Peddi Karnataka Boxoffice: ಕರ್ನಾಟಕದಲ್ಲಿ ತಂದೆ 'ವರಪ್ರಸಾದ್' ದಾಖಲೆ ಮುರಿದ 'ಪೆದ್ದಿ'; ಕನ್ನಡ ವರ್ಷನ್ ಗಳಿಸಿದ್ದೆಷ್ಟು?

ನೆಗೆಟಿವ್ ಟಾಕ್ ಏನೇ ಇದ್ದರೂ ಬಾಕ್ಸಾಫೀಸ್‌ನಲ್ಲಿ 'ಪೆದ್ದಿ' ಆರ್ಭಟ ಕಮ್ಮಿ ಆಗಿಲ್ಲ. ಸೋಮವಾರ ಪರೀಕ್ಷೆಯನ್ನು ಸಿನಿಮಾ ಗೆದ್ದು ಮುನ್ನುಗ್ಗುತ್ತಿದೆ. ಎಲ್ಲೆಡೆ ಸಿನಿಮಾಗಳ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಕರ್ನಾಟಕದಲ್ಲಿ ಕೂಡ 'ಪೆದ್ದಿ' ರಾಮ್‌ಚರಣ್ ದರ್ಬಾರ್ ಜೋರಾಗಿದೆ. ಈ ವರ್ಷ ರಾಜ್ಯದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ತೆಲುಗು ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮುಖ್ಯವಾಗಿ ಬೆಂಗಳೂರಿನಲ್ಲಿ 'ಪೆದ್ದಿ' ಚಿತ್ರಕ್ಕೆ ರೆಸ್ಪಾನ್ಸ್ ಚೆನ್ನಾಗಿದೆ. ಮಲ್ಟಿಪ್ಲೆಕ್ಸ್, ಸಿಂಗಲ್ ಸ್ಕ್ರೀನ್‌ ಎಲ್ಲಾ ಕಡೆ ಪ್ರೇಕ್ಷಕರು ಸಿನಿಮಾ ನೋಡುತ್ತಿದ್ದಾರೆ. ವಿವಾದದಿಂದ ಸಿನಿಮಾ ಬಗ್ಗೆ ಹೆಚ್ಚು ಪ್ರಚಾರವಾಗಿ ಮತ್ತಷ್ಟು ಜನ ಚಿತ್ರಮಂದಿರಗಳ ಕಡೆ ಮುಖ ಮಾಡುವಂತಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ಪೆದ್ದಿ' ಸಿನಿಮಾ ಬಿಡುಗಡೆಯಾಗಿದೆ. ಕನ್ನಡ ವರ್ಷನ್‌ಗೆ ಕೂಡ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. 1 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.

Peddi Creates History in Karnataka Ram Charan-Starrer Becomes Highest-Grossing telugu Film of 2026

ಇತ್ತೀಚೆಗೆ ಸಕ್ಸಸ್ ಮೀಟ್ ಮಾಡಿ 'ಪೆದ್ದಿ' ಚಿತ್ರತಂಡ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದೆ. ಮತ್ತೊಂದು ಕಡೆ ಬುಡಕಟ್ಟು ಸಮುದಾಯದವರು ಚಿತ್ರತಂಡದ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸುವಂತೆ ಆಗ್ರಹಿಸಿ ದೂರು ನೀಡಿದ್ದಾರೆ. ಅದೆಲ್ಲದರ ನಡುವೆ ಸಿನಿಮಾ ಹೆಚ್ಚು ಪ್ರೇಕ್ಷಕರನ್ನು ಸೆಳೆಯುತ್ತಿದೆ. ನಿಧಾನವಾಗಿ ರಿಪೀಟ್ ಆಡಿಯನ್ಸ್ ಸಂಖ್ಯೆ ಹೆಚ್ಚುತ್ತಿದೆ. ವಿದೇಶಗಳಲ್ಲಿ ಕೂಡ ಸಿನಿಮಾ ಗಳಿಕೆ ಉತ್ತಮವಾಗಿದೆ.

315 ಕೋಟಿ ರೂ. ಕಲೆಕ್ಷನ್

ಮೊದಲ 5 ದಿನದಲ್ಲಿ ವಿಶ್ವದಾದ್ಯಂತ 'ಪೆದ್ದಿ' ಸಿನಿಮಾ 315 ಕೋಟಿ ರೂ. ಗಳಿಕೆ ಕಂಡಿರುವುದಾಗಿ ಚಿತ್ರತಂಡ ಘೋಷಿಸಿದೆ. ನಿನ್ನೆ(ಜೂನ್ 8) ಸೋಮವಾರ 23 ಕೋಟಿ ರೂ. ಕಲೆಕ್ಷನ್ ಮಾಡಿ ಸಿನಿಮಾ ಎಲ್ಲರ ಹುಬ್ಬೇರಿಸಿದೆ. ಆ ಮೂಲಕ ಸೋಮವಾರವೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು 400 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.

