Raid 2 Box Office Day 13 ; ಭಾರತ-ಪಾಕಿಸ್ತಾನ ಉದ್ವಿಗ್ನತೆ ನಡುವೆ ರೇಡ್ 2 ಅಬ್ಬರ, 13 ದಿನದಲ್ಲಿ ಚಿತ್ರ ಗಳಿಸಿದ್ದೆಷ್ಟು ?

ಯಾವುದೇ ಚಿತ್ರವಾದರು ಕೂಡ ಬಿಡುಗಡೆಯಾದ ನಂತರ ಚಿತ್ರಮಂದಿರ ತುಂಬಬೇಕು, ಚಿತ್ರ ಗೆಲ್ಲಬೇಕೆಂದರೆ ಯುವ ಸಮೂಹ ಚಿತ್ರಮಂದಿರಕ್ಕೆ ಬರಬೇಕು. ಮನೆ ಮಂದಿಯೆಲ್ಲ ಜೊತೆಯಾಗಿ ಬಂದು ಚಿತ್ರವನ್ನು ನೋಡಬೇಕು. ಆಗಲೇ ಆ ಚಿತ್ರ ಗೆಲ್ಲಲು ಸಾಧ್ಯ. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಯಲು ಸಾಧ್ಯ. ಇದಕ್ಕೆ ಅತ್ಯುತ್ತಮ ಉದಾಹರಣೆ ಅಜಯ್ ದೇವಗನ್-ರಿತೇಶ್ ದೇಶ್‌ಮುಖ್ ಅಭಿನಯದ ರೇಡ್ 2.

ಹೌದು ಒಂದು ಕಡೆ ಐಪಿಎಲ್ ಅಬ್ಬರ ಮತ್ತೊಂದು ಕಡೆ ಭಾರತ-ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ. ಇದೆಲ್ಲದರ ನಡುವೆ ಪೈರಸಿ ಹಾವಳಿ. ಆದರೂ ಕೂಡ ..ಈ ಚಿತ್ರವನ್ನು ಎಲ್ಲ ವರ್ಗದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ನೋಡುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ರೇಡ್ 2 ಕೇವಲ ಹತ್ತೇ ದಿನದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ 100 + ಕೋಟಿ ಹಣವನ್ನು ಕೊಳ್ಳೆ ಹೊಡೆದಿದೆ. ಹದಿಮೂರನೇ ದಿನ { ಮೇ 13 } ಚಿತ್ರದ ಗಳಿಕೆ ₹125ಕೋಟಿಯ ಗಡಿಯನ್ನು ದಾಟಿದೆ.

raid-2-box-office-day-13-ajay-devgn-s-film-smashes-125-cr-barrier-150-cr-now-in-sight

ಹೌದು, ಬಾಲಿವುಡ್‌ ಚಿತ್ರಗಳ ಅಂಕಿ- ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ನಿನ್ನೆ { ಮೇ 12 } ಚಿತ್ರ ₹5 ಕೋಟಿ ಹಣವನ್ನು ಗಳಿಸಿದೆ. ನಿನ್ನೆಯ ಗಳಿಕೆಗೆ ಇಂದು ಹೋಲಿಸಿದರೆ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬಂದಿದೆಯಾದರೂ ಚಿತ್ರ ಈ ಹದಿಮೂರು ದಿನಗಳಲ್ಲಿ ಒಟ್ಟಾರೆ ₹126.43 ಕೋಟಿ ಹಣವನ್ನು ಗಳಿಸಿದೆ ಎಂದು ಸ್ಯಾಕ್ನಿಲ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ರೇಡ್ 2 ಚಿತ್ರದ ಹದಿಮೂರು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ದಿನ ಗಳಿಕೆ

