Peddi Day 3 Boxoffice: ಶುಕ್ರವಾರಕ್ಕಿಂತ ಶನಿವಾರ ಹೆಚ್ಚು; 'ಪೆದ್ದಿ' ಕಲೆಕ್ಷನ್ ಲೆಕ್ಕ ಕೊಟ್ಟ ಚಿತ್ರತಂಡ

ರಾಮ್‌ಚರಣ್ ಹಾಗೂ ಶಿವರಾಜ್‌ಕುಮಾರ್ ನಟನೆಯ 'ಪೆದ್ದಿ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 5 ಭಾಷೆಗಳಲ್ಲಿ ಸಿನಿಮಾ ತೆರೆಕಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ತಿದೆ. ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಮೊದಲ 3 ದಿನಕ್ಕೆ ಸಿನಿಮಾ ಕಲೆಕ್ಷನ್ ಭರ್ಜರಿಯಾಗಿದೆ. ನಿಧಾನವಾಗಿ ಫ್ಯಾಮಿಲಿ ಆಡಿಯನ್ಸ್ ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ.

ವಿಶ್ವದಾದ್ಯಂತ ಸಾವಿರಾರು ಸ್ಕ್ರೀನ್‌ಗಳಲ್ಲಿ 'ಪೆದ್ದಿ' ಆರ್ಭಟ ನಡೀತಿದೆ. ರಾಮ್‌ಚರಣ್ ಪರ್ಫಾರ್ಮನ್ಸ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರ್ತಿದೆ. ಪ್ರೀಮಿಯರ್ ಶೋಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಐಪಿಎಲ್ ಗುಂಗಿನಿಂದ ಜನ ಹೊರಬಂದು ಸಿನಿಮಾ ನೋಡಲು ಚಿತ್ರಮಂದಿರಗಳ ಮುಖ ಮಾಡಿದ್ದಾರೆ. ಹಾಗಾಗಿ ವಿಮರ್ಶೆಗಳನ್ನು ಪಕ್ಕಕ್ಕಿಟ್ಟು ಸಿನಿಮಾ ನೋಡಲು ಮುಂದಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಜೋರಾಗಿ ಇದ್ದರೂ ಬಾಕ್ಸಾಫೀಸ್‌ನಲ್ಲಿ ಮೊದಲ 3 ದಿನಕ್ಕೆ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಭಾನುವಾರ(ಜೂನ್ 7) ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ನಿರೀಕ್ಷೆಯಿದೆ.

Peddi Day 3 Boxoffice collections Ram chran film records strong growth on day 3

3 ದಿನಗಳ ಕಲೆಕ್ಷನ್

'ಪೆದ್ದಿ' ಚಿತ್ರದ ಕಲೆಕ್ಷನ್ ಬಗ್ಗೆ ಚಿತ್ರತಂಡವೇ ಮಾಹಿತಿ ನೀಡುತ್ತಾ ಬರ್ತಿದೆ. ಪ್ರೀಮಿಯರ್ ಶೋಗಳು ಸೇರಿ ಮೊದಲ ದಿನ 135.36 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಹೇಳಿದ್ದರು. 2ನೇ ದಿನ 46 ಕೋಟಿ ರೂ. ಸೇರಿ ಒಟ್ಟು 181.8 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಲೆಕ್ಕ ಕೊಟ್ಟಿದ್ದರು. 3ನೇ ದಿನವೂ 55 ಕೋಟಿ ರೂ. ಗಳಿಕೆ ಕಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಮೊದಲ 3 ದಿನಕ್ಕೆ 'ಪೆದ್ದಿ' ಸಿನಿಮಾ 236.7 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದು ಖಚಿತವಾಗಿದೆ.

