Raid 2 Box Office Day 1 ; ಈ ವರ್ಷದ ಟಾಪ್ 3ದಲ್ಲಿ ಸ್ಥಾನ ಪಡೆದ ರೇಡ್ 2, ಕೊನೆಗೂ ಗೆದ್ದ ಅಜಯ್ ದೇವಗನ್ !

ಈಗೇನಿದ್ದರೂ ಸಿಕ್ವೆಲ್‌ಗಳ ಕಾಲ. ಆ ಭಾಷೆ ಈ ಭಾಷೆ ಅಂತಲ್ಲ. ಎಲ್ಲ ಭಾಷೆಯಲ್ಲಿ ಕೂಡ ಈ ಸಿಕ್ವೆಲ್ ಯುಗ ಆರಂಭವಾಗಿದೆ. ಇದಕ್ಕೆ ರೇಡ್ 2 ಸದ್ಯದ ಉದಾಹರಣೆ. ಹೌದು.. ಅಜಯ್ ದೇವಗನ್, ರಿತೇಶ್ ದೇಶಮುಖ್ ಅಭಿನಯದ ರೇಡ್ 2 ಚಿತ್ರ ಕಾರ್ಮಿಕರ ದಿನಾಚಾರಣೆಯ ಪ್ರಯುಕ್ತ ನಿನ್ನೆ ಅದ್ದೂರಿಯಾಗಿ ತೆರೆಗೆ ಬಂದಿದೆ. ಇನ್ನು ಹಿಂದಿ ಚಿತ್ರರಂಗದಲ್ಲಿ ಈ ವರ್ಷ

ಛಾವಾ ಹೊರತು ಪಡಿಸಿದರೆ ಹೇಳಿಕೊಳ್ಳುವಂತಹ ಪವಾಡ ನಡೆದಿಲ್ಲ. ಬೇರೆ ಯಾವ ಚಿತ್ರ ಕೂಡ ಪ್ರೇಕ್ಷಕರ ಹೃದಯ ಗೆದ್ದಿಲ್ಲ. ಈ ಕಾರಣಕ್ಕೆ ರೈಡ್ 2 ಚಿತ್ರದ ಎಲ್ಲರ ಕಣ್ಣಿತ್ತು. ಮೊದಲ ದಿನ ಚಿತ್ರ ಉತ್ತಮವಾದ ಮೊತ್ತ ಕಲೆ ಹಾಕುವ ನಿರೀಕ್ಷೆ ಇತ್ತು. ಈ ನಿರೀಕ್ಷೆ ಸದ್ಯಕ್ಕಂತು ಹುಸಿಯಾಗಿಲ್ಲ.

raid-2-box-office-day-1-96-over-raid-ajay-s-2nd-best-post-covid-3rd-biggest-opener-of-2025

ಯಾಕೆಂದರೆ.. ರೈಡ್ 2 ಚಿತ್ರ ನೋಡಲು ಐಪಿಎಲ್ ನಡುವೆಯೂ ಕೂಡ ಮೊದಲ ದಿನ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದಿದ್ದಾರೆ. ಅಜಯ್ ದೇವಗನ್ ಮುಕುಟಕ್ಕೆ ₹19 ಕೋಟಿಯ ಕಿರೀಟ ತೋಡಿಸಿದ್ದಾರೆ. ಹೌದು, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ರೇಡ್ 2 ಮೊದಲ ದಿನ ಬರೋಬ್ಬರಿ ₹19 ಕೋಟಿಯನ್ನು ಗಳಿಸಿದೆ.

ರೇಡ್ 2 ಚಿತ್ರದ ಮೊದಲ ದಿನದ ಈ ಗಳಿಕೆ ಅಜಯ್ ದೇವಗನ್ ಮೊಗದಲ್ಲಿನ ಮಂದಹಾಸವನ್ನು ಕೂಡ ಹೆಚ್ಚಿಸಿದೆ. ಯಾಕೆಂದರೆ.. 2022ರ ನಂತರ ಅಜಯ್ ದೇವಗನ್ ಅಭಿನಯದ 8 ಚಿತ್ರಗಳು ತೆರೆಗೆ ಬಂದಿವೆ. ಆದರೆ ಈ 8 ಚಿತ್ರಗಳಲ್ಲಿ ರೋಹಿತ್ ಶೆಟ್ಟಿ ನಿರ್ದೇಶನದ ಸಿಂಗಂ ಅಗೇನ್ ಚಿತ್ರವನ್ನು ಹೊರತು ಪಡಿಸಿದರೆ ಅಜಯ್ ದೇವಗನ್ ಅಭಿನಯದ ಬೇರೆ ಯಾವ ಚಿತ್ರ ಕೂಡ ಮೊದಲ ದಿನ ₹16 ಕೋಟಿಯ ಗಡಿಯನ್ನು ಕೂಡ ಪಾರು ಮಾಡಿರಲಿಲ್ಲ.

