ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ ರಾಜಾ ಸಾಬ್ ; ಪ್ರಭಾಸ್ ನಂಬಿ ನಿರ್ಮಾಪಕರು ಕಳೆದುಕೊಂಡಿದ್ದು ಎಷ್ಟು ಕೋಟಿ ?

ಚಿತ್ರರಂಗ ಮಾತ್ರ ಅಲ್ಲ ಯಾವುದೇ ಕ್ಷೇತ್ರವಾದರು ಕೂಡ ಅಲ್ಲಿ ಗೆಲುವು ಮತ್ತು ಸೋಲು ಮಾಮೂಲು. ಆದರೆ .. ಚಿತ್ರರಂಗದಲ್ಲಿ ಗೆದ್ದ ನಂತರ ಹಲವರು ಮೈಮರೆಯುತ್ತಾರೆ. ಎಚ್ಚರಿಕೆಯ ಹೆಜ್ಜೆಯನ್ನು ಇಡುವ ಬದಲು ಭ್ರಮಾ ಲೋಕದಲ್ಲಿ ತೇಲುತ್ತಾರೆ. ವಿಪರೀತವಾದ ಪ್ರಚಾರವನ್ನು ಕೂಡ ಪಡೆಯುತ್ತಾರೆ. ಕಣ್ತೆರೆದಾಗ ಪಾತಾಳಕ್ಕೆ ಕುಸಿದು ಬಿದ್ದಿರುವ ಅರಿವು ಇವರಿಗಾಗುತ್ತೆ. ಸೋಲಿನ ತೀವೃತೆ ಅಧಿಕವಾಗಿರುತ್ತೆ. ಮತ್ತೆ ಮೇಲಕ್ಕೇಳುವ..

ಪ್ರಯತ್ನವನ್ನು ಎಷ್ಟೇ ಮಾಡಿದರೂ ಕೂಡ ಗೆಲುವು ಎನ್ನುವುದು ಸಿಗದೇ ಮತ್ತೆ ಸತಾಯಿಸುತ್ತೆ. ಇಂಥಹದ್ದೊಂದು ಸೋಲಿನ ಕಮರಿಗೆ ಬಿದ್ದು ಒದ್ದಾಡುತ್ತಿರುವ ಪ್ರಭಾಸ್ ''ದಿ ರಾಜಾ ಸಾಬ್ '' ಚಿತ್ರದ ಮೂಲಕ ಕಳೆದು ಹೋದ ತಮ್ಮ ''ಸ್ಟಾರ್‌ಡಮ್‌''ನ ಮರಳಿ ಪಡೆಯುವ ಪ್ರಯತ್ನ ಮಾಡಿದ್ದರು. ಆದರೆ ..ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಪ್ರಭಾಸ್‌ಗೆ ಸೋಲಿನ ದರ್ಶನವಾಗಿದೆ. ಬಾಕ್ಸಾಫೀಸ್‌ನಲ್ಲಿ ಭಾರೀ ಮುಖಭಂಗವಾಗಿದೆ.

Prabhas 400 Crore Gamble Backfires The Raja Saab Faces Massive 200 Crore Deficit

ಹೌದು, ಒಂದು ಕಾಲದಲ್ಲಿ ''ಬಾಹುಬಲಿ'' ಮೂಲಕ ಭಾರತೀಯ ಚಿತ್ರರಂಗದ ದಿಕ್ಕು ಬದಲಿಸಿದ್ದ ಪ್ರಭಾಸ್ ಅವರನ್ನು ನಂಬಿ ಚಿತ್ರದ ನಿರ್ಮಾಪಕರಾದ ವಿಶ್ವ ಪ್ರಸಾದ್, ಕೃತಿ ಪ್ರಸಾದ್ ಮತ್ತು ಇಶಾನ್ ಸಕ್ಸೆನಾ ನೂರಲ್ಲ.. ಇನ್ನೂರಲ್ಲ.. ₹400 ಕೋಟಿ ಬಂಡವಾಳವನ್ನು ಹೂಡಿದ್ದರು. ನಿರ್ಮಾಪಕರ ನಿರೀಕ್ಷೆಗೆ ಅನುಗುಣವಾಗಿ ಮೊದಲ ದಿನ ''ದಿ ರಾಜಾ ಸಾಬ್'' ಭರ್ಜರಿ ಓಪನಿಂಗ್ ಪಡೆಯಿತು ಕೂಡ. ಕೇವಲ ಭಾರತದಲ್ಲಿಯೇ ₹ 53.75 ಕೋಟಿಯನ್ನು ಕೊಳ್ಳೆ ಹೊಡೆಯಿತು.

ಆದರೆ.. ಎರಡನೇ ದಿನವೇ ಗಳಿಕೆಯಲ್ಲಿ 51.63% ಕುಸಿತ ಕಂಡು ಬಂತು. ಸದ್ಯ ''ದಿ ರಾಜಾ ಸಾಬ್'' ಹನ್ನೊಂದು ದಿನಗಳನ್ನು ಪೂರೈಸಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ನಿನ್ನೆ ಕೇವಲ ₹ 1.15 ಕೋಟಿಯನ್ನು ಮಾತ್ರ ಈ ಚಿತ್ರ ಗಳಿಸಿದೆ. ಈ ಮೂಲಕ ಈ ಹನ್ನೊಂದು ದಿನದಲ್ಲಿ ₹ 140.50 ಕೋಟಿಯನ್ನು ಮಾತ್ರ ಗಳಿಸಿದೆ.

