Parasakthi BO Day 1 ; ಹಿಂದಿ ವಿರೋಧಿ ಚಳುವಳಿಯ 'ಪರಾಶಕ್ತಿ'ಗೆ ಸಿಕ್ತಾ ಜನಮನ್ನಣೆ, ಫಸ್ಟ್ ಡೇ ಗಳಿಸಿದ್ದೆಷ್ಟು?

ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲ ಪಕ್ಕದ ಕಾಲಿವುಡ್‌ನಲ್ಲಿ ಕೂಡ ಕಳೆದ ವರ್ಷ ಗೆದ್ದ ಚಿತ್ರಗಳ ಸಂಖ್ಯೆ ಕಡಿಮೆ ಇತ್ತು. ''ಟೂರಿಸ್ಟ್ ಫ್ಯಾಮಿಲಿ''.. ''ಡ್ರ್ಯಾಗನ್''.. ''ಡ್ಯೂಡ್''.. ಹೀಗೆ ಒಂದು ನಾಲ್ಕೈದು ಚಿತ್ರಗಳು ಮಾತ್ರ ತಮಿಳುನಾಡಿನಲ್ಲಿ ಗೆದ್ದಿದ್ದವು. ಸದ್ದು ಮಾಡಿದ್ದವು. ಇನ್ನು, ಸ್ಟಾರ್‌ಗಳಿಗೆ ಕಳೆದ ವರ್ಷ ದಕ್ಕಿದ್ದು ಸೋಲು ಮಾತ್ರ. ಚಿಯಾನ್ ವಿಕ್ರಮ್.. ಸೂರ್ಯ.. ಕಮಲ್ ಹಾಸನ್‌.. ಧನುಷ್..

ಅವರ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಕಳೆದ ವರ್ಷ ಮಕಾಡೆ ಮಲಗಿದ್ದವು. ಅಜಿತ್ ಅಭಿನಯದ ಗುಡ್ ಬ್ಯಾಡ್ ಅಗ್ಲಿ ಮಾತ್ರ ಹಣವನ್ನು ದೋಚುವಲ್ಲಿ ಯಶಸ್ವಿಯಾಗಿತ್ತು. ಇದೇ ಅಜಿತ್ ಅಭಿನಯದ ''ವಿಡಾಮುಯಾರ್ಚಿ'' ಕಳೆದ ವರ್ಷದ ಪರಮತೋಪು ಚಿತ್ರಗಳಲ್ಲಿ ಒಂದಾಗಿತ್ತು. ಆದರೆ ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಕೂಡ ರಜಿನಿಕಾಂತ್ ಅಭಿನಯದ ''ಕೂಲಿ'' ಭಾರತದಲ್ಲಿ ₹518 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಮಿಕ್ಕಂತೆ ಬೇರೆ ಯಾವ ಚಿತ್ರಗಳು ಕೂಡ ಬಂದಿದ್ದು ಹೋಗಿದ್ದು ಗೊತ್ತಾಗಲಿಲ್ಲ.

Parasakthi Day 1 Box Office Sivakarthikeyan s Return Nets 11 5 Cr but Amaran Remains Unshaken

ಹೀಗಾಗಿ ಈ ವರ್ಷದ ಆರಂಭ ಉತ್ತಮವಾಗಿರುತ್ತೆ ಎನ್ನುವ ವಿಶ್ವಾಸದಲ್ಲಿ ತಮಿಳು ಚಿತ್ರರಂಗ ಕಾದು ಕುಂತಿತ್ತು. ಇದಕ್ಕೆ ಪೂರಕವಾಗಿ ವರ್ಷದ ಆರಂಭದಲ್ಲಿಯೇ ದಳಪತಿ ವಿಜಯ್ ತಮ್ಮ ''ಜನನಾಯಗನ್'' ಚಿತ್ರದ ಮೂಲಕ ಬಾಕ್ಸಾಫೀಸ್‌ನಲ್ಲಿ ದಂಡೆತ್ತಿ ಬರಲು ಸಿದ್ಧವಾಗಿದ್ದರು.

