ಧುರಂಧರ್ ಅಬ್ಬರಕ್ಕೆ ಕಂಗಾಲಾದ ಬಾಲಿವುಡ್ ಸುಲ್ತಾನರು ; ಬಾಕ್ಸಾಫೀಸ್‌ನ ಹೊಸ ಅಧಿಪತಿಯಾದ ರಣ್ವೀರ್ ಸಿಂಗ್

ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಪ್ರಪಂಚದಲ್ಲಿ ಹಿಂದಿ ಚಿತ್ರರಂಗದಲ್ಲಿ ಹಲವು ಚಿತ್ರಗಳು ಅಬ್ಬರಿಸಿವೆ. ಹಲವಾರು ದಾಖಲೆಗಳನ್ನು ಕೂಡ ಬರೆದಿವೆ. ಆದರೆ.. ಎಲ್ಲವನ್ನೂ ಸಾಧಿಸಿ ಭೇದಿಸಿದ ಬಾಲಿವುಡ್‌ಗೆ ಮಾತ್ರ ಇಲ್ಲಿಯವರೆಗೆ ಕೇವಲ ಭಾರತದಲ್ಲಿ ₹700 ಕೋಟಿಯನ್ನು ಕೊಳ್ಳೆ ಹೊಡೆಯಲು ಸಾಧ್ಯವಾಗಿರಲಿಲ್ಲ. ನಿಜಾ.. ''ದಂಗಲ್''.. ''ಪಠಾಣ್'' .. ಸೇರಿ ಕೆಲ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ 1000 ಕೋಟಿಯನ್ನು ಗಳಿಸಿವೆ.

ಆದರೆ.. ಆ ಗಳಿಕೆ ಕೇವಲ ಭಾರತದಲ್ಲಿ ಮಾಡಿದ್ದಲ್ಲ. ಬದಲಿಗೆ ವರ್ಲ್ಡ್ ವೈಡ್ ಪ್ರದರ್ಶನ ಕಂಡು ಚಿತ್ರ ಮಾಡಿದ್ದ ಗಳಿಕೆ ಅದು. ವಿಶೇಷ ಅಂದರೆ ಹಿಂದಿ ಉದ್ಯಮದ ಘಟಾನುಘಟಿಗಳಿಂದ ಮಾಡಲಾಗದ ಈ ಸಾಧನೆಯನ್ನು ದಕ್ಷಿಣ ಭಾರತದ ಚಿತ್ರಗಳು ಮಾಡಿವೆ. ಕೇವಲ ಭಾರತದಲ್ಲಿಯೇ ₹700.. ₹800 ಕೋಟಿಯನ್ನು ದೋಚಿವೆ. ಉದಾಹರಣೆಗೆ ನಮ್ಮ ನೆಲದ ''ಕೆಜಿಎಫ್ 2'' ಚಿತ್ರವನ್ನೇ ತೆಗೆದುಕೊಳ್ಳಿ.

Ranveer s Dhurandhar Rewrites History Dethrones Jawan as Bollywood s All-Time 1 Grosser

2022ರಲ್ಲಿ ಬಿಡುಗಡೆಯಾದ ''ಕೆಜಿಎಫ್ 2''₹859 ಕೋಟಿಯನ್ನು ಕೇವಲ ಭಾರತದಲ್ಲಿ ಕೊಳ್ಳೆ ಹೊಡೆದಿತ್ತು.ಅಲ್ಲು ಅರ್ಜುನ್ ಅಭಿನಯದ ''ಪುಷ್ಪಾ 2'' ₹1,234 ಕೋಟಿಯನ್ನು ಲೂಟಿ ಮಾಡಿತ್ತು. ಆದರೆ ಸೌತ್‌ನವರು ಮಾಡಿದ ಈ ಸಾಧನೆಯನ್ನು ಹಿಂದಿಯವರಿಂದ ಮಾಡಲು ಸಾಧ್ಯವಾಗಿರಲಿಲ್ಲ.