ಮೊದಲನೇ ದಿನ { ಗುರುವಾರ } ₹19.25 ಕೋಟಿ

ಎರಡನೇ ದಿನ {ಶುಕ್ರವಾರ } ₹12 ಕೋಟಿ

ಮೂರನೇ ದಿನ {ಶನಿವಾರ } ₹18 ಕೋಟಿ

ನಾಲ್ಕನೇ ದಿನ {ಭಾನುವಾರ} ₹22 ಕೋಟಿ

ಐದನೇ ದಿನ {ಸೋಮವಾರ} ₹7.5 ಕೋಟಿ

ಆರನೇ ದಿನ {ಮಂಗಳವಾರ} ₹7 ಕೋಟಿ

ಏಳನೇ ದಿನ {ಬುಧವಾರ } ₹4.75 ಕೋಟಿ

ಎಂಟನೇ ದಿನ {ಗುರುವಾರ} ₹5.25 ಕೋಟಿ


ಮೊದಲ ವಾರದ ಒಟ್ಟು ಗಳಿಕೆ - ₹95.75ಕೋಟಿ

ಒಂಬತ್ತನೇ ದಿನ {ಎರಡನೇ ಶುಕ್ರವಾರ} ₹5ಕೋಟಿ

ಹತ್ತನೇ ದಿನ {ಎರಡನೇ ಶನಿವಾರ } ₹8.25 ಕೋಟಿ

ಹನ್ನೊಂದನೇ ದಿನ {ಎರಡನೇ ಭಾನುವಾರ} ₹11.75 ಕೋಟಿ

ಹನ್ನೆರಡನೇ ದಿನ {ಎರಡನೇ ಸೋಮವಾರ} ₹5 ಕೋಟಿ

ಹದಿಮೂರನೇ ದಿನ {ಎರಡನೇ ಮಂಗಳವಾರ} ₹68 ಲಕ್ಷ - ಅಂದಾಜು

ಒಟ್ಟು ಗಳಿಕೆ - ₹126.43 ಕೋಟಿ

ಹೀಗೆ ಈ ಹದಿಮೂರು ದಿನದಲ್ಲಿ ₹126.43 ಕೋಟಿ ಹಣವನ್ನು ರೇಡ್ 2 ಚಿತ್ರ ಗಳಿಸಿದ್ದು ಈ ವಾರಾಂತ್ಯದೊಳಗೆ ರೇಡ್ 2 ₹150 ಕೋಟಿ ಗಡಿಯನ್ನು ತಲುಪುವ ಭರವಸೆ ಬಾಲಿವುಡ್ ಪಂಡಿತರಿಗಿದೆ.

ರೇಡ್ 2 ವರ್ಸಸ್ ರೇಡ್ 2

ರೈಡ್ 2 ಚಿತ್ರದ ಮೊದಲ ಭಾಗ 2018ರಲ್ಲಿ ತೆರೆಗೆ ಬಂದಿತ್ತು. ಆ ಕಾಲದಲ್ಲಿ ಬಂದ ರೇಡ್ ಬಾಕ್ಸಾಫೀಸ್‌ನಲ್ಲಿ ₹101.45 ಕೋಟಿ ಹಣವನ್ನು ಗಳಿಸಿತ್ತು. ಕೇವಲ ಹತ್ತು ದಿನದಲ್ಲಿ ರೇಡ್ 2 ಈ ದಾಖಲೆಯನ್ನು ಮುರಿದಿರುವುದು ವಿಶೇಷ.

ಇನ್ನು ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಬಾಲಿವುಡ್‌ ಚಿತ್ರಗಳ ಸಾಲಿನಲ್ಲಿ ರೇಡ್ 2 ಚಿತ್ರ ಸದ್ಯ ಮೂರನೇ ಸ್ಥಾನವನ್ನು ಅಲಂಕರಿಸಿದೆ. ಅಕ್ಷಯ್ ಕುಮಾರ್ ಅಭಿನಯದ ಕೇಸರಿ 2 ಮತ್ತು ಸನ್ನಿ ಡಿಯೋಲ್ ಅಭಿನಯದ ಜಾಟ್ ಚಿತ್ರವನ್ನು ಕೂಡ ರೇಡ್ 2 ಚಿತ್ರ ಹಿಂದಿಕ್ಕಿದೆ. ಇಷ್ಟೇ ಅಲ್ಲ ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರದ ದಾಖಲೆಯನ್ನು ಕೂಡ ರೇಡ್ 2 ಮುರಿದಿದೆ.


ಬಾಲಿವುಡ್ ಹಂಗಾಮಾದಲ್ಲಿ ಉಲ್ಲೇಖವಾಗಿರುವ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಬಾಲಿವುಡ್‌ನ 5 ಚಿತ್ರಗಳು

ಚಿತ್ರದ ಹೆಸರು ಚಿತ್ರದ ಗಳಿಕೆ

1.ಛಾವಾ ₹600.10 ಕೋಟಿ

2.ಸ್ಕೈ ಫೋರ್ಸ್ ₹131.44 ಕೋಟಿ

3.ರೇಡ್ 2 * ₹126.43 ಕೋಟಿ

4. ಸಿಕಂದರ್ ₹103.45 ಕೋಟಿ

5. ಜಾಟ್ ₹89.17 ಕೋಟಿ

ಇನ್ನು ರೇಡ್ 2 ಚಿತ್ರದ ಮೂಲಕ ₹126.43 ಕೋಟಿಯನ್ನು ಹದಿಮೂರು ದಿನದಲ್ಲಿ ಕೊಳ್ಳೆ ಹೊಡೆದಿರುವ ಅಜಯ್ ದೇವಗನ್, ಈ ಮೂಲಕ ಹನ್ನೊಂದು ಬಾರಿ ಸೆಂಚ್ಯೂರಿ ಹೊಡೆದಿದ್ದಾರೆ. ನೂರು ಕೋಟಿ ಕೊಳ್ಳೆ ಹೊಡೆ ಅಜಯ್ ದೇವಗನ್ ಅಭಿನಯದ ಹನ್ನೊಂದು ಚಿತ್ರಗಳ ಲಿಸ್ಟ್ ಇಲ್ಲಿದೆ.

