OG Box Office Day 2 ; ಪವನ್ ಕಲ್ಯಾಣ್ ಅಬ್ಬರಕ್ಕೆ ಬಾಕ್ಸಾಫೀಸ್ ತತ್ತರ, 'ಓಜಿ' 2ನೇ ದಿನದ ಗಳಿಕೆ ಎಷ್ಟು ?

ಪವನ್ ಕಲ್ಯಾಣ್ ಈಗ ಕೇವಲ ಆಕ್ಟರ್ ಅಲ್ಲ ಬದಲಿಗೆ ಫುಲ್ ಟೈಮ್ ರಾಜಕಾರಣಿ ಕೂಡ ಹೌದು. ಆಂಧ್ರದ ಉಪ ಮುಖ್ಯಮಂತ್ರಿಯಾಗಿ ಕಳೆದೊಂದು ವರ್ಷದಿಂದ ಸೇವೆಯನ್ನು ಮಾಡುತ್ತಾ ಬರುತ್ತಿರುವ ಜನಸೇನಾ ಪಕ್ಷದ ನಾಯಕ. ಇನ್ನೂ.. ಸಾಮಾನ್ಯವಾಗಿ ಸ್ಟಾರ್ ಆದವರು ರಾಜಕಾರಣದತ್ತ ಹೊರಳಿದರೆ ಅವರ.. ಚಿತ್ರರಂಗದ ಬದುಕು ಮುಗಿದಂತೆಯೇ. ಹಲವರು ರಾಜಕೀಯಕ್ಕೆ ಹೋದ ನಂತರ ನಿವೃತ್ತಿ ಪಡೆದಿದ್ದು ಇದೆ. ನಿವೃತ್ತಿಯನ್ನು ಮೊದಲ ಘೋಷಿಸಿ ರಾಜಕೀಯದ ಚದುರಂಗವಾಡಲು ಮುಂದಾಗಿದ್ದು ಇದೆ.

ಆದರೆ.. ಪವನ್ ಕಲ್ಯಾಣ್ ಇದಕ್ಕೆ ತದ್ವಿರುದ್ದ. ರಾಜಕಾರಣದಲ್ಲಿ ಕಳೆದು ಹೋಗಿದ್ದರು ಕೂಡ ಪವನ್ ಕಲ್ಯಾಣ್‌ಗೆ ಬಣ್ಣದ ಮೇಲಿನ ಮೋಹ ಕಡಿಮೆಯಾಗಿಲ್ಲ. ಇಷ್ಟೇ ಅಲ್ಲ ಇವತ್ತು ಕೂಡ ಆಂಧ್ರದ ಪವರ್ ಸ್ಟಾರ್‌ನ ಪವರ್ ಚಿತ್ರರಂಗದಲ್ಲಿ ಕಡಿಮೆಯಾಗಿಲ್ಲ. ಪವನ್ ಕಲ್ಯಾಣ್ ಅವರನ್ನು ರಾಜಕೀಯದ ಪಡಸಾಲೆಯಲ್ಲಿ ನೋಡುವುದಕ್ಕಿಂತ ಬೆಳ್ಳಿತೆರೆಯ ಮೇಲೆಯೇ ನೋಡಲು ಜನ ಇಷ್ಟ ಪಡುತ್ತಾರೆ. ಇದಕ್ಕೆ ಸದ್ಯದ ಉದಾಹರಣೆಯೇ ''ಓಜಿ''.

OG HOLDS STRONG Pawan Kalyan Action Flick Mints 19 25 Cr Net on Day 2 Total Climbs to 104 Cr

ಹೌದು, ''ಓಜಿ''.. ಈ ವರ್ಷ ತೆರೆಗೆ ಬಂದ ಪವನ್ ಕಲ್ಯಾಣ್ ಅಭಿನಯದ ಎರಡನೇ ಚಿತ್ರ. ಸದ್ಯ.. ಎಲ್ಲೆಲ್ಲೂ ಈ ಚಿತ್ರದ್ದೇ ಹವಾ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಮೊದಲ ದಿನವೇ ಭಾರತದಲ್ಲಿ ಈ ಚಿತ್ರ ₹ 63.75 ಕೋಟಿಯನ್ನು ಕೊಳ್ಳೆ ಹೊಡೆದಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿ ಮಾಡಿದೆ.