ಹೀಗಾಗಿಯೇ ಅಜಯ್ ದೇವಗನ್ ಸ್ಟಾರ್ ಪವರ್ ಕಡಿಮೆಯಾಗಿದೆ ಎಂದೇ ಎಲ್ಲರು ಭಾವಿಸಿದ್ದರು. ಆದರೆ ಈಗ ಅಜಯ್ ದೇವಗನ್ ವರ್ಷಗಳ ನಂತರ ಮೊದಲ ₹19 ಕೋಟಿ ಹಣವನ್ನು ಬಾಕ್ಸಾಫೀಸ್‌ನಲ್ಲಿ ಕೊಳ್ಳೆ ಹೊಡೆದಿದ್ದಾರೆ.

ಕೊರೊನಾ ನಂತರ ಮೊದಲ ದಿನ ಅತೀ ಹೆಚ್ಚು ಹಣ ಗಳಿಸಿದ ಅಜಯ್ ದೇವಗನ್ ಅಭಿನಯದ ಐದು ಚಿತ್ರಗಳು ಇಲ್ಲಿವೆ

ಚಿತ್ರದ ಹೆಸರು ಮೊದಲ ದಿನದ ಗಳಿಕೆ

1. ಸಿಂಗಂ ಅಗೇನ್ - ₹ 43.70 ಕೋಟಿ

2. ರೈಡ್ 2 - ₹ 19.25 ಕೋಟಿ

3. ದೃಶ್ಯಂ 2 - ₹ 15.28 ಕೋಟಿ

4. ತಾನಾಜಿ - ₹ 15.10 ಕೋಟಿ

5. ಶೈತಾನ್ - ₹ 14.2 ಕೋಟಿ

ರೈಡ್ 2 ವರ್ಸಸ್ ರೈಡ್

ಇನ್ನು ರೈಡ್ 2 ಚಿತ್ರದ ಮೊದಲ ಭಾಗ 2018ರಲ್ಲಿ ತೆರೆಗೆ ಬಂದಿತ್ತು. ಆ ಕಾಲದಲ್ಲಿ ಬಂದ ರೇಡ್ ಮೊದಲ ಭಾಗ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ₹ 10.4 ಕೋಟಿ ಹಣವನ್ನು ಗಳಿಸಿತ್ತು. ರೇಡ್ 2 ಮೊದಲ ದಿನ ₹ 19.25 ಕೋಟಿಯನ್ನು ಗಳಿಸಿದೆ. ಈ ಮೂಲಕ ಮೊದಲ ಭಾಗಕ್ಕಿಂತ ಶೇಕಡಾ 96% ಹೆಚ್ಚಿನ ಹಣವನ್ನು ರೇಡ್ 2 ಗಳಿಸಿದೆ.

ಇನ್ನು ರೇಡ್ ಚಿತ್ರದ ಈ ಗಳಿಕೆಯಿಂದ ಬಾಲಿವುಡ್‌ ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ರೇಡ್ 2 ಮೇಲೆ ಬಾಲಿವುಡ್‌ಗೆ ಭರವಸೆ ಕೂಡ ಹೆಚ್ಚಾಗಿದೆ. ಯಾಕೆಂದರೆ ₹ 19.25 ಕೋಟಿಯನ್ನು ಗಳಿಸಿರುವ ರೇಡ್ 2 ಈ ವರ್ಷ ಮೊದಲ ದಿನ ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳ ಸಾಲಿನಲ್ಲಿ ಮೂರನೇ ಸ್ಥಾನಕ್ಕೆ ಬಂದು ತಲುಪಿದೆ. ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರದ ದಾಖಲೆಯನ್ನು ಕೂಡ ಮುಂಬರುವ ದಿನ ಗಳಲ್ಲಿ ರೇಡ್ 2 ಮುರಿಯುವ ಸಾಧ್ಯತೆ ಇದೆ.

