Peddi Day 11 Boxoffice: 2ನೇ ಭಾನುವಾರ 'ಪೆದ್ದಿ' ದೋಚಿದ್ದೆಷ್ಟು? ಒಟ್ಟು ಕರ್ನಾಟಕದ ಪಾಲು ಎಷ್ಟಾಯ್ತು?

ರಾಮ್‌ಚರಣ್ 'ಪೆದ್ದಿ' ವಿಜಯಯಾತ್ರೆ ಮುಂದುವರೆದಿದೆ. ಸಿನಿಮಾ 2ನೇ ವಾರ ಯಶಸ್ವಿ ಪ್ರದರ್ಶನ ಕಾಣ್ತಿದ್ದು 3ನೇ ವಾರದತ್ತ ಮುನ್ನುಗ್ಗುತ್ತಿದೆ. ಎಲ್ಲಾ ನೆಗೆಟಿವ್ ಕಾಮೆಂಟ್ಸ್, ಟೀಕೆಗಳನ್ನು ಹಿಮ್ಮೆಟ್ಟಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 2ನೇ ಸೋಮವಾರ ಕೂಡ ಬುಕ್‌ಮೈಶೋನದಲ್ಲಿ ಗಂಟೆಗೆ 1000 ಟಿಕೆಟ್ ಬುಕ್ ಆಗ್ತಿದೆ. ಇದು 'ಪೆದ್ದಿ' ಕ್ರೇಜ್‌ಗೆ ಕನ್ನಡಿ.

ಜೂನ್ 4ರಂದು 'ಪೆದ್ದಿ' ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಒಂದು ದಿನ ಮುನ್ನವೇ ಸಿನಿಮಾ ಪ್ರೀಮಿಯರ್ ಶೋಗಳು ಶುರುವಾಗಿತ್ತು. ಮೊದಲ ಶೋನಿಂದಲೇ ಪಾಸಿಟಿವ್ ಟಾಕ್ ಬಂತು. ಆದರೂ ಕೆಲವರು ಟೀಕಿಸಿದ್ದರು. ಓಕೆ ಓಕೆ ಸಿನಿಮಾ ಎಂದುಬಿಟ್ಟರು. ಅದನ್ನೆಲ್ಲಾ ಮೀರಿ 'ಪೆದ್ದಿ' ಆರ್ಭಟ ಮುಂದುವರೆಸಿದ್ದಾನೆ. ಎರಡು ವೀಕೆಂಡ್ ಮುಕ್ತಾಯವಾಗಿದೆ. 2ನೇ ಶನಿವಾರ ಹಾಗೂ ಭಾನುವಾರ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.

Peddi Box Office Report day 11 Ramcharan s film performs well in second weekend too

'ಪೆದ್ದಿ' ಬಾಕ್ಸಾಫೀಸ್ ಕಲೆಕ್ಷನ್ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಸ್ವತಃ ಚಿತ್ರತಂಡವೇ ಪ್ರತಿದಿನದ ಕಲೆಕ್ಷನ್ ಅಪ್‌ಡೇಟ್ ಕೊಡ್ತಿದ್ದಾರೆ. ಸಿನಿಮಾ ಸದ್ಯ 400 ಕೋಟಿ ರೂ. ಬಾಕ್ಸಾಫೀಸ್ ಕ್ಲಬ್ ಸೇರುವ ಸನಿಹದಲ್ಲಿದೆ. ಇವತ್ತೇ(ಜೂನ್ 15) ಆ ಗಡಿಯನ್ನು ದಾಟುವುದು ಪಕ್ಕಾ ಎನ್ನುವಂತಾಗಿದೆ. ಚಿತ್ರಮಂದಿರಗಳಲ್ಲಿ ಇನ್ನು ಒಂದು ವಾರ ರಾಮ್‌ಚರಣ್ ದರ್ಬಾರ್ ಅನಾಯಾಸವಾಗಿ ಮುಂದುವರೆಯಲಿದೆ.

393 ಕೋಟಿ ರೂ. ಗಳಿಕೆ

ಜೂನ್ 3ರ ಪ್ರೀಮಿಯರ್ ಶೋಗಳು ಸೇರಿದಂತೆ ಈವರೆಗೆ ಸಿನಿಮಾ 393 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ. ಮೊದಲ 11 ದಿನಕ್ಕೆ ಸಿನಿಮಾ ಭರ್ಜರಿ ಬೆಳೆ ತೆಗೆದಿದೆ. 400 ಕೋಟಿ ರೂ. ಗಡಿ ದಾಟಲು ಇನ್ನು 7 ಕೋಟಿ ರೂ. ಮಾತ್ರ ಬಾಕಿಯಿದೆ. ನಿನ್ನೆ 2ನೇ ಭಾನುವಾರ ಸಿನಿಮಾ 15 ಕೋಟಿ ರೂ. ತನ್ನ ಲೆಕ್ಕಕ್ಕೆ ಸೇರಿಸಿಕೊಂಡಿದೆ. ಕೆಲವೆಡೆ 11 ದಿನ ಕೂಡ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿದೆ.