ಇನ್ನು ''ಓಜಿ'' ಚಿತ್ರದ ಬಿಡುಗಡೆಗೂ ಹಿಂದಿನ ದಿನ ಹಲವಡೆ ''ಪ್ರೀಮಿಯರ್ ಪ್ರದರ್ಶನ''ವನ್ನು ಚಿತ್ರತಂಡ ಹಮ್ಮಿಕೊಂಡಿತ್ತು. ಈ ಪ್ರದರ್ಶನದಿಂದನೇ ₹21 ಕೋಟಿ ಹಣ ಹರಿದು ಬಂದಿದೆ. ಈ ಮೂಲಕ ಮೊದಲ ದಿನ ₹84.75 ಕೋಟಿ ಕೊಳ್ಳೆ ಹೊಡೆದಿದ್ದ "ಓಜಿ'' ಸದ್ಯ ಬಾಕ್ಸಾಫೀಸ್‌ನಲ್ಲಿ ಸೆಂಚ್ಯೂರಿ ಪೂರೈಸಿದೆ.
''ಸ್ಯಾಕ್ನಿಲ್'' ಪ್ರಕಾರ ಚಿತ್ರ ನಿನ್ನೆ (ಸೆಪ್ಟೆಂಬರ್ 26) ಅಂದರೆ ಎರಡನೇ ದಿನ ಭಾರತದಲ್ಲಿ ಅಂದಾಜು ₹ 19.25 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಅಲ್ಲಿಗೆ ಎರಡು ದಿನದಲ್ಲಿ ಒಟ್ಟಾರೆ ₹ ₹104 ಕೋಟಿಯನ್ನು ಗಳಿಸಿದೆ.

og-holds-strong-pawan-kalyan-action-flick-mints-19-25-cr-net-on-day-2-total-climbs-to-104-cr

''ಸ್ಯಾಕ್ನಿಲ್'' ವೆಬ್ ಸೈಟ್ ಪ್ರಕಾರ ''ಓಜಿ'' ಚಿತ್ರದ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ವಿಶೇಷ ಪ್ರೀಮಿಯರ್ ದಿನ - [ ಬುಧವಾರ ] - ₹ 21 ಕೋಟಿ

ಮೊದಲ ದಿನ [ ಗುರುವಾರ] - ₹63.75 ಕೋಟಿ

ಎರಡನೇ ದಿನ [ ಶುಕ್ರವಾರ ] - ₹19.25 ಕೋಟಿ *

ಒಟ್ಟು ಗಳಿಕೆ - ₹ 104 ಕೋಟಿ

ಅಂದ್ಹಾಗೇ ''ಓಜಿ'' ಚಿತ್ರದ ಮೂಲಕ ಪವನ್ ಕಲ್ಯಾಣ್ ತಮ್ಮದೇ ಹಳೆಯ ದಾಖಲೆಗಳನ್ನು ಮುರಿದಿದ್ದಾರೆ. ಹೊಸ ದಾಖಲೆಯನ್ನು ಬರೆದಿದ್ದಾರೆ. ಇಲ್ಲಿಯವರೆಗಿನ ಪವನ್ ಕಲ್ಯಾಣ್ ವೃತ್ತಿ ಬದುಕಿನ ದಿ ಬೆಸ್ಟ್ ಓಪನರ್ ಎನ್ನುವ ಹೆಗ್ಗಳಿಕೆಗೆ ''ಓಜಿ'' ಚಿತ್ರ ಪಾತ್ರವಾಗಿದೆ.

ಹೌದು, ಅಸಲಿಗೆ ''ಓಜಿ'' ಚಿತ್ರಕ್ಕೂ ಮುನ್ನ ಬಂದಿದ್ದ ''ಹರಿಹರ ವೀರಮಲ್ಲು'' ₹44.20 ಕೋಟಿ ಗಳಿಸಿತ್ತು. ಇದಕ್ಕೂ ಮುನ್ನ ಬಿಡುಗಡೆಯಾಗಿದ್ದ ''ಭೀಮ್ಲಾ ನಾಯಕ್'' ಮೊದಲ ದಿನ ₹37.15 ಕೋಟಿಯನ್ನು ಗಳಿಸಿತ್ತು. ಇದಕ್ಕೂ ಹಿಂದೆ ಬಂದ ವಕೀಲ್ ಸಾಬ್ ₹40.10 ಕೋಟಿಯನ್ನು ಗಳಿಸುವ ಮೂಲಕ ಹೊಸ ಇತಿಹಾಸ ಬರೆದಿತ್ತು. 2023ರಲ್ಲಿ ತೆರೆಗೆ ಬಂದಿದ್ದ 'ಬ್ರೋ' ಮೊದಲ ದಿನ ₹30.5 ಕೋಟಿ ಹಣ ಗಳಿಸಿತ್ತು. ಈ ಎಲ್ಲಾ ಗಳಿಕೆಯನ್ನು ''ಓಜಿ'' ಹಿಂದಿಕ್ಕಿದೆ. ಮೊದಲ ದಿನ ₹63.75 ಕೋಟಿ ಗಳಿಸಿದ್ದ ಚಿತ್ರ ಸದ್ಯ ಎರಡನೇ ದಿನ ₹19.25 ಕೋಟಿಯನ್ನು ಗಳಿಸಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
'They Call Him OG' is a hit! Despite a dip, Pawan Kalyan's film maintains strength, minting ₹19.25 Cr net on Day 2 and crossing ₹104 Cr worldwide. Read the full report
Read more about: pawan kalyan tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X