Ustaad Bhagat Singh day 1 Boxoffice: ಮೊದಲ ದಿನ 'ಉಸ್ತಾದ್ ಭಗತ್ ಸಿಂಗ್' ಕಲೆಕ್ಷನ್ ಎಷ್ಟು?
ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಈ ವಾರ ತೆರೆಗಪ್ಪಳಿಸಿದೆ. ಪವರ್ ಸ್ಟಾರ್ ಫ್ಯಾನ್ಸ್ ಮನ ಗೆಲ್ಲುವಲ್ಲಿ ಸಕ್ಸಸ್ ಕಂಡಿದೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಕ್ಕಿದೆ. ಒಂದು ದಿನ ಮುನ್ನ ಕೆಲವೆಡೆ ಪ್ರೀಮಿಯರ್ ಶೋಗಳು ಆರಂಭವಾಗಿದ್ದವು. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಚಿತ್ರಕ್ಕೆ ಹರೀಶ್ ಶಂಕರ್ ಆಕ್ಷನ್ ಕಟ್ ಹೇಳಿದ್ದಾರೆ.
ಪವನ್ ಹಾಗೂ ಹರೀಶ್ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಗಬ್ಬರ್ ಸಿಂಗ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇವತ್ತಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಅದೇ ಮ್ಯಾಜಿಕ್ ರೀ-ಕ್ರಿಯೇಟ್ ಮಾಡುವಲ್ಲಿ ಜೋಡಿ ವಿಫಲವಾಗಿದೆ. ಆದರೂ ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ಅಂಶಗಳನ್ನು ಸೇರಿಸಿ ಈ ಕಾಪ್ ಡ್ರಾಮಾ ಕಟ್ಟಿಕೊಡಲಾಗಿದೆ. ಪವನ್ ಕಲ್ಯಾಣ್ ಜೋಡಿಯಾಗಿ ಶ್ರೀಲೀಲಾ ನಟಿಸಿದ್ದಾರೆ. ಆಂಧ್ರ ಡಿಸಿಎಂ ಆಗಿ ಆಯ್ಕೆ ಆದ ಬಳಿಕ ಬಿಡುಗಡೆ ಆಗಿರುವ ಪವನ್ ಕಲ್ಯಾಣ್ 3ನೇ ಸಿನಿಮಾ ಇದಾಗಿದೆ.

ದೇಶ ವಿದೇಶಗಳಲ್ಲಿ 'ಧುರಂಧರ್'- 2 ಆರ್ಭಟ ಜೋರಾಗಿದೆ. ಅದರ ನಡುವೆಯೂ 'ಉಸ್ತಾದ್ ಭಗತ್ ಸಿಂಗ್' ಸದ್ದು ಮಾಡ್ತಿದ್ದಾನೆ. ಚಿತ್ರತಂಡ ಅಂತೂ ಸಖತ್ ಖುಷಿಯಾಗಿದೆ. ಇತ್ತೀಚೆಗೆ ತೆಲುಗಿನ ಸ್ಟಾರ್ ನಟರ ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾ ಗಳಿಕೆ ಕಮ್ಮಿ ಎನಿಸುತ್ತದೆ. ಆದರೂ ಹಬ್ಬದ ವೀಕೆಂಡ್ ಸಿನಿಮಾ ಗೆಲುವಿನ ದಡ ಸೇರುವ ಸುಳಿವು ಸಿಗುತ್ತಿದೆ.
ಮೊದಲ ದಿನದ ಕಲೆಕ್ಷನ್
'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಮೊದಲ ದಿನ ಭಾರತದಲ್ಲಿ 32 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ Sacnilk.com ವೆಬ್ ಸೈಟ್ ವರದಿ ಮಾಡಿದೆ. ವಿಶ್ವದಾದ್ಯಂತ 48 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಅಧಿಕೃತವಾಗಿ ಚಿತ್ರತಂಡ ಈ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ.

