ಫಸ್ಟ್ ಡೇ 'ಕೂಲಿ' ಕಲೆಕ್ಷನ್ ಲೆಕ್ಕ ಕೊಟ್ಟ ಸನ್ ಪಿಕ್ಚರ್ಸ್; ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?

ಬಾಕ್ಸಾಫೀಸ್‌ನಲ್ಲಿ 'ಕೂಲಿ' ಆರ್ಭಟ ಜೋರಾಗಿದೆ. ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. 2ನೇ ದಿನ ಸ್ವಾತಂತ್ರ್ಯ ದಿನಾಚರಣೆ ರಜೆ ಚಿತ್ರದ ಗಳಿಕೆಗೆ ವರವಾಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರದಲ್ಲಿ ಉಪೇಂದ್ರ, ರಚಿತಾ ರಾಮ್ ಕೂಡ ನಟಿಸಿರುವುದು ವಿಶೇಷ. 'ವಾರ್- 2' ಆರ್ಭಟ ನಡುವೆಯೂ 'ಕೂಲಿ' ದರ್ಬಾರ್ ನಡೀತಿದೆ.

ರಜನಿಕಾಂತ್ ಸಿನಿಮಾಗಳಿಗೆ ಕರ್ನಾಟಕದಲ್ಲಿ ದೊಡ್ಡ ಮಾರ್ಕೆಟ್ ಇದೆ. ಲೋಕೇಶ್ ಕನಕರಾಜ್ ಜೊತೆ ತಲೈವಾ ಕೈ ಜೋಡಿಸಿದ್ದು ಸಹಜವಾಗಿಯೇ ನಿರೀಕ್ಷೆ ಹೆಚ್ಚುವಂತೆ ಮಾಡಿತ್ತು. ಪ್ರೇಕ್ಷಕರನ್ನು ಸಂಪೂರ್ಣವಾಗಿ ರಂಜಿಸುವಲ್ಲಿ ಸಿನಿಮಾ ವಿಫಲವಾಗಿದ್ದರೂ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಕರ್ನಾಟಕದಲ್ಲಿ 'ಕೂಲಿ' ಅಬ್ಬರ ಕೊಂಚ ಜೋರಾಗಿಯೇ ಇದೆ. ಮೊದಲ ದಿನ ಬಹುತೇಕ ಕಡೆಗಳಲ್ಲಿ ಟಿಕೆಟ್ ದರ ಹೆಚ್ಚಿಸಲಾಗಿತ್ತು. ಇದು ಚಿತ್ರದ ಗಳಿಕೆಗೆ ಬಲ ತುಂಬಿದೆ.

Rajinikanth s Coolie Smashes Box Office with 151 Crore Day-1 Collection Karnataka Leads with Record Earnings

500 ರೂ, 800 ರೂ, 1000 ರೂ, ಅಷ್ಟೇ ಅಲ್ಲ 2000 ರೂ,ಗೂ ಟಿಕೆಟ್ ಮಾರಾಟವಾಗಿದೆ. ರಾಜ್ಯದಲ್ಲಿ ಸಿನಿಮಾ ಟಿಕೆಟ್ ದರ 200 ರೂ.ಗೆ ನಿಗದಿ ಪಡಿಸಲು ಸರ್ಕಾರ ಮುಂದಾಗಿದೆ. ಆದರೆ ಇನ್ನು ಅಧಿಕೃತವಾಗಿ ಘೋಷಣೆ ಆಗಿಲ್ಲ. ಅದಕ್ಕೂ ಮುನ್ನ 'ಕೂಲಿ' ಸಿನಿಮಾ ತೆರೆಗೆ ಬಂದಿದ್ದು ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಕೂಡ 600 ರೂ, 800 ರೂ,ಗೆ ಟಿಕೆಟ್ ಬುಕ್ ಮಾಡಿ ಪ್ರೇಕ್ಷಕರು ಸಿನಿಮಾ ನೋಡಿದ್ದಾರೆ. ಗುರುವಾರವೇ ಸಿನಿಮಾ ತೆರೆಗೆ ಬಂದಿದ್ದು ಶುಕ್ರವಾರ, ಶನಿವಾರ ಹಾಗೂ ಭಾನುವಾರ ಹೆಚ್ಚು ಕಲೆಕ್ಷನ್ ಮಾಡಲು ಅನುಕೂಲವಾಗಿದೆ.

