O Romeo Box Office Day 15 ; ಶಾಹಿದ್ ಕಪೂರ್ ಕೈ ಹಿಡಿದ್ನಾ ರೋಮಿಯೋ ? 15 ದಿನದಲ್ಲಿ ಗಳಿಸಿದೆಷ್ಟು ?
''ಸೂಪರ್ ಸ್ಟಾರ್'' ಎಂಬ ಭ್ರಮೆಯಲ್ಲಿ ಮೆರೆದಾಡುತ್ತಿರುವವರನ್ನು ಪ್ರೇಕ್ಷಕರು ಮೂಲೆಗುಂಪು ಮಾಡುತ್ತಿರುವ ಕಾಲ ಇದು. ಈ ಕಾಲದಲ್ಲಿ.. ಚಿತ್ರಕ್ಕೆ ಯಾರು ಎಷ್ಟೇ ಬೆವರು ಸುರಿಸಿರಲಿ.. ಆ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಚಿತ್ರದಲ್ಲಿನ ತಾರೆಯರು ತಮ್ಮ ರಕ್ತವನ್ನೇ ಹರಿಸಿರಲಿ.. ಪ್ರೇಕ್ಷಕರು ಅದ್ಯಾವುದನ್ನು ನೋಡುವುದಿಲ್ಲ. ಚಿತ್ರದ ಕಥೆ ಅವರಿಗೆ ಆಪ್ತವಾದರೆ ಸಾಕು. ಆ ಚಿತ್ರವನ್ನಷ್ಟೇ ಅವರು ಹೊತ್ತು ಮೆರೆಸುತ್ತಾರೆ. ಗೆಲ್ಲಿಸುತ್ತಾರೆ. ಉದಾಹರಣೆಗೆ ''ಧುರಂಧರ್''.
ಹಾಗಂಥ ಎಲ್ಲವೂ ''ಧುರಂಧರ್'' ಆಗಲ್ಲ. ಎಲ್ಲ ಚಿತ್ರಗಳನ್ನು ಪ್ರೇಕ್ಷಕರು ಒಪ್ಪಲ್ಲ. ಕೆಲ ಚಿತ್ರಗಳನ್ನು ಪ್ರೇಕ್ಷಕರು ನಡು ನೀರಿನಲ್ಲಿ ಕೈ ಬಿಡುತ್ತಾರೆ. ಆಗಲೇ ಹೇಳಿದಂತೆ ಶ್ರಮಕ್ಕೆ ಮಾತ್ರ ಇಲ್ಲಿ ಪ್ರತಿಫಲ. ಗೆಲುವು-ಸೋಲು ಎಂಬ ಈ ಎರಡು ಸಾಲಿನಲ್ಲಿ ಶಾಹಿದ್ ಕಪೂರ್ ಅಭಿನಯದ ''ಓ ರೋಮಿಯೋ'' ಯಾವ ಸಾಲಿನಲ್ಲಿ ನಿಲ್ಲುತ್ತೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ "ಓ ರೋಮಿಯೋ'' ಗೆಲುವಿನತ್ತ ಮುನ್ನುಗ್ಗುತ್ತಿದೆ. ಬಾಕ್ಸಾಫೀಸ್‌ನ ಅಂಕಿ-ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ 15 ದಿನದಲ್ಲಿ ₹ 62.23 ಕೋಟಿಯನ್ನು ದೋಚಿದೆ.

