Raid 2 Box Office Day 3 ; ಹಾಫ್ ಸೆಂಚುರಿ ಬಾರಿಸುವಲ್ಲಿ ವಿಫಲವಾದ ಅಜಯ್ ದೇವಗನ್, 3 ದಿನದಲ್ಲಿ ಗಳಿಸಿದ್ದೆಷ್ಟು ?
ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಪ್ರಪಂಚದಲ್ಲಿ ಬಾಲಿವುಡ್ ಕೆಲ ವರ್ಷಗಳಿಂದ ಕಳೆಗುಂದಿತ್ತು. ದಕ್ಷಿಣ ಭಾರತೀಯ ಚಿತ್ರರಂಗದ ಮುಂದೆ ಮಂಡಿಯೂರಿತ್ತು. ಆದರೆ.. 2023ರಲ್ಲಿ ಬಾಲಿವುಡ್ ಮೈಕೊಡವಿ ಎದ್ದು ನಿಂತಿತ್ತು. ಜವಾನ್, ಪಠಾಣ್, ಸೇರಿ ಹಲವು ಚಿತ್ರಗಳು ಗೆದ್ದ ಹಿನ್ನೆಲೆ ಹತ್ ಹತ್ರ ₹13,000 ಕೋಟಿ ಹಿಂದಿ ಚಿತ್ರರಂಗದ ಖಜಾನೆ ಸೇರಿತ್ತು. ಈ ಮೂಲಕ ಹೊಸದೊಂದು ಮೈಲಿಗಲ್ಲನ್ನು ಬಾಲಿವುಡ್ ತಲುಪಿತ್ತು.
ಆದರೆ 2024ರಲ್ಲಿ ಬಾಲಿವುಡ್‌ನಲ್ಲಿ ಹಣದ ಹೊಳೆ ಹರಿಯಲಿಲ್ಲ . ಸ್ತ್ರೀ 2.. ಮುಂಜ್ಯಾ.. ಭೂಲ್ ಭೂಲಯ್ಯ 3, ಸಿಂಗಂ ಅಗೇನ್, ಸೇರಿ ಅಲ್ಲೊಂದು ಇಲ್ಲೊಂದು ಚಿತ್ರಗಳು ಗೆದ್ದಿದ್ದು ಬಿಟ್ಟರೆ ಬೇರೆ ಯಾವ ಚಿತ್ರ ಕೂಡ ಹೇಳಿಕೊಳ್ಳುವಂತಹ ಸಾಧನೆ ಮಾಡಲಿಲ್ಲ. ಈ ವರ್ಷ ಕೂಡ ಕಳೆದ ವರ್ಷದಂತೆಯೇ ವಾತಾವರಣ ಇದೆ.

ಛಾವಾ ಹೊರತು ಪಡಿಸಿದರೆ ಬೇರೆ ಯಾವ ಚಿತ್ರ ಕೂಡ ಬಾಲಿವುಡ್‌ನಲ್ಲಿ ಚಮತ್ಕಾರ ಮಾಡಿಲ್ಲ. ಪ್ರೇಕ್ಷಕರನ್ನು ಸೆಳೆದಿಲ್ಲ. ಹೀಗಿರುವಾಗ ತೆರೆಗೆ ಬಂದಿರುವ ರೇಡ್ 2 ಸದ್ಯ ಬಾಲಿವುಡ್‌ನವರ ಭರವಸೆ ಹೆಚ್ಚಿಸುತ್ತಿದೆ. ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ.
ಹೌದು, ಮೊದಲ ದಿನ { ಮೇ 1 } ಬಾಕ್ಸಾಫೀಸ್‌ನಲ್ಲಿ ₹19.25 ಕೋಟಿಯನ್ನು ಗಳಿಸಿದ್ದ ರೇಡ್ 2 ಮೂರನೇ ದಿನ ಅಂದರೆ ನಿನ್ನೆ { ಮೇ 3 } ₹18 ಕೋಟಿ ಹಣವನ್ನು ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟು ಗಳಿಕೆ ₹49.25 ಕೋಟಿಯಾಗಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ವರದಿಯನ್ನು ಮಾಡಿದೆ.
