Raja Shivaji Box Office Day 9 ; ಬಾಕ್ಸಾಫೀಸ್‌ನಲ್ಲಿ ರಾಜಾ ಶಿವಾಜಿ ಅಬ್ಬರ-ಮರಾಠಿ ಚಿತ್ರರಂಗದ ಕಿಂಗ್ ಆಗ್ತಾರಾ ರಿತೇಶ್?

ಪ್ರತಿಭೆಯ ಕಣಜವಾಗಿದ್ದರು ಕೂಡ ಆರಕ್ಕೇರದ ಮೂರಕ್ಕಿಳಿಯದ ಬಾಲಿವುಡ್ ಸ್ಟಾರ್ ಗಳಲ್ಲಿ ರಿತೇಶ್ ದೇಶಮುಖ್ ಕೂಡ ಒಬ್ಬರು. ಹಿಂದಿ ಚಿತ್ರರಂಗದಲ್ಲಿ ತನ್ನ ಸ್ವಂತ ಬಲದಿಂದ ಇಲ್ಲಿಯವರೆಗೆ ಒಂದೇ ಒಂದು ಬ್ಲಾಕ್ ಬಸ್ಟರ್ ಚಿತ್ರವನ್ನು ರಿತೇಶ್ ನೀಡಿಲ್ಲ. ಹಾಗಂಥ ರಿತೇಶ್ ಸೋಲನ್ನು ಒಪ್ಪಿಕೊಂಡಿಲ್ಲ. ಬದಲಿಗೆ ಪ್ರಯತ್ನ ಮಾಡುತ್ತಿದ್ದಾರೆ. ಮಲ್ಟಿಸ್ಟಾರ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಗೆಲ್ಲುತ್ತಿದ್ದಾರೆ.

ಇನ್ನು ರಿತೇಶ್ ದೇಶಮುಖ್ ಕೇವಲ ಅತ್ಯುತ್ತಮ ನಾಯಕ ಮಾತ್ರ ಅಲ್ಲ. ನಿರ್ದೇಶಕ ಕೂಡ ಹೌದು.‌ ನಿರ್ಮಾಪಕ ಕೂಡ ಹೌದು ಈಗಾಗಲೇ "ವೇಡ್" ಎಂಬ ಬ್ಲಾಕ್ ಬಸ್ಟರ್ ಚಿತ್ರವನ್ನು ತಮ್ಮ ಪತ್ನಿ ಜೊತೆಗೂಡಿ ರಿತೇಶ್ ದೇಶಮುಖ್ ಮರಾಠಿ ಚಿತ್ರರಂಗಕ್ಕೆ ನೀಡಿದ್ದಾರೆ.

Raja Shivaji 60 Crore Milestone Is Riteish Deshmukh the New King of Marathi Cinema

ಇಂಥಾ ರಿತೇಶ್ ದೇಶಮುಖ್ ಈಗ ಮತ್ತೊಂದು ಬ್ಲಾಕ್‌ಬಸ್ಟರ್ ಚಿತ್ರ ನೀಡುವತ್ತ ಹೆಜ್ಜೆ ಇಡುತ್ತಿದ್ದಾರೆ. ಹೌದು, ರಿತೇಶ್ ದೇಶಮುಖ್ ನಿರ್ದೇಶನದ ''ರಾಜಾ ಶಿವಾಜಿ'' ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಈ ಚಿತ್ರ ನಿನ್ನೆ (ಮೇ 9 ) ಎರಡನೇ ಶನಿವಾರ ₹5.60 ಕೋಟಿಯನ್ನು ಕೊಳ್ಳೆ ಹೊಡೆದಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವರದಿ ಮಾಡಿದೆ.

ಸ್ಯಾಕ್ನಿಲ್ ಪ್ರಕಾರ ''ರಾಜಾ ಶಿವಾಜಿ''ಯ 9 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ದಿನ ಭಾರತದ ಒಟ್ಟು ಗಳಿಕೆ (India Net)
ಮೊದಲ ದಿನ (ಶುಕ್ರವಾರ) ₹11.35 ಕೋಟಿ
ಎರಡನೇ ದಿನ (ಶನಿವಾರ) ₹10.55 ಕೋಟಿ
ಮೂರನೇ ದಿನ (ಭಾನುವಾರ) ₹12.00 ಕೋಟಿ
ನಾಲ್ಕನೇ ದಿನ (ಸೋಮವಾರ) ₹5.60 ಕೋಟಿ
ಐದನೇ ದಿನ (ಮಂಗಳವಾರ) ₹4.90 ಕೋಟಿ
ಆರನೇ ದಿನ (ಬುಧವಾರ) ₹4.25 ಕೋಟಿ
ಏಳನೇ ದಿನ (ಗುರುವಾರ) ₹4.00 ಕೋಟಿ
ಮೊದಲ ವಾರದ ಒಟ್ಟು ಗಳಿಕೆ ₹52.65 ಕೋಟಿ
ಎಂಟನೇ ದಿನ (ಶುಕ್ರವಾರ) ₹3.20 ಕೋಟಿ
ಒಂಬತ್ತನೇ ದಿನ (ಶನಿವಾರ) ₹5.60 ಕೋಟಿ
ಒಟ್ಟು ಗಳಿಕೆ (9 ದಿನಗಳು) ₹61.45 ಕೋಟಿ