ನಿಜಾ. ''ಪರಾಶಕ್ತಿ'' ಕೂಡ ''ಜನನಾಯಗನ್'' ಜೊತೆ ಕಣದಲ್ಲಿತ್ತು. ಆದರೆ, ಅತೀ ಹೆಚ್ಚು ನಿರೀಕ್ಷೆ ಇದ್ದಿದ್ದು ''ಜನನಾಯಗನ್'' ಮೇಲೆ. ದುರಾದೃಷ್ಟ ''ಜನನಾಯಗನ್‌''ಗೆ ವಿಘ್ನಗಳು ಎದುರಾಗಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಯ್ತು. ಈ ಹಿನ್ನೆಲೆ ಬಾಕ್ಸಾಫೀಸ್‌ನ ರಣರಂಗದಲ್ಲಿ ಏಕಾಂಗಿಯಾದ ''ಪರಾಶಕ್ತಿ'' ಮೇಲೆ ತಮಿಳು ಚಿತ್ರಪಂಡಿತರು ಭರವಸೆ ಇಟ್ಕೊಂಡು ಕುಂತಿದ್ದರು. ಪೈಪೋಟಿ ಇಲ್ಲದ ಕಾರಣ ''ಪರಾಶಕ್ತಿ'' ಮೊದಲ ದಿನ ದಾಖಲೆಯ ಗಳಿಕೆ ಮಾಡದಿದ್ದರೂ ಶಿವಕಾರ್ತಿಕೆಯನ್ ಅವರ ಹಿಂದಿನ ಬ್ಲಾಕ್‌ಬಸ್ಟರ್ ಚಿತ್ರ ''ಅಮರನ್‌'' ಚಿತ್ರವನ್ನಾದರೂ ಕೊನೆ ಪಕ್ಷ ''ಪರಾಶಕ್ತಿ'' ಹಿಂದಿಕ್ಕುವ ವಿಶ್ವಾಸವನ್ನು ಹೊಂದಿದ್ದರು. ಈ ನಂಬಿಕೆ ಹುಸಿಯಾಗಿದೆಯಾದರೂ ಸದ್ಯ ಗೆಲುವಿನ ಸೂಚನೆ ಚಿತ್ರತಂಡಕ್ಕೆ ಸಿಕ್ಕಿದೆ.

Parasakthi Day 1 Box Office Sivakarthikeyan s Return Nets 11 5 Cr but Amaran Remains Unshaken

ಹೌದು, ''ಜನನಾಯಗನ್'' ಚಿತ್ರದಂತೆಯೇ ವಿಘ್ನಗಳನ್ನು ಎದುರಿಸಿ ಬಿಡುಗಡೆಯಾದ ''ಪರಾಶಕ್ತಿ'' ಚಿತ್ರ ಮೊದಲ ದಿನ ಉತ್ತಮವಾದ ಓಪನಿಂಗ್ ಪಡೆದುಕೊಂಡಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಮೊದಲ ದಿನ ₹12.35 ಕೋಟಿಯನ್ನು ಚಿತ್ರ ಗಳಿಸಿದೆ. ಈ ಮೂಲಕ ''ಅಮರನ್'' ಚಿತ್ರದ ಗಳಿಕೆಯನ್ನು ಭಾರತದಲ್ಲಿ ಹಿಂದಿಕ್ಕುವಲ್ಲಿ ''ಪರಾಶಕ್ತಿ'' ಸೋತಿದೆಯಾದರೂ ಮೊದಲ ದಿನದ ಪ್ರತಿಕ್ರಿಯೆ ಆಶಾದಾಯಕವಾಗಿದೆ.