ಇನ್ನು ನಿನ್ನೆ ಬೆಂಗಳೂರು ಮತ್ತು ಚೆನ್ನೈ ನಡುವೆ ಬೆಂಗಳೂರಿನಲ್ಲಿ ಪಂದ್ಯ ಇತ್ತು. ಆದರೂ ಕೂಡ ರೇಡ್ 2 ಚಿತ್ರ ನೋಡುವ ಉತ್ಸಾಹ ಬೆಂಗಳೂರಿಗರಲ್ಲಿಯೇ ಹೆಚ್ಚಿತ್ತು. ಸ್ಯಾಕ್ನಿಲ್ ವೆಬ್ ಸೈಟ್ ಉಲ್ಲೇಖಿಸಿರುವಂತೆ ನಿನ್ನೆ ಬೆಂಗಳೂರಿನಲ್ಲಿ ಸಂಜೆಯ ಪ್ರದರ್ಶನದ ಸಮಯಕ್ಕೆ ಶೇಕಡಾ 53 % ಆಕ್ಯುಪೆನ್ಸಿ ಚಿತ್ರಮಂದಿರಗಳಲ್ಲಿ ಕಂಡು ಬಂದಿತ್ತು. ಒಟ್ಟಾರೆ ಬೆಂಗಳೂರಿನಲ್ಲಿ ನಿನ್ನೆ ಶೇಕಡಾ 43.50 % ಇತ್ತು.
ಇನ್ನು ವಿಶೇಷ ಅಂದರೆ ಕೇವಲ ಬೆಂಗಳೂರು ಮಾತ್ರವಲ್ಲ ಚೆನ್ನೈನಲ್ಲಿ ಕೂಡ ಪಂದ್ಯ ನಡೆಯುವ ಸಮಯದಲ್ಲಿದ್ದ ಪ್ರದರ್ಶನಕ್ಕೆ ಜನ ಬಂದಿದ್ದರು. ಶೇಕಡಾ 73% ಆಕ್ಯುಪೆನ್ಸಿ ಸಂಜೆಯ ಪ್ರದರ್ಶನದ ಸಮಯದಲ್ಲಿ ಕಂಡು ಬಂದಿದ್ದರೆ ಒಟ್ಟಾರೆಯಾಗಿ 56 % ಆಕ್ಯುಪೆನ್ಸಿ ನಿನ್ನೆ ಚೆನ್ನೈನ ಚಿತ್ರಮಂದಿರಗಳಲ್ಲಿ ಇತ್ತು.
ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ರೇಡ್ 2 ಚಿತ್ರದ ಮೂರು ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ { ಗುರುವಾರ } - ₹19.25 ಕೋಟಿ
ಎರಡನೇ ದಿನ { ಶುಕ್ರವಾರ } - ₹ 12 ಕೋಟಿ
ಶನಿವಾರ { ಶನಿವಾರ } - ₹ 18 ಕೋಟಿ
ಒಟ್ಟು ಗಳಿಕೆ - ₹ 49.25 ಕೋಟಿ
ಇನ್ನು ಇಂದು ಭಾನುವಾರದ ರಜೆಯ ಕಾರಣಕ್ಕೆ ಚಿತ್ರದ ಗಳಿಕೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಬಾಲಿವುಡ್ ಪಂಡಿತರ ಲೆಕ್ಕಾಚಾರದ ಪ್ರಕಾರ ಇಂದು ನಿನ್ನೆಗಿಂತ ಹೆಚ್ಚಿನ ಹಣವನ್ನು ರೇಡ್ 2 ಚಿತ್ರ ಕೊಳ್ಳೆ ಹೊಡೆಯಲಿದ್ದು ₹ 20 ಕೋಟಿಯನ್ನು ಇಂದು { ಮೇ 4 } ಚಿತ್ರ ಗಳಿಸಬಹುದು. ಚಿತ್ರದ ಒಟ್ಟಾರೆ ಗಳಿಕೆ ₹60 ಕೋಟಿಯ ಗಡಿಯನ್ನು ದಾಟಬಹುದು.
ಶಾಹಿದ್ ಕಪೂರ್ ಮತ್ತು ಜಾನ್ ಅಬ್ರಾಹಿಂನ ಹಿಂದಿಕ್ಕಿದ ಅಜಯ್ ದೇವಗನ್
ಇನ್ನು ಮೂರು ದಿನದಲ್ಲಿ ₹ 49.25 ಕೋಟಿ ಹಣವನ್ನು ರೇಡ್ 2 ಚಿತ್ರದ ಮೂಲಕ ಗಳಿಸಿರುವ ಅಜಯ್ ದೇವಗನ್ ಈ ವರ್ಷದ ಬಾಕ್ಸಾಫೀಸ್ ಸಮರದಲ್ಲಿ ಶಾಹಿದ್ ಕಪೂರ್ ಮತ್ತು ಜಾನ್ ಅಬ್ರಾಹಿಂ ಅವರನ್ನು ಹಿಂದಿಕ್ಕಿದ್ದಾರೆ.
ಶಾಹಿದ್ ಕಪೂರ್ ಅಭಿನಯದ ದೇವಾ ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮೊದಲು ₹33.97 ಕೋಟಿ ಹಣ ಗಳಿಸಿತ್ತು. ಜಾನ್ ಅಬ್ರಾಹಿಂ ಅಭಿನಯದ ದಿ ಡಿಪ್ಲೋಮ್ಯಾಟ್ ಚಿತ್ರ ₹40.70 ಕೋಟಿಯನ್ನು ಕೊಳ್ಳೆ ಹೊಡೆದಿತ್ತು. ಈ ಎರಡು ಚಿತ್ರಗಳನ್ನು ಈಗ ರೇಡ್ 2 ಹಿಂದಿಕ್ಕಿದೆ. ಈ ಮೂಲಕ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಆರನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ರೇಡ್ 2 ಪಾತ್ರವಾಗಿದೆ.
ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಬಾಲಿವುಡ್‌ನ 6 ಚಿತ್ರಗಳು
ಚಿತ್ರದ ಹೆಸರು ಗಳಿಕೆ
1. ಛಾವಾ ₹600.10 ಕೋಟಿ
2. ಸ್ಕೈ ಫೋರ್ಸ್ ₹131.44 ಕೋಟಿ
3. ಸಿಕಂದರ್ ₹103.45 ಕೋಟಿ
4 ಜಾಟ್ ₹87.7 ಕೋಟಿ
5 ಕೇಸರಿ 2 ₹78. 41 ಕೋಟಿ *
6. ರೇಡ್ 2 ₹49.25 ಕೋಟಿ
ಅಂದ್ಹಾಗೇ ಅಜಯ್ ದೇವಗನ್ ಅಭಿನಯದ ಹತ್ತು ಚಿತ್ರಗಳು ಇಲ್ಲಿಯವರೆಗೆ ನೂರು ಕೋಟಿಯ ಗಡಿಯನ್ನು ದಾಟಿವೆ. ರೇಡ್ 2 ಹನ್ನೊಂದನೇಯದ್ದಾಗುತ್ತಾ ಅಥವಾ ಈ ಹತ್ತರ ಸ್ಥಾನದಲ್ಲಿಯೇ ಮೇಲೆ ಬಂದು ಅಜಯ್ ದೇವಗನ್ ಅಭಿನಯದ ಬೇರೆ ಚಿತ್ರಗಳನ್ನು ಹಿಂದಿಕ್ಕುತ್ತಾ ಎನ್ನುವ ಕುತೂಹಲ ಕೂಡ ಈಗ ಅನೇಕರನ್ನು ಕಾಡುತ್ತಿದೆ. ಈ ಹಿನ್ನೆಲೆ ಅತೀ ಹೆಚ್ಚು ಗಳಿಕೆ ಕಂಡ ಅಜಯ್ ದೇವಗನ್ ಅವರ ಹತ್ತು ಚಿತ್ರಗಳ ಪಟ್ಟಿಯನ್ನು ನಾವು ಇಲ್ಲಿ ಉಲ್ಲೇಖಿಸುತ್ತಿದ್ದೇವೆ.
ಅತ್ಯಧಿಕ ಹಣ ಗಳಿಸಿದ ಅಜಯ್ ದೇವಗನ್ ಅಭಿನಯದ 10 ಚಿತ್ರಗಳು.
ಚಿತ್ರದ ಹೆಸರು ಒಟ್ಟಾರೆ ಗಳಿಕೆ
1. ತಾನಾಜಿ ₹ 280 ಕೋಟಿ
2. ಸಿಂಗಂ ಅಗೇನ್ ₹ 270.60 ಕೋಟಿ
3. ದೃಶ್ಯಂ 2 ₹ 241 ಕೋಟಿ
4. ಗೋಲ್‌ಮಾಲ್ ಅಗೇನ್ ₹205.70 ಕೋಟಿ
5. ಟೋಟಲ್ ಧಮಾಲ್ ₹ 154.23 ಕೋಟಿ
6.ಶೈತಾನ್ ₹151 ಕೋಟಿ
7. ಸಿಂಗಂ ರಿಟರ್ನ್ಸ್ ₹140 ಕೋಟಿ
8. ಗೋಲ್‌ಮಾಲ್ 3 ₹106 ಕೋಟಿ
9. ಸನ್ ಆಫ್ ಸರ್ದಾರ್ ₹ 105 ಕೋಟಿ
10. ರೇಡ್ { 2018 } ₹103.07 ಕೋಟಿ
ಒಟ್ನಲ್ಲಿ ಸದ್ಯ ರೇಡ್ 2 ಚಿತ್ರಕ್ಕೆ ಮೊದಲ ಮೂರು ದಿನ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಇಂದು { ಭಾನುವಾರ} ಚಿತ್ರದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ. ರೇಡ್ 2 ನೂರು ಕೋಟಿಯ ಗಡಿಯನ್ನು ದಾಟುತ್ತಾ ? ಛಾವಾ ನಂತರ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಚಿತ್ರ ಎನ್ನುವ ಹೆಗ್ಗಳಿಕೆಗೆ ರೇಡ್ 2 ಚಿತ್ರ ಪಾತ್ರವಾಗುತ್ತಾ ? ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











