರಿ 16 ) ಈ ಚಿತ್ರ ₹ 4.85 ಕೋಟಿಯನ್ನು ಗಳಿಸಿತ್ತು. ವಾರದ ದಿನಗಳಲ್ಲಿ ಚಿತ್ರದ ಗಳಿಕೆ ಸೋಮವಾರಕ್ಕಿಂತ ಮಂಗಳವಾರ ಹೆಚ್ಚಾದ ಹಿನ್ನೆಲೆ ಸದ್ಯ ಹಲವರ ಹುಬ್ಬೇರಿದೆ.

ಸ್ಯಾಕ್ನಿಲ್ ಪ್ರಕಾರ ಓ ರೋಮಿಯೋ ಚಿತ್ರದ 5 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ [ ಶುಕ್ರವಾರ ] ₹8.5 ಕೋಟಿ
ಎರಡನೇ ದಿನ [ ಶನಿವಾರ ] ₹12.65 ಕೋಟಿ
ಮೂರನೇ ದಿನ [ಭಾನುವಾರ]₹9 ಕೋಟಿ
ನಾಲ್ಕನೇ ದಿನ [ಸೋಮವಾರ]₹4.85 ಕೋಟಿ
ಐದನೇ ದಿನ [ಮಂಗಳವಾರ] ₹5.35 ಕೋಟಿ
ಒಟ್ಟು ಗಳಿಕೆ ₹ 40.35 ಕೋಟಿ
ಇನ್ನು ಚಿತ್ರತಂಡ ಕೂಡ ಚಿತ್ರದ ಗಳಿಕೆಯ ವಿವರವನ್ನು ಹಂಚಿಕೊಂಡಿದೆ.ಆ ಪ್ರಕಾರ ''ಸ್ಯಾಕ್ನಿಲ್'' ಉಲ್ಲೇಖ ಮಾಡಿರುವದಕ್ಕಿಂತ ಹೆಚ್ಚಿನ ಹಣವನ್ನು ''ಓ ರೋಮಿಯೋ'' ಚಿತ್ರ 5 ದಿನದಲ್ಲಿ ಗಳಿಸಿದ್ದು, ಚಿತ್ರತಂಡದ ಲೆಕ್ಕಾಚಾರದ ಪ್ರಕಾರ ಚಿತ್ರ ಸದ್ಯ ₹45.51 ಕೋಟಿ ಹಣವನ್ನು ಭಾರತದಲ್ಲಿ ದೋಚಿದೆ.
ರಾಣಿ ಮುಖರ್ಜಿಗೆ ತಲೆ ನೋವಾದ ಶಾಹಿದ್ ಕಪೂರ್
'' ಓ ರೋಮಿಯೋ'' ತೆರೆಗೆ ಬರುವ ಮುನ್ನ ರಾಣಿ ಮುಖರ್ಜಿ ಅಭಿನಯದ ಮಹಿಳಾ ಪ್ರಧಾನ ಚಿತ್ರ ''ಮರ್ದಾನಿ 3'' ತೆರೆಗೆ ಬಂದಿತ್ತು. ಆರಂಭದ ಎರಡು ವಾರ ಚಿತ್ರದ ಗಳಿಕೆ ಕೂಡ ಚೆನ್ನಾಗಿತ್ತು. ಆದರೆ, ''ಓ ರೋಮಿಯೋ'' ಬಿಡುಗಡೆಯಾದ ನಂತರ ''ಮರ್ದಾನಿ 3'' ಗಳಿಕೆಯಲ್ಲಿ ಕುಸಿತ ಕಂಡು ಬರುತ್ತಿದೆ. ಹಲವಡೆ ಈಗಾಗಲೇ ಈ ಚಿತ್ರವನ್ನು ಎತ್ತಂಗಡಿ ಕೂಡ ಮಾಡಲಾಗಿದೆ. ಕೆಲ ಚಿತ್ರಮಂದಿರಗಳಲ್ಲಿ ''ಮರ್ದಾನಿ 3'' ಇದ್ದು ಸದ್ಯ ಈ ಚಿತ್ರ 19 ದಿನಗಳಲ್ಲಿ ₹ 44.75 ಕೋಟಿ ಗಳಿಸಿದೆ ಎಂದು ''ಸ್ಯಾಕ್ನಿಲ್'' ವರದಿ ಮಾಡಿದೆ. ಈ ಹಿನ್ನೆಲೆ ಬಾಕ್ಸಾಫೀಸ್‌ನ ಈ ಸಮರದಲ್ಲಿ ''ಮರ್ದಾನಿ 3'' ಚಿತ್ರವನ್ನು ''ಓ ರೋಮಿಯೋ'' ಹಿಂದಿಕ್ಕುವುದು ಬಹುತೇಕ ಖಚಿತವಾಗಿದ್ದು, ಅಂತಿಮವಾಗಿ ''ಓ ರೋಮಿಯೋ'' ಎಷ್ಟು ಹಣ ಗಳಿಸುತ್ತೆ..? ಚಿತ್ರ ಹಿಟ್ ಲಿಸ್ಟ್‌ಗೆ ಸೇರುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











