Baahubali: The Epic Day 1 Boxoffice: ಮತ್ತೆ ಬಂದು ದಾಖಲೆ ಬರೆದ 'ಬಾಹುಬಲಿ'

ರಾಜಮೌಳಿ ನಿರ್ದೇಶನದ ಬಾಹುಬಲಿ ಸರಣಿ ಸಿನಿಮಾಗಳ ದಶಕದ ಹಿಂದೆ ಬರೆದ ದಾಖಲೆಗಳು ಒಂದೆರಡಲ್ಲ. ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಸಿನಿಮಾ ಇದು. ಮತ್ತೆ ಈಗ ಹೊಸ ರೂಪದಲ್ಲಿ 'ಬಾಹುಬಲಿ' ಪ್ರೇಕ್ಷಕರ ಮುಂದೆ ಬಂದಿದ್ದಾನೆ. ಆಗ ಎರಡು ಭಾಗಗಳಲ್ಲಿ ಸದ್ದು ಮಾಡಿದ್ದ ಚಿತ್ರ ಈಗ ಒಂದಾಗಿ ಪ್ರೇಕ್ಷಕರನ್ನು ರಂಜಿಸ್ತಿದೆ.

'ಬಾಹುಬಲಿ ದಿ ಬಿಗಿನಿಂಗ್' ಹಾಗೂ 'ಬಾಹುಬಲಿ ದಿ ಕನ್‌ಕ್ಲೂಷನ್' ಚಿತ್ರಗಳನ್ನು ಒಟ್ಟಿಗೆ ಸೇರಿಸಿ ಎಡಿಟ್ ಮಾಡಿ 'ಬಾಹುಬಲಿ ದಿ ಎಪಿಕ್' ಹೆಸರಿನಲ್ಲಿ ಮರು ಬಿಡುಗಡೆ ಮಾಡಲಾಗಿದೆ. ವಿಶ್ವದಾದ್ಯಂತ ಈ ವಾರ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಚಿತ್ರ ಭರ್ಜರಿ ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ವೀಕೆಂಡ್ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

Rajamouli s Baahubali The Epic Re-Release Roars Back to Box Office day 1

ಹಳೇ ಸಿನಿಮಾಗಳನ್ನು ಹೊರ ರೂಪದಲ್ಲಿ ಮರು ಬಿಡುಗಡೆ ಮಾಡುವ ಪ್ರಯತ್ನ ಹೊಸದೇನು ಅಲ್ಲ. ಆದರೆ ಬಾಹುಬಲಿ ಸರಣಿಯನ್ನು ಮತ್ತೆ ಪ್ರೇಕ್ಷಕರ ಮುಂದೆ ತರಲು ಖುದ್ದು ರಾಜಮೌಳಿ ಅಖಾಡಕ್ಕೆ ಇಳಿದಿದ್ದರು. ತಾವೇ ಮುಂದೆ ನಿಂತು ಬೇಡದ ಸನ್ನಿವೇಶ, ಹಾಡುಗಳನ್ನು ತೆಗೆದು ಹಾಕಿ ಐದೂವರೆ ಗಂಟೆ ಫುಟೇಜ್ ಅನ್ನು ಮೂರು ಮುಕ್ಕಾಲು ಗಂಟೆಗೆ ಇಳಿಸಿದ್ದರು. ಕೆಲ ಭಾಗಗಳಲ್ಲಿ ರೀ ರೆಕಾರ್ಡಿಂಗ್ ಮಾಡಿಸಿದ್ದರು. ಪ್ರಭಾಸ್, ರಾಣಾ ಜೊತೆ ಸಂದರ್ಶನ ಮಾಡಿ ಸಿನಿಮಾ ಪ್ರಚಾರ ಮಾಡಿದ್ದರು. ಪ್ರೀಮಿಯರ್‌ ಶೋಗಳಿಗಾಗಿ ಚಿತ್ರಮಂದಿರಗಳಿಗೂ ಭೇಟಿ ನೀಡಿದ್ದಾರೆ.

ಜಕ್ಕಣ್ಣ ಪ್ರಯತ್ನಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಈಗಾಗಲೇ ಸಾಕಷ್ಟು ಬಾರಿ ನೋಡಿರುವ ಚಿತ್ರವನ್ನು ಮತ್ತೆ ಬೆಳ್ಳಿ ಪರದೆಯಲ್ಲಿ ಪ್ರೇಕ್ಷಕರು ಕಣ್ತುಂಬಿಕೊಳ್ಳುತ್ತಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಸಿನಿಮಾ ನೋಡಿ ಮೌಳಿ ಪ್ರತಿಭೆಯನ್ನು ಕೊಂಡಾಡಿದ್ದಾರೆ. ಕರ್ನಾಟಕದಲ್ಲಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಕೆಲವೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ರೀ-ರಿಲೀಸ್ ಚಿತ್ರಕ್ಕೆ ಈ ಮಟ್ಟಿಗೆ ರೆಸ್ಪಾನ್ಸ್ ನಿಜಕ್ಕೂ ವಿಶೇಷ.

