The Raja Saab Day 1 Boxoffice: ಮಿಶ್ರ ಪ್ರತಿಕ್ರಿಯೆ ಸಿಕ್ರು 'ದಿ ರಾಜಾಸಾಬ್' ದಾಖಲೆ ಕಲೆಕ್ಷನ್

ಚಿತ್ರಮಂದಿರಗಳಲ್ಲಿ 'ದಿ ರಾಜಾಸಾಬ್' ಆರ್ಭಟ ಜೋರಾಗಿದೆ. ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಗುರುವಾರವೇ(ಜನವರಿ 8) ಚಿತ್ರದ ಪ್ರೀಮಿಯರ್ ಶೋಗಳು ಶುರುವಾಗಿತ್ತು. ಶುಕ್ರವಾರ ಕೂಡ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಹಾರರ್ ಕಾಮಿಡಿ ಥ್ರಿಲ್ಲರ್ ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ.

ಪ್ರಭಾಸ್ ಫ್ಯಾನ್ ಫಾಲೋಯಿಂಗ್ ಗೊತ್ತೇಯಿದೆ. 'ಸಲಾರ್' ಬಳಿಕ ರಾಜಾಸಾಬ್ ಆಗಿ ಪ್ರಭಾಸ್ ಅಬ್ಬರಿಸುತ್ತಿದ್ದಾರೆ. ಉತ್ತರ ಭಾರತ ಹಾಗೂ ಓವರ್‌ಸೀಸ್‌ ಮಾರ್ಕೆಟ್‌ನಲ್ಲಿ ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಸಿಕ್ತಿದೆ. ತಮಿಳಿನ 'ಜನ ನಾಯಗನ್' ಸಿನಿಮಾ ಬಿಡುಗಡೆ ರದ್ದಾಗಿದ್ದು ಕೂಡ 'ದಿ ರಾಜಾಸಾಬ್' ಚಿತ್ರದ ಗಳಿಕೆಗೆ ಪ್ಲಸ್ ಆಗಿದೆ. ಪ್ರೀಮಿಯರ್ ಶೋಗಳು ಹಾಗೂ ಫಸ್ಟ್‌ ಡೇ ಕಲೆಕ್ಷನ್ ಸೇರಿ ವಿಶ್ವದಾದ್ಯಂತ ಸಿನಿಮಾ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

Prabhas The Raja saab Roars at Box Office with 100 Crore Opening Despite Mixed Reviews

54 ರೂ. ನೆಟ್ ಕಲೆಕ್ಷನ್

ಮಾರುತಿ ನಿರ್ದೇಶನದ 'ದಿ ರಾಜಾಸಾಬ್' ಚಿತ್ರದಲ್ಲಿ ಸಂಜಯ್ ದತ್, ಸಮುದ್ರಖನಿ ಹಾಗೂ ಮಾಳವಿಕಾ ಮೋಹನನ್ ಸೇರಿ ದೊಡ್ಡ ತಾರಾಗಣವಿದೆ. ಎಸ್. ತಮನ್ ಸಂಗೀತ ಚಿತ್ರಕ್ಕಿದೆ. ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿಲ್ಲ. ಆದರೆ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. sacnilk ವರದಿ ಪ್ರಕಾರ ಭಾರತದಲ್ಲಿ ಸಿನಿಮಾ 54.15 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಪ್ರೀಮಿಯರ್ ಶೋಗಳಿಂದ 9.15 ಕೋಟಿ ರೂ. ಹಾಗೂ ಮೊದಲ ದಿನ 54.15 ಕೋಟಿ ರೂ. ಗಳಿಸಿದೆ.

ವಿದೇಶಗಳಲ್ಲಿ ಆರ್ಭಟ

ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ 'ದಿ ರಾಜಾಸಾಬ್' ಸಿನಿಮಾ ಸದ್ದು ಮಾಡಿತ್ತು. ನಾರ್ತ್ ಅಮೆರಿಕಾದಲ್ಲಿ ಪ್ರೀ-ಸೇಲ್ಸ್‌ನಿಂದ $1 ಮಿಲಿಯನ್ ಕಲೆಕ್ಷನ್ ಮಾಡಿತ್ತು. ಇನ್ನುಳಿದಂತೆ ಯೂರೋಪ್ ಸೇರಿ ಹಲವು ಭಾಗಗಳಲ್ಲಿ ಸಿನಿಮಾ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.

