Param Sundari Box Office Day 2; ಎರಡನೇ ದಿನ ಬಾಕ್ಸಾಫೀಸ್‌ನಲ್ಲಿ ಜಿಗಿದ 'ಪರಮ ಸುಂದರಿ', ಗಳಿಸಿದ್ದೆಷ್ಟು?

ಈಗೀಗ ಸುಮಾರು ಸಿನಿಮಾಗಳು ಬರುತ್ತಿವೆ, ಹೋಗುತ್ತಿವೆ. ಆದರೆ ಗೆಲುವು ಮಾತ್ರ ಬಹುತೇಕರ ಕೈಗೆ ಸಿಗುತ್ತಿಲ್ಲ. ಹೇಗಾದರೂ ಮಾಡಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದುತರಲು ಚಿತ್ರತಂಡಗಳು ಹರಸಾಹಸ ಮಾಡುತ್ತಿವೆ. ನಾನಾ ಕಸರತ್ತುಗಳನ್ನು ಮಾಡುತ್ತಿವೆ. ಆದರೆ.. ಅಲ್ಲೊಂದು.. ಇಲ್ಲೊಂದು ಸಿನಿಮಾಗಳು ಮಾತ್ರ ಗೆಲ್ಲುತ್ತಾವೆ. ಪವಾಡಗಳನ್ನು ಮಾಡುತ್ತಾವೆ. ಈ ಸಾಲಿಗೆ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಜಾಹ್ನವಿ ಕಪೂರ್ ಅಭಿನಯದ ''ಪರಮ ಸುಂದರಿ'' ...

ಚಿತ್ರ ಕೂಡ ಸೇರಿಕೊಳ್ಳುತ್ತಾ ಇಲ್ಲವಾ ಎನ್ನುವುದು ಗೊತ್ತಿಲ್ಲವಾದರೂ ಸದ್ಯ ಚಿತ್ರಮಂದಿರದಲ್ಲಿ ''ಪರಮ ಸುಂದರಿ''ಯ ದರ್ಶನ ಪಡೆದು ಹಲವರು ಪುನೀತರಾಗುತ್ತಿದ್ದಾರೆ. ಶ್ರೀದೇವಿಯ ಮಗಳ ಚಿತ್ರವನ್ನು ಕೊಂಡಾಡುತ್ತಿದ್ದಾರೆ. ಮನಸಾರೆ ಎಂಜಾಯ್ ಮಾಡುತ್ತಿದ್ಧಾರೆ.

Param Sundari Box Office Rocket Sidharth-Janhvi Film Sees Massive Growth on Day 2 Earns 16 Crore

ಇದಕ್ಕೆ ಕೈಗನ್ನಡಿ ಎಂಬಂತೆ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ''ಪರಮ ಸುಂದರಿ''ಯ ಎರಡು ದಿನದ ಲೆಕ್ಕವನ್ನು ಹಂಚಿಕೊಂಡಿದ್ದು ಆ ಪ್ರಕಾರ ಮೊದಲ ದಿನ (ಆಗಸ್ಟ್ 29) ₹ 7.25 ಕೋಟಿ ಹಣ ಗಳಿಸಿದ್ದ ಈ ಚಿತ್ರದ ಗಳಿಕೆಯಲ್ಲಿ ನಿನ್ನೆ ಎರಡನೇ ದಿನ (ಆಗಸ್ಟ್30 ) ಜಿಗಿತ ಕಂಡು ಬಂದಿದೆ. ನಿನ್ನೆ (ಆಗಸ್ಟ್ 30) ಅಂದಾಜು ₹ 9.00 ಕೋಟಿ ಹಣವನ್ನು ಈ ಚಿತ್ರ ಗಳಿಸಿದೆ. ಈ ಮೂಲಕ ಎರಡೇ ದಿನದಲ್ಲಿ ಚಿತ್ರ ₹16.25 ಕೋಟಿ ಹಣವನ್ನು ಬಾಕ್ಸಾಫೀಸ್‌ನಲ್ಲಿ ದೋಚಿದೆ ''ಪರಮ ಸುಂದರಿ''.

ಜಾಹ್ನವಿ ಕಪೂರ್ ಅವರ ಈ ಚಿತ್ರವನ್ನು ನೋಡುವ ಉತ್ಸಾಹ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದಲ್ಲಿಯೇ ಹೆಚ್ಚು ಕಂಡು ಬಂದಿದೆ. ಇದಕ್ಕೆ ಪುರಾವೆ ಎನ್ನುವಂತೆ ಬೆಂಗಳೂರಿನಲ್ಲಿ ನಿನ್ನೆ (ಆಗಸ್ಟ್ 30) 40.75% ಆಕ್ಯುಪೆನ್ಸಿ ಕಂಡು ಬಂದಿದ್ದು, ಚೆನ್ನೈನಲ್ಲಿ 36.50%, ಹೈದರಾಬಾದ್‌ನಲ್ಲಿ 28.25% ಆಕ್ಯುಪೆನ್ಸಿ ಕಂಡು ಬಂದಿದೆ. ಇನ್ನು ಮುಂಬೈನಲ್ಲಿ 16.25% ಪ್ರೇಕ್ಷಕರಲ್ಲಿ ಮಾತ್ರ ಉತ್ಸಾಹ ಕಂಡು ಬಂದರೆ, ದೆಹಲಿಯಲ್ಲಿ 18.50% ಪುಣೆಯಲ್ಲಿ 16.25% ಆಕ್ಯುಪೆನ್ಸಿ ಕಂಡು ಬಂದಿದೆ.

