ಪವನ್ ಕಲ್ಯಾಣ್ ಅಬ್ಬರ, ಕೇವಲ ಐದೇ ದಿನ-ರಾಮ್ ಚರಣ್ ದಾಖಲೆ ಛಿದ್ರ ; 2ನೇ ಸ್ಥಾನ ಕಬ್ಜಾ ಮಾಡಿದ ಪವರ್ ಸ್ಟಾರ್

ಪವನ್ ಕಲ್ಯಾಣ್ ಪಕ್ಕದ ಮನೆ ಆಂಧ್ರದ ಉಪಮುಖ್ಯಮಂತ್ರಿ. ಇಷ್ಟೇ ಅಲ್ಲ ತೆಲುಗು ನಾಡಿನ ಪವರ್ ಸ್ಟಾರ್ ಕೂಡ ಹೌದು. ಚಿತ್ರರಂಗದಲ್ಲಿ ಕಳೆದ 29 ವರ್ಷಗಳಿಂದ ಸಕ್ರಿಯರಾಗಿರುವ ಪವನ್ ಕಲ್ಯಾಣ್ ಸದ್ಯ ಎರಡು ವರ್ಷಗಳ ನಂತರ ಒಂದೇ ವರ್ಷದಲ್ಲಿ ಚಿತ್ರಮಂದಿರದಲ್ಲಿ ಎರಡೆರಡು ಬಾರಿ ಪ್ರತ್ಯಕ್ಷರಾಗಿದ್ದಾರೆ. ಆ ಪೈಕಿ ಜುಲೈನಲ್ಲಿ ತೆರೆಗೆ ಬಂದಿದ್ದ ''ಹರಿಹರ ವೀರ ಮಲ್ಲು'' ಮಕಾಡೆ ಮಲಗಿದ್ದು ಈಗ ಇತಿಹಾಸ.

ಸದ್ಯ ಎಲ್ಲರ ಕಣ್ಣೀಗ ಕಳೆದ ವಾರ ಬಿಡುಗಡೆಯಾದ ''ಓಜಿ'' ಚಿತ್ರದ ಮೇಲೀದೆ. ಯಾಕೆಂದರೆ.. ಮೊದಲ ದಿನವೇ ಹತ್ತು ಹಲವು ದಾಖಲೆಗಳನ್ನು ನಿರ್ಮಾಣ ಮಾಡಿದ್ದ ಚಿತ್ರ ಇದು. ತೆಲುಗಿನ ಪವರ್ ಸ್ಟಾರ್‌ನ ಪವರ್ ಇನ್ನೂ ಕಡಿಮೆಯಾಗಿಲ್ಲ ಎನ್ನುವುದನ್ನು ಸಾಬೀತು ಮಾಡಿದ್ದ "ಓಜಿ'' ಮೊದಲ ದಿನವೇ ₹ 63.75 ಕೋಟಿಯನ್ನು ದೋಚಿತ್ತು.

OG DEFEATS Game Changer Pawan Kalyan s Film Is Now 2025 s 2nd Biggest Telugu Hit

ಇನ್ನೂ ಚಿತ್ರದ ಬಿಡುಗಡೆಗೆ ಮುನ್ನವೇ ಪ್ರೀಮಿಯರ್ ಪ್ರದರ್ಶನ ಹಮ್ಮಿಕೊಳ್ಳುವ ಸಂಪ್ರದಾಯ ಕಳೆದ ಕೆಲ ವರ್ಷಗಳಿಂದ ಶುರುವಾಗಿದೆ. ಈ ಸಂಪ್ರದಾಯದಡಿಯಲ್ಲಿಯೇ ''ಓಜಿ'' ಚಿತ್ರದ ಪ್ರೀಮಿಯರ್ ಪ್ರದರ್ಶನವನ್ನು ಕೂಡ ಚಿತ್ರತಂಡ ಬಿಡುಗಡೆಯ ಹಿಂದಿನ ಆಯೋಜಿಸಿತ್ತು. ಈ ಪ್ರದರ್ಶನದಿಂದ ನಿರ್ಮಾಪಕರ ಖಜಾನೆಗೆ ₹ 21 ಕೋಟಿ ಹಣ ಬಂದು ಸೇರಿತ್ತು.