ಕರ್ನಾಟಕದಲ್ಲಿ 'ಪೆದ್ದಿ' ಹವಾ

ಆಂಧ್ರ, ತೆಲಂಗಾಣ ಬಿಟ್ಟರೆ ಕರ್ನಾಟಕದಿಂದಲೇ 'ಪೆದ್ದಿ' ಚಿತ್ರಕ್ಕೆ ಒಳ್ಳೆ ಕಲೆಕ್ಷನ್ ಆಗಿದೆ. ರಾಜ್ಯದಲ್ಲಿ ಶನಿವಾರ ಹಾಗೂ ಭಾನುವಾರ ಸಿನಿಮಾ ಕಲೆಕ್ಷನ್ 1 ಕೋಟಿ ರೂ. ದಾಟಿದೆ. ಒಟ್ಟಾರೆ 11 ದಿನಕ್ಕೆ 29 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಅಂದಾಜಿಸಲಾಗ್ತಿದೆ. ಕರ್ನಾಟಕದಲ್ಲಿ ಪರಭಾಷೆ ಚಿತ್ರಕ್ಕೆ ಈ ಮಟ್ಟಿಗೆ ರೆಸ್ಪಾನ್ಸ್ ಸಿಗುತ್ತಿರುವುದು ವಿಶೇಷ.

'ಪೆದ್ದಿ' ಚಿತ್ರಕ್ಕೆ ಹೊಸರೂಪ

ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಚಿತ್ರದ ಒಂದಷ್ಟು ದೃಶ್ಯಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ವಿವಾದ ಸೃಷ್ಟಿಯಾಗಿ ನಿರ್ದೇಶಕರು ಕ್ಷಮೆ ಕೂಡ ಕೇಳಿದ್ದಾರೆ. ತಪ್ಪಾಗಿರುವ ದೃಶ್ಯಗಳನ್ನು ತೆಗೆಯುವುದಾಗಿ ಹೇಳಿದ್ದಾರೆ. ಆದರೆ 10 ದಿನ ಕಳೆದರೂ ಆ ದೃಶ್ಯಗಳು ಸಿನಿಮಾದಲ್ಲಿದೆ. ಬುಧವಾರದಿಂದ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಒಂದೆರಡು ಹೊಸ ದೃಶ್ಯಗಳನ್ನು ಸೇರಿಸುವುದಾಗಿ ನಿರ್ದೇಶಕರು ಹೇಳಿದ್ದಾರೆ.

'ಪೆದ್ದಿ' ಕರ್ನಾಟಕ

ಅಂದಾಜು 300 ಕೋಟಿ ರೂ. ಬಜೆಟ್ ಸಿನಿಮಾ 'ಪೆದ್ದಿ' ಎನ್ನಲಾಗ್ತಿದೆ. ಕಲಾವಿದರು, ತಂತ್ರಜ್ಞರಿಗೆ ಭಾರೀ ಸಂಭಾವನೆ ಕೊಟ್ಟಿರುವುದಾಗಿ ಚರ್ಚೆ ನಡೀತಿದೆ. ಆದರೆ ಈ ಬಗ್ಗೆ ಅಧಿಕೃತ ಲೆಕ್ಕ ಸಿಕ್ಕಿಲ್ಲ. ಅತಿಯಾದ ಬಜೆಟ್ ಕಾರಣದಿಂದ ಹೆಚ್ಚಿನ ಲಾಭ ನಿರೀಕ್ಷಿಸುವುದು ಕಷ್ಟ ಎನ್ನುವಂತಾಗಿದೆ. ಓಟಿಟಿ, ಸ್ಯಾಟಲೈಟ್ ರೈಟ್ಸ್ ಒಳ್ಳೆ ದರಕ್ಕೆ ಮಾರಾಟವಾಗಿ ನಿರ್ಮಾಪಕರು ಸೇಫ್ ಎನಿಸಿಕೊಂಡಿದ್ದಾರೆ.

ಓಟಿಟಿ ರಿಲೀಸ್ ಡೇಟ್

ನೆಟ್‌ಫ್ಲಿಕ್ಸ್ ಸಂಸ್ಥೆ ಭಾರೀ ಮೊತ್ತಕ್ಕೆ 'ಪೆದ್ದಿ' ಓಟಿಟಿ ರೈಟ್ಸ್ ಕೊಂಡುಕೊಂಡಿದೆ. ಜೀ ಸಂಸ್ಥೆಗೆ ಟಿವಿ ರೈಟ್ಸ್ ಸಿಕ್ಕಿದೆ. ಜುಲೈ ಮೊದಲ ವಾರದಲ್ಲಿ ಸಿನಿಮಾ ಓಟಿಟಿಗೆ ಬರುವ ನಿರೀಕ್ಷೆ ಹೆಚ್ಚಾಗಿದೆ.

Read more about: tollywood shivarajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X