OG Day 1 Boxoffice Collection: ಪವನ್ 'ಓಜಿ' ಫಸ್ಟ್ ಡೇ ಕಲೆಕ್ಷನ್ ಘೋಷಣೆ; ಇಲ್ಲಿದೆ ಲೆಕ್ಕ

ಸುಜಿತ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'OG' ಸಿನಿಮಾ ಸದ್ದು ಮಾಡ್ತಿದೆ. ಒಂದಷ್ಟು ತಪ್ಪುಗಳ ಹೊರತಾಗಿಯೂ ಸಿನಿಮಾ ಅಭಿಮಾನಿಗಳ ಮನಗೆಲ್ಲುವಲ್ಲಿ ಸಫಲವಾಗಿದೆ. ಚಿತ್ರಕ್ಕೆ ಬಹುತೇಕ ಪಾಸಿಟಿವ್ ಟಾಕ್ ಬಂದಿದೆ. ಭರ್ಜರಿ ಪ್ರೀಮಿಯರ್‌ಗಳ ಮೂಲಕ ದರ್ಬಾರ್ ಮಾಡಿದ್ದ 'OG' ಪವನ್ ಮೊದಲ ದಿನ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದಾರೆ.

'ಬಾಷಾ' ಹಾಗೂ 'ಕಬಾಲಿ' ಶೈಲಿಯ ಗ್ಯಾಂಗ್‌ಸ್ಟರ್ ಡ್ರಾಮಾ ಸಿನಿಮಾ ಇದು. ಗ್ಯಾಂಗ್‌ಸ್ಟರ್ ಓಜಸ್ ಗಂಭೀರ ಆಗಿ ಪವನ್ ಅಬ್ಬರಿಸಿದ್ದಾರೆ. ಪುತ್ರ ಅಕಿರಾ ಕೂಡ ಸಣ್ಣ ಝಲಕ್‌ನಲ್ಲಿ ಕಾಣಿಸಿಕೊಂಡಿದ್ದಾನೆ. ಬಾಲಿವುಡ್ ನಟ ಇಮ್ರಾನ್ ಹಶ್ಮಿ ವಿಲನ್ ಆಗಿ ಅಬ್ಬರಿಸಿದ್ದು ಪವನ್ ಎದುರು ಸವಾಲ್ ಹಾಕಿದ್ದಾರೆ. ಪ್ರಿಯಾಂಕಾ ಮೋಹನ್ ನಾಯಕಿಯಾಗಿ ಮಿಂಚಿದ್ದಾರೆ. ಪ್ರಕಾಶ್ ರಾಜ್, ಅರ್ಜುನ್ ದಾಸ್, ಭಜರಂಗಿ ಲೋಕಿ ಚಿತ್ರದ ತಾರಾಗಣದಲ್ಲಿದ್ದಾರೆ. ಎಸ್. ತಮನ್ ಮ್ಯೂಸಿಕ್ ಚಿತ್ರದ ಜೀವಾಳವಾಗಿದೆ.

Pawan Kalyan s OG Storms Box Office with 100 Crore Worldwide Opening

ಪವನ್ ಎಂಟ್ರಿ ಸೀನ್, ಟೈಟಲ್ ಕಾರ್ಡ್, ಪೊಲೀಸ್ ಸ್ಟೇಷನ್ ಸೀನ್, ಇಂಟರ್‌ವಲ್ ಬ್ಯಾಂಗ್ ಹಾಗೂ ಕ್ಲೈಮ್ಯಾಕ್ಸ್ ಅಭಿಮಾನಿಗಳನ್ನು ರಂಜಿಸುತ್ತಿದೆ. ಫಸ್ಟ್ ಹಾಫ್ ಸೂಪರ್ ಎನಿಸಿಕೊಂಡರೂ ಸೆಕೆಂಡ್ ಹಾಫ್ ಕೊಂಚ ನಿರಾಸೆ ಮೂಡಿಸುತ್ತದೆ. ಆದರೂ ಕ್ಲೈಮ್ಯಾಕ್ಸ್ ಮತ್ತೆ ಚಿತ್ರವನ್ನು ಮೇಲೆತ್ತುತ್ತದೆ. ಇನ್ನು ಪ್ರಭಾಸ್ ನಟನೆಯು 'ಸಾಹೋ' ಚಿತ್ರದ ಜೊತೆ 'OG' ಚಿತ್ರಕ್ಕೆ ಲಿಂಕ್ ಇಟ್ಟು ಸುಜಿತ್ ಕುತೂಹಲ ಮೂಡಿಸಿದ್ದಾರೆ.

