Pati Patni Aur Woh Do BO Day2 ; ಕಾರ್ತಿಕ್ ಆರ್ಯನ್ ಮ್ಯಾಜಿಕ್ ರಿಪೀಟ್ ಮಾಡ್ಲಿಲ್ಲ ಆಯುಷ್ಮಾನ್-2 ದಿನದಲ್ಲಿ ಗಳಿಸಿದ್ದೆಷ್ಟು ?

ಕನ್ನಡ ಚಿತ್ರರಂಗವನ್ನು ಹೊರತು ಪಡಿಸಿದರೆ ಅಕ್ಕ-ಪಕ್ಕದ ರಾಜ್ಯಗಳಲ್ಲಿನ ಚಿತ್ರರಂಗದವರಿಗೆ ಅದರಲ್ಲಿಯೂ ವಿಶೇಷವಾಗಿ ಹಿಂದಿ ಚಿತ್ರರಂಗಕ್ಕೆ ಸದ್ಯ ಸಿಕ್ವೆಲ್ ಜ್ವರ ಹಿಡಿದಿದೆ. ನಿಜಾ.. ನಮ್ಮಲ್ಲಿ ಕೂಡ ಈ ಟ್ರೆಂಡ್ ಇದೆ. ಆದರೆ.. ಅನ್ಯ ಭಾಷೆಯವರಿಗೆ ಹೋಲಿಸಿದರೆ ಪ್ರಯತ್ನಗಳು ನಡೆಯುತ್ತಿರುವುದು ಕಡಿಮೆ. ಬೇರೆ ಭಾಷೆಗಳಲ್ಲಿ ಹಳೆಯ ಗೆಲುವನ್ನೇ ಟ್ರಂಪ್ ಕಾರ್ಡ್‌ ಆಗಿ ಉಪಯೋಗಿಸಿಕೊಂಡು ಹಲವರು ಇಲ್ಲಿ ದುಡ್ಡು ಬಾಚಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಯಾರನ್ನೇ ಕೇಳಿ ಎಲ್ಲರಲ್ಲಿಯೂ ತಮ್ಮದೇ ಆದ ಯೂನಿವರ್ಸ್‌ ರೆಡಿಯಾಗಿರುತ್ತೆ. ಆದರೆ ಹೀಗೆ ರೆಡಿಯಾದವರಿಗೆಲ್ಲಾ ಪ್ರೇಕ್ಷಕರು ಪ್ರತಿ ಬಾರಿ ರತ್ನಗಂಬಳಿ ಹಾಕಿ ಸ್ವಾಗತವನ್ನು ಮಾಡುತ್ತಿಲ್ಲ. ಬದಲಿಗೆ ಸಾರಾಸಗಟವಾಗಿ ತಮಗೆ ಇಷ್ಟವಾಗದ ಸಿಕ್ವೆಲ್‌ಗಳನ್ನು ರಿಜೆಕ್ಟ್ ಮಾಡುತ್ತಿದ್ದಾರೆ. ಇನ್ನು ಬದಲಾದ ಈ ಕಾಲದಲ್ಲಿ ಕೇವಲ ಸ್ಟಾರ್‌ ವ್ಯಾಲ್ಯೂ ಎನ್‌ ಕ್ಯಾಶ್ ಮಾಡಿಕೊಂಡು ಕ್ಯಾಶ್ ಎಣಿಸುವುದು ತುಂಬಾನೇ ಕಷ್ಟ. ಉದಾಹರಣೆಗೆ ''ಪತಿ ಪತ್ನಿ ಔರ್ ವೋ ದೋ'' ಚಿತ್ರವನ್ನೇ ತೆಗೆದುಕೊಳ್ಳಿ.

pati-patni-aur-woh-do-spikes-43-on-day-2-inches-closer-to-10-crore-mark

ಬಾಕ್ಸಾಫೀಸ್‌ನಲ್ಲಿ ಬೀಳಲಿಲ್ಲ ಹಣದ ಮಳೆ

ಹೌದು, ''ಪತಿ ಪತ್ನಿ ಔರ್ ವೋ ದೋ''.. ಹಿಂದಿ ಉದ್ಯಮದ ಪ್ರತಿಭಾವಂತ ಆಯುಷ್ಮಾನ್ ಖುರಾನ ಅಭಿನಯದ ಚಿತ್ರ. ವಿಭಿನ್ನ ಕಥಾಹಂದರದ ಚಿತ್ರಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿರುವ ಆಯುಷ್ಮಾನ್ ಸದ್ಯ ''ಪತಿ ಪತ್ನಿ ಔರ್ ವೋ ದೋ'' ಚಿತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ.