ಕರ್ನಾಟಕ ಕಲೆಕ್ಷನ್ ಲೆಕ್ಕ

ರಾಜ್ಯದಲ್ಲಿ ಮೊದಲ 5 ದಿನಕ್ಕೆ 'ಪೆದ್ದಿ' ಸಿನಿಮಾ 23.04 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕಿದ್ದಾರೆ. ಆಂಧ್ರ, ತೆಲಂಗಾಣ ಬಿಟ್ಟರೆ ಕರ್ನಾಟಕದಲ್ಲೇ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ಶಿವರಾಜ್‌ಕುಮಾರ್ ಕೂಡ ನಟಿಸಿರುವುದು ಇಲ್ಲಿ ಚಿತ್ರದ ಗಳಿಕೆಗೆ ವರವಾಗಿದೆ. ಚಿರಂಜೀವಿ ನಟನೆಯ 'ಮನ ಶಂಕರವರಪ್ರಸಾದ್‌ಗಾರು' ಸಿನಿಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಕಂಡು ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಕರ್ನಾಟಕದಲ್ಲಿ ಸಿನಿಮಾ 22.55 ಕೋಟಿ ರೂ. ದೋಚಿತ್ತು. ಆ ದಾಖಲೆಯನ್ನು 'ಪೆದ್ದಿ' ಮುರಿದಿದ್ದಾನೆ.

ಕನ್ನಡ ವರ್ಷನ್ ಕಲೆಕ್ಷನ್

'ಜೈಲರ್', 'ಪುಷ್ಪ', 'ಧುರಂಧರ್'-2 ಸೇರಿದಂತೆ ಕೆಲ ಪರಭಾಷಾ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಕರ್ನಾಟಕದಲ್ಲಿ ಸದ್ದು ಮಾಡಿವೆ. 'ಪೆದ್ದಿ' ಕನ್ನಡ ವರ್ಷನ್ ಕೂಡ ಇದೀಗ 1 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡಿದೆ. ಆ ಮೂಲಕ ರಾಜ್ಯದಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಒಳ್ಳೆ ಅವಕಾಶ ಇದೆ ಎನ್ನುವುದನ್ನು ಸಾಬೀತು ಪಡಿಸಿದೆ.

ಅಲ್ಲು ಅರ್ಜುನ್ ಪ್ರಶಂಸೆ

ನಿನ್ನೆ ರಾತ್ರಿ 'ಪೆದ್ದಿ' ಸಿನಿಮಾ ನೋಡ್ದೆ. ರಾಮ್‌ಚರಣ್ ಪರ್ಫಾರ್ಮನ್ಸ್ ಅದ್ಭುತ. ರಗಡ್ ಪರ್ಫಾರ್ಮನ್ಸ್. ಬಾಡಿ ಟ್ರಾನ್ಸ್‌ಫಾರ್ಮೇಷನ್ ಸೂಪರ್, ಗ್ರೇಸ್‌ಫುಲ್ ಡ್ಯಾನ್ಸ್ ಚಿಂದಿ. ಎಲ್ಲಾ ವಿಭಾಗದಲ್ಲಿ ಒಳ್ಳೆ ಪ್ರದರ್ಶನ ತೋರಿದ್ದಾರೆ. ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ದೊಡ್ಡ ಚಪ್ಪಾಳೆ. ಜಗಪತಿ ಬಾಬು ಹಾಗೂ ಎಲ್ಲಾ ಕಲಾವಿದರಿಂದ ಅದ್ಭುತ ಪ್ರದರ್ಶನ. ಜಾನ್ವಿಗೆ ನನ್ನ ಪ್ರೀತಿ. ಎಲ್ಲಾ ತಂತ್ರಜ್ಞರು ಮತ್ತು ನಿರ್ಮಾಪಕರಿಗೆ ಅಭಿನಂದನೆಗಳು. ರಾಮ್‌ಚರಣ್ ಅವರನ್ನು ಸೊಗಸಾಗಿ ತೋರಿಸಿದ್ದಕ್ಕೆ ಬುಚ್ಚಿಬಾಬು ಅವರಿಗೆ ಧನ್ಯವಾದ ಎಂದು ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದಾರೆ.

Read more about: ramcharan tollywood shivarajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X