Param Sundari BoxOffice Day 1 ;ಮೊದಲ ದಿನ ಪರಮ ಸುಂದರಿಯ ಮ್ಯಾಜಿಕ್,ಶ್ರೀದೇವಿ ಮಗಳಿಗೆ ಈ ಬಾರಿ ಸಿಗುತ್ತಾ ಗೆಲುವು?

ದಕ್ಷಿಣ ಭಾರತೀಯ ಚಿತ್ರರಂಗದ ಅಬ್ಬರದಿಂದ ಬಾಲಿವುಡ್ ಬರ್ಬಾದ್ ಆಯ್ತು ಎಂದೇ ಅನೇಕರು ಅಂದುಕೊಂಡಿದ್ದರು. ಕೊರೊನಾ ನಂತರದ ದಿನಗಳಲ್ಲಿ ವಾತಾವರಣ ಹಾಗೇ ಇತ್ತು ಕೂಡ. ಒಂದು ಕಡೆ ''ಕೆಜಿಎಫ್ ''.. ''ಪುಷ್ಪ'' .. ''ಆರ್‌ಆರ್‌ಆರ್‌'' .. ''ಕಾಂತಾರ'' .. ''777 ಚಾರ್ಲಿ'' ಅಂತಹ ಚಿತ್ರಗಳು ಅಬ್ಬರಿಸುತ್ತಿದ್ದರೆ,ಬಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳೆಲ್ಲವೂ ನೆಲ ಕಚ್ಚುತ್ತಿದ್ದವು.

ಆದರೆ.. 2023ರ ಸುಮಾರು ಬಾಲಿವುಡ್ ನಿಧಾನವಾಗಿ ಚೇತರಿಸಿಕೊಳ್ಳಲು ಶುರು ಮಾಡಿತ್ತು. ಹಾಗಂಥ.. ಮೊದಲಿನ ಲಯಕ್ಕೆ ಹಿಂದಿ ಉದ್ಯಮ ಆಗಲೂ ಮರಳಲಿಲ್ಲ. ಈಗಲೂ ಕೂಡ ಮರಳಿಲ್ಲ. ಅಲ್ಲೊಂದು.. ಇಲ್ಲೊಂದು.. ಚಿತ್ರಗಳು ಮಾತ್ರ ಮಕಾಡೆ ಮಲಗಿದ ಬಾಲಿವುಡ್‌ನ ಬಡಿದೆಬ್ಬಿಸುತ್ತಿವೆ. ಆ ಕ್ಷಣಕ್ಕೆ ಹೊಸ ಹುರುಪು ತುಂಬುತ್ತಿವೆ.

Param Sundari Box Office Day 1 Sidharth amp amp Janhvi s Rom-Com Roars with 7 25 Crore Opening

ಕಳೆದ ವರ್ಷ ಈ ಕೆಲಸವನ್ನು ''ಮುಂಜ್ಯಾ'' .. ''ಸ್ತ್ರೀ 2'' ಅಂತಹ ಚಿತ್ರಗಳು ಮಾಡಿದ್ದವು. ಈ ವರ್ಷದ ಆರಂಭದಲ್ಲಿ ''ಛಾವಾ'' ಈ ಕೆಲಸವನ್ನು ಮಾಡಿತ್ತು.

ಆ ನಂತರ ಬಂದ ''ಸಿತಾರೆ ಜಮೀನ್ ಪರ್''.. ''ರೇಡ್ 2''.. ಬಾಕ್ಸಾಫೀಸ್‌ನಲ್ಲಿ ಹಣ ದೋಚಿದ್ದವು. ಇನ್ನೂ ವರ್ಷದ ದ್ವೀತಿಯಾರ್ಧದಲ್ಲಿ ಹೊಸ ಹುಡುಗನ ''ಸೈಯಾರ'' ಹೊಸದೊಂದು ಅಲೆಯನ್ನೆಬ್ಬಿಸಿತ್ತು. ಮೊದಲ ದಿನದಂದೇ ಭರ್ಜರಿ ಹಣ ಗಳಿಸಿತ್ತು. ಕೇವಲ ನಾಲ್ಕೇ ದಿನದಲ್ಲಿ ₹100 ಕೋಟಿಯನ್ನು ಗಳಿಸುವ ಮೂಲಕ ಹೊಸ ಇತಿಹಾಸ ಬರೆಯಿತು.

ಹೀಗಿರುವಾಗ ಇದೀಗ ಶ್ರೀದೇವಿಯ ಮಗಳು ಜಾಹ್ನವಿ ಕಪೂರ್ ಮತ್ತು ಕಿಯಾರಾ ಅಡ್ವಾಣಿಯ ಗಂಡ ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ''ಪರಮ ಸುಂದರಿ'' ತೆರೆಗೆ ಬಂದಿದೆ. ಮೊದಲ ದಿನ ಸಮಾಧಾನಕರ ಪ್ರದರ್ಶನವನ್ನು ನೀಡಿದೆ.