ತೆಲಂಗಾಣದಲ್ಲಿ ಕಲೆಕ್ಷನ್
ಅಂದಹಾಗೆ ಮೊದಲ ದಿನ 68.01% ಆಕ್ಯುಪೆನ್ಸಿ ದಾಖಲಾಗಿತ್ತು. ಇನ್ನು ಆಂಧ್ರಪ್ರದೇಶದಲ್ಲಿ 19.40 ಕೋಟಿ ರೂ. ಹಾಗೂ ತೆಲಂಗಾಣದಲ್ಲಿ 9.10 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗ್ತಿದೆ. ಕರ್ನಾಟಕದಲ್ಲಿ ಕೂಡ ಪವನ್ ಕಲ್ಯಾಣ್ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ತೆಲಂಗಾಣದಲ್ಲಿ 'ಧುರಂಧರ್'-2 ಆರ್ಭಟ ಜೋರಾಗಿರುವುದರಿಂದ ಪವನ್ ಚಿತ್ರಕ್ಕೆ ಕೊಂಚ ಹಿನ್ನಡೆ ಆಗಿದೆ ಎನ್ನಲಾಗ್ತಿದೆ.
ವೀರಮಲ್ಲುಗಿಂತ ಕಮ್ಮಿ
ಪವನ್ ಕಲ್ಯಾಣ್ ನಟನೆಯ 'ಹರಿಹರ ವೀರಮಲ್ಲು' ಸಿನಿಮಾ ಕಳೆದ ವರ್ಷ ತೆರೆಗೆ ಬಂದು ಸೋತಿತ್ತು. ಭಾರೀ ಓಪನಿಂಗ್ ಸಿಕ್ಕರೂ ಸಿನಿಮಾ ಪ್ರೇಕಕರನ್ನು ರಂಜಿಸಲುವಲ್ಲಿ ವಿಫಲವಾಗಿತ್ತು. ಆದರೂ ಮೊದಲ ದಿನ 64 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅದಕ್ಕಿಂತಲೂ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಗಳಿಕೆ ಕಮ್ಮಿ ಎನ್ನುವಂತಾಗಿದೆ. ಇನ್ನು ಪವನ್ ನಟನೆಯ 'OG' ಸಿನಿಮಾ ಮೊದಲ ದಿನ 140 ಕೋಟಿ ರೂ. ದೋಚಿತ್ತು. ಅದರಲ್ಲಿ ಅರ್ಧ ಭಾಗ ಕೂಡ ಭಗತ್ ಸಿಂಗ್ ಕಲೆಕ್ಷನ್ ಮಾಡಿಲ್ಲ.
'ಧುರಂಧರ್- 2' ಪೈಪೋಟಿ
ಆದಿತ್ಯಧರ್ ನಿರ್ದೇಶನದ 'ಧುರಂಧರ್- 2' ಸಿನಿಮಾ ಸಂಚಲನ ಸೃಷ್ಟಿಸಿದೆ. ಕಳೆದ ವರ್ಷ ತೆರೆಗೆ ಬಂದಿದ್ದ 'ಧುರಂಧರ್' ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಸಹಜವಾಗಿಯೇ ಸೀಕ್ವೆಲ್ ನಿರೀಕ್ಷೆ ಹುಟ್ಟಾಕ್ಕಿತ್ತು. ಪವರ್ ಸ್ಟಾರ್ ಅಭಿಮಾನಿಗಳು ಬಿಟ್ಟು ಬಹುತೇಕರ ಮೊದಲ ಆಯ್ಕೆ 'ಧುರಂಧರ್- 2' ಆಗಿತ್ತು. ಹಾಗಾಗಿ ಮೊದಲ ದಿನ ಪವನ್ ಚಿತ್ರದ ಕಲೆಕ್ಷನ್ ಕೊಂಚ ಕಮ್ಮಿ ಆಗಿದೆ. ಈಗ ಎರಡೂ ಸಿನಿಮಾಗಳು ಹೇಗಿದೆ ಎನ್ನುವುದು ಗೊತ್ತಾಗಿದೆ. ಮುಂದೆ ಸಿನಿಮಾಗಳ ಕಲೆಕ್ಷನ್ ಲೆಕ್ಕ ಏನಾಗುತ್ತದೆ ಕಾದು ನೋಡಬೇಕಿದೆ.


Click it and Unblock the Notifications