ಹೀಗಾಗಿ ಹಲವರು ಈ ಸಾಧನೆಯ ಶಿಖರಕ್ಕೆ ಬಾಲಿವುಡ್ ಏರಲು ಸಾಧ್ಯ ಇಲ್ಲ ಎಂದುಕೊಂಡಿದ್ದರು. ಆದರೆ.. ಈಗ ಬಾಲಿವುಡ್ ಕಣ್ಣಿಗೆ ಹೊಸದೊಂದು ಬೆಳಕು ಕಂಡಿದೆ. ದಾಖಲೆ ಮುರಿಯುವುದು ಅಸಾಧ್ಯವೇನಲ್ಲ ಎಂಬ ಭಾವನೆ ಬಾಲಿವುಡ್‌ನವರಲ್ಲಿ ಮೂಡಿದೆ. ಆ ಭರವಸೆಯ ಬೆಳಕಿನ ಹೆಸರೇ ''ಧುರಂಧರ್''.

ಹೌದು, ''ಧುರಂಧರ್''.. ಈ ವರ್ಷಾಂತ್ಯದಲ್ಲಿ ಬಾಕ್ಸಾಫೀಸ್‌ಗೆ ಅಪ್ಪಳಿಸಿರುವ ಜ್ವಾಲಾಮುಖಿ. ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೆ, ಅಂದರೆ ಕಳೆದ 24 ದಿನಗಳಿಂದ ಬೆಳ್ಳಿಪರದೆಯ ಮೇಲೆ ಧಗಧಗಿಸುತ್ತಲೇ ಇರುವ ಈ ಸಿನಿಮಾ ಇಲ್ಲಿಯವರೆಗೆ ಹಲವು ದಾಖಲೆಗಳನ್ನು ಮುರಿದಿದೆ.

ಇಷ್ಟೇ ಅಲ್ಲ ಹಳೆಯ ಎಲ್ಲ ದಾಖಲೆಗಳನ್ನು ಚಿಂದಿ ಉಡಾಯಿಸಿರುವ ''ಧುರಂಧರ್'' ರಣ್ವೀರ್ ಸಿಂಗ್ ಪಾಲಿಗೆ ಚಿನ್ನದ ಮೊಟ್ಟೆಯಂತಾಗಿದೆ. ದೀಪಿಕಾ ಪಡುಕೋಣೆಯ ಗಂಡನಿಗೆ ಬಾಲಿವುಡ್‌ನ ಹೊಸ ಅಧಿಪತಿ ಎನ್ನುವ ಪಟ್ಟ ಕೂಡ ಈ ಚಿತ್ರ ತಂದು ಕೊಟ್ಟಿದೆ.

Ranveer s Dhurandhar Rewrites History Dethrones Jawan as Bollywood s All-Time 1 Grosser

ಹೌದು. ಈಗಾಗಲೇ ಶಾರುಖ್ ಖಾನ್ ಅಭಿನಯದ ''ಜವಾನ್''.. ''ಪಠಾಣ್.. ವಿಕ್ಕಿ ಕೌಶಲ್ ಅಭಿನಯದ ''ಛಾವಾ''.. ರಣ್‌ಬೀರ್ ಕಪೂರ್ ಅಭಿನಯದ ''ಅನಿಮಲ್''.. ಆಮಿರ್ ಖಾನ್ ಅಭಿನಯದ ''ದಂಗಲ್''.. ಹೀಗೆ ಹತ್ತು ಹಲವು ಚಿತ್ರಗಳನ್ನು ಬಾಕ್ಸಾಫೀಸ್‌ನ ರೇಸ್‌ನಲ್ಲಿ ಹಿಂದಿಕ್ಕಿರುವ ''ಧುರಂಧರ್'' ಸದ್ಯ ಬಾಲಿವುಡ್‌ನ ಇತಿಹಾಸದಲ್ಲಿಯೇ ಹಿಂದೆಂದೂ ಯಾವ ಸಿನಿಮಾ ಮಾಡದ ದಾಖಲೆಯನ್ನು ಮಾಡಿದೆ. ಈ 24 ದಿನದಲ್ಲಿ ₹700 ಕೋಟಿಯನ್ನು ಕೇವಲ ಭಾರತದಲ್ಲಿ ದೋಚಿದೆ. ಈ ಮೂಲಕ ಅತೀ ಹೆಚ್ಚು ಹಣ ಗಳಿಸಿದ ಬಾಲಿವುಡ್‌ನ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.