Prabhas The Raja saab Roars at Box Office with 100 Crore Opening Despite Mixed Reviews

100 ಕೋಟಿ ರೂ. ಗಳಿಕೆ

'ದಿ ರಾಜಾಸಾಬ್' ಸಿನಿಮಾ 100 ಕೋಟಿ ರೂ. ಓಪನಿಂಗ್ ಪಡೆಯುವುದಾಗಿ ನಿರ್ಮಾಪಕ ಟಿಜಿ ವಿಶ್ವ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಷ್ಟರಮಟ್ಟಿಗೆ ಸಿನಿಮಾ ಬುಕ್ಕಿಂಗ್ ನಡೆದಿದೆ. ನಿಖರವಾದ ಕಲೆಕ್ಷನ್ ಇನ್ನಷ್ಟೆ ಸಿಗಬೇಕಿದೆ. ಬರೀ ಆಕ್ಷನ್ ಸಿನಿಮಾಗಳಲ್ಲಿ ನಟಿಸೋ ಪ್ರಭಾಸ್ ಕೆಲವೊಮ್ಮೆ ಬೇರೆ ರೀತಿಯ ಪ್ರಯೋಗ ಮಾಡುತ್ತಾರೆ. ಅದರಲ್ಲಿ ಸೋತಿದ್ದೇ ಹೆಚ್ಚು. 'ರಾಧೆಶ್ಯಾಮ್' ಹಾಗೂ 'ಆದಿಪುರುಷ್' ಸಿನಿಮಾಗಳು ದೊಡ್ಡದಾಗಿ ಗೆದ್ದಿರಲಿಲ್ಲ. ಹಾಗಾಗಿ 'ದಿ ರಾಜಾಸಾಬ್' ಫಲಿತಾಂಶ ಏನಾಗುತ್ತದೆ ಎಂದು ಕಾದು ನೋಡಬೇಕು.

ಸಂಕ್ರಾಂತಿ ಬಲ

'ದಿ ರಾಜಾಸಾಬ್' ಚಿತ್ರದ ನೆಗೆಟಿವ್ ಟಾಕ್ ಶುರುವಾಗಿದೆ. ಆದರೂ ಒಳ್ಳೆ ಓಪನಿಂಗ್ ಸಿಕ್ಕಿದೆ. ಮುಂದೇನು ಎನ್ನುವುದನ್ನು ಕಾದು ನೋಡಬೇಕು. ಈ ಹಿಂದೆ ಕೂಡ ಕೆಲ ಸಿನಿಮಾಗಳು ಮಿಶ್ರಪ್ರತಿಕ್ರಿಯೆ ನಡುವೆ ಒಳ್ಳೆ ಓಪನಿಂಗ್ ಪಡೆದಿದ್ದವು. ಆದರೆ ಬಳಿಕ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ದು ನೋಡಿದ್ದೇವೆ. ಆಂಧ್ರ, ತೆಲಂಗಾಣದಲ್ಲಿ ಸಂಕ್ರಾಂತಿ ಸಂಭ್ರಮ ಜೋರು. ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಫ್ಯಾಮಿಲಿ ಸಮೇತ ಸಿನಿಮಾ ನೋಡುವ ರೂಢಿ ಇದೆ. ಹಾಗಾಗಿ 'ದಿ ರಾಜಾಸಾಬ್' ಚಿತ್ರಕ್ಕೆ ಗೆಲುವು ಸಿಗುವ ಸಾಧ್ಯತೆಯಿದೆ.

ಭಾರೀ ಬಜೆಟ್ ಚಿತ್ರ

'ಬಾಹುಬಲಿ' ಸರಣಿ ಬಳಿಕ ಪ್ರಭಾಸ್ ಸಿನಿಮಾಗಳ ರೇಂಜ್ ಬದಲಾಗಿದೆ. 200-300 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾಗಳು ನಿರ್ಮಾಣವಾಗುತ್ತವೆ. 'ದಿ ರಾಜಾಸಾಬ್' ಚಿತ್ರದ ಬಜೆಟ್ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಅಂದಾಜಿನ ಪ್ರಕಾರ 200 ಕೋಟಿ ರೂ,ಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ಬ್ರೇಕ್‌ಈವನ್ ಸಾಧಿಸುತ್ತಾ ಕಾದು ನೋಡಬೇಕಿದೆ.

More from Filmibeat

Read more about: prabhas tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X