Prabhas 400 Crore Gamble Backfires The Raja Saab Faces Massive 200 Crore Deficit

ಇನ್ನು ಹೊರ ದೇಶದ ಗಳಿಕೆಯನ್ನು ಕೂಡಿಸಿದರೂ ಕೂಡ ಚಿತ್ರದ ಗಳಿಕೆ ಕೇವಲ ₹201 ಕೋಟಿ ಮಾತ್ರವಾಗುತ್ತೆ. ಈ ₹201 ಕೋಟಿಯಲ್ಲಿ ತೆರಿಗೆ, ಚಿತ್ರಮಂದಿರದ ಬಾಡಿಗೆ ಮತ್ತು ಉಳಿದ ಖರ್ಚು ವೆಚ್ಚಗಳನ್ನು ತೆಗೆದರೆ ನಿರ್ಮಾಪಕರ ಕೈಗೆ ಕೇವಲ ₹100 ರಿಂದ ₹110 ಕೋಟಿ ಮಾತ್ರ ಸಿಗುತ್ತೆ. ಚಿತ್ರದ ಆಡಿಯೋ , ಸ್ಯಾಟ್‌ ಲೈಟ್ ಮತ್ತು ಓಟಿಟಿ ಹಕ್ಕುಗಳಿಂದ ಹೆಚ್ಚೆಂದರೆ ₹100 ಕೋಟಿಯನ್ನು ನಿರ್ಮಾಪಕರು ಗಳಿಸಿರಬಹುದು.

ಇನ್ನು ಈಗಾಗಲೇ ''ದಿ ರಾಜಾ ಸಾಬ್'' ಚಿತ್ರವನ್ನು ಈಗಾಗಲೇ ಬಹುತೇಕ ಎತ್ತಂಗಡಿ ಮಾಡಲಾಗಿದೆ. ಹಲವಡೆ ''ದಿ ರಾಜಾ ಸಾಬ್'' ಚಿತ್ರವನ್ನು ತೆಗೆದು ಮತ್ತೆ ''ಧುರಂಧರ್'' ಚಿತ್ರವನ್ನು ಪ್ರದರ್ಶನ ಮಾಡಲಾಗುತ್ತಿದೆ. ಈ ಹಿನ್ನೆಲೆ ಪ್ರಭಾಸ್‌ ಅವರ ಸ್ಟಾರ್ ಪವರ್ ನಂಬಿ ಮತ್ತು ನಿರ್ದೇಶಕ ಮಾರುತಿ ಆಡಿದ ಬಣ್ಣದ ಮಾತುಗಳಿಗೆ ಮರುಳಾಗಿ, ಚಿತ್ರವನ್ನು ನಿರ್ಮಾಣ ಮಾಡಿದ ತಪ್ಪಿಗೆ ನಿರ್ಮಾಪಕರಿಗೆ ಕಡಿಮೆ ಅಂದರೂ ₹200 ಕೋಟಿ ನಷ್ಟವಾಗುತ್ತೆ ಎನ್ನುವ ಮಾತು ಸದ್ಯ ಹೈದರಾಬಾದ್‌ನಲ್ಲಿ ಕೇಳಿ ಬರುತ್ತಿದೆ.

ಒಟ್ನಲ್ಲಿ ನಿರ್ಮಾಪಕರಿಗೆ ಹಾಕಿದ ಬಂಡವಾಳದಲ್ಲಿ ಶೇಕಡಾ 34 % ಮಾತ್ರ ಮರಳಿ ಬಂದಿದ್ದು ಈ ವರ್ಷದ ಮೊದಲ ಪ್ಯಾನ್ ಇಂಡಿಯಾ ಡಿಸಾಸ್ಟರ್ ಸಿನಿಮಾ ಎನ್ನುವ ಕುಖ್ಯಾತಿಗೆ ''ದಿ ರಾಜಾ ಸಾಬ್ '' ಪಾತ್ರವಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಮೊದಲ ಮೂರು ದಿನ ಅಬ್ಬರಿಸಿ, ಬೊಬ್ಬಿರಿಯುವುದು ಮುಖ್ಯವಲ್ಲ. ಹಾಕಿದ ಬಂಡವಾಳವನ್ನು ಹಿಂಪಡೆಯುವುದು ಮುಖ್ಯ ಎಂಬ ಚಿತ್ರರಂಗದ ಮಾತುಗಳಿಗೆ ಈ ಚಿತ್ರ ಸದ್ಯ ಜ್ವಲಂತ ಉದಾಹರಣೆಯಂತೆ ಇದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
The Raja Saab Total Loss: How much did producers lose on the ₹400Cr budget? A deep dive into the box office collapse and Prabhas’ biggest career setback.
Read more about: prabhas tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X