ಹೀಗೆ 9 ದಿನದಲ್ಲಿ ₹61.45 ಕೋಟಿಯನ್ನು ಗಳಿಸಿರುವ ''ರಾಜಾ ಶಿವಾಜಿ'' ಚಿತ್ರದ ಗಳಿಕೆ ಇಂದು ( ಮೇ10) ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ರಾಜಾ ಶಿವಾಜಿ ಕೇವಲ ಮರಾಠಿಯಲ್ಲಿ ಮಾತ್ರ ಅಲ್ಲ ಹಿಂದಿಯಲ್ಲಿ ಕೂಡ ಬಿಡುಗಡೆಯಾಗಿದೆ. ಆದರೆ ಮರಾಠಿಯಲ್ಲಿ ಸಿಕ್ತಿರುವ ಪ್ರೀತಿ ಹಿಂದಿ ಭಾಷಿಕರಿಂದ ರಿತೇಶ್‌ಗೆ ಸಿಕ್ತಿಲ್ಲ.

ಅಂದ್ಹಾಗೇ ಮರಾಠಿ ಚಿತ್ರರಂಗ ಚಿಕ್ಕದಾದ ಚಿತ್ರರಂಗ. ವ್ಯಾಪಾರ ವಿಸ್ತೀರ್ಣವಾಗಿಲ್ಲ. ಹೀಗಾಗಿ ಇಲ್ಲಿಯವರೆಗೆ ಮರಾಠಿಯಲ್ಲಿ ಯಾರೊಬ್ಬರು ಶತಕವನ್ನು ಸಿಡಿಸಿಲ್ಲ. ಬಾಕ್ಸಾಫೀಸ್‌ನಲ್ಲಿ ನೂರು ಕೋಟಿಯನ್ನು ದೋಚಿಲ್ಲ. ಈ ಸಾಧನೆಯನ್ನು ರಿತೇಶ್ ದೇಶಮುಖ್ ಮಾಡ್ತಾರಾ ಎನ್ನುವ ಕುತೂಹಲ ಈಗ ಎಲ್ಲರಲ್ಲಿದೆ.

Raja Shivaji 60 Crore Milestone Is Riteish Deshmukh the New King of Marathi Cinema

ಯಾಕೆಂದರೆ ಮರಾಠಿಯಲ್ಲಿ ಅತೀ ಹೆಚ್ಚು ಹಣ ಗಳಿಸಿದ 10 ಚಿತ್ರಗಳ ಪಟ್ಟಿಯಲ್ಲಿ ''ರಾಜಾ ಶಿವಾಜಿ'' ಮೂರನೇ ಸ್ಥಾನದಲ್ಲಿ ಈಗ ಇದೆ. ಈ ಹತ್ತರಲ್ಲಿ ಮೂರು ಸಿನಿಮಾಗಳು ರಿತೇಶ್ ದೇಶಮುಖ್ ನಿರ್ದೇಶನದ ಸಿನಿಮಾಗಳಿರುವುದು ವಿಶೇಷ.


ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 10 ಮರಾಠಿ ಸಿನಿಮಾಗಳು

ಚಿತ್ರದ ಹೆಸರು ಬಿಡುಗಡೆಯಾದ ವರ್ಷ ಒಟ್ಟು ಗಳಿಕೆ (India Net)
1 ಸೈರಾಟ್ 2016 ₹90.00 ಕೋಟಿ
2 ಬೈಪಣ್ ಭಾರಿ ದೇವಾ 2023 ₹76.28 ಕೋಟಿ
3 ರಾಜ ಶಿವಾಜಿ 2026 ₹61.45 ಕೋಟಿ*
4 ವೇಡ್ 2022 ₹61.20 ಕೋಟಿ
5 ನಟಸಾಮ್ರಾಟ್ 2016 ₹42.00 ಕೋಟಿ
6 ಪಾವನಖಿಂಡ್ 2022 ₹37.72 ಕೋಟಿ
7 ಲೈ ಭಾರಿ 2014 ₹37.00 ಕೋಟಿ
8 ಕತ್ಯಾರ್ ಕಾಳಜತ್ ಘುಸಲಿ 2015 ₹35.00 ಕೋಟಿ
9 ಠಾಕ್ರೆ 2019 ₹31.60 ಕೋಟಿ
10 ಟೈಂಪಾಸ್ 2014 ₹30.00 ಕೋಟಿ

ಒಟ್ನಲ್ಲಿ ಸದ್ಯ ರಾಜಾ ಶಿವಾಜಿ ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. 9 ದಿನದಲ್ಲಿ ₹61.45 ಕೋಟಿ ದೋಚಿದೆ. ನೂರು ಕೋಟಿಯ ಗಡಿಯನ್ನು ದಾಟುವ ಮೂಲಕ ರಿತೇಶ್ ದೇಶಮುಖ್ ಮರಾಠಿ ಚಿತ್ರರಂಗದ ಕಿಂಗ್ ಆಗ್ತಾರಾ..? ಹೊಸ ಇತಿಹಾಸ ಸೃಷ್ಟಿಸುತ್ತಾರಾ ..? ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Raja Shivaji is Unstoppable! Riteish Deshmukh’s historical drama smashes the ₹60 crore mark on Day 9. From massive weekend growth to record-breaking footfalls, get the latest box office updates and Day 10 projections now!
Read more about: ritesh deshmukh genelia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X