ಎರಡು..ಮೂರು ಮತ್ತು ನಾಲ್ಕನೇ ದಿನದ ಗಳಿಕೆ ಕೂಡ ಎರಡಂಕಿಯ ಮೇಲಿತ್ತು. ಈ ಹಿನ್ನೆಲೆ.. ''ಓಜಿ'' ವಾರದ ದಿನಗಳಲ್ಲಿ ಎಷ್ಟು ಹಣ ಗಳಿಸುತ್ತೆ, ಚಿತ್ರಮಂದಿರದಿಂದ ಎತ್ತಂಗಡಿ ಆಗುವ ಮುನ್ನ ಎಷ್ಟು ಹಣ ಗಳಿಸಬಹುದು ಎನ್ನುವ ಕುತೂಹಲ ಹಲವರಲ್ಲಿದೆ. ಈ ಕುತೂಹಲಕ್ಕೆ ಸದ್ಯ ಉತ್ತರ ಸಿಕ್ಕಿದ್ದು ''ಓಜಿ''ಯ ಹವಾ ಸೋಮವಾರ ( ಸೆಪ್ಟೆಂಬರ್ 29 ) ಕಡಿಮೆಯಾಗಿದೆ. ''ಸ್ಯಾಕ್ನಿಲ್'' ಪ್ರಕಾರ ಚಿತ್ರ ಕೇವಲ ₹ 7.4 ಕೋಟಿ ಹಣವನ್ನು ಮಾತ್ರ ಗಳಿಸಿದೆ.

ಸ್ಯಾಕ್ನಿಲ್ ಪ್ರಕಾರ ''ಓಜಿ''ಚಿತ್ರದ ಮೊದಲ ಐದು ದಿನದ ಗಳಿಗೆ ಈ ಕೆಳಗಿನಂತೆ ಇದೆ.

ವಿಶೇಷ ಪ್ರೀಮಿಯರ್ ದಿನ - [ ಬುಧವಾರ ] - ₹ 21 ಕೋಟಿ

ಮೊದಲ ದಿನ [ ಗುರುವಾರ] - ₹63.75 ಕೋಟಿ

ಎರಡನೇ ದಿನ [ ಶುಕ್ರವಾರ ] - ₹18.45 ಕೋಟಿ

ಮೂರನೇ ದಿನ [ ಶನಿವಾರ ] - ₹18.5 ಕೋಟಿ

ನಾಲ್ಕನೇ ದಿನ [ ಭಾನುವಾರ] - ₹18.5 ಕೋಟಿ

ಐದನೇ ದಿನ [ ಸೋಮವಾರ ] - ₹7.4 ಕೋಟಿ

ಒಟ್ಟು ಗಳಿಕೆ - ₹ 147.6 ಕೋಟಿ

ಆದರೆ.. ವಿಶೇಷ ಅಂದರೆ ಬಾಕ್ಸಾಫೀಸ್‌ನಲ್ಲಿ ಐದು ದಿನದಲ್ಲಿ ಸದ್ಯ ₹ 147.6 ಕೋಟಿ ಹಣವನ್ನು ಗಳಿಸಿರುವ ''ಓಜಿ'' ರಾಮ್ ಚರಣ್ ತೇಜಾ ಅಭಿನಯದ ''ಗೇಮ್ ಚೆಂಜರ್'' ಚಿತ್ರದ ದಾಖಲೆ ಮುರಿದಿದೆ. ಹೌದು, ಅಸಲಿಗೆ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿದ್ದ ''ಗೇಮ್ ಚೇಂಜರ್'' ಭಾರತದ ಬಾಕ್ಸಾಫೀಸ್‌ನಲ್ಲಿ ₹136.92 ಕೋಟಿ ಹಣವನ್ನು ಮಾತ್ರ ಗಳಿಸಿತ್ತು. ''ಓಜಿ" ಈ ಮೊತ್ತವನ್ನು ಕೇವಲ ನಾಲ್ಕೇ ದಿನದಲ್ಲಿ ಈ ಗಡಿಯನ್ನು ದಾಟಿದ್ದು ಸದ್ಯ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಹತ್ತು ತೆಲುಗು ಚಿತ್ರಗಳಲ್ಲಿ ಎರಡನೇ ಸ್ಥಾನವನ್ನು ಆಕ್ರಮಿಸಿಕೊಂಡಿದೆ.