ಆದರೆ ಇವರಿಗೆ ಈ ಬಾರಿ ಸಿಕ್ಕ ಜನ ಬೆಂಬಲ ಅಷ್ಟಕಷ್ಟೇ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಶುಕ್ರವಾರ ( ಮೇ 15) ತೆರೆಗೆ ಬಂದ ಈ ಚಿತ್ರ ಎರಡು ದಿನದಲ್ಲಿ ಕೇವಲ ₹9.75 ಕೋಟಿಯನ್ನು ಮಾತ್ರ ಗಳಿಸಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶ ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿ ಮಾಡಿದೆ.


ಸ್ಯಾಕ್ನಿಲ್ ಪ್ರಕಾರ ''ಪತಿ ಪತ್ನಿ ಔರ್ ವೋ ದೋ'' ಚಿತ್ರದ ಮೊದಲ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ದಿನ ಭಾರತದ ನಿವ್ವಳ ಗಳಿಕೆ (India Net)
ಮೊದಲ ದಿನ (ಶುಕ್ರವಾರ) ₹4.00 ಕೋಟಿ
ಎರಡನೇ ದಿನ ( ಶನಿವಾರ) ₹5.75 ಕೋಟಿ


ಒಟ್ಟು ಗಳಿಕೆ - ₹9.75 ಕೋಟಿ

ನಿಜಾ, ಎರಡನೇ ದಿನ ಚಿತ್ರದ ಗಳಿಕೆಯಲ್ಲಿ 43.8% ಏರಿಕೆ ಕಂಡು ಬಂದಿದೆ. ಇಂದು ( ಮೇ17) ಈ ಚಿತ್ರದ ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆಯೂ ಇದೆ. ಆದರೆ ಅಸಲಿ ಅಗ್ನಿ ಪರೀಕ್ಷೆ ಈ ಚಿತ್ರಕ್ಕೆ ಶುರುವಾಗುವುದು ನಾಳೆಯಿಂದ (ಮೇ 18 ).

ಕಾರ್ತಿಕ್ ಆರ್ಯನ್ ಮಾಡಿದ್ದ ಮ್ಯಾಜಿಕ್ ಮಾಡ್ಲಿಲ್ಲ ಆಯುಷ್ಮಾನ್ ಖುರಾನ

ಇನ್ನೂ ''ಪತಿ ಪತ್ನಿ ಔರ್ ವೋ ದೋ'' 2019ರಲ್ಲಿ ಬಂದಿದ್ದ ''ಪತಿ ಪತ್ನಿ ಔರ್ ವೋ'' ಚಿತ್ರದ ಎರಡನೇ ಭಾಗ. ಕಥೆ ಬೇರೆ.. ಪಾತ್ರಧಾರಿಗಳು ಬೇರೆ.. ಆದರೆ ಫ್ರಾಂಚೈಸಿ ಒಂದೇ.

2019ರಲ್ಲಿ ಬಂದಿದ್ದ ''ಪತಿ ಪತ್ನಿ ಔರ್ ವೋ'' ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ನಾಯಕನ ಪಾತ್ರ ನಿರ್ವಹಿಸಿದ್ದರು. ಆ ಕಾಲದಲ್ಲಿ ಮೊದಲ ದಿನವೇ ₹10.50 ಕೋಟಿಯನ್ನು ಈ ಚಿತ್ರ ಗಳಿಸಿತ್ತು. ಎರಡನೇ ದಿನ ₹14.00 ಕೋಟಿಯನ್ನು ಕೊಳ್ಳೆ ಹೊಡೆದಿತ್ತು.

ಈ ಚಿತ್ರದ ಗಳಿಕೆಗೆ ಹೋಲಿಸಿದರೆ ''ಪತಿ ಪತ್ನಿ ಔರ್ ವೋ ದೋ'' ಚಿತ್ರದ ಈ ಗಳಿಕೆ ತುಂಬಾನೇ ಕಡಿಮೆ. ಈ ಹಿನ್ನೆಲೆ ಮುಂದಿನ ಒಂದು ವಾರ ಆಯುಷ್ಮಾನ್ ಖುರಾನ ಮತ್ತು ''ಪತಿ ಪತ್ನಿ ಔರ್ ವೋ ದೋ'' ಚಿತ್ರತಂಡಕ್ಕೆ ತುಂಬಾನೇ ಮಹತ್ವದ್ದು. ಈ ಅಗ್ನಿ ಪರೀಕ್ಷೆಯಲ್ಲಿ ಈ ತಂಡ ಸೋಲುತ್ತಾ..? ಗೆಲ್ಲುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Massive Saturday spike for Pati Patni Aur Woh Do! Find out how much Ayushmann Khurrana’s sequel collected on Day 2 and if it crossed the ₹10 cr mark.
Read more about: bollywood sara ali khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X