ಈ ವರ್ಷ ಮೊದಲ ದಿನ ಅತೀ ಹೆಚ್ಚು ಹಣ ಗಳಿಸಿದ ಬಾಲಿವುಡ್‌ನ 5 ಚಿತ್ರಗಳು

ಚಿತ್ರದ ಹೆಸರು ಮೊದಲ ದಿನದ ಗಳಿಕೆ

1. ಛಾವಾ ₹ 33.10 ಕೋಟಿ

2. ಸಿಕಂದರ್ ₹ 30.6 ಕೋಟಿ

3 ರೇಡ್ 2 ₹ 19.25 ಕೋಟಿ

4. ಸ್ಕೈ ಫೋರ್ಸ್ ₹ 15.30 ಕೋಟಿ

5. ಜಾಟ್ ₹ 9.62 ಕೋಟಿ

ಹೀಗೆ ಮೊದಲ ದಿನ ಮೂರನೇ ಸ್ಥಾನವನ್ನು ಅಲಂಕರಿಸಿರುವ ರೇಡ್ 2 ಚಿತ್ರದ ಗಳಿಕೆಯಲ್ಲಿ ಇಂದು ಕುಸಿತ ಕಾಣುವ ಸಾಧ್ಯತೆ ಇದೆ. ಯಾಕೆಂದರೆ, ನಿನ್ನೆ ಕಾರ್ಮಿಕರ ದಿನಾಚಾರಣೆಯ ಹಿನ್ನೆಲೆ ರಜೆಯ ಪ್ರಯುಕ್ತ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಿತ್ತು.

ಆದರೆ ಇಂದು ರಜೆ ಇಲ್ಲ. ಆದರೂ ಕೂಡ ರೇಡ್ 2 ಇಂದು ₹10 ಕೋಟಿಯನ್ನಾದರು ಗಳಿಸಬಹುದು ಎನ್ನುವ ಲೆಕ್ಕಾಚಾರವನ್ನು ಬಾಲಿವುಡ್‌ ಪಂಡಿತರು ಹಾಕುತ್ತಿದ್ದಾರೆ. ಇನ್ನು ಚಿತ್ರದ ಕುರಿತು ಮೌತ್ ಪಬ್ಲಿಸಿಟಿ ಚೆನ್ನಾಗಿರುವ ಕಾರಣ ಈ ಶನಿವಾರ ಮತ್ತು ಭಾನುವಾರ ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡು ಬರಬಹುದು. ಚಿತ್ರದ ಗಳಿಕೆ ಸೋಮವಾರದಷ್ಟೊತ್ತಿಗೆ ₹50 ಕೋಟಿಯ ಗಡಿಯನ್ನು ದಾಟಿದರು ದಾಟಬಹುದು. ಈ ಸಾಧ್ಯತೆ ಖಂಡಿತವಾಗಿಯೂ ಇದೆ ಎನ್ನುವ ಮಾತನ್ನು ಕೂಡ ಬಾಲಿವುಡ್ ಪಂಡಿತರು ಹೇಳುತ್ತಿದ್ದಾರೆ.

ಒಟ್ನಲ್ಲಿ ಸದ್ಯ ರೇಡ್ 2 ಚಿತ್ರಕ್ಕೆ ಮೊದಲ ದಿನ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಶನಿವಾರ ಮತ್ತು ಭಾನುವಾರದ ಗಳಿಕೆಯ ಮೇಲೆ ಚಿತ್ರದ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ. ರೇಡ್ 2 ನೂರು ಕೋಟಿಯ ಗಡಿಯನ್ನು ದಾಟುತ್ತಾ ? ಛಾವಾ ನಂತರ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಚಿತ್ರ ಎನ್ನುವ ಹೆಗ್ಗಳಿಕೆಗೆ ರೇಡ್ 2 ಚಿತ್ರ ಪಾತ್ರವಾಗುತ್ತಾ ? ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Ajay Devgn, Riteish Deshmukh, and Vaani Kapoor-led Raid 2 has kicked off its box office journey on a spectacular note.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X