param-sundari-box-office-rocket-sidharth-janhvi-film-sees-massive-growth-on-day-2-earns-16-crore

ಇನ್ನು ಈ ವರ್ಷದ ಮಾರ್ಚ್‌ನಲ್ಲಿ ಅರ್ಜುನ್ ಕಪೂರ್, ಭೂಮಿ ಪೆಡ್ನೇಕರ್ ಮತ್ತು ರಾಕುಲ್ ಪ್ರೀತ್ ಸಿಂಗ್ ಅಭಿನಯಿಸಿದ್ದ ''ಮೇರೆ ಹಸ್ಬೆಂಡ್‌ ಕೀ ಬೀವಿ'' ಚಿತ್ರ ತೆರೆಗೆ ಬಂದಿತ್ತು. ಎರಡು ವಾರ ಚಿತ್ರಮಂದಿರಗಳಲ್ಲಿ ಪ್ರದರ್ಶನವನ್ನು ಕಂಡಿದ್ದ ಈ ಚಿತ್ರ ಕೇವಲ ₹ 8.25 ಕೋಟಿ ಹಣವನ್ನಷ್ಟೇ ಗಳಿಸಿತ್ತು. ''ಪರಮ ಸುಂದರಿ'' ಎರಡೇ ದಿನದಲ್ಲಿ ಇದರ ದುಪ್ಪಟ್ಟು ಹಣವನ್ನು ಬಾಕ್ಸಾಫೀಸ್‌ನಲ್ಲಿ ಗಳಿಸಿದೆ.

ಅಂದ್ಹಾಗೇ ಜಾಹ್ನವಿ ಕಪೂರ್ ಬಾಕ್ಸಾಫೀಸ್‌ನಲ್ಲಿ ಗೆದ್ದು ಹಲವು ವರ್ಷಗಳೇ ಆಗಿವೆ. ಒಂದಾದ ಮೇಲೊಂದು ಸೋಲನ್ನು ನೋಡುತ್ತಲೇ ಇವರು ಬಂದಿದ್ದರು. ಆದರೆ ಈ ಸೋಲಿನ ಸರಪಳಿ ಈ ''ಪರಮ ಸುಂದರಿ'' ಮೂಲಕ ಕಳಚಿ ಬೀಳುವ ಸಾಧ್ಯತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಜಾಹ್ನವಿ ಅಭಿನಯದ ''ಧಡಕ್'' ಚಿತ್ರದ ನಂತರ ಮೊದಲ ದಿನ ಅತೀ ಹೆಚ್ಚು ಹಣ ಗಳಿಸಿದ ಎರಡನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ''ಪರಮ ಸುಂದರಿ'' ಪಾತ್ರವಾಗಿದೆ.

ಮೊದಲ ದಿನ ಅತೀ ಹೆಚ್ಚು ಹಣ ಗಳಿಸಿದ ಜಾಹ್ನವಿ ಕಪೂರ್ ಅಭಿನಯದ 5 ಚಿತ್ರಗಳು

1. ಧಡಕ್ - ₹8.71 ಕೋಟಿ
2. ಪರಮಸುಂದರಿ- ₹7.25ಕೋಟಿ
3. Mr & Mrs ಮಾಹಿ -₹6.85 ಕೋಟಿ
4. ರೂಹಿ - ₹3.06 ಕೋಟಿ
5. ಉಲಜ್ - ₹1.37 crore

ಒಟ್ನಲ್ಲಿ ''ಪರಮ ಸುಂದರಿ'' ಮೊದಲ ಎರಡು ದಿನ ಉತ್ತಮ ಗಳಿಕೆಯನ್ನು ಮಾಡಿದೆ. ಸತತ ಸೋಲುಗಳಿಂದ ಬಸವಳಿದಿರುವ ಜಾಹ್ನವಿ ಕಪೂರ್‌ಗೆ ಈ ''ಪರಮ ಸುಂದರಿ'' ಗೆಲುವನ್ನು ತಂದು ಕೊಡುತ್ತಾ ? ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ

More from Filmibeat

English summary
Box Office Update: 'Param Sundari' hits ₹16 crore! Sidharth and Janhvi's latest film sees a huge jump in collections on Day 2, outperforming competitors. Find out more about its success.
Read more about: jhanvi kapoor bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X