ನಿನ್ನೆ (ಜನವರಿ 10) ಬೆಳಗ್ಗೆ ಮಂದಗತಿಯಲ್ಲಿ ಶುರುವಾದ ಚಿತ್ರ ರಾತ್ರಿಯ ವೇಳೆಗೆ ಚೇತರಿಸಿಕೊಂಡಿದೆ. ಬೆಳಗಿನ ಪ್ರದರ್ಶನಗಳಲ್ಲಿ ಶೇ.45.71 ರಷ್ಟು ಭರ್ತಿಯಾಗಿದ್ದ ಚಿತ್ರಮಂದಿರಗಳು, ರಾತ್ರಿ ಪ್ರದರ್ಶನದ ವೇಳೆಗೆ ಶೇ. 79.04 ರಷ್ಟು ಏರಿಕೆ ಕಂಡಿವೆ. ಚೆನ್ನೈನಲ್ಲಿ ಶೇ. 91 ರಷ್ಟು ಆಕ್ಯುಪೆನ್ಸಿ ದಾಖಲಾಗಿದ್ದು, ಮಧುರೈನಲ್ಲಿ 88.25% , ಪಾಂಡಿಚೇರಿಯಲ್ಲಿ 97.75%, ಮುಂಬೈನಲ್ಲಿ 48.25%, ಬೆಂಗಳೂರಿನಲ್ಲಿ 54.50% ಆಕ್ಯುಪೆನ್ಸಿ ಕಂಡು ಬಂದಿದೆ. ಕರ್ನಾಟಕದಲ್ಲಿ ನಿನ್ನೆ (ಜನವರಿ 9 ) ''ಪರಾಶಕ್ತಿ 2'' ಕೋಟಿಯನ್ನು ದೋಚಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಅಂದ್ಹಾಗೇ ಈ ಚಿತ್ರದಲ್ಲಿ ಡಾಲಿ ಧನಂಜಯ್ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರೆ, ಕನ್ನಡತಿ ಶ್ರೀಲೀಲಾ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಮೂಲಕ ತಮಿಳು ಚಿತ್ರರಂಗವನ್ನು ಕೂಡ ಪ್ರವೇಶಿಸಿದ್ದಾರೆ.

ಇನ್ನು ಚಿತ್ರತಂಡದವರೇ ಹಂಚಿಕೊಂಡ ಮಾಹಿತಿಯ ಪ್ರಕಾರ ವಿಶ್ವದೆಲ್ಲೆಡೆಯ ಗಳಿಕೆ ಕೂಡಿಸಿದರೆ ''ಪರಾಶಕ್ತಿ'' ಮೊದಲ ದಿನ ₹27 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಒಟ್ನಲ್ಲಿ 1965ರ ಹಿಂದಿ ವಿರೋಧಿ ಚಳವಳಿಯ ಹಿನ್ನೆಲೆಯಲ್ಲಿ ಮೂಡಿಬಂದ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ 25 ಕಡೆ ಕತ್ತರಿ ಪ್ರಯೋಗವನ್ನು ಮಾಡಿದೆ. ಈ ಹಿನ್ನೆಲೆ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಕೌಂಟರ್ ತೆರೆಯುವಲ್ಲಿ ತಡವಾಗಿತ್ತು. ಚಿತ್ರ ಬಿಡುಗಡೆಯಾಗುತ್ತಾ ? ಇಲ್ವಾ ? ಎಂಬ ಗೊಂದಲವೂ ಪ್ರೇಕ್ಷಕರಲ್ಲಿ ಮತ್ತು ಶಿವಕಾರ್ತಿಕೆಯನ್ ಅವರ ಅಭಿಮಾನಿಗಳಲ್ಲಿತ್ತು. ಬಾಕ್ಸಾಫೀಸ್‌ನಲ್ಲಿ ಮೊದಲ ದಿನ ಚಿತ್ರಕ್ಕೆ ಹಿನ್ನೆಡೆಯಾಗಲು ಇದೇ ಕಾರಣವೆಂದು ಸದ್ಯ ಹೇಳಲಾಗುತ್ತಿದೆ. ಇಂದು (ಜನವರಿ 10) ಚಿತ್ರದ ಗಳಿಕೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Parasakthi Box Office: SK’s latest opens strong with ₹11.5 Cr but fails to topple Amaran’s massive Day 1 record. Can Parasakthi bridge the gap over the weekend?
Read more about: kollywood sree leela
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X