ನೂರು ಕೋಟಿಯ ಗಡಿಯನ್ನು ದಾಟಿರುವ ಅಜಯ್ ದೇವಗನ್ ಅಭಿನಯದ ಸಿನಿಮಾಗಳು

1. ಗೋಲ್‌ಮಾಲ್ 3

2. ಸಿಂಗಂ

3. ಬೋಲ್ ಬಚ್ಚನ್

4. ಸನ್ ಆಫ್ ಸರ್ದಾರ್

5. ಸಿಂಗಂ ರಿಟರನ್ಸ್

6. ಶಿವಾಯ್

7. ರೇಡ್

8. ಟೋಟಲ್ ಧಮಾಲ್

9. ದೇ ದೇ ಪ್ಯಾರ್ ದೇ

10. ಶೈತಾನ್

11. ರೇಡ್ 2

ಅಂದ್ಹಾಗೇ ಅಜಯ್ ದೇವಗನ್ ಅಭಿನಯದ ಯಾವ ಚಿತ್ರ ಕೂಡ 300 ಕೋಟಿಯ ಗಡಿಯನ್ನು ಭಾರತೀಯ ಮಾರ್ಕೆಟ್‌ನಲ್ಲಿ ದಾಟಿಲ್ಲ. ರೇಡ್ 2 ಈ ಸಾಧನೆ ಮಾಡುತ್ತಾ ಗೊತ್ತಿಲ್ಲ ! ಈ ಹಿನ್ನೆಲೆ ಅತೀ ಹೆಚ್ಚು ಗಳಿಕೆ ಕಂಡ ಅಜಯ್ ದೇವಗನ್ ಅವರ ಹತ್ತು ಚಿತ್ರಗಳ ಪಟ್ಟಿಯನ್ನು ಸ್ಯಾಕ್ನಿಲ್ ಮತ್ತು ಬೇರೆ ವೆಬ್ ಸೈಟ್‌ಗಳ ಆಧಾರದ ಮೇಲೆ ನಾವು ಇಲ್ಲಿ ಉಲ್ಲೇಖಿಸುತ್ತಿದ್ದೇವೆ.

ಚಿತ್ರದ ಹೆಸರು ಒಟ್ಟಾರೆ ಗಳಿಕೆ

1. ತಾನಾಜಿ ₹ 280 ಕೋಟಿ

2. ಸಿಂಗಂ ಅಗೇನ್ ₹ 270.60 ಕೋಟಿ

3. ದೃಶ್ಯಂ 2 ₹ 241 ಕೋಟಿ

4. ಗೋಲ್‌ಮಾಲ್ ಅಗೇನ್ ₹205.70 ಕೋಟಿ

5. ಟೋಟಲ್ ಧಮಾಲ್ ₹ 154.23 ಕೋಟಿ

6.ಶೈತಾನ್ ₹151 ಕೋಟಿ

7. ಸಿಂಗಂ ರಿಟರ್ನ್ಸ್ ₹140 ಕೋಟಿ

8. ರೇಡ್ 2* - ₹126 ಕೋಟಿ

9. ಗೋಲ್‌ಮಾಲ್ 3 ₹106 ಕೋಟಿ

10. ಸನ್ ಆಫ್ ಸರ್ದಾರ್ ₹ 105 ಕೋಟಿ

ಒಟ್ನಲ್ಲಿ ಸದ್ಯ ರೇಡ್ 2 ಚಿತ್ರಕ್ಕೆ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ಎರಡು ವಾರಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಾಕ್ಸಾಫೀಸ್‌ನಲ್ಲಿ 126 .43 ಕೋಟಿ ಹಣ ಕೊಳ್ಳೆ ಹೊಡೆದಿದೆ. ಮುಂಬರುವ ದಿನಗಳಲ್ಲಿ ಈ ಚಿತ್ರ ಇನ್ನೆಷ್ಟು ಹಣವನ್ನು ಬಾಕ್ಸಾಫೀಸ್‌ನಲ್ಲಿ ಕೊಳ್ಳೆ ಹೊಡೆಯುತ್ತೆ ಎನ್ನುವುದನ್ನು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ಕೊಯಿ ಮೊಹಿ ವೆಬ್ ಸೈಟ್, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Ajay Devgn’s ‘Raid 2’ maintains its strong box office momentum, crossing ₹125 Cr on Day 13. The action thriller now heads confidently toward the ₹150 Cr mark
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X