ಕನ್ನಡದಲ್ಲೇ 'ಕೂಲಿ' ಸಿನಿಮಾ ನೋಡಲು ಮುಗಿಬಿದ್ದ ಪ್ರೇಕ್ಷಕರು; ಡಬ್ಬಿಂಗ್ ವರ್ಷನ್ ಕಲೆಕ್ಷನ್ ಹೇಗಿದೆ?

ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ 2ನೇ ವಾರಕ್ಕೆ ಕಾಲಿಟ್ಟಿದೆ. ಮಿಶ್ರಪ್ರತಿಕ್ರಿಯೆ ನಡುವೆಯೂ ಸಿನಿಮಾ ತಕ್ಕಮಟ್ಟಿಗೆ ಕಲೆಕ್ಷನ್ ಮಾಡ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬಂದಿತ್ತು. ಕನ್ನಡಕ್ಕೆ ಡಬ್ ಆಗಿ ಬಂದಿರುವ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ.

22 ಕೋಟಿ ರೂ.ಗೆ ಕರ್ನಾಟಕ ವಿತರಣೆ ಹಕ್ಕು ಮಾರಾಟವಾಗಿದೆ. ಎವಿ ಮೀಡಿಯಾ ಕನ್ಸಲ್ಟೆನ್ಸಿ ಮೂಲಕ ಜಯಣ್ಣ ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಿದೆ. ಆರಂಭದಲ್ಲಿ ಚಿತ್ರ ಕನ್ನಡಕ್ಕೆ ಡಬ್ ಆಗುತ್ತಾ ಇಲ್ವಾ? ಎನ್ನುವ ಅನುಮಾನ ಇತ್ತು. ಅಚ್ಚರಿ ಎಂದರೆ ರಾಜ್ಯದಲ್ಲಿ ಕನ್ನಡ ವರ್ಷನ್ ನೋಡಲು ಜನ ಮುಗಿಬೀಳುತ್ತಿದ್ದಾರೆ.

Rajinikanth s Coolie Kannada Dubbed Version Wins Audience Support Across Karnataka

ಮೊದಲ ವಾರದ ಅಂತ್ಯಕ್ಕೆ ರಾಜ್ಯದ ಕೆಲ ಚಿತ್ರಮಂದಿರಗಳಲ್ಲಿ ತಮಿಳು, ತೆಲುಗು ವರ್ಷನ್ 'ಕೂಲಿ' ಸಿನಿಮಾ ಶೋ ತೆಗೆಯಲಾಗಿದೆ. ಕನ್ನಡ ಡಬ್ಬಿಂಗ್ ವರ್ಷನ್ ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ಪ್ರೇಕ್ಷಕರು ಕನ್ನಡದಲ್ಲೇ ಸಿನಿಮಾ ನೋಡಲು ಮುಂದಾಗಿರವುದೇ ಇದಕ್ಕೆ ಕಾರಣ. ಚಿತ್ರದಲ್ಲಿ ಉಪೇಂದ್ರ ಹಾಗೂ ರಚಿತಾ ರಾಮ್ ನಟಿಸಿದ್ದಾರೆ. ಅದೂ ಕೂಡ ಕನ್ನಡ ಪ್ರೇಕ್ಷಕರು 'ಕೂಲಿ' ಸಿನಿಮಾ ನೋಡುವಂತೆ ಹುರಿದುಂಬಿಸಿದೆ.

ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ತೆರೆಗೆ ಬಂದಿತ್ತು. ಗುರುವಾರ ಸಿನಿಮಾ ತೆರೆಗೆ ಬಂದಿತ್ತು. 3 ದಿನಗಳ ವೀಕೆಂಡ್ ಸಿಕ್ಕಿತ್ತು. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಪ್ರೇಕ್ಷಕರಿಗ ನಿರಾಸೆ ಮೂಡಿಸಿದೆ. ಅಭಿಮಾನಿಗಳು ಚೆನ್ನಾಗಿಲ್ಲ ಎಂದರೂ ಸಾಮಾನ್ಯ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಬಾಲಿವುಡ್ 'ವಾರ್- 2' ಕೂಡ 'ಕೂಲಿ' ಎದುರಿಸಬೇಕಾಯಿತು.