OG DEFEATS Game Changer Pawan Kalyan s Film Is Now 2025 s 2nd Biggest Telugu Hit

2025ರಲ್ಲಿ ಅತೀ ಹೆಚ್ಚು ಹಣ ಗಳಿಸಿದ ತೆಲುಗಿನ ಹತ್ತು ಚಿತ್ರಗಳು

1.ಸಂಕ್ರಾಂತಿಕಿ ವಸ್ತುನಂ: ₹186.90 crores
2.OG: ₹147.6 ಕೋಟಿ*
3.ಗೇಮ್ ಚೇಂಝರ್ : ₹136.92 ಕೋಟಿ
4.ಡಾಕು ಮಹಾರಾಜ್ : ₹91.11 ಕೋಟಿ
5.ಕುಬೇರ: ₹90.89 ಕೋಟಿ
6.ಹರಿಹರ ವೀರಮಲ್ಲು : ₹87 ಕೋಟಿ
7.ಮಿರಾಯಿ - ₹86.84 ಕೋಟಿ
8.ಹಿಟ್ 3 : ₹81ಕೋಟಿ
9.ತಾಂಡೇಲ್ : ₹66.06 ಕೋಟಿ
10.ಕಿಂಗ್‌ಡಮ್ : ₹51.98ಕೋಟಿ

ಹೀಗೆ ಎರಡನೇ ಸ್ಥಾನವನ್ನು ಸದ್ಯ "ಓಜಿ'' ಅಲಂಕರಿಸಿದೆ. ಆದರೆ.. ಮೊದಲ ಸ್ಥಾನಕ್ಕೇರುವುದು ಬಹುತೇಕ ಅನುಮಾನ ಇದೆ. ಯಾಕೆಂದರೆ ಈ ಅಕ್ಟೋಬರ್ ಎರಡರಿಂದ ''ಕಾಂತಾರ'' ಬೆಳ್ಳಿಪರದೆಯ ಮೇಲೆ ಧಗಧಗಿಸಲಿದೆ. ಈ ಹಿನ್ನೆಲೆ ''ಓಜಿ'' ಚಿತ್ರದ ಪ್ರದರ್ಶನದ ಸಂಖ್ಯೆಯಲ್ಲಿ ಇಳಿಮುಖವಾಗುವ ಸಾಧ್ಯತೆ ಇದೆ. ಆದರೂ ಕೂಡ ತೆಲುಗು ಪಂಡಿತರಿಗೆ "ಓಜಿ'' ₹200 ಕೋಟಿ ಗಳಿಸುವ ವಿಶ್ವಾಸ ಇದೆ. ಹಾಗೊಂದು ವೇಳೆ ಈ ಲೆಕ್ಕಾಚಾರ ನಿಜಾ ಅಂದರೆ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ತೆಲುಗು ಚಿತ್ರಗಳ ಸಾಲಿನಲ್ಲಿ "ಓಜಿ''ಚಿತ್ರಕ್ಕೆ ಮೊದಲ ಸ್ಥಾನ ಸಿಗಲಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
OG Box Office Day 5: Power Star Pawan Kalyan's latest mega-hit has officially surpassed Game Changer worldwide, securing its position as the 2nd biggest Telugu earner of 2025. Full collection report here!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X