ಹೌದು, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಪರಮ ಸುಂದರಿ'' ಮೊದಲ ದಿನ (ಆಗಸ್ಟ್ 29) ₹ 7.25 ಕೋಟಿ ಹಣವನ್ನು ಗಳಿಸಿದೆ. ನಿನ್ನೆ ಬೆಳಿಗ್ಗೆಗಿಂತ ಈ ಚಿತ್ರವನ್ನು ರಾತ್ರಿ ಹೆಚ್ಚಿನ ಜನ ನೋಡಿದ್ದು ಆಕ್ಯುಪೆನ್ಸಿ ವಿಚಾರದಲ್ಲಿ ಬೆಂಗಳೂರಿನಲ್ಲಿ ಉತ್ತಮವಾದ ರೆಸ್ಫಾನ್ಸ್ ಸಿಕ್ಕಿದೆ. 24.50% ಆಕ್ಯುಪೆನ್ಸಿ ಕಂಡು ಬಂದಿದೆ.

param-sundari-box-office-day-1-sidharth-janhvis-rom-com-roars-with-7-25-crore-opening

ಬೆಂಗಳೂರು ಹೊರತು ಪಡಿಸಿದರೆ ಹೈದರಾಬಾದ್‌ನಲ್ಲಿ 21.75% ಚೆನ್ನೈನಲ್ಲಿ 24.75% ಮುಂಬೈನಲ್ಲಿ 12.25% ಮತ್ತು ದೆಹಲಿಯಲ್ಲಿ 13% ಆಕ್ಯುಪೆನ್ಸಿ ಕಂಡು ಬಂದಿದೆ. ಇನ್ನು ನಿನ್ನೆ (ಆಗಸ್ಟ್ 29) ಚಿತ್ರಕ್ಕೆ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕರಿಂದ ಹಿಡಿದು ವಿಮರ್ಷಕರವರೆಗೆ ಎಲ್ಲರೂ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಜಾಹ್ನವಿ ಕಪೂರ್ ಅವರ ಕೆಮೆಸ್ಟ್ರೀಯನ್ನು ಮೆಚ್ಚಿಕೊಂಡಿದ್ದಾರೆ.

ಇನ್ನೂ ''ಪರಮ ಸುಂದರಿ'' ತೆರೆಗೆ ಬರುವ ಮುನ್ನ ಬಹುತೇಕರು ಈ ಚಿತ್ರವನ್ನು ''ಚೆನ್ನೈ ಎಕ್ಸ್‌ಫ್ರೆಸ್''.. ''2 ಸ್ಟೇಟ್ಸ್‌'' ಮತ್ತು ''ರಾಕಿ ಔರ್ ರಾಣಿ ಕೀ ಪ್ರೇಮ್ ಕಥಾ'' ಚಿತ್ರಗಳ ಜೊತೆ ಹೋಲಿಸಿದ್ದರು. ಆದರೆ ಈ ಚಿತ್ರದ ಕಥೆಯೇ ಬೇರೆ ಆ ಚಿತ್ರಗಳ ಕಥೆಯೇ ಬೇರೆ ಎಂದು ಚಿತ್ರ ನೋಡಿದ ಪ್ರೇಕ್ಷಕರು ಹೇಳಿದ್ದಾರೆ. ಈ ಹಿನ್ನೆಲೆ ಇಂದು ಮತ್ತು ನಾಳೆ ಚಿತ್ರದ ಗಳಿಕೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ಅಂದ್ಹಾಗೇ ''ಸೈಯಾರ'' ನಂತರ ಬಂದ ''ಧಡಕ್ 2''.. ''ಸನ್ ಆಫ್ ಸರ್ದಾರ್ 2''.. ಚಿತ್ರಗಳ ಮೊದಲ ದಿನದ ಗಳಿಕೆ ತೀರಾ ಸಾಧಾರಣವಾಗಿತ್ತು. ''ಸ್ಯಾಕ್ನಿಲ್‌'' ಉಲ್ಲೇಖಿಸಿರುವಂತೆ ಧಡಕ್ 2 ಮೊದಲ ದಿನ ಕೇವಲ ₹3.35 ಕೋಟಿಯನ್ನು ಗಳಿಸಿತ್ತು. ಇನ್ನೂ ಅಜಯ್ ದೇವಗನ್ ಅಂತಹ ಸ್ಟಾರ್‌ ಇದ್ದರೂ ಕೂಡ '' ಸನ್ ಆಫ್ ಸರ್ದಾರ್ 2'' ಚಿತ್ರ ಮೊದಲ ದಿನ ₹ 6.75 ಕೋಟಿಯನ್ನಷ್ಟೇ ಗಳಿಸಿತ್ತು. ಈ ಚಿತ್ರಗಳಿಗೆ ಹೋಲಿಸಿದರೆ ''ಪರಮ ಸುಂದರಿ'' ಮೊದಲ ದಿನ ಉತ್ತಮ ಆರಂಭ ಪಡೆದಿದೆ. ಸತತ ಸೋಲುಗಳಿಂದ ಬಸವಳಿದಿರುವ ಜಾಹ್ನವಿ ಕಪೂರ್‌ಗೆ ಈ ''ಪರಮ ಸುಂದರಿ'' ಗೆಲುವನ್ನು ತಂದು ಕೊಡುತ್ತಾ ? ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Sidharth Malhotra and Janhvi Kapoor's new rom-com Param Sundari is a hit! Discover the surprising Day 1 box office collection and how it compares to other recent blockbusters.
Read more about: jhanvi kapoor bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X