ಸ್ಯಾಕ್ನಿಲ್ ಪ್ರಕಾರ ''ಓ ರೋಮಿಯೋ'' ಚಿತ್ರದ 15 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ದಿನ ಗಳಿಕೆ
ಮೊದಲ ದಿನ [ಶುಕ್ರವಾರ] ₹ 8.5 ಕೋಟಿ
ಎರಡನೇ ದಿನ [ಶನಿವಾರ ] ₹ 12.65 ಕೋಟಿ
ಮೂರನೇ ದಿನ [ಭಾನುವಾರ] ₹ 9 ಕೋಟಿ
ನಾಲ್ಕನೇ ದಿನ [ಸೋಮವಾರ ] ₹ 4.85 ಕೋಟಿ
ಐದನೇ ದಿನ [ಮಂಗಳವಾರ] ₹ 5.35 ಕೋಟಿ
ಆರನೇ ದಿನ [ಬುಧವಾರ] ₹ 3.65 ಕೋಟಿ
ಏಳನೇ ದಿನ [ಗುರುವಾರ] ₹ 3.1 ಕೋಟಿ
ಮೊದಲ ವಾರದ ಒಟ್ಟು ಗಳಿಕೆ - ₹ 47.1 ಕೋಟಿ
ಎಂಟನೇ ದಿನ [ಶುಕ್ರವಾರ] ₹2.15 ಕೋಟಿ
ಒಂಬತ್ತನೇ ದಿನ [ಶನಿವಾರ] ₹ 3.4 ಕೋಟಿ
ಹತ್ತನೇ ದಿನ [ಭಾನುವಾರ] ₹ 3.15 ಕೋಟಿ
ಹನ್ನೊಂದನೇ ದಿನ [ಸೋಮವಾರ] ₹ 1.6 ಕೋಟಿ
ಹನ್ನೆರಡನೇ ದಿನ [ಮಂಗಳವಾರ] ₹ 1.65 ಕೋಟಿ
ಹದಿಮೂರನೇ ದಿನ [ಬುಧವಾರ] ₹ 1.25 ಕೋಟಿ
ಹದಿನಾಲ್ಕನೇ ದಿನ [ಗುರುವಾರ] ₹ 1.25 ಕೋಟಿ
ಎರಡನೇ ವಾರದ ಒಟ್ಟು ಗಳಿಕೆ - ₹ 14.45 ಕೋಟಿ
ಹದಿನೈದನೇ ದಿನ [ಶುಕ್ರವಾರ] ₹ 0.68 ಲಕ್ಷ
ಒಟ್ಟು ಮೊತ್ತ (Total) - ₹ 62.23 ಕೋಟಿ

ಹೀಗೆ ಭಾರತದಲ್ಲಿ ಸದ್ಯ 15 ದಿನದಲ್ಲಿ ''ಓ ರೋಮಿಯೋ'' ₹ 62.23 ಕೋಟಿಯನ್ನು ಗಳಿಸಿದೆ. ಆದರೆ ಚಿತ್ರದ ನಿರ್ಮಾಪಕ ಸಾಜಿದ್ ನಾಡಿಯಾವಾಲಾ ಹೇಳುವುದೇ ಬೇರೆ. ಆ ಪ್ರಕಾರ ನಾಲ್ಕು ದಿನಗಳ ಹಿಂದೆಯೇ ಅಂದರೆ (ಫೆಬ್ರವರಿ 24) ಓ ರೋಮಿಯೋ ಭಾರತದಲ್ಲಿ 76 ಕೋಟಿಯ ಗಡಿಯನ್ನು ದಾಟಿದೆ.ಇನ್ನೂ ವಿಶ್ವದೆಲ್ಲೆಡೆಯ ಗಳಿಕೆಯನ್ನು ಕೂಡಿಸಿದರೆ ಚಿತ್ರದ ಗಳಿಕೆ 100 ಕೋಟಿಯ ಗಡಿಯನ್ನು ಕೂಡ ದಾಟಿದೆ.
ಒಟ್ನಲ್ಲಿ ಸದ್ಯ ''ಓ ರೋಮಿಯೋ'' ಬಾಕ್ಸಾಫೀಸ್‌ನಲ್ಲಿ ಎರಡು ವಾರ ಪೂರೈಸಿದ್ದು ''ಸ್ಯಾಕ್ನಿಲ್'' ಪ್ರಕಾರ ₹ 62.23 ಕೋಟಿಯನ್ನು ಗಳಿಸಿದೆ. ಚಿತ್ರದ ಮೇಲೆ ಹಿಟ್ ಎಂಬ ಮುದ್ರೆ ಬೀಳಲು ಇನ್ನೂ 15-20 ಕೋಟಿಯ ಅವಶ್ಯಕತೆ ಇದೆ ಎನ್ನುವ ಮಾತು ಟ್ರೇಡ್ ವಿಶ್ಲೇಷಕ ವಲಯದಲ್ಲಿ ಕೇಳಿ ಬರುತ್ತಿದೆ. ಮಾರ್ಚ್ 19ರವರೆಗೆ ಮೈದಾನ ಖಾಲಿ ಇದೆಯಾದರೂ ಅಲ್ಲಿಯವರೆಗೆ ಓ ರೋಮಿಯೋ ಚಿತ್ರಮಂದಿರದಲ್ಲಿ ಉಳಿಯುತ್ತಾ..? ಗೆಲುವಿನ ದಡ ತಲುಪುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