Rajamouli s Baahubali The Epic Re-Release Roars Back to Box Office day 1

ಬಾಕ್ಸಾಫೀಸ್ ಕಲೆಕ್ಷನ್

'ಬಾಹುಬಲಿ ದಿ ಎಪಿಕ್' ಚಿತ್ರದ ಮೊದಲ ದಿನದ ಕಲೆಕ್ಷನ್ ಬಗ್ಗೆ ಚರ್ಚೆ ನಡೀತಿದೆ. ಅಧಿಕೃತವಾಗಿ ಮಾಹಿತಿ ಇನ್ನು ಸಿಕ್ಕಿಲ್ಲ. Sacnilk.com ವರದಿ ಪ್ರಕಾರ ಭಾರತದಲ್ಲಿ 10.4 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಓವರ್‌ಸೀಸ್‌ನಲ್ಲಿ 2ರಿಂದ 3 ಕೋಟಿ ಕಲೆಕ್ಷನ್ ಆಗಿರುವ ಅಂದಾಜಿದೆ ಎಂದು ಬಾಕ್ಸಾಫೀಸ್ ಪಂಡಿತರು ಹೇಳುತ್ತಿದ್ದಾರೆ. ವಿಶ್ವದಾದ್ಯಂತ ಹೆಚ್ಚು ಕಮ್ಮಿ 18 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ.

ಕರ್ನಾಟಕ ಕಲೆಕ್ಷನ್

ದಶಕದ ಹಿಂದೆ ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾಗಳನ್ನು ಬಿಡುಗಡೆ ಮಾಡಲು ಅವಕಾಶ ಇರಲಿಲ್ಲ. ಆದರೆ ಈಗ ಅವಕಾಶ ಇದ್ದು 'ಬಾಹುಬಲಿ ದಿ ಎಪಿಕ್' ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಿದ್ದಾರೆ. ಇನ್ನು ಕರ್ನಾಟಕದಲ್ಲಿ ಮೊದಲ ದಿನ 1 ಕೋಟಿ ರೂ. ಗಳಿಕೆ ಕಂಡಿದೆ ಎನ್ನಲಾಗ್ತಿದೆ. ರೀ-ರಿಲೀಸ್ ಚಿತ್ರವೊಂದು ಈ ಮಟ್ಟಿಗೆ ಕಲೆಕ್ಷನ್ ಮಾಡಿರುವುದು ಅಚ್ಚರಿಯೇ ಸರಿ.

ಟ್ರಿಮ್ ಆಗಿರುವ ಬಾಹುಬಲಿ

ಶಿವುಡು, ಅವಂತಿಕಾ ಲವ್ ಸ್ಟೋರಿಗೆ ಸಂಪೂರ್ಣವಾಗಿ ಕತ್ತರಿ ಹಾಕಲಾಗಿದೆ. ಅಸ್ಲಾಂ ಖಾನ್(ಸುದೀಪ್) ಹಾಗೂ ಕಟ್ಟಪ್ಪ(ಸತ್ಯರಾಜ್) ಭೇಟಿ ಸನ್ನಿವೇಶ ಕೂಡ ಚಿತ್ರದಲ್ಲಿ ಇಲ್ಲ. ಇನ್ನುಳಿದಂತೆ 'ಕನ್ನ ನಿದುರಿಂಚರಾ', 'ಇರುಕ್ಕು ಪೋ' ಸಾಂಗ್‌ಗಳನ್ನು ತೆಗೆದು ಹಾಕಿದ್ದಾರೆ. ಕೆಲವೇ ಸೆಕೆಂಡ್‌ಗಳ ಸಣ್ಣ ದೃಶ್ಯವನ್ನು ಮಾತ್ರ ಹೊಸದಾಗಿ ಸೇರಿಸಲಾಗಿದೆ. ಎಷ್ಟೇ ಕತ್ತರಿ ಹಾಕಿದ್ದರೂ 3 ಗಂಟೆ 43 ನಿಮಿಷದ 'ಬಾಹುಬಲಿ ದಿ ಎಪಿಕ್' ಚಿತ್ರದ ಕಾಲಾವಧಿ ತುಸು ಹೆಚ್ಚಾಯಿತು ಎನ್ನುವವರು ಇದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಕಾದು ನೋಡಬೇಕು.

More from Filmibeat

Read more about: baahubali rajamouli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X