ಬುಧವಾರ ರಾತ್ರಿಯಿಂದಲೇ 'OG' ಸಿನಿಮಾ ಪ್ರೀಮಿಯರ್ ಶೋಗಳು ಶುರುವಾಗಿತ್ತು. ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಕೆಲವೆಡೆ ಟಿಕೆಟ್ ದರ ಹೆಚ್ಚಿಸಿ ಭರ್ಜರಿ ಕಲೆಕ್ಷನ್ ಮಾಡಿದ್ದಾರೆ. ಪವನ್ ಕಲ್ಯಾಣ್ ಸಿನಿಮಾಗಳು ಇತ್ತೀಚೆಗೆ ದೊಡ್ಡದಾಗಿ ಸದ್ದು ಮಾಡಿರಲಿಲ್ಲ. ಆ ಬರವನ್ನು 'OG' ಸಿನಿಮಾ ಸಿನಿಮಾ ನೀಗಿಸಿದೆ. ಪ್ರೀಮಿಯರ್ ಶೋಗಳು ಹಾಗೂ ಫಸ್ಟ್‌ ಡೇ ಕಲೆಕ್ಷನ್ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಿದೆ. ಅಧಿಕೃತವಾಗಿ ಕಲೆಕ್ಷನ್ ಬಗ್ಗೆ ಇದೀಗ ಮಾಹಿತಿ ಲಭ್ಯವಾಗಿದೆ.

'OG' ಸಿನಿಮಾ ಅಷ್ಟೇನೂ ನಿರೀಕ್ಷೆ ಮೂಡಿಸಿರಲಿಲ್ಲ. ಆದರೆ ಇತ್ತೀಚೆಗೆ ಬಂದಿದ್ದ ಟ್ರೈಲರ್ ಗಮನ ಸೆಳೆದು ಅಭಿಮಾನಿಗಳು ಫಸ್ಟ್ ಡೇ ಸಿನಿಮಾ ನೋಡಬೇಕು ಎನ್ನುವ ಕಾತರ ಮೂಡುವಂತೆ ಮಾಡಿತ್ತು. ಸಿನಿಮಾ ಪ್ರೀಮಿಯರ್ ಶೋ ಹಾಗೂ ಮೊದಲ ದಿನದ ಕಲೆಕ್ಷನ್ ಸೇರಿ ವಿಶ್ವದಾದ್ಯಂತ 154 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಡಿವಿವಿ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಘೋಷಿಸಿದೆ. ಇದು ಸಹಜವಾಗಿಯೇ ಪವನ್ ಕಲ್ಯಾಣ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿ ಕೂಡ 'OG' ಸಿನಿಮಾ ದೊಡ್ಡಮಟ್ಟದಲ್ಲಿ ಬಿಡುಗಡೆಯಾಗಿದೆ. ಸಿನಿಮಾ ಟಿಕೆಟ್ ದರ 200 ರೂ. ನಿಗದಿ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಹಾಗಾಗಿ ಕ್ರೇಜ್‌ಗೆ ತಕ್ಕಂತೆ 'OG' ಚಿತ್ರದ ಟಿಕೆಟ್ ದರ ಹೆಚ್ಚಿಸಲಾಗಿತ್ತು. ನಗರದಲ್ಲಿ ಕೆಲ ಗೋಲ್ಡ್ ಕ್ಲಾಸ್ ಸ್ಕ್ರೀನ್‌ಗಳಲ್ಲಿ ಒಂದು ಟಿಕೆಟ್ 900 ರೂ.ವರೆಗೆ ಮಾರಾಟವಾಗಿದೆ. ಸಿಂಗಲ್‌ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 400 ರೂ, 500 ರೂ,ಗೆ ಟಿಕೆಟ್ ಸೇಲ್ ಮಾಡಿದ್ದಾರೆ.

ಎರಡು ತಿಂಗಳ ಹಿಂದೆ ಬಂದಿದ್ದ ಪವನ್ ಕಲ್ಯಾಣ್ ನಟನೆಯ 'ಹರಿಹರ ವೀರಮಲ್ಲು' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಆದರೆ 'OG' ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಕ್ಕಿದೆ. 90 ಕೋಟಿ ರೂ.ಗೆ ಓಟಿಟಿ ಡೀಲ್ ಕುದುರಿಸುವುದಾಗಿ ಹೇಳಲಾಗ್ತಿದೆ. ಇನ್ನು ಸ್ಯಾಟಲೈಟ್ ರೈಟ್ಸ್ ಸೇರಿದರೆ ಫಸ್ಟ್ ವೀಕೆಂಡ್‌ನಲ್ಲೇ ನಿರ್ಮಾಪಕರು ಸೇಫ್ ಆಗುತ್ತಾರೆ. 'OG' ಸಕ್ಸಸ್ ಬೆನ್ನಲ್ಲೇ ಪವನ್ ಕಲ್ಯಾಣ್ ಹಾಗೂ ಪ್ರಭಾಸ್ ಒಂದೇ ಚಿತ್ರದಲ್ಲಿ ನಟಿಸ್ತಾರಾ? ಎನ್ನುವ ಚರ್ಚೆ ಶುರುವಾಗಿದೆ.

More from Filmibeat

English summary
OG Creates Box Office Tsunami, Crosses ₹100 Crore Worldwide on Release Day
Read more about: pawan kalyan tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X