ಶಾರುಖ್ ಖಾನ್ ಮತ್ತು ಆಮಿರ್ ಖಾನ್ ದಾಖಲೆ ಮುರಿದ ಅಜಯ್ ದೇವಗನ್...!
ಈ ವರ್ಷ 'ಛಾವಾ' ಹೊರತು ಪಡಿಸಿದರೆ ಬಾಲಿವುಡ್‌ನಲ್ಲಿ ಬೇರೆ ಯಾವ ಚಿತ್ರ ಕೂಡ ಮ್ಯಾಜಿಕ್ ಮಾಡಿಲ್ಲ. ಸಲ್ಮಾನ್ ಖಾನ್ ಅಭಿನಯದ 'ಸಿಕಂದರ್' ಚಿತ್ರದ ಮೇಲೆ ವಿಪರೀತ ನಿರೀಕ್ಷೆಗಳಿದ್ದವಾದರೂ ಚಿತ್ರ ಮಕಾಡೆ ಮಲಗಿತು. ಈ ಮೂಲಕ ಸಲ್ಮಾನ್ ಖಾನ್‌ಗೆ ಭಾರೀ ಮುಖಭಂಗವೂ ಆಯಿತು. ಇರುವುದರಲ್ಲಿ ಸನ್ನಿ ಡಿಯೋಲ್ ಅಭಿನಯದ 'ಜಾಟ್' ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವಲ್ಲಿ ಯಶಸ್ವಿಯಾಯ್ತು.
ಇನ್ನು, ಅಕ್ಷಯ್ ಕುಮಾರ್ ಅಭಿನಯದ ಕೇಸರಿ 2 ಚಿತ್ರ ಬಿಡುಗಡೆಯಾಗಿ ಒಂದು ತಿಂಗಳಾಗಿದೆ.ಚಿತ್ರ ಇನ್ನು ಹಲವಡೆ ಪ್ರದರ್ಶನವನ್ನು ಕಾಣ್ತಿದೆ. ಆದರೆ .. ಚಿತ್ರದ ಗಳಿಕೆ ಮಾತ್ರ ಆರಕ್ಕೇರಲಿಲ್ಲ. ಮೂರಕ್ಕಿಳಿಯಲಿಲ್ಲ. ತೆವಳುತ್ತಾ ಸಾಗಿರುವ ಈ ಚಿತ್ರ ಇಲ್ಲಿಯವರೆಗೆ ₹ 90.17 ಕೋಟಿ ಹಣವನ್ನು ಗಳಿಸಿದೆ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ. ನೂರು ಕೋಟಿ ಹಣವನ್ನು ಕೇಸರಿ 2 ಗಳಿಸುವುದು ಅನುಮಾನ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ.

ಹೀಗಿರುವಾಗ ಕೇಸರಿ 2 ನಂತರ ಬಂದ ರೇಡ್ 2 ಸದ್ಯ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಬಾಕ್ಸಾಫೀಸ್‌ನಲ್ಲಿ ₹150 ಕೋಟಿ ಹಣವನ್ನು ಗಳಿಸಿದೆ. ಹೌದು ಒಂದು ಕಡೆ ಐಪಿಎಲ್ ಅಬ್ಬರ ಮತ್ತೊಂದು ಕಡೆ ಭಾರತ-ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ. ಇದೆಲ್ಲದರ ನಡುವೆ ಪೈರಸಿ ಹಾವಳಿ.
ಆದರೂ ಕೂಡ ..ಈ ಚಿತ್ರವನ್ನು ಎಲ್ಲ ವರ್ಗದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ನೋಡುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ರೇಡ್ 2 ಕೇವಲ 19 ದಿನಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ 150 + ಕೋಟಿ ಹಣವನ್ನು ಕೊಳ್ಳೆ ಹೊಡೆದಿದೆ. ಹತ್ತೊಂಬತ್ತನೇ ದಿನ { ಮೇ 19 } ₹1.21 ಕೋಟಿ ಹಣವನ್ನು ಗಳಿಸಿದೆ ಎಂದು ಸ್ಯಾಕ್ನಿಲ್ ವೆಬ್ ಸೈಟ್ ವರದಿಯನ್ನು ಮಾಡಿದೆ.
ಬಾಲಿವುಡ್ ಚಿತ್ರಗಳ ಅಂಕಿ- ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ನಿನ್ನೆ { ಮೇ 18-ಭಾನುವಾರ } ಚಿತ್ರ ₹5.65 ಕೋಟಿ ಹಣವನ್ನು ಗಳಿಸಿದೆ. ನಿನ್ನೆಯ ಗಳಿಕೆಗೆ ಇಂದು ಹೋಲಿಸಿದರೆ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬಂದಿದೆಯಾದರೂ ಚಿತ್ರ ಈ ಹತ್ತೊಂಬತ್ತು ದಿನಗಳಲ್ಲಿ ಒಟ್ಟಾರೆಯಾಗಿ ₹150.46 ಕೋಟಿ ಹಣವನ್ನು ಗಳಿಸಿದೆ ಎಂದು ಸ್ಯಾಕ್ನಿಲ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ರೇಡ್ 2 ಚಿತ್ರದ ಹತ್ತೊಂಬತ್ತು ದಿನದ ಗಳಿಕೆ ಈ ಕೆಳಗಿನಂತೆ ಇದೆ.