ಬಾಲಿವುಡ್ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 15 ಸಿನಿಮಾಗಳ ಪಟ್ಟಿ ಇಲ್ಲಿದೆ

1.ಧುರಂಧರ್: ₹706.40 ಕೋಟಿ*

2.ಜವಾನ್: ₹643.87 ಕೋಟಿ

3.ಸ್ತ್ರೀ 2: ₹627.02 ಕೋಟಿ

4.ಛಾವಾ: ₹615.39 ಕೋಟಿ

5.ಅನಿಮಲ್: ₹556.36 ಕೋಟಿ

6.ಪಠಾಣ್: ₹543.05 ಕೋಟಿ

7.ಗದರ್ 2: ₹525.45 ಕೋಟಿ

8.ದಂಗಲ್: ₹387.38 ಕೋಟಿ

9.ಸಂಜು: ₹342.53 ಕೋಟಿ

10. ಪಿಕೆ: ₹340.80 ಕೋಟಿ

11.ಟೈಗರ್ ಜಿಂದಾ ಹೈ: ₹339.16 ಕೋಟಿ

12.ಸೈಯಾರಾ: ₹337.69 ಕೋಟಿ

13.ಭಜರಂಗಿ ಭಾಯಿಜಾನ್: ₹320.34 ಕೋಟಿ

14. ವಾರ್: ₹317.91 ಕೋಟಿ

15. ಪದ್ಮಾವತ್: ₹302.15 ಕೋಟಿ

(* ಗಮನಿಸಿ : ''ಧುರಂಧರ್'' ಸದ್ಯ ಇನ್ನು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಗಳಿಕೆ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ)

ಹೀಗೆ ₹700 ಕೋಟಿಯನ್ನು ಸದ್ಯ ದೋಚಿರುವ ''ಧುರಂಧರ್'' ಹೊಸ ಇತಿಹಾಸ ಬರೆದಿದೆ.₹700 ಕೋಟಿ ಗಡಿಯನ್ನು ದಾಟಿದ ಮೊದಲ ಬಾಲಿವುಡ್ ವೀರ ಎನ್ನುವ ಹೆಗ್ಗಳಿಕೆಗೆ ರಣ್ವೀರ್ ಸಿಂಗ್ ಈ ಮೂಲಕ ಪಾತ್ರವಾಗಿದ್ದಾರೆ. ಸದ್ಯ ''ಧುರಂಧರ್'' ಅಬ್ಬರ ನೋಡುತ್ತಿದ್ದರೆ ಕೇವಲ ಭಾರತದಲ್ಲಿಯೇ ಈ ಚಿತ್ರ ₹1000 ಕೋಟಿಯನ್ನು ಗಳಿಸುವ ಎಲ್ಲ ಸಾಧ್ಯತೆಗಳಿವೆ.

ಒಟ್ನಲ್ಲಿ ಸದ್ಯ ''ಧುರಂಧರ್'' ಅಬ್ಬರ ಮುಂದುವರೆದಿದ್ದು, ಮುಂಬರುವ ದಿನಗಳಲ್ಲಿ ಬಾಲಿವುಡ್ ಕಿಂಗ್ ಯಾರಪ್ಪಾ ಎಂದು ಯಾರನ್ನಾದರೂ ಯಾರಾದರೂ ಕೇಳಿದರೆ ಅದಕ್ಕೆ ರಣ್ವೀರ್ ಸಿಂಗ್ ಎಂಬ ಉತ್ತರವನ್ನು ಹಲವರು ನೀಡಬಹುದು. ಈ ದಾಖಲೆ ಮುರಿಯುವುದು ಬೇರೆಯವರಿಗೆ ಮುಂಬರುವ ದಿನಗಳಲ್ಲಿ ಕಷ್ಟ ಕೂಡ ಆಗಬಹುದು.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Explore the Top 15 highest-grossing Bollywood films by India Nett collection. From Dhurandhar's ₹706 Cr record to Jawan and Chhaava, see the full rankings now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X