ಶನಿವಾರ ಹೆಚ್ಚು

ಬುಧವಾರವೇ 'ಪೆದ್ದಿ' ಸಿನಿಮಾ ಪ್ರೀಮಿಯರ್ ಶೋಗಳು ನಡೆದಿದ್ದವು. ಬಳಿಕ ಗುರುವಾರ ಮೊದಲ ದಿನ ಬೆಳ್ಳಂಬೆಳಗ್ಗೆ ಸಿನಿಮಾ ಪ್ರದರ್ಶನವಾಗಿತ್ತು. ಫಸ್ಟ್ ಡೇ ಸಿನಿಮಾ ನೋಡಬೇಕು ಎಂದು ಪ್ರೇಕ್ಷಕರು ಮುಗಿಬಿದ್ದ ಕಾರಣ ಒಳ್ಳೆ ಕಲೆಕ್ಷನ್ ಆಗಿತ್ತು. ಆದರೆ 2ನೇ ದಿನ ಶುಕ್ರವಾರ ಹಾಗಾಗಿ ಸಹಜವಾಗಿಯೇ ಬಾಕ್ಸಾಫೀಸ್‌ನಲ್ಲಿ ಸದ್ದು ಕಮ್ಮಿ ಆಗಿತ್ತು. ಶನಿವಾರ ವೀಕೆಂಡ್ ಆಗಿರುವುದರಿಂದ ಸಹಜವಾಗಿಯೇ ಜನ ರಜೆಯ ಲಾಭ ಪಡೆದು ಸಿನಿಮಾ ನೋಡಲು ಮನಸ್ಸು ಮಾಡಿದ್ದಾರೆ. ಹಾಗಾಗಿ ಶುಕ್ರವಾರಕ್ಕಿಂತ ಶನಿವಾರ ಕಲೆಕ್ಷನ್ ಹೆಚ್ಚಾಗಿದೆ.

ದೃಶ್ಯಗಳಿಗೆ ಕತ್ತರಿ

'ಪೆದ್ದಿ' ಸಿನಿಮಾ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಮುಖ್ಯವಾಗಿ ನಾಯಕಿ ಜಾನ್ವಿ ಕಪೂರ್ ಪಾತ್ರವನ್ನು ಚಿತ್ರಿಸಿರುವ ಬಗ್ಗೆ ಆಕ್ರೋಶ ವ್ಯಕ್ತವಾಗ್ತಿದೆ. ಈ ಬಗ್ಗೆ ನಿರ್ದೇಶಕ ಬುಚ್ಚಿಬಾಬು ಕ್ಷಮೆ ಕೋರಿದ್ದಾರೆ. ಆಕ್ಷೇಪ ವ್ಯಕ್ತವಾಗುತ್ತಿರುವ ದೃಶ್ಯಗಳಿಗೆ ಕತ್ತರಿ ಹಾಕುವುದಾಗಿ ಹೇಳಿದ್ದಾರೆ.

ಕರ್ನಾಟಕ ಕಲೆಕ್ಷನ್

ರಾಜ್ಯದಲ್ಲಿ ಕೂಡ 'ಪೆದ್ದಿ' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಮೊದಲ 3 ದಿನಕ್ಕೆ 16.9 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಅಂದಾಜಿಸಲಾಗ್ತಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿ ಪ್ರೀಮಿಯರ್ ಶೋಗಳು ಹಾಗೂ ಮೊದಲ ದಿನದ ಕಲೆಕ್ಷನ್ 8.85 ಕೋಟಿ ರೂ. ದಾಟಿತ್ತು. ಶುಕ್ರವಾರ 3.42 ಕೋಟಿ ರೂ. ಹಾಗೂ ಶನಿವಾರ 4.69 ಕೋಟಿ ರೂ. ಗಳಿಸಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

'ಪೆದ್ದಿ' ಓಟಿಟಿ

ನೆಟ್‌ಫ್ಲಿಕ್ಸ್ ಸಂಸ್ಥೆಗೆ 'ಪೆದ್ದಿ' ಚಿತ್ರದ ಓಟಿಟಿ ರೈಟ್ಸ್ ಮಾರಾಟವಾಗಿದೆ. ಜುಲೈ 2ನೇ ವಾರದಲ್ಲಿ ದಕ್ಷಿಣದ 4 ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸುವ ಸಾಧ್ಯತೆಯಿದೆ. ಹಿಂದಿ ವರ್ಷನ್ ಮಾತ್ರ 2 ತಿಂಗಳ ಬಳಿಕ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಲಿದೆ. ಇನ್ನು ಜೀ ಸಂಸ್ಥೆಗೆ ಸ್ಯಾಟಲೈಟ್ ರೈಟ್ಸ್ ಸೇಲ್ ಆಗಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ರಾಮ್‌ಚರಣ್ ಇದೀಗ 'ಪೆದ್ದಿ'ಯಾಗಿ ಗೆದ್ದಿದ್ದಾರೆ.

Read more about: ramcharan tollywood shivarajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X