ಬೆಂಗಳೂರಿನಲ್ಲಿ 'ಕೂಲಿ'

ಸಿಲಿಕಾನ್ ಸಿಟಿಯಲ್ಲಿ 'ಕೂಲಿ' ಫೀವರ್ ಹೆಚ್ಚಿದೆ. ಮೊದಲ ದಿನ ಒಟ್ಟಾರೆ 1013 ಶೋಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ. ಅದರಲ್ಲಿ 500ಕ್ಕೂ ಅಧಿಕ ಶೋಗಳು ಹೌಸ್‌ಫುಲ್ ಆಗಿತ್ತು. ಈ ಮೂಲಕ ಮೊದಲ ದಿನ ರಜನಿಕಾಂತ್ ನಟನೆಯ 3 ಸಿನಿಮಾಗಳು 1000 ಶೋಗಳಲ್ಲಿ ಪ್ರದರ್ಶನ ಕಂಡಂತೆ ಆಗಿದೆ. ಒಂದು ಲೆಕ್ಕದಲ್ಲಿ 'KGF- 2' ದಾಖಲೆಯನ್ನು ಕೂಡ ಅಲುಗಾಡಿಸಿದೆ.

ಕರ್ನಾಟಕ ಕಲೆಕ್ಷನ್

ಒಂದು ಅಂದಾಜಿನ ಪ್ರಕಾರ ಕರ್ನಾಟಕದಲ್ಲಿ 'ಕೂಲಿ' ಸಿನಿಮಾ ಮೊದಲ ದಿನ 14 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಸುದೀಪ್ ನಟನೆಯ 'ಮ್ಯಾಕ್ಸ್' ಮೊದಲ ದಿನ 9 ಕೋಟಿ ರೂ. ಹಾಗೂ ದರ್ಶನ್ ನಟನೆಯ 'ಕಾಟೇರ' ಸಿನಿಮಾ 11 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ sacnilk.com ವೆಬ್ ಸೈಟ್ ವರದಿ ಮಾಡಿತ್ತು. ಸಾಮಾನ್ಯವಾಗಿ ಕನ್ನಡ ಸಿನಿಮಾಗಳ ಟಿಕೆಟ್ ದರ ಹೀಗೆ ಹೆಚ್ಚಿಸುವುದಿಲ್ಲ. ಹಾಗಾಗಿ 'ಕೂಲಿ' ಹೆಚ್ಚು ಗಳಿಕೆ ಮಾಡಿರುವುದು ಗೊತ್ತಾಗುತ್ತಿದೆ.

ಕರ್ನಾಟಕ ವಿತರಣೆ ಹಕ್ಕು

ಬರೋಬ್ಬರಿ 22 ಕೋಟಿ ರೂ.ಗೆ 'ಕೂಲಿ' ಕರ್ನಾಟಕ ವಿತರಣೆ ಹಕ್ಕು ಮಾರಾಟವಾಗಿತ್ತು. ಎವಿ ಮೀಡಿಯಾದ ಪರವಾಗಿ ಜಯಣ್ಣ ಫಿಲ್ಮ್ಸ್ ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತಂದಿದೆ. ಅಭಿಮಾನಿಗಳು ಹಬ್ಬದ ರೀತಿ ಸಿನಿಮಾ ಸ್ವಾಗತಿಸಿದ್ದರು. ರಾಜ್‌ ಬಹದ್ದೂರ್ ಸೇರಿ ರಜನಿಕಾಂತ್ ಸ್ನೇಹಿತರೆಲ್ಲಾ ಒಟ್ಟಿಗೆ ಬೆಂಗಳೂರಿನಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ.

ವರ್ಲ್ಡ್‌ವೈಡ್ ಕಲೆಕ್ಷನ್

'ಕೂಲಿ' ಸಿನಿಮಾ ಮೊದಲ ಒಟ್ಟಾರೆ ಎಷ್ಟು ಕಲೆಕ್ಷನ್ ಮಾಡಿದೆ ಎಂದು ಸನ್ ಪಿಕ್ಚರ್ಸ್ ಸಂಸ್ಥೆ ಮಾಹಿತಿ ಕೊಟ್ಟಿದೆ. ತಮಿಳು ಚಿತ್ರರಂಗದಲ್ಲಿ ದಾಖಲೆ ಎನ್ನುವಂತೆ ಮೊದಲ ದಿನ ಸಿನಿಮಾ 151 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಸಂಸ್ಥೆ ಘೋಷಿಸಿದೆ.

More from Filmibeat

English summary
Rajinikanth’s Coolie, directed by Lokesh Kanagaraj, roars at the box office with ₹151 crore worldwide on Day 1, including a record ₹13 crore in Karnataka, despite mixed reviews.
Read more about: rajinikanth upendra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X