Rajinikanth s Coolie Kannada Dubbed Version Wins Audience Support Across Karnataka

ಮೊದಲ ವಾರ 'ಕೂಲಿ' ಚಿತ್ರದ ಕನ್ನಡ ವರ್ಷನ್ ಮಾತ್ರ 3 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗುತ್ತಿದೆ. ಕನ್ನಡದಲ್ಲಿ ಸಿನಿಮಾ ಡಬ್ಬಿಂಗ್ ಮಾಡಲು ಅವಕಾಶ ಇದೆ. ಪರಭಾಷಿಕರು ಕನ್ನಡಕ್ಕೆ ತಮ್ಮ ಸಿನಿಮಾ ಡಬ್ ಮಾಡಿ ರಿಲೀಶ್ ಮಾಡಬಹುದು. ಇನ್ನುಳಿದಂತೆ ವಿಶ್ವದಾದ್ಯಂತ ಎಲ್ಲಾ ಭಾಷೆಗಳಿಂದ ಸೇರಿ ಮೊದಲ 4 ದಿನಕ್ಕೆ 404 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಸನ್ ಪಿಕ್ಚರ್ಸ್ ಸಂಸ್ಥೆ ಘೋಷಿಸಿತ್ತು. ಒಟ್ಟಾರೆ 424 ಕೋಟಿ ರೂ. ಮೊದಲ ವಾರವೇ ಸಿನಿಮಾ ಬಾಚಿಕೊಂಡಿದೆ.

ಚಿತ್ರದಲ್ಲಿ ಕಲೀಶಾ ಪಾತ್ರದಲ್ಲಿ ಉಪೇಂದ್ರ ಅಬ್ಬರಿಸಿದ್ದಾರೆ. ಕೆಲವೇ ನಿಮಿಷ ತೆರೆಮೇಲೆ ಇದ್ದರೂ ಉಪ್ಪಿ ಲುಕ್, ಪರ್ಫಾರ್ಮೆನ್ಸ್ ನೋಡಿ ತಮಿಳು ಸಿನಿರಸಿಕರು ಫಿದಾ ಆಗಿದ್ದಾರೆ. ಅವರಿಗೆ ಮತ್ತಷ್ಟು ಸನ್ನಿವೇಶ ಕೊಡಬೇಕಿತ್ತು ಎನ್ನುತ್ತಿದ್ದಾರೆ. ಇಡೀ ಕಥೆಗೆ ಟ್ವಿಸ್ಟ್ ಕೊಡುವ ಕಲ್ಯಾಣಿ ಪಾತ್ರದಲ್ಲಿ ರಚಿತಾ ರಾಮ್ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಜನಿಕಾಂತ್ ಬಿಟ್ಟರೆ ಚಿತ್ರದಲ್ಲಿ ಸೌಬಿನ್ ಸಾಹಿರ್ ಹಾಗೂ ರಚ್ಚು ನಟನೆಗೆ ಹೆಚ್ಚು ಅಂಕ ಸಿಕ್ಕಿದೆ.

ಮಿಶ್ರ ಪ್ರತಿಕ್ರಿಯೆ ಕಾರಣಕ್ಕೆ 'ಕೂಲಿ' ಸಿನಿಮಾ ದೊಡ್ಡದಾಗಿ ಬಾಕ್ಸಾಫೀಸ್ ಶೇಕ್ ಮಾಡುವ ಅವಕಾಶ ಕಳೆದುಕೊಂಡಿದೆ. ಸಿನಿಮಾ ಕ್ರೇಜ್ ನೋಡಿ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡುತ್ತದೆ ಎಂದು ಕೆಲವರು ಭಾವಿಸಿದ್ದರು. ಆದರೆ ಈಗ 'ಜೈಲರ್' ಕಲೆಕ್ಷನ್ ದಾಖಲೆ ಮೀರಿಸುವುದು ಕಷ್ಟ ಎನ್ನುವಂತಾಗಿದೆ. ಮೊದಲ ವಾರ '2.o' ಚಿತ್ರದ ದಾಖಲೆ ಕೂಡ ಹಿಂದಿಕ್ಕಿಲ್ಲ 'ಕೂಲಿ'.

'ಕೂಲಿ' ಚಿತ್ರಕ್ಕೆ ಸಿಕ್ಕಿರುವ ಮಿಶ್ರಪ್ರತಿಕ್ರಿಯೆಗೆ ಪ್ರೇಕ್ಷಕರು ನಿರ್ದೇಶಕ ಲೋಕೇಶ್ ಕನಕರಾಜ್ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಳ್ಳೆ ಬಜೆಟ್, ಸ್ಟಾರ್ ಕಲಾವಿದರು, ತಂತ್ರಜ್ಞರ ಬಲ ಸಿಕ್ಕರೂ ಒಂದೊಳ್ಳೆ ಕಥೆ, ಚಿತ್ರಕಥೆ ಮಾಡಿ ಸಿನಿಮಾ ಗೆಲ್ಲಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮುಂದೆ ರಜನಿಕಾಂತ್, ಕಮಲ್ ಹಾಸನ್ ನಟನೆಯ ಮಲ್ಟಿಸ್ಟಾರರ್ ಚಿತ್ರಕ್ಕೆ ಲೋಕೇಶ್ ಆಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿದೆ.

More from Filmibeat

English summary
Rajinikanth’s Coolie Kannada Dubbed Version Collects ₹3 Crore in First Week, Audience Prefers Local Release
Read more about: rajinikanth upendra rachita ram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X