ದಿನ ಗಳಿಕೆ
ಮೊದಲನೇ ದಿನ { ಗುರುವಾರ } ₹19.25 ಕೋಟಿ
ಎರಡನೇ ದಿನ {ಶುಕ್ರವಾರ } ₹12 ಕೋಟಿ
ಮೂರನೇ ದಿನ {ಶನಿವಾರ } ₹18 ಕೋಟಿ
ನಾಲ್ಕನೇ ದಿನ {ಭಾನುವಾರ} ₹22 ಕೋಟಿ
ಐದನೇ ದಿನ {ಸೋಮವಾರ} ₹7.5 ಕೋಟಿ
ಆರನೇ ದಿನ {ಮಂಗಳವಾರ} ₹7 ಕೋಟಿ
ಏಳನೇ ದಿನ {ಬುಧವಾರ } ₹4.75 ಕೋಟಿ
ಎಂಟನೇ ದಿನ {ಗುರುವಾರ} ₹5.25 ಕೋಟಿ
ಮೊದಲ ವಾರದ ಒಟ್ಟು ಗಳಿಕೆ - ₹95.75ಕೋಟಿ
ದಿನ ಗಳಿಕೆ
ಒಂಬತ್ತನೇ ದಿನ {ಎರಡನೇ ಶುಕ್ರವಾರ} ₹5ಕೋಟಿ
ಹತ್ತನೇ ದಿನ {ಎರಡನೇ ಶನಿವಾರ } ₹8.25 ಕೋಟಿ
ಹನ್ನೊಂದನೇ ದಿನ {ಎರಡನೇ ಭಾನುವಾರ} ₹11.75 ಕೋಟಿ
ಹನ್ನೆರಡನೇ ದಿನ {ಎರಡನೇ ಸೋಮವಾರ} ₹5 ಕೋಟಿ
ಹದಿಮೂರನೇ ದಿನ {ಎರಡನೇ ಮಂಗಳವಾರ} ₹4.5 ಕೋಟಿ
ಹದಿನಾಲ್ಕನೇ ದಿನ { ಎರಡನೇ ಬುಧವಾರ } ₹3.25 ಕೋಟಿ
ಹದಿನೈದನೇ ದಿನ { ಎರಡನೇ ಗುರುವಾರ } ₹ 3 ಕೋಟಿ
ಎರಡನೇ ವಾರದ ಒಟ್ಟು ಗಳಿಕೆ - ₹40.6ಕೋಟಿ
ದಿನ ಗಳಿಕೆ
ಹದಿನಾರನೇ ದಿನ {ಮೂರನೇ ಶುಕ್ರವಾರ } ₹3 ಕೋಟಿ
ಹದಿನೇಳನೇ ದಿನ { ಮೂರನೇ ಶನಿವಾರ } ₹4.25 ಕೋಟಿ
ಹದಿನೆಂಟನೇ ದಿನ { ಮೂರನೇ ಭಾನುವಾರ } ₹5.65 ಕೋಟಿ
ಹತ್ತೊಂಬತ್ತನೇ ದಿನ { ಮೂರನೇ ಸೋಮವಾರ } ₹1.21 ಕೋಟಿ { ಅಂದಾಜು }
ಒಟ್ಟು ಗಳಿಕೆ ₹150.46 ಕೋಟಿ
ಹೀಗೆ ಬಾಕ್ಸಾಫೀಸ್‌ನಲ್ಲಿ ಸದ್ಯ ರೇಡ್ 2 ಚಿತ್ರ ₹150.46 ಕೋಟಿ ಹಣವನ್ನು ಕೊಳ್ಳೆ ಹೊಡೆದಿದೆ ಎಂದು ಸ್ಯಾಕ್ನಿಲ್ ವೆಬ್ ಸೈಟ್ ವರದಿಯನ್ನು ಮಾಡಿದೆ. ಇನ್ನು ಸದ್ಯ ಭಾರತದಲ್ಲಿ ಮಿಷನ್ ಇಂಪಾಸಿಬಲ್ ದಿ ಫೈನಲ್ ರೆಕನಿಂಗ್ ಚಿತ್ರ ಬಿಡುಗಡೆಯಾಗಿದ್ದು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ತಿದೆ.
ಆದರೂ ಕೂಡ ರೇಡ್ 2 ಡಿಮ್ಯಾಂಡ್ ಕಡಿಮೆಯಾಗಿಲ್ಲ. ಟಾಮ್ ಕ್ರೂಸ್ ಅಬ್ಬರದ ನಡುವೆ ಕೂಡ ಅಜಯ್ ದೇವಗನ್ ಐಟಿ ಅಧಿಕಾರಿಯ ಅವತಾರವನ್ನು ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿದ್ಧಾರೆ. ಹೀಗಾಗಿ ರೇಡ್ 2 ಭಾರತದ ಬಾಕ್ಸಾಫೀಸ್‌ನಲ್ಲಿ ₹200 ಕೋಟಿ ಹಣವನ್ನು ಗಳಿಸುವುದು ಖಚಿತ ಎನ್ನುವ ಮಾತುಗಳನ್ನು ಬಾಲಿವುಡ್ ಪಂಡಿತರು ಹೇಳುತ್ತಿದ್ದಾರೆ.
ಆಮಿರ್ ಖಾನ್, ಶಾರುಖ್ ಖಾನ್ ದಾಖಲೆ ಮುರಿದ ಅಜಯ್ ದೇವಗನ್
ಹೌದು, ರೇಡ್ 2 ಚಿತ್ರದ ಮೂಲಕ ಆಮಿರ್ ಖಾನ್ ಮತ್ತು ಶಾರುಖ್ ಖಾನ್ ಅವರ ದಾಖಲೆಗಳನ್ನು ಅಜಯ್ ದೇವಗನ್ ಮುರಿದಿದ್ದಾರೆ. ಆಮಿರ್ ಖಾನ್ ಅಭಿನಯದ ಥಗ್ಸ್ ಆಫ್ ಹಿಂದೂಸ್ತಾನ್ ಮತ್ತು ಶಾರುಖ್ ಖಾನ್ ಅಭಿನಯದ ದಿಲ್‌ವಾಲೆ ಚಿತ್ರದ ಗಳಿಕೆಯನ್ನು ಭಾರತದ ಬಾಕ್ಸಾಫೀಸ್‌ನಲ್ಲಿ ಹಿಂದಿಕ್ಕಿದ್ದಾರೆ. ಕೇವಲ ಆಮಿರ್ ಮತ್ತು ಶಾರುಖ್ ಖಾನ್ ಮಾತ್ರವಲ್ಲ ಹೃತಿಕ್ ರೋಷನ್ ಅಭಿನಯದ ಸೂಪರ್ 30, ರಣ್‌ಬೀರ್ ಕಪೂರ್ ಅಭಿನಯದ ತೂ ಜೂಟಿ ಮೇ ಮಕ್ಕಾರ್ ಮತ್ತು ಪ್ರಭಾಸ್ ಅಭಿನಯದ ಆದಿಪುರುಷ್ ಚಿತ್ರಗಳಿಗಿಂತ ಹೆಚ್ಚು ರೇಡ್ 2 ಚಿತ್ರದ ಮೂಲಕ ಅಜಯ್ ದೇವಗನ್ ಗಳಿಸಿದ್ದಾರೆ.
ಅಜಯ್ ದೇವಗನ್ VS ಶಾರುಖ್ ಖಾನ್ VS ಆಮೀರ್ ಖಾನ್
ಚಿತ್ರದ ಹೆಸರು ಗಳಿಕೆ
1. ರೇಡ್ -02 * ₹150.46 ಕೋಟಿ*
2. ದಿಲ್‌ವಾಲೆ ₹148 ಕೋಟಿ
3. ಆದಿಪುರುಷ್ ₹ 147 ಕೋಟಿ
4. ತೂ ಜೂಟಿ ಮೇ ಮಕ್ಕಾರ್ ₹147 ಕೋಟಿ
5. ಥಗ್ಸ್ ಆಫ್ ಹಿಂದೂಸ್ತಾನ್ ₹145.29 ಕೋಟಿ
ಒಟ್ನಲ್ಲಿ ಸದ್ಯ ರೇಡ್ 2 ಚಿತ್ರ ಮಕಾಡೆ ಮಲಗಿದ್ದ ಬಾಲಿವುಡ್‌ಗೆ ಹೊಸ ಹುರುಪನ್ನು ನೀಡಿದೆ. ಮಿಷನ್ ಇಂಪಾಸಿಬಲ್ ಹೊರತು ಪಡಿಸಿ ಮೈದಾನದಲ್ಲಿ ಬೇರೆ ಯಾವ ದೊಡ್ಡ ಚಿತ್ರಗಳು ಇರದ ಕಾರಣ ರೇಡ್ 2 ಬಾಕ್ಸಾಫೀಸ್‌ನಲ್ಲಿ ಇನ್ನು ಎಷ್ಟು ಹಣ ದೋಚಬಹುದು ಎನ್ನುವ ಕುತೂಹಲ ಈಗ ಚಿತ್ರಪ್ರೇಮಿಗಳಲ್ಲಿದೆ. ₹200 ಕೋಟಿಯ ಗಡಿಯನ್ನು ರೇಡ್ 2 ದಾಟುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ಕೊಯಿ ಮೊಹಿ ವೆಬ್ ಸೈಟ್